ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೋವಿಡ್-19 ನಡುವೆ ಸರಳ ಉದ್ಘಾಟನಾ ಸಮಾರಂಭದ ಮೂಲಕ ನಾಳೆ ಟೋಕಿಯೋ ಒಲಿಂಪಿಕ್ಸ್ 2020ಗೆ ಚಾಲನೆ


ಭಾರತದಾದ್ಯಂತ ಹೆಚ್ಚಾಗುತ್ತಿರುವ ಒಲಿಂಪಿಕ್ಸ್  ಉತ್ಸಾಹ

Posted On: 22 JUL 2021 1:22PM by PIB Bengaluru

ಟೋಕಿಯೋ ಒಲಿಂಪಿಕ್ಸ್ 2020 ಬಹು ನಿರೀಕ್ಷಿತ ಉದ್ಘಾಟನಾ ಸಮಾರಂಭ ನಾಳೆ ಭಾರತೀಯ ಕಾಲಮಾನ ಸಂಜೆ 4.30ಕ್ಕೆ ನಡೆಯಲಿದೆ. ಆದರೆ ಜಪಾನಿನ ರಾಜಧಾನಿಯಲ್ಲಿ ಹೊಸದಾಗಿ ನಿರ್ಮಿಸಿರುವ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯಾವುದೇ ಅದ್ಧೂರಿ ಇಲ್ಲದೆ ಸರಳ ರೀತಿಯಲ್ಲಿ ನಡೆಯಲಿದೆ.

ಜಪಾನ್ ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಅಪಾಯಗಳನ್ನು ತಗ್ಗಿಸಲು ಖಾಲಿ ಕ್ರೀಡಾಂಗಣಗಳಲ್ಲಿ ಸ್ಪರ್ಧಾಳುಗಳು ಸೆಣಸಲಿದ್ದಾರೆ ಎಂದು ಪ್ರಕಟಿಸಿದೆ. ಉದ್ಘಾಟನಾ ಸಮಾರಂಭಕ್ಕೆ ಪ್ರತಿ ದೇಶದಿಂದ ಕೇವಲ ಆರು ಅಧಿಕಾರಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಆದರೆ ಅಥ್ಲೀಟ್ ಗಳ ಪಾಲ್ಗೊಳ್ಳುವಿಕೆಗೆ ಯಾವುದೇ ಮಿತಿ ಇಲ್ಲ. ಆದರೆ ಕ್ರೀಡಾಭಿಮಾನಿಗಳು ಬಾರಿ ಅತಿ ಸಣ್ಣ ಪಥಸಂಚಲನ ತಂಡಗಳನ್ನು ಕಾಣಬಹುದಾಗಿದೆ.

ಜಪಾನಿನ ವರ್ಣಮಾಲೆಯ ಪ್ರಕಾರ ಭಾರತ ಪಥ ಸಂಚಲನದಲ್ಲಿ 21ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದೆ. ಬಾರಿ ಒಲಿಂಪಿಕ್ಸ್ ಗೆ ಭಾರತ ಅತಿದೊಡ್ಡ ತಂಡವನ್ನು ಕಳುಹಿಸಿದೆ. 22 ರಾಜ್ಯಗಳ 127 ಅಥ್ಲೀಟ್ ಗಳನ್ನೊಳಗೊಂಡ 228 ಮಂದಿಯ ಬಲಿಷ್ಠ ತಂಡ ಪಾಲ್ಗೊಳ್ಳುತ್ತಿದ್ದು, 18 ಕ್ರೀಡಾ ವಿಭಾಗಗಳಲ್ಲಿ ಅಂದರೆ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಈಕ್ವೆಸ್ಟ್ರಿಯನ್, ಫೆನ್ಸಿಂಗ್, ರೋಯಿಂಗ್, ಶೂಟಿಂಗ್, ಸೈಲಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆನಿಸ್, ವೇಯ್ಟ್ ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಸೆಣಸುವರು. ಭಾರತೀಯ ನಿಯೋಗದಲ್ಲಿ 68 ಪುರುಷ ಹಾಗೂ 52 ಮಹಿಳಾ ಅಥ್ಲಿಟ್ ಗಳು, 58 ಅಧಿಕಾರಿಗಳು, 43 ಪರ್ಯಾಯ ಅಥ್ಲೀಟ್ ಗಳು ಮತ್ತು 8 ತುರ್ತು ಸೇವಾ ಸಿಬ್ಬಂದಿ, ಕೋಚ್ ಗಳು, ತಂಡದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳು 85 ಸಂಭವನೀಯ ಪದಕಗಳಿಗಾಗಿ ಸೆಣಸುವರು.  

ಭಾರತದಾದ್ಯಂತ ಹೆಚ್ಚಾಗುತ್ತಿರುವ ಒಲಿಂಪಿಕ್ಸ್ ಹುರುಪು

ಭಾರತದಾದ್ಯಂತ ದಿನೇ ದಿನೇ ಒಲಿಂಪಿಕ್ಸ್ ಉತ್ಸಾಹ ಹೆಚ್ಚಾಗುತ್ತಿದ್ದು, ದೇಶದ ನಾನಾ ಮೂಲೆಗಳಿಂದ ಕ್ರೀಡಾಭಿಮಾನಿಗಳು ಇಂಡಿಯನ್ ಅಥ್ಲೀಟ್ಸ್ ಗಳಿಗೆ ಚಿಯರ್ಸ್ ಹೇಳುತ್ತಿದ್ದಾರೆ ಮತ್ತು ಅವರಿಗೆ ಬೆಂಬಲದ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ದೇಶವನ್ನು ಪ್ರತಿನಿಧಿಸುವ ಅಥ್ಲೀಟ್ ಗಳನ್ನು ಬೆಂಬಲಿಸಿ ಜನರು ತಮ್ಮ ಮಿತ್ರರೂ ಹಾಗೂ ಕುಟುಂಬದ ಸದಸ್ಯರೊಂದಿಗೆ ವಿಡಿಯೋ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ #HumaraVictoryPunch ನೊಂದಿಗೆ ಹಂಚಿಕೊಳ್ಳುವಂತೆ ಕರೆ ನೀಡಿದ್ದಾರೆ.

ಶ್ರೀ ಠಾಕೂರ್ ಅವರು ತಮ್ಮ ಟ್ವೀಟ್ ಸಂದೇಶದಲ್ಲಿಭಾರತೀಯ ಒಲಿಂಪಿಕ್ ತಂಡಕ್ಕೆ ಬೆಂಬಲ ನೀಡುವ ವಿಡಿಯೋಗಳನ್ನು ಮಾಡಿ ಅವುಗಳನ್ನು ಐದು ಜನರಿಗೆ ಟ್ಯಾಗ್ ಮಾಡುವ ಮೂಲಕ ಅವರಿಗೂ ವಿಡಿಯೋಗಳನ್ನು ಹಂಚಿಕೊಳ್ಳಲು ಆಹ್ವಾನಿಸಬೇಕು’’ ಎಂದು ಹೇಳಿದ್ದಾರೆ. ಅಲ್ಲದೆ ಅವರು #Cheer4India ಅನ್ನು ಜನಾಂದೋಲನವಾಗಿ ಮಾಡುವಂತೆ ಮನವಿ ಮಾಡಿದ್ದಾರೆ. ಸಚಿವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಅದನ್ನು ಐದು ವ್ಯಕ್ತಿಗಳಿಗೆ ಟ್ಯಾಗ್ ಮಾಡಿದ್ದಾರೆ. ಅವರು ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಕ್ರಿಕೆಟ್ ಪಟು ವೀರೇಂದ್ರ ಸೆಹ್ವಾಗ್, ನಟ ಅಕ್ಷಯ್ ಕುಮಾರ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರನ್ನು ಹೆಸರಿಸಿದ್ದಾರೆ.

ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಒಲಿಂಪಿಕ್ಸ್ ಸುದ್ದಿ ವ್ಯಾಪಕ ಪ್ರಸಾರ

ವಿಶ್ವದ ಅತಿ ದೊಡ್ಡ ಕ್ರೀಡಾ ಹಬ್ಬ ನಾಳೆ ಟೋಕಿಯೋದಲ್ಲಿ ಆರಂಭವಾಗಲಿದ್ದು, ಪ್ರಸಾರಭಾರತಿ ತನ್ನ ಅವಳಿ ಜಾಲ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಹಾಗೂ ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನಲ್ ಮೂಲಕ ಹೆಚ್ಚಿನ ಮಾಹಿತಿ ಮತ್ತು ಸುದ್ದಿಯನ್ನು ಪ್ರಸಾರ ಮಾಡಲಿದೆ. ಕ್ರೀಡಾಕೂಟ ಆರಂಭಕ್ಕೂ ಮುನ್ನದಿಂದ ಕ್ರೀಡಾಕೂಟ ಮುಗಿದ ನಂತರದವರೆಗೆ ಪ್ರಸಾರಭಾರತಿಯ ಟಿವಿ, ರೇಡಿಯೋ ಮತ್ತು ಡಿಜಿಟಲ್ ವೇದಿಕೆಗಳು ಸೇರಿ ಎಲ್ಲ ರೂಪದಲ್ಲೂ ದೇಶಾದ್ಯಂತ ಪ್ರಸಾರ ಮಾಡಲಿದೆ.

ಚಿಯರ್ ಫಾರ್ ಇಂಡಿಯಾಅಭಿಯಾನಕ್ಕೆ ನೆರವಾಗಲು ಡಿಡಿ ಸ್ಪೋರ್ಟ್ಸ್ ಟೋಕಿಯೋ ಒಲಿಂಪಿಕ್ಸ್ 2020 ಕುರಿತು ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಕ್ರೀಡಾಕೂಟಗಳೊಂದಿಗೆ ಚರ್ಚೆ ಆಧಾರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ವಿಶೇಷ ಕಾರ್ಯಕ್ರಮ ಜುಲೈ 22 ಹಾಗೂ 23ರಂದು ಡಿಡಿ ಸ್ಪೋರ್ಟ್ಸ್ ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನೇರ ಪ್ರಸಾರವಾಗಲಿದೆ. ಪ್ರತಿ ದಿನ ವಿಭಿನ್ನ ವಿಷಯಗಳನ್ನು ಹೊಂದಿರುವ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 22ರಂದು ಎರಡು ಅವಧಿಯಲ್ಲಿ ರಾತ್ರಿ 7ಗಂಟೆಯಿಂದ 9 ಗಂಟೆವರೆಗೆ ಮತ್ತು ಜು.23ರಂದು ಮರುದಿನ ಬೆಳಿಗ್ಗೆ 9ರಿಂದ 11 ಗಂಟೆವರೆಗೆ ಮರುಪ್ರಸಾರವಾಗಲಿದೆ.

ಒಲಿಂಪಿಕ್ಸ್ ಶೆಡ್ಯೂಲ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

***


(Release ID: 1737775) Visitor Counter : 255