ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

40 ಕೋಟಿ ಡೋಸ್ ಸಮೀಪಿಸಿದ ಭಾರತದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ


ಕೊರೊನಾ ಸೋಂಕಿನ ಚೇತರಿಕೆ ದರ 97.31%ಗೆ ಸುಧಾರಣೆ

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 38,079 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 4,24,025ಕ್ಕೆ ಇಳಿಕೆ; ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.36%

ದೈನಂದಿನ ಪಾಸಿಟಿವಿಟಿ ದರ 1.91%ಗೆ ಇಳಿಕೆ; ಸತತ 26 ದಿನಗಳಿಂದ 3% ಮಟ್ಟದಿಂದ ಕೆಳಗೆ

Posted On: 17 JUL 2021 10:48AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನವು ಮಹತ್ವದ ಮೈಲಿಗಲ್ಲು ಸ್ಥಾಪನೆಯತ್ತ ಹೆಜ್ಜೆ ಇಟ್ಟಿದ್ದು, ಒಟ್ಟು ಲಸಿಕೆ ನೀಡಿಕೆ ಪ್ರಮಾಣವು 40 ಕೋಟಿ ಡೋಸ್ ಸಮೀಪಿಸುತ್ತಿದೆ. ದೇಶಾದ್ಯಂತ ಇದುವರೆಗೆ 39,96,95,879 ಡೋಸ್ ಲಸಿಕೆ ಹಾಕಲಾಗಿದೆ. 50,09,914 ಆಂದೋಲನಗಳಲ್ಲಿ ಈ ಸಾಧನೆ ಮಾಡಲಾಗಿದೆ ಎಂಬ ಗಮನಾರ್ಹ ಸಂಗತಿ ಇಂದು ಬೆಳಗ್ಗೆ 7 ಗಂಟೆಗೆ ಬಿಡುಗಡೆ ಆಗಿರುವ ತಾತ್ಕಾಲಿಕ ವರದಿಯಿಂದ ದೃಢಪಟ್ಟಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 42,12,557 ಜನರಿಗೆ ಲಸಿಕೆ ಹಾಕಲಾಗಿದೆ.

ಈ ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ:

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,02,66,074

2ನೇ ಡೋಸ್

75,14,892

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,77,79,913

2ನೇ ಡೋಸ್

1,02,62,953

18-44 ವಯೋಮಾನದವರು

ಮೊದಲ ಡೋಸ್

12,18,20,703

2ನೇ ಡೋಸ್

46,11,997

45-59 ವಯೋಮಾನದವರು

ಮೊದಲ ಡೋಸ್

9,69,30,030

2ನೇ ಡೋಸ್

2,79,89,513

60 ವರ್ಷ ದಾಟಿದವರು

ಮೊದಲ ಡೋಸ್

7,18,68,506

2ನೇ ಡೋಸ್

3,06,51,298

ಒಟ್ಟು

39,96,95,879

ಬೃಹತ್ ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಿದೆ.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,02,27,792 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 43,916 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರ ಫಲವಾಗಿ ಒಟ್ಟಾರೆ ಚೇತರಿಕೆ ದರವೀಗ 97.13%ಗೆ ಸುಧಾರಣೆ ಕಂಡಿದ್ದು, ಚೇತರಿಕೆ ದರವು ಸುಸ್ಥಿರವಾಗಿ ಏರಿಕೆ ಪ್ರವೃತ್ತಿ ಮುಂದುವರಿಸಿದೆ.

https://static.pib.gov.in/WriteReadData/userfiles/image/image001C2N9.jpg

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 38,079 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 20 ದಿನಗಳಿಂದ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಗೆ ವರದಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ಕೊರೊನಾ ಹೊಸ ಪ್ರಕರಣಗಳು ತಗ್ಗುತ್ತಿವೆ.

https://static.pib.gov.in/WriteReadData/userfiles/image/image002KLP0.jpg

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 4,24,025ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.36% ಇದೆ.

https://static.pib.gov.in/WriteReadData/userfiles/image/image003A1A1.jpg

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲೇ 19,98,715 ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೆ ಒಟ್ಟಾರೆ 44.20 ಕೋಟಿಗಿಂತ ಹೆಚ್ಚಿನ ಅಂದರೆ 44,20,21,954 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಕೋವಿಡ್-19 ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ, ವಾರದ ಪಾಸಿಟಿವಿಟಿ ದರ ಗಣನೀಯವಾಗಿ ತಗ್ಗುತ್ತಿದೆ.ಪ್ರಸ್ತುತ ಅದು 2.10%ಗೆ ಇಳಿದಿದೆ. ದೈನಂದಿನ ಪಾಸಿಟಿವಿಟಿ ದರ ಇಂದು 1.91%ಗೆ ಕುಸಿದಿದೆ. ನಿರಂತರ 40 ದಿನಗಳಿಂದ ಅದು 5% ಮಟ್ಟದಿಂದ ಕೆಳಗೆ ಹಾಗೂ ಸತತ 26ನೇ ದಿನದಲ್ಲಿ 3% ಮಟ್ಟದ ಒಳಗಿದೆ.

https://static.pib.gov.in/WriteReadData/userfiles/image/image004ZNXE.jpg

***



(Release ID: 1736430) Visitor Counter : 235