ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಬಾಲ ಭಿಕ್ಷುಕರು

Posted On: 27 JUL 2021 1:26PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು "ಸ್ಮೈಲ್ - ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಕೆಳವರ್ಗದ ವ್ಯಕ್ತಿಗಳಿಗೆ ನೆರವು" ಎಂಬ ಯೋಜನೆಯನ್ನು ರೂಪಿಸಿದೆ.  ಇದು 'ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿಗಾಗಿ ಕೇಂದ್ರ ವಲಯದ ಯೋಜನೆ' ಎಂಬ ಉಪ ಯೋಜನೆಯನ್ನು ಒಳಗೊಂಡಿದೆ. ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ ಕ್ರಮಗಳು ಸೇರಿದಂತೆ ಹಲವಾರು ಸಮಗ್ರ ಉಪಕ್ರಮಗಳನ್ನು ಈ ಯೋಜನೆಯು ಒಳಗೊಂಡಿದೆ. ಪುನರ್ವಸತಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಸಮಾಲೋಚನೆ, ಮೂಲಭೂತ ದಾಖಲೀಕರಣ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸಂಪರ್ಕಗಳು ಇತ್ಯಾದಿಗಳ ಮೇಲೆ ಈ ಯೋಜನೆಯು ವ್ಯಾಪಕವಾಗಿ ಗಮನ ಹರಿಸುತ್ತದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರಕಾರಗಳು/ನಗರ ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಸಮುದಾಯ ಆಧಾರಿತ ಸಂಸ್ಥೆಗಳು (ಸಿಬಿಒ) ಮತ್ತಿತರರ ನೆರವಿನೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಪ್ರಸ್ತುತ ಆಶ್ರಯ ಮನೆಗಳನ್ನು ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಪುನರ್ವಸತಿಗಾಗಿ ಬಳಸಲು ಈ ಯೋಜನೆ ಅವಕಾಶ ಒದಗಿಸುತ್ತದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂದೋರ್, ಲಖನೌ, ಮುಂಬೈ, ನಾಗ್ಪುರ, ಪಾಟ್ನಾ, ಮತ್ತು ಅಹಮದಾಬಾದ್ -  ಈ ಹತ್ತು ನಗರಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿ ಕುರಿತ ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸಿದೆ. ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳು / ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ನಗರಗಳಲ್ಲಿ ಈ ಪ್ರಾಯೋಗಿಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಸಮೀಕ್ಷೆ ಮತ್ತು ಗುರುತಿಸುವಿಕೆ, ಕ್ರೋಢೀಕರಣ, ಮೂಲಭೂತ ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳು, ಮೂಲಭೂತ ದಾಖಲೀಕರಣ, ಸಮಾಲೋಚನೆ, ಪುನರ್ವಸತಿ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸುಸ್ಥಿರ ವಾಸ್ತವ್ಯ ಸೇರಿದಂತೆ ಹಲವಾರು ಸಮಗ್ರ ಕ್ರಮಗಳನ್ನು ಈ ಪ್ರಾಯೋಗಿಕ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.
ಇದಲ್ಲದೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಭಿಕ್ಷಾಟನೆಯಿಂದ ಮಕ್ಕಳನ್ನು ಮುಕ್ತಿಗೊಳಿಸಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಶಾಲೆಗಳಿಗೆ ದಾಖಲಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸರಕಾರಗಳ ಸಹಭಾಗಿತ್ವದಲ್ಲಿಕ್ರಮಗಳನ್ನು ಕೈಗೊಂಡಿದೆ.
ಈ ಸಚಿವಾಲಯವು ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳ ಪುನರ್ವಸತಿಗಾಗಿ ಎನ್‌ಜಿಒಗಳಿಗೆ ಯಾವುದೇ ಹಣವನ್ನು ಹಂಚಿಕೆ ಮಾಡುತ್ತಿಲ್ಲ. ಆದಾಗ್ಯೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಈ ನಿಟ್ಟಿನಲ್ಲಿ ನೆರವು ನೀಡುತ್ತಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ವತಃ ಅಥವಾ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಿರ್ಗತಿಕ ಮಕ್ಕಳಿಗೆ ವಯಸ್ಸಿಗೆ ಸೂಕ್ತವಾದ ಶಿಕ್ಷಣ, ವೃತ್ತಿಪರ ತರಬೇತಿ, ಮನರಂಜನೆ, ಆರೋಗ್ಯ ರಕ್ಷಣೆ, ಸಮಾಲೋಚನೆ ಇತ್ಯಾದಿ ಸಾಂಸ್ಥಿಕ ಆರೈಕೆ ಒದಗಿಸಲು ಸಚಿವಾಲಯ ನೆರವು ಒದಗಿಸುತ್ತಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಶ್ರೀ ಎ. ನಾರಾಯಣಸ್ವಾಮಿ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಈ ಮಾಹಿತಿ ನೀಡಿದ್ದಾರೆ.  

 

****

ಅನುಬಂಧ
ಕಳೆದ ಐದು ವರ್ಷಗಳಲ್ಲಿ ಅಂದರೆ ಹಣಕಾಸು ವರ್ಷ 2015-16 ರಿಂದ 2019-20ರ ಅವಧಿಯಲ್ಲಿ  ಸಿಪಿಎಸ್ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಯಾದ ನಿಧಿಯ ವಿವರಗಳು

ಕ್ರ.ಸಂ.

ರಾಜ್ಯ / ಕೇಂದ್ರಾಡಳಿತ ಪ್ರದೇಶದ ಹೆಸರು

2015-16

2016-17

2017-18

2018-19

2019-20

1

 

ಆಂಧ್ರ ಪ್ರದೇಶ

238.58

110.74

1469.88

1870.01

1373.53

2

ಅರುಣಾಚಲ ಪ್ರದೇಶ

571.68

52.29

643.71

37.63

1174.11

3

ಅಸ್ಸಾಂ

597.90

413.64

2932.68

3379.63

3363.95

4

ಬಿಹಾರ

2687.89

2787.92

541.56

2621.87

1405.39

5

ಛತ್ತೀಸ್‌ಗಢ

3955.55

527.77

3181.97

2151.01

2098.74

6

ಗೋವಾ

235.25

36.83

728.53

16.03

19.63

7

ಗುಜರಾತ್

2328.90

769.95

590.11

2251.55

2146.27

8

ಹರಿಯಾಣ

496.44

0.00

1858.22

1387.60

2217.99

9

ಹಿಮಾಚಲ ಪ್ರದೇಶ

604.04

2345.48

1835.01

1342.64

1607.40

10

ಜಮ್ಮು ಮತ್ತು ಕಾಶ್ಮೀರ

113.35

43.12

807.48

2106.94

1225.16

11

ಜಾರ್ಖಂಡ್

369.88

840.11

1714.57

1480.26

1845.80

12

ಕರ್ನಾಟಕ

1845.24

3720.80

3272.45

4022.56

3290.45

13

ಕೇರಳ

944.39

260.50

1849.45

1263.77

1519.74

14

ಮಧ್ಯ ಪ್ರದೇಶ

1116.03

2503.88

3262.77

2959.23

3052.72

15

ಮಹಾರಾಷ್ಟ್ರ

3138.75

2272.33

608.15

3156.52

2449.63

16

ಮಣಿಪುರ

3082.18

241.34

1886.33

3866.99

3102.72

17

ಮೇಘಾಲಯ

1469.55

2060.33

1846.60

2254.51

2241.71

18

ಮಿಜೋರಾಂ

2079.44

1949.55

1917.51

2042.28

2530.43

19

ನಾಗಾಲ್ಯಾಂಡ್

2257.65

1350.37

1457.45

1787.12

2085.95

20

ಒಡಿಶಾ

3309.07

1089.22

2599.30

4352.44

3541.66

21

ಪಂಜಾಬ್

820.81

581.67

143.24

1244.17

722.00

22

ರಾಜಸ್ಥಾನ

3258.92

0.00

4752.30

3584.72

3195.88

23

ಸಿಕ್ಕಿಂ

562.00

601.18

662.76

379.25

662.51

24

ತಮಿಳುನಾಡು

825.04

13039.37

2013.12

7895.14

14915.36

25

ತೆಲಂಗಾಣ

354.88

195.64

894.82

1329.23

1726.38

26

ತ್ರಿಪುರಾ

710.63

676.04

446.81

885.77

879.61

27

ಉತ್ತರ ಪ್ರದೇಶ

2884.18

3207.19

1830.67

7834.39

4277.72

28

ಉತ್ತರಾಖಂಡ

66.88

15.54

907.57

1344.40

918.58

29

ಪಶ್ಚಿಮ ಬಂಗಾಳ

508.67

6763.87

5073.56

2372.13

2815.10

30

ಅಂಡಮಾನ್ ನಿಕೋಬಾರ್

ದ್ವೀಪ

36.03

36.88

31.66

218.85

329.62

3ಐ

ಚಂಡೀಗಢ

357.82

245.44

194.32

577.58

0.00

32

ದಾದ್ರಾ ಮತ್ತು ನಗರ್‌ ಹವೇಲಿ

58.66

177.59

24.82

11.24

193.97

ಡಿಯು ಮತ್ತು ಡಮನ್‌

82.82

126.42

21.89

18.42

141.79

33

ದೆಹಲಿ

1363.40

978.64

354.33

1007.39

972.86

34

ಲಕ್ಷದ್ವೀಪ

0.00

0.00

0.00

0.00

0.00

35

ಲಡಾಖ್

-

-

-

-

-

36

ಪುದುಚೇರಿ

559.60

826.33

114.35

398.43

501.96

ಒಟ್ಟು

43892.10

50847.97

52469.95

73451.70

74546.32

 

****



(Release ID: 1739495) Visitor Counter : 319