ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಭವಿಷ್ಯದ ಅಲೆಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಅಥವಾ ಸೋಂಕಿನ ತೀವ್ರತೆ ಹೆಚ್ಚಾಗುತ್ತದೆ ಎಂಬೆಲ್ಲಾ ವರದಿಗಳು ಸಂಪೂರ್ಣ ಊಹಾಪೋಹ – ಡಾ. ಪ್ರವೀಣ್ ಕುಮಾರ್, ನಿರ್ದೇಶಕ, ಮಕ್ಕಳ ವೈದ್ಯಶಾಸ್ತ್ರ(ಪೀಡಿಯಾಟ್ರಿಕ್ಸ್) ವಿಭಾಗ, ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜ್, ಹೊಸದಿಲ್ಲಿ


ಕೋವಿಡ್-19 ಲಸಿಕೆಯು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರನ್ನು,  “ಭ್ರೂಣ ಮತ್ತು ನವಜಾತ ಶಿಶುಗಳನ್ನು ಮಾರಣಾಂತಿಕ ಸೋಂಕಿನಿಂದ ಸಂರಕ್ಷಿಸುತ್ತದೆ”

“ವಯಸ್ಕರಿಗೆ ಹೋಲಿಸಿದರೆ ಇಲ್ಲಿಯ ತನಕ ಮಕ್ಕಳ ಮರಣ ದರ ಅತ್ಯಂತ ಕಡಿಮೆ ಮತ್ತು 2-3 ರೋಗಗಳಿರುವ ಮಕ್ಕಳಲ್ಲಿ ಮಾತ್ರ ಸೋಂಕು ಪತ್ತೆ”

Posted On: 21 JUL 2021 2:53PM by PIB Bengaluru

ಮಕ್ಕಳ ಮೇಲೆ ಕೋವಿಡ್-19 ಸೋಂಕಿನ ಪರಿಣಾಮಗಳು, ಮಕ್ಕಳನ್ನು ಸಂರಕ್ಷಿಸುವ ಅಗತ್ಯ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಿಕೆಯ ಅಗತ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಹೊಸದಿಲ್ಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಮಕ್ಕಳ ವೈದ್ಯಶಾಸ್ತ್ರ (ಪೀಡಿಯಾಟ್ರಿಕ್ಸ್) ವಿಭಾಗದ ನಿರ್ದೇಶಕ  ಡಾ. ಪ್ರವೀಣ್ ಕುಮಾರ್ ಅವರು ಇಲ್ಲಿ ಮಾತನಾಡಿದ್ದಾರೆ.

ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ಮೇಲೆ ಕೋವಿಡ್-19 ಸಾಂಕ್ರಾಮಿಕ ಸೋಂಕು ಹೇಗೆ ಪರಿಣಾಮ ಬೀರುತ್ತದೆ? ದೀರ್ಘಕಾಲದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಏನೆಲ್ಲಾ ಮಾಡಬೇಕಿದೆ?

ಕೋವಿಡ್-19 ಸಾಂಕ್ರಾಮಿಕ ಸೋಂಕು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ಹಾಗಾಗಿ, ಮಕ್ಕಳನ್ನು 1 ವರ್ಷಕ್ಕಿಂತ ಹೆಚ್ಚಿನ ಕಾಲ ಮನೆಯಲ್ಲೇ ಕಾಪಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಕುಟುಂಬದಲ್ಲಿ ಅನಾರೋಗ್ಯ, ಪೋಷಕರಿಗೆ ಆದಾಯ ನಷ್ಟ ಇತ್ಯಾದಿ ವಿಷಯಗಳು ಆರೋಗ್ಯ ಒತ್ತಡವನ್ನು ಹೆಚ್ಚಿಸುತ್ತವೆ. ಮಕ್ಕಳು ಮಾನಸಿಕ ತುಮುಲ ಅಥವಾ ದುಃಖ ಅಥವಾ ಅಸ್ವಸ್ಥತೆ ವ್ಯಕ್ತಪಡಿಸಬಹುದು. ಪ್ರತಿ ಮಗು ವಿಭಿನ್ನವಾಗಿ ವರ್ತಿಸಬಹುದು. ಕೆಲವು ಮಕ್ಕಳು ಅತಿ ಕೋಪ ಹಾಗೂ ಅತಿ ಚುರುಕುತನ ತೋರಿದರೆ, ಮತ್ತೆ ಕೆಲವು ಮೌನಕ್ಕೆ ಶರಣಾಗಬಹುದು.

ಹಾಗಾಗಿ, ಪೋಷಕರು ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಮನಸ್ಥಿತಿಯಲ್ಲಿ ಕಂಡುಬರುವ ಒತ್ತಡ, ಆಲಸ್ಯ ಮತ್ತಿತರ ಸೂಚನೆಗಳನ್ನು ಸೂಕ್ಷ್ಮವಾಗಿ  ಗಮನಿಸಬೇಕು. ಅತೀವ ಆತಂಕ, ದುಃಖ, ಖಿನ್ನತೆ, ಅನಾರೋಗ್ಯಕರ ಆಹಾರ ಸೇವನೆ ಮತ್ತು ನಿದ್ರೆ ಹವ್ಯಾಸಗಳನ್ನು ಗಮನಿಸುತ್ತಿರಬೇಕು. ಮಕ್ಕಳ ಗಮನ ಮತ್ತು ಏಕಾಗ್ರತೆಯ ತೊಂದರೆಗಳನ್ನು ಗಮನಿಸುತ್ತಿರಬೇಕು. ಮಕ್ಕಳಿಗೆ ಎದುರಾಗುವ ಒತ್ತಡಗಳನ್ನು ನಿಭಾಯಿಸಲು ಮತ್ತು ಆತಂಕಗಳನ್ನು ನಿವಾರಿಸಲು ಕುಟುಂಬ ಸದಸ್ಯರು ಮತ್ತು ಪೋಷಕರು ಬೆಂಬಲ ನೀಡುವ ಅಗತ್ಯವಿದೆ.

ಭವಿಷ್ಯದ ಕೋವಿಡ್-19 ಅಲೆಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ನಿಮಗನಿಸುತ್ತಿದೆಯೇ? ಯಾವುದೇ ರೀತಿಯ ಕೋವಿಡ್-19 ಭವಿಷ್ಯದ ಅಲೆಗಳನ್ನು ಸಮರ್ಥವಾಗಿ ಎದುರಿಸಲು ದೇಶ ಹೇಗೆ ಸಜ್ಜಾಗಬೇಕು? ಮಕ್ಕಳು ರೋಗಿಗಳಿಗೆ ಗುಣಮಟ್ಟದ ಸಂರಕ್ಷಣೆ ಒದಗಿಸುವುದು ಹೇಗೆ?

ನಮಗೆಲ್ಲಾ ಗೊತ್ತಿರುವಂತೆ, ಕೋವಿಡ್-19 ಹೊಸ ಸೋಂಕು, ಅದು ರೂಪಾಂತರವಾಗುವ ಸಾಮರ್ಥ್ಯ ಹೊಂದಿದೆ. ಮಕ್ಕಳ ಆರೋಗ್ಯದ ಮೇಲೆ ಭವಿಷ್ಯದ ಅಲೆಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ ಅಥವಾ ಸೋಂಕಿನ ತೀವ್ರತೆ ಮತ್ತಷ್ಟು ಹಚ್ಚಾಗುತ್ತದೆ ಎಂಬ ವಿಯಗಳೆಲ್ಲಾ ಕೇವಲ ವದಂತಿ ಅಥವಾ ಊಹಾಪೋಹದಿಂದ ಕೂಡಿವೆ. ಮುಂದಿನ ಕೆಲವು ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದ ವಯಸ್ಕರಿಗೆ ಲಸಿಕೆ ನೀಡುವುವುದರಿಂದ ಭವಿಷ್ಯದ ಅಲೆಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ಜನರು ವದಂತಿಗಳನ್ನು ಹರಡುತ್ತಿದ್ದಾರೆ. ಆದರೆ ಸಮಕಾಲೀನ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ಅನುಮೋದಿತ ಲಸಿಕೆ ನಮ್ಮಲ್ಲಿಲ್ಲ ಎಂಬುದು ವಾಸ್ತವ.

ಕೋವಿಡ್-19 ಸೋಂಕು ಭವಿಷ್ಯದಲ್ಲಿ ನಮ್ಮ ಮಕ್ಕಳ ಮೇಲೆ ಹೇಗೆ ವರ್ತಿಸುತ್ತದೆ ಮತ್ತು ಪರಿಣಾಮ ಬೀರುತ್ತದೆ ಎಂಬುದು ನಮಗಾರಿಗೂ ಗೊತ್ತಿಲ್ಲ. ಆದರೆ ಸಾಂಕ್ರಾಮಿಕ ಸೋಂಕಿನಿಂದ ನಮ್ಮ ಮಕ್ಕಳನ್ನು ನಾವು ಸಂರಕ್ಷಿಸಿಕೊಳ್ಳಬೇಕು. ವಯಸ್ಕರು ಮನೆಯಲ್ಲಿ ಕೋವಿಡ್-19 ಸೂಕ್ತ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಕ್ಕಳಿಗೆ ಬೇಗ ಸೋಂಕು ಹರಡುವ ಲಕ್ಷಣಗಳಿರುವುದರಿಂದ ಹಾಗೂ ಅವರು ಬೇರೆಯವರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮಕ್ಕಳನ್ನು ಸಾರ್ವಜನಿಕ ಸಭೆ, ಸಮಾರಂಭ, ಕಾರ್ಯಕ್ರಮದಂತಹ ಸಾಮಾಜಿಕ ತೊಡಗಿಸಿಕೊಳ್ಳುವಿಕೆಯಿಂದ ದೂರವಿಡಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ವಯಸ್ಕರು ತಿಳಿ ಹೇಳಬೇಕು. ಎಲ್ಲಾ ವಯಸ್ಕರು ಆದಷ್ಟು ಬೇಗ ಕಡ್ಡಾಯವಾಗಿ ಕೋವಿಡ್-19 ಲಸಿಕೆ ತೆಗೆದುಕೊಂಡರೆಸ ಮನೆಯ ಮಕ್ಕಳನ್ನು ದೊಡ್ಡ ಮಟ್ಟದಲ್ಲಿ ಸಂರಕ್ಷಿಸಲು ಸಾಧ್ಯವಾಗಲಿದೆ.

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೂ ಇದೀಗ ಲಸಿಕೆ ಲಭ್ಯವಾಗುತ್ತಿದೆ. ಇವರು ಲಸಿಕೆ ಪಡೆಯವುದರಿಂದ ಬೆಳೆಯುತ್ತಿರುವ ಭ್ರೂಣ ಮತ್ತು ನವಜಾತ ಶಿಶುಗಳನ್ನು ಮಾರಣಾಂತಿಕ ಸೋಂಕಿನಿಂದ ಸಂರಕ್ಷಿಸಲು ಸಾಧ್ಯವಾಗಲಿದೆ.

ಕೋವಿಡ್-19 2ನೇ ಅಲೆಯ ಸೋಂಕು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ?

ಕೋವಿಡ್-19 2ನೇ ಲೆಯ ಸೋಂಕು ಮಕ್ಕಳಿಗೂ ಸಮಾನವಾಗಿ ಪರಿಣಾಮ ಬೀರಿದೆ. ಕೋವಿಡ್-19 ಹೊಸ ರೋಗಾಣು. ಹಾಗಾಗಿ, ಇದು ಎಲ್ಲ ವಯಸ್ಸಿನ ಜನರ ಮೇಲೂ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಏಕೆಂದರೆ, ನಮ್ಮೆಲ್ಲರಿಗೆ ಹೊಸ ರೋಗಾಣು ನಿಯಂತ್ರಿಸುವ ಸ್ವಾಭಾವಿಕ ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಎನ್ಸಿಡಿಸಿ / ಐಡಿಎಸ್ಪಿ ವರದಿಯ (ಡ್ಯಾಶ್ಬೋರ್ಡ್‌) ಪ್ರಕಾರ, 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಂದಲೇ ಸರಿಸುಮಾರು 12% ಜನರಿಗೆ ಕೋವಿಡ್ ಸೋಂಕು ಹರಡಿದೆ.

ಮಕ್ಕಳು ಮತ್ತು ವಯಸ್ಕರಲ್ಲಿ ಪಾಸಿಟಿವಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಇತ್ತೀಚಿನ ಸಮೀಕ್ಷೆಗಳಿಂದ ತಿಳಿದುಬಂದಿದೆ. ಆದಾಗ್ಯೂ, ಮೊದಲ ಅಲೆಗಿಂತ 2ನೇ ಅಲೆಯಲ್ಲಿ ಹೆಚ್ಚಿನ ಪ್ರಮಾಣದ ಜನರಿಗೆ ಸೋಂಕು ಹರಡಿದ ಪರಿಣಾಮ, ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿತು. ಆದರೆ ಇದುವರೆಗೆ, ವಯಸ್ಕರಿಗೆ ಹೋಲಿಸಿದರೆ, ಮಕ್ಕಳ ಮರಣ ಪ್ರಮಾಣ ಅತ್ಯಂತ ಕಡಿಮೆ ಮತ್ತು 2-3 ರೋಗಗಳನ್ನು ಹೊಂದಿರುವ ಮಕ್ಕಳೇ ಹೆಚ್ಚಾಗಿ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ.

ಮಕ್ಕಳು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನೀವು ಯಾವೆಲ್ಲಾ ಸವಾಲುಗಳನ್ನು ಎದುರಿಸಿದಿರಿ, ಅದರಲ್ಲೂ ವಿಶೇಷವಾಗಿ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವ ರೋಗಿಗಳು?

ಕೋವಿಡ್-19 ಸೋಂಕಿತ ಮಕ್ಕಳಿಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿ, ಮೀಸಲಿರಿಸುವ ಮೂಲಕ ನಾವು ಮಕ್ಕಳ ಆರೋಗ್ಯ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಯಿತು. ಆದಾಗ್ಯೂ, ಕೋವಿಡ್-19 2ನೇ ಅಲೆ ದೇಶಾದ್ಯಂತ ವ್ಯಾಪಕವಾದ ಕಾಲಘಟ್ಟದಲ್ಲಿ ನಾವು ಕೆಲವು ಸವಾಲುಗಳನ್ನು ಎದುರಿಸಬೇಕಾಯಿತು. ಆಸ್ಪತ್ರೆಯ ಹಲವು ಹಿರಿಯ ವೈದ್ಯರು, ಸ್ಥಾನಿಕ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಎಲ್ಲಾ ರೋಗಿಗಳಿಗೆ ವಾಸ್ತವ್ಯ ಕಲ್ಪಿಸಲು ನಾವು ಸವಾಲುಗಳನ್ನು ಎದುರಿಸಬೇಕಾಯಿತು.

ಎಂಐಎಸ್-ಸಿ ಎಂದರೇನು? ಎಂಐಸ್-ಸಿ ಪ್ರಕರಣಗಳಿಗೆ ಚಿಕಿತ್ಸೆ ನೀಡುವಾಗ ಎದುರಿಸಿದ ಪರಸ್ಥಿತಿ ಮತ್ತು ಸವಾಲುಗಳನ್ನು ವಿಸ್ತಾರವಾಗಿ ವಿವರಿಸಿ? ರೋಗಿಗಳು ಎಂಐಎಸ್-ಸಿ ರೋಗ ಮತ್ತು ಚಿಕಿತ್ಸೆ ಬಗ್ಗೆ ಜಾಗೃತರಾಗಬೇಕು ಎಂದು ನಿಮಗನಿಸುತ್ತಿದೆಯೇ?

ಬಹು ವ್ಯವಸ್ಥೆಯ ಉರಿಯೂತ ರೋಗ ಲಕ್ಷಣವನ್ನು ಎಂಐಎಸ್-ಸಿ ಎಂದು ಕರೆಯಲಾಗುತ್ತದೆ. ಇದು ಹೊಸ ರೋಗ ಲಕ್ಷಣವಾಗಿದ್ದು, ಮಕ್ಕಳು ಮತ್ತು ಹದಿಹರೆಯದವರಲ್ಲಿ (0-19 ವರ್ಷದವರು) ಕಾಣಿಸಿಕೊಳ್ಳುತ್ತಿದೆ. ಕೋವಿಡ್-19 2ನೇ ಅಲೆಯ ಸೋಂಕು ವ್ಯಾಪಕವಾದಾಗ ಸೋಂಕಿತ ಜನರು ಗುಣಮುಖರಾದ 2-6 ವಾರಗಳ ನಂತರ ಎಂಐಎಸ್-ಸಿ ರೋಗ ಲಕ್ಷಣಗಳು ಪತ್ತೆಯಾಗಿವೆ.

ಮೂರು ವಿಧದ ಕ್ಲಿನಿಕಲ್ ಕೋರ್ಸ್|ಗಳಲ್ಲಿ ರೋಗ ಲಕ್ಷಣ ವಿವರಿಸಲಾಗಿದೆ: ನಿಲ್ಲದ ಜ್ವರದ ಜತೆಗೆ ಉರಿಯೂತ ಹೆಚ್ಚಳ, ಆಘಾತ, ರಕ್ತನಾಳಗಳ ಊದು, ಎಡ ಕುಹರ(ಲೆಫ್ಟ್ ವೆಂಟ್ರಿಕಲ್)ದಲ್ಲಿ ದೋಷ ಅಥವಾ ಹಾನಿ ಸಮಸ್ಯೆಗಳು ಕಂಡುಬರುತ್ತವೆ. ಎಂಐಎಸ್-ಸಿ ರೋಗ ಲಕ್ಷಣ ಪತ್ತೆ ಮಾಡಲು, ಸುಧಾರಿತ ರೋಗ ಪತ್ತೆ ಅತ್ಯಗತ್ಯ. ಎಲ್ಲಾ ಶಂಕಿತ ಪ್ರಕರಣಗಳನ್ನು ಎಚ್|ಡಿಯು/ಐಸಿಯು ಸೌಲಭ್ಯಗಳಿರುವ ತೃತೀಯ ಆರೈಕೆಯ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತದೆ (ಕಳಿಸಲಾಗುತ್ತದೆ). ರೋಗ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ, ಚಿಕಿತ್ಸೆ ನೀಡಿ ಗುಣಪಡಿಸಬಹುದು.

***


(Release ID: 1737516) Visitor Counter : 3194