ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

40.64 ಕೋಟಿ ದಾಟಿದ ಭಾರತದ ಒಟ್ಟು ಕೋವಿಡ್-19 ಲಸಿಕೆ ವ್ಯಾಪ್ತಿ

ಶೇ. 97.32ಕ್ಕೆ ಏರಿಕೆಯಾದ ಚೇತರಿಕೆ ದರ

ಕಳೆದ 24 ಗಂಟೆಗಳಲ್ಲಿ 38,164 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ

ಪ್ರಸ್ತುತ ಭಾರತದ ಸಕ್ರಿಯ ಪ್ರಕರಣಗಳ ಹೊರೆಯು (4,21,665) ಒಟ್ಟು ಪ್ರಕರಣಗಳಲ್ಲಿ ಶೇ. 1.35% ರಷ್ಟಿದೆ

ದೈನಂದಿನ ಪಾಸಿಟಿವಿಟಿ ದರ (2.61%) ಸತತ 28 ದಿನಗಳಿಂದ ಶೇ. 3ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ

Posted On: 19 JUL 2021 10:13AM by PIB Bengaluru

ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿಯು 40.64 ಕೋಟಿ ದಾಟಿದೆ. ಇಂದು ಬೆಳಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ, ಒಟ್ಟಾರೆಯಾಗಿ 50,69,232 ಸೆಷನ್‌ಗಳ ಮೂಲಕ 40,64,81,493 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.   ಕಳೆದ 24 ಗಂಟೆಗಳಲ್ಲಿ 13,63,123  ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಇದರಲ್ಲಿ ಇವು ಸೇರಿವೆ:

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

1,02,69,922

2ನೇ  ಡೋಸ್

75,52,270

ಮುಂಚೂಣಿ ಕಾರ್ಯಕರ್ತರು

1ನೇ  ಡೋಸ್

1,77,95,125

2ನೇ  ಡೋಸ್

1,03,66,268

18-44 ವರ್ಷ ವಯೋಮಾನದವರು

1ನೇ ಡೋಸ್

12,50,80,488

2ನೇ  ಡೋಸ್

49,07,782

45-59 ವರ್ಷ ವಯೋಮಾನದವರು

1ನೇ  ಡೋಸ್

9,76,43,768

2ನೇ ಡೋಸ್

2,93,47,090

60 ವರ್ಷ ಮೀರಿದವರು

1ನೇ  ಡೋಸ್

7,21,55,133

2ನೇ  ಡೋಸ್

3,13,63,647

ಒಟ್ಟು

40,64,81,493

ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21 ರಿಂದ ಆರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ. 
ಸಾಂಕ್ರಾಮಿಕದ ಆರಂಭದಿಂದ ಸೋಂಕಿಗೆ ಒಳಗಾದವರ ಪೈಕಿ ಈಗಾಗಲೇ 3,03,08,456 ಜನರು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ  ಮತ್ತು ಕಳೆದ 24 ಗಂಟೆಗಳಲ್ಲಿ 38,660  ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 97.32% ಚೇತರಿಕೆ ದರವನ್ನು ಸೂಚಿಸುತ್ತದೆ ಮತ್ತು ಚೇತರಿಕೆ ದರವು ನಿರಂತರ ಹೆಚ್ಚಳ ಪ್ರವೃತ್ತಿಗೆ ಸಾಕ್ಷಿಯಾಗುತ್ತಿದೆ. 
 

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,164 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.
ನಿರಂತರ ಇಪ್ಪತ್ತೆರಡು ದಿನಗಳಿಂದ 50,000ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಮತ್ತು ರಾಜ್ಯಗಳ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸತತ ಹಾಗೂ ಸಹಯೋಗದ ಪ್ರಯತ್ನಗಳ ಫಲವಾಗಿದೆ.


 

ಭಾರತದ ಸಕ್ರಿಯ ಪ್ರಕರಣಗಳ ಹೊರೆ ಇಂದು 4,21,665ರಷ್ಟಿದೆ ಮತ್ತು ಸಕ್ರಿಯ ಪ್ರಕರಣಗಳ ಪ್ರಮಾಣವು ಈಗ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ 1.35% ರಷ್ಟಿದೆ. 
 

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 14,63,593 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ, ಭಾರತದಲ್ಲಿ ಇಲ್ಲಿಯವರೆಗೆ 44.54 ಕೋಟಿ (44,54,22,256)ಪರೀಕ್ಷೆಗಳನ್ನು ನಡೆಸಲಾಗಿದೆ. 
ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿದ್ದರೂ, ಸಾಪ್ತಾಹಿಕ ಪ್ರಕರಣಗಳ ಪಾಸಿಟಿವಿಟಿಯಲ್ಲಿ ಸತತ ಕುಸಿತ ಕಂಡುಬರುತ್ತಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 2.08% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಇಂದು 2.61% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 28 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿ ಮತ್ತು ಸತತ 42 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.

**** 
 

 (Release ID: 1736704) Visitor Counter : 129