ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
2021 ರ ಏಪ್ರಿಲ್-ಜೂನ್ ತ್ರೈಮಾಸಿಕದ ಇಲಾಖಾ ವೆಚ್ಚದಲ್ಲಿ 65% ಉಳಿತಾಯಕ್ಕಾಗಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯನ್ನು ಅಭಿನಂದಿಸಿದ್ದಾರೆ, ಇದು ಹಣಕಾಸು ಸಚಿವಾಲಯ ನಿಗದಿಪಡಿಸಿದ 20% ವ್ಯರ್ಥ ಕಡಿತಕ್ಕಿಂತ ಹೆಚ್ಚಾಗಿದೆ
ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು
Posted On:
16 JUL 2021 5:16PM by PIB Bengaluru
2021 ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇಲಾಖಾ ವೆಚ್ಚದಲ್ಲಿ ಶೇಕಡಾ 65 ರಷ್ಟು ಉಳಿತಾಯವನ್ನು ಮಾಡಿದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಸಚಿವ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಡಾ. ಜಿತೇಂದ್ರ ಸಿಂಗ್ ಅವರು ಇಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯನ್ನು (ಡಿಒಪಿಟಿ) ಅಭಿನಂದಿಸಿದರು. ಈ ಉಳಿತಾಯವು 2020 ರ ತ್ರೈಮಾಸಿಕಕ್ಕೆ ಹೋಲಿಸಿದಾಗ ಇದು ಹಣಕಾಸು ಸಚಿವಾಲಯದ ಖರ್ಚು ಇಲಾಖೆಯಿಂದ ನಿಗದಿಪಡಿಸಿದ 20% ತ್ಯಾಜ್ಯ ಕಡಿತಕ್ಕಿಂತ ಹೆಚ್ಚಾಗಿದೆ.
ವಿದೇಶಿ ಪ್ರಯಾಣ (100%), ದೇಶೀಯ ಪ್ರಯಾಣ (60.20%), ಆಡಳಿತಾತ್ಮಕ ವೆಚ್ಚಗಳು (85.84%) ಮತ್ತು ಪ್ರಕಟಣೆ (79.16%) ಎಂಬ ನಾಲ್ಕು ವಿಭಾಗಗಳ ಅಡಿಯಲ್ಲಿ ಉಳಿತಾಯವಾಗಿದೆ.
ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವರ ಸಮಗ್ರ ಪರಿಶೀಲನಾ ಸಭೆಯಲ್ಲಿ ಡಾ.ಜಿತೇಂದ್ರ ಸಿಂಗ್ ಅವರು ವ್ಯರ್ಥ ವೆಚ್ಚವನ್ನು ಕಡಿಮೆ ಮಾಡಲು ಡಿಒಪಿಟಿ ಇಲಾಖೆಯ ಪಾತ್ರವನ್ನು ಶ್ಲಾಘಿಸಿದರು. ಪ್ರಯಾಣ, ಆಹಾರ ಮತ್ತು ಸಮ್ಮೇಳನಗಳ ವ್ಯರ್ಥ ವೆಚ್ಚವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಲು ಎಲ್ಲಾ ಸಚಿವಾಲಯಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ ನೀಡಿರುವುದರಿಂದ ಇದು ಸಾಕಷ್ಟು ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಅಂತೆಯೇ, ಸರ್ಕಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ದಕ್ಷತೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿಯವರು ನೀಡಿದ ನಿರ್ದೇಶನಗಳ ಅನುಸಾರವಾಗಿ, ಡಾ. ಜಿತೇಂದ್ರ ಸಿಂಗ್ ಅವರು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿದರು. ಕಡತಗಳ ಸಾಗುವಿಕೆಯನ್ನು ಕೇವಲ ನಾಲ್ಕು ಪದರಗಳಿಗೆ ಇಳಿಸುವ ಮೂಲಕ, ಇ-ಆಫೀಸ್ ಆವೃತ್ತಿ 7.0 ಅನ್ನು ಅಳವಡಿಸಿಕೊಳ್ಳುವ ಮೂಲಕ, ಎಲೆಕ್ಟ್ರಾನಿಕ್ ರಶೀದಿಗಳ ಪ್ರಸರಣಕ್ಕಾಗಿ ಕೇಂದ್ರ ನೋಂದಣಿ ಘಟಕದ ಡಿಜಿಟಲೀಕರಣ ಮತ್ತು ಡೆಸ್ಕ್ ಆಫೀಸರ್ ವ್ಯವಸ್ಥೆಯ ಕಾರ್ಯಾಚರಣೆಯ ಮೂಲಕ ಕಚೇರಿ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸಲ್ಲಿಕೆಯ ಚಾನಲ್ನ ಸಮಯೋಚಿತ ಪರಿಶೀಲನೆಯನ್ನು ಕೈಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ, ಡಾ.ಜಿತೇಂದ್ರ ಸಿಂಗ್, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ನಿರ್ವಹಣೆಗೆ ಡಿಒಪಿಟಿ ಇಲಾಖೆಯು ನೋಡಲ್ ವಿಭಾಗವಾಗಿರುವುದರಿಂದ, ಸಾಂಕ್ರಾಮಿಕ ರೋಗದ ಒಂದು ಮತ್ತು ಎರಡನೇ ಅಲೆಯಲ್ಲಿ ಹರಡುವಿಕೆಯನ್ನು ಕಡಿಮೆ ಮಾಡಲು ಕಾಲಕಾಲಕ್ಕೆ ಸೂಕ್ತ ಸೂಚನೆಗಳನ್ನು ನೀಡಲಾಯಿತು. ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ, ಕಚೇರಿಗಳಲ್ಲಿ ಹಾಜರಾತಿಯನ್ನು ನಿಯಂತ್ರಿಸುವುದು, ಮೊಬೈಲ್ ಫೋನ್ಗಳಲ್ಲಿ ಆರೊಗ್ಯ ಸೇತು ಅಪ್ಲಿಕೇಶನ್ನ ಬಳಕೆಯನ್ನು ಕಡ್ಡಾಯಗೊಳಿಸುವುದು, ಎಪಿಎಆರ್ ಸಲ್ಲಿಸಲು ಸಮಯ ಮಿತಿಗಳನ್ನು ವಿಸ್ತರಿಸುವುದು ಮತ್ತು ಐಜಿಒಟಿಯಲ್ಲಿ ಮುಂಚೂಣಿ ಕಾರ್ಮಿಕರಿಗೆ ತರಬೇತಿ ನೀಡುವುದು ಮುಂತಾದ ಕ್ರಮಗಳು ಕೋವಿಡ್ ಹರಡುವಿಕೆಯನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ಸಿಬ್ಬಂದಿ ಇಲಾಖೆಯ ಕೇಂದ್ರ ಕಾರ್ಯದರ್ಶಿ , ಶ್ರೀ ದೀಪಕ್ ಖಂಡೇಕರ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ತಮ್ಮ ಮಾಹಿತಿಗಳನ್ನು ನೀಡಿದರು.
***
(Release ID: 1736293)
Visitor Counter : 308