ಗಣಿ ಸಚಿವಾಲಯ

ಖನಿಜ ಸಂಪನ್ಮೂಲಗಳನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಸರ್ಕಾರದ ಯತ್ನಗಳು

Posted On: 28 JUL 2021 2:58PM by PIB Bengaluru

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 (ಎಂಎಂಡಿಆರ್ ಕಾಯ್ದೆ, 1957) ಅನ್ನು ಗಣಿ ಸಚಿವಾಲಯವು ನಿರ್ವಹಿಸುತ್ತದೆ ಹಾಗು ಸಂವಿಧಾನದ ಏಳನೇ  ಅನುಸೂಚಿಯ ನಮೂದು 54 ಪ್ರಕಾರ ಕೇಂದ್ರ ಸರ್ಕಾರಕ್ಕೆ ವಹಿಸಿರುವ ಅಧಿಕಾರದಂತೆ  ಗಣಿಗಳು ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣವನ್ನು ಮಾಡುತ್ತದೆ.

ದೇಶದ ಖನಿಜ ಸಂಪನ್ಮೂಲಗಳನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಎಂಎಂಡಿಆರ್ ಕಾಯ್ದೆ 1957 ಅನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ.  2015 ಎಂಎಂಡಿಆರ್ ಕಾಯ್ದೆಯಲ್ಲಿನ ತಿದ್ದುಪಡಿಯ ಮೂಲಕ, ಖನಿಜ ಸಂಪನ್ಮೂಲಗಳ ನ್ಯಾಯಯುತ ಮೌಲ್ಯವನ್ನು ರಾಜ್ಯಗಳಿಗೆ ಖಚಿತಪಡಿಸಿಕೊಳ್ಳಲು ಖನಿಜ ರಿಯಾಯಿತಿಗಳನ್ನು ಪಾರದರ್ಶಕ ಮತ್ತು ತಾರತಮ್ಯವಿಲ್ಲದ ಹರಾಜಿನ ಮೂಲಕ ನೀಡಲಾಗುವುದು ಎಂದು ಕಡ್ಡಾಯಗೊಳಿಸಲಾಗಿದೆ.

ಇತ್ತೀಚೆಗೆ, ಗಣಿ ಸಚಿವಾಲಯವು ಎಂಎಂಡಿಆರ್ ಕಾಯ್ದೆ, 1957 ಅನ್ನು ಎಂಎಂಡಿಆರ್ ತಿದ್ದುಪಡಿ ಕಾಯ್ದೆ 2021 ಮೂಲಕ ತಿದ್ದುಪಡಿ ಮಾಡಿದೆ, ಇದನ್ನು ಖನಿಜ ಉತ್ಪಾದನೆಗೆ ಉತ್ತೇಜನ ನೀಡಲು, ದೇಶದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಖನಿಜ ಉತ್ಪಾದನೆಯನ್ನು ಹೆಚ್ಚಿಸಲು 28.03.2021 ರಂದು ಸೂಚಿಸಲಾಗಿದೆ. ತಿದ್ದುಪಡಿ ಮಾಡಿದ ಕಾಯಿದೆ, ಇನ್ನಿತರವುಗಳ ಜೊತೆಗೆ, ದೇಶದ ಖನಿಜ ಕ್ಷೇತ್ರವನ್ನು ಉತ್ತೇಜಿಸುವ ಕೆಳಗಿನ ನಿಬಂಧನೆಗಳನ್ನು ಒಳಗೊಂಡಿದೆ:

•           ಪರಿಶೋಧನಾ ಆಡಳಿತದ ಸರಳೀಕರಣ - (i) ಅನ್ವೇಷಣೆಯಿಂದ ಉತ್ಪಾದನೆಯವರೆಗೂ ರಿಯಾಯತಿಯು ಸುಲಭವಾಗಿ ದೊರಕುವುದನ್ನು ಪರಿವರ್ತನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು (ii) ಸಂಯೋಜಿತ ಪರವಾನಗಿಗಾಗಿ ಖನಿಜ ಬ್ಲಾಕ್ಗಳನ್ನು ಹಿಂದಿನ ಮಾನದಂಡದ ಪ್ರಕಾರ ಜಿ3 ಮಟ್ಟಕ್ಕೆ ಬದಲಾಗಿ ಜಿ4 ಮಟ್ಟದ ಪರಿಶೋಧನೆಯಲ್ಲಿ ಹರಾಜು ಮಾಡಬಹುದು. (iii) ಜಿ2 ಮಟ್ಟಕ್ಕೆ ಬದಲಾಗಿ ಜಿ3 ಮಟ್ಟದಲ್ಲಿ ಗಣಿಗಾರಿಕೆ ಗುತ್ತಿಗೆ ನೀಡಲು ಭೂ ಮೇಲ್ಮೈನ  ಖನಿಜಕ್ಕಾಗಿ ಖನಿಜ ಬ್ಲಾಕ್ ಅನ್ನು ಹರಾಜು ಮಾಡಬಹುದು. (iv) ಖಾಸಗಿ ಘಟಕಗಳಿಗೆ ಪರಿಶೋಧನೆ ನಡೆಸಲು ಎಂಎಂಡಿಆರ್ ಕಾಯ್ದೆಯ  ಪರಿಚ್ಛೇದ 4 (1) ಅಡಿಯಲ್ಲಿ ಸೂಚಿಸಬಹುದು.

•           ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ ಒಂದು ಲಾಭರಹಿತ ಸ್ವಾಯತ್ತ ಸಂಸ್ಥೆಯಾಗಿರತಕ್ಕದ್ದು; ಎಂಎಂಡಿಆರ್ ಕಾಯ್ದೆಯ ಪರಿಚ್ಛೇದ 4 (1) ಅಡಿಯಲ್ಲಿ ಅಧಿಸೂಚಿಸಲಾದ ಘಟಕಗಳು ಎನ್‌ಎಂಇಟಿ ಅಡಿಯಲ್ಲಿ ಸಂಗ್ರಹವಾದ ಹಣದ ಮೂಲಕ ಹಣ ಪಡೆಯಲು ಅರ್ಹವಾಗಿವೆ.

ಇದಲ್ಲದೆ, ಎಂಎಂಡಿಆರ್ ಕಾಯ್ದೆ, 1957 ಪರಿಚ್ಛೇದ 18, ಖನಿಜಗಳ ಸಂರಕ್ಷಣೆ ಮತ್ತು ವ್ಯವಸ್ಥಿತ ಅಭಿವೃದ್ಧಿಗೆ ಮತ್ತು ಪರಿಸರ ಸಂರಕ್ಷಣೆಗಾಗಿ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಅದರಂತೆ ಖನಿಜ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮಗಳು (ಎಂಸಿಡಿಆರ್), 2017 (ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ) ಅನ್ನು ರೂಪಿಸಲಾಯಿತು. ಎಂಎಂಡಿಆರ್ ಕಾಯ್ದೆ 1957 ಸೆಕ್ಷನ್ 5 (2) (ಬಿ) ಪ್ರಕಾರ, ಕೇಂದ್ರ ಸರ್ಕಾರವು ಅಥವಾ ರಾಜ್ಯ ಸರ್ಕಾರದಿಂದ ಅನುಮೋದಿಸಲ್ಪಟ್ಟ ಪ್ರದೇಶದಲ್ಲಿನ ಖನಿಜ ನಿಕ್ಷೇಪಗಳ ಅಭಿವೃದ್ಧಿಗೆ ಗಣಿಗಾರಿಕೆ ಯೋಜನೆ ಇಲ್ಲದಿದ್ದರೆ ಯಾವುದೇ ಗಣಿಗಾರಿಕೆ ಗುತ್ತಿಗೆ ನೀಡಲಾಗುವುದಿಲ್ಲ. ಗಣಿಗಾರಿಕೆ ಯೋಜನೆಯು ವ್ಯವಸ್ಥಿತ ಮತ್ತು ವೈಜ್ಞಾನಿಕ ಗಣಿಗಾರಿಕೆ, ಖನಿಜಗಳ ಸಂರಕ್ಷಣೆ ಮತ್ತು ಗುತ್ತಿಗೆ ಪ್ರದೇಶಕ್ಕೆ ಸಂಬಂಧಿಸಿದಂತೆ ಪರಿಸರ ಸಂರಕ್ಷಣೆಗಾಗಿ ವಿವರವಾದ ಪ್ರಸ್ತಾಪಗಳನ್ನು ಒಳಗೊಂಡಿದೆ. ಖನಿಜಗಳ (ಪರಮಾಣು ಮತ್ತು ಹೈಡ್ರೊ ಕಾರ್ಬನ್ ಶಕ್ತಿ ಖನಿಜಗಳನ್ನು ಹೊರತುಪಡಿಸಿ) ರಿಯಾಯಿತಿ ನಿಯಮಗಳು, 2016 ಪ್ರಕಾರ, ಗಣಿಗಾರಿಕೆ ಯೋಜನೆಗೆ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಅನುಮೋದನೆ  ಕಡ್ಡಾಯವಾಗಿದೆ. ಎಂಸಿಡಿಆರ್, 2017 ನಿಬಂಧನೆಗಳ ಪ್ರಕಾರ, ಸಣ್ಣ ಖನಿಜಗಳು, ಕಲ್ಲಿದ್ದಲು ಮತ್ತು ಪರಮಾಣು ಖನಿಜಗಳನ್ನು ಹೊರತುಪಡಿಸಿ ಖನಿಜಗಳ ಗುತ್ತಿಗೆ ಪ್ರದೇಶಗಳಲ್ಲಿ ಖನಿಜಗಳ ಸಂರಕ್ಷಣೆ, ವ್ಯವಸ್ಥಿತ ಮತ್ತು ವೈಜ್ಞಾನಿಕ ಗಣಿಗಾರಿಕೆ ಮತ್ತು ಪರಿಸರದ ರಕ್ಷಣೆಯನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ಗಣಿ ಬ್ಯೂರೋ  (ಇಂಡಿಯನ್ ಬ್ಯೂರೋ ಆಫ್ ಮೈನ್ಸ್) ಗಣಿಗಳ ನಿಯತಕಾಲಿಕವಾಗಿ ಪರಿಶೀಲನೆ ನಡೆಸುತ್ತದೆ.

ಇದಲ್ಲದೆ, ಖನಿಜ ಸಂಪನ್ಮೂಲಗಳ ಸಂರಕ್ಷಣೆಗಾಗಿ ಪ್ರಾಸ್ಪೆಕ್ಟಿಂಗ್ ಲೈಸೆನ್ಸ್ ಅಥವಾ ಮೈನಿಂಗ್ ಲೀಸ್ ಅನ್ನು ಅಂತ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ಎಂಎಂಡಿಆರ್ ಕಾಯ್ದೆ 1957   ಪರಿಚ್ಛೇದ 4 ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಮಾಹಿತಿಯನ್ನು ಗಣಿಗಾರಿಕೆ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಸಭೆಯಲ್ಲಿ ನೀಡಿದರು.

***



(Release ID: 1740242) Visitor Counter : 256


Read this release in: English , Urdu , Punjabi , Tamil