ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಗಣಿ ಹರಾಜು

Posted On: 27 JUL 2021 1:41PM by PIB Bengaluru

ಖಾಸಗಿ ವಲಯದ ಕಂಪನಿಗೆ ವಿಶೇಷವಾಗಿ ಹರಾಜು ಮಾಡಲು ಕಲ್ಲಿದ್ದಲು ಗಣಿಗಳನ್ನು ಗುರುತಿಸಲಾಗಿಲ್ಲ. ಕಲ್ಲಿದ್ದಲು ಗಣಿ (ವಿಶೇಷ ನಿಯಮ) ಕಾಯಿದೆ 2015 ನಿಯಮಗಳ ಪ್ರಕಾರ ಮತ್ತು ಗಣಿ ಮತ್ತು ಖನಿಜ ಉತ್ಪನ್ನಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1957 (ಎಂಎಂಡಿಆರ್ ಕಾಯಿದೆ) ಪ್ರಕಾರ ಸರ್ಕಾರಿ ಮತ್ತು ಖಾಸಗಿ ವಲಯದ ಎರಡೂ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹವಾಗಿವೆ. ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಈವರೆಗ 47 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ, ಪೈಕಿ 44 ಕಲ್ಲಿದ್ದಲು ಗಣಿಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಹರಾಜು ಮಾಡಲಾಗಿದೆ.

ಕಲ್ಲಿದ್ದಲು ಹರಾಜಿನ ಸದ್ಯದ ಕಂತಿನಲ್ಲಿ 67 ಕಲ್ಲಿದ್ದಲು ಗಣಿಗಳನ್ನು ಹರಾಗಿಡಲಾಗಿದೆ (23 ಕಲ್ಲಿದ್ದಲು ಗಣಿಗಳು ಸಿಎಂಎಸ್ ಪಿ ಪ್ರಕಾರ ಮತ್ತು 44 ಕಲ್ಲಿದ್ದಲು ಗಣಿಗಳು ಎಂಎಂಡಿಆರ್ ಕಾಯಿದೆ ಪ್ರಕಾರ). ಆವುಗಳ ಹರಾಜು ಪ್ರಕ್ರಿಯೆ ಪ್ರಗತಿಯಲ್ಲಿದೆ.

20 ಗಣಿಗಳಿಂದ ವಾರ್ಷಿಕ ಆದಾಯ ಸಂಗ್ರಹವಾಗುವ ಸಾಧ್ಯತೆ ಇದೆ ಮತ್ತು ಇತ್ತೀಚೆಗೆ ಸುಮಾರು 7,419 ಕೋಟಿ ಮೊತ್ತದ ಗರಿಷ್ಠ ಸಾಮರ್ಥ್ಯದ ಕಲ್ಲಿದ್ದಲು ಹರಾಜು ಪ್ರಕ್ರಿಯೆ ನಡೆದಿದೆ, ಒಟ್ಟು 20 ಗಣಿಗಳಿಂದ 79,019 ಉದ್ಯೋಗಗಳು ಸೃಷ್ಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್ ಜೋಶಿ ರಾಜ್ಯಸಭೆಗೆ 2021 ಜೂನ್ 26ರಂದು ನೀಡಿದ ಉತ್ತರದಲ್ಲಿ ವಿಷಯ ತಿಳಿಸಿದ್ದಾರೆ.

***


(Release ID: 1739448) Visitor Counter : 272