ಸಂಪುಟ

ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಅಭಿಯಾನ ಮುಂದುವರೆಸಲು ಸಚಿವ ಸಂಪುಟ ಅನುಮೋದನೆ

Posted On: 14 JUL 2021 4:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ಯ ಅಭಿಯಾನ[ಎನ್.ಎ.ಎಂ]ವನ್ನು  ಮುಂದುವರೆಸಲು ನಿರ್ಧರಿಸಲಾಗಿದೆ. 01-04-2021 ರಿಂದ 31-03-2026 ರ ವರೆಗೆ ಅಭಿಯಾನ ಮುಂದುವರೆಸಲು 4607.30 ಕೋಟಿ ರೂಪಾಯಿ ಹಣ ನಿಗದಿ ಮಾಡಲಾಗಿದೆ [ಕೇಂದ್ರ ಪ್ರಾಯೋಜಕತ್ವದಡಿ 3,000 ಕೋಟಿ ರೂಪಾಯಿ ಮತ್ತು ರಾಜ್ಯದ ಪಾಲು 1607.30 ಕೋಟಿ ರೂಪಾಯಿ]. ಈ ಅಭಿಯಾನವನ್ನು 15-09-2014 ರಂದು ಪ್ರಾರಂಭಿಸಲಾಗಿತ್ತು.

 

ಸಾಂಪ್ರಾದಾಯಿಕ ವೈದ್ಯಕೀಯ ವ್ಯವಸ್ಥೆಗಳಾದ ಆಯುರ್ವೇದ, ಸಿದ್ಧ, ಸೋವಾ ರಿಗ್ಪಾ, ಯುನಾನಿ ಮತ್ತು ಹೋಮಿಯೋಪತಿ (ಎಎಸ್‌ಯು ಮತ್ತು ಎಚ್) ಪರಂಪರೆಯನ್ನು ಇದು ಪ್ರತಿನಿಧಿಸುತ್ತದೆ. ಇದು ರೋಗ ತಡೆಗಟ್ಟುವ, ಆಯುಷ್ ಅನ್ನು ಉತ್ತೇಜಿಸುವ ಮತ್ತು ಆರೋಗ್ಯ ರಕ್ಷಣೆಯ ಜ್ಞಾನ ನಿಧಿಯಾಗಿದೆ. ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ವೈವಿದ್ಯಮಯ ಮತ್ತು ಹೊಂದಿಕೊಳ್ಳುವ: ಕೈಗೆಟುಕುವ, ಸುಲಭ ದರದ, ಅತಿ ಹೆಚ್ಚು ಜನರು ಒಪ್ಪಿಕೊಂಡಿರುವ ಸಕಾರಾತ್ಮಕ ಅಂಶಗಳನ್ನು ಇದು ಒಳಗೊಂಡಿದೆ.  ತುಲನಾತ್ಮಕವಾಗಿ ಕಡಿಮೆ ವೆಚ್ಚದ ಮತ್ತು ವೃದ್ದಿಸುತ್ತಿರುವ ಆರ್ಥಿಕ ಮೌಲ್ಯ, ದೊಡ್ಡ ವಲಯಗಳಿಗೆ ಆರೋಗ್ಯ ಪೂರೈಕೆದಾರನ್ನಾಗಿ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.  

 

ಕೇಂದ್ರ ಪ್ರಯೋಜಕತ್ವದ ರಾಷ್ಟ್ರೀಯ ಆಯುಷ್ ಅಭಿಯಾನವನ್ನು ಆಯುಷ್ ಸಚಿವಾಲಯ ಅನುಷ್ಠಾನಗೊಳಿಸುತ್ತಿದೆ.  ಕಡಿಮೆ ವೆಚ್ಚದಲ್ಲಿ ಆಯುಷ್ ಸೇವೆ ಒದಗಿಸುವ, ಆಯುಷ್ ಆಸ್ಪತ್ರೆಗಳು ಮತ್ತು ಔಷಧಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು [ಪಿ..ಎಚ್.ಸಿಗಳು], ಸಮುದಾಯ ಆರೋಗ್ಯ ಕೇಂದ್ರಗಳು [ಸಿ.ಎಚ್.ಸಿಗಳು],  ಜಿಲ್ಲಾ ಆಸ್ಪತ್ರೆಗಳ [ಡಿ.ಎಚ್ ಗಳು]ನ್ನು   ಮೇಲ್ದರ್ಜೇಗೇರಿಸುವ,  ರಾಜ್ಯದ ಮಟ್ಟದ ಆಯುಷ್ ಶಿಕ್ಷಣ ಸಂಸ್ಥೆಗಳನ್ನು ಬಲಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಆರೋಗ್ಯ ವಲಯದಲ್ಲಿ 12,500 ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಸಮಗ್ರ ಆರೋಗ್ಯ ಸೇವೆಯನ್ನು ಇದು ಒದಗಿಸುತ್ತಿದೆ. ಆಯುಷ್ ತತ್ವಗಳು ಮತ್ತು ಅಭ್ಯಾಸಗಳ ಆಧಾರದ ಮೇಲೆ ಸಮಗ್ರ ಸಾಸ್ಥ್ಯ ಮಾದರಿ ಸೇವೆಗಳನ್ನು ಒದಗಿಸಲು, ರೋಗದ ಹೊರೆ ಕಡಿಮೆ ಮಾಡಲು ಮತ್ತು ಜನ ಸಾಮಾನ್ಯರಿಗೆ ಖರ್ಚು ಕಡಿಮೆ ಮಾಡುವ “ ಸ್ವ ಆರೈಕೆ ” ಗೂ ಸಹಕಾರಿಯಾಗಲಿದೆ.  

 

ದೇಶದಲ್ಲಿ ಆಯುಷ್ ಆರೋಗ್ಯ ಸೇವೆಗಳು/ ಶಿಕ್ಷಣವನ್ನು ದೊರಕಿಸಿಕೊಡಲು, ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳನ್ನು ಬೆಂಬಲಿಸುವ ಮೂಲಕ ಆರೋಗ್ಯ ಸೇವೆಗಳಲ್ಲಿನ ಅಂತರವನ್ನು ಈ ಅಭಿಯಾನ ಪರಿಹರಿಸಲಿದೆ. ವಿಶೇಷವಾಗಿ ದುರ್ಬಲ ಮತ್ತು ದೂರದ ಪ್ರದೇಶದ ಜನರಿಗೆ ಇದರಿಂದ ಅನುಕೂಲವಾಗಲಿದೆ. ಅಂತಹ ಪ್ರದೇಶಗಳ ನಿರ್ದಿಷ್ಟ ಅಗತ್ಯತೆಗಳಿಗೆ ಅನುಗುಣವಾಗಿ ಮತ್ತು ಅವರ ವಾರ್ಷಿಕ ಯೋಜನೆಗಳಲ್ಲಿ ಹೆಚ್ಚಿನ ಸಂಪನ್ಮೂಲಗಳ ಹಂಚಿಕೆಗಾಗಿ ನ್ಯಾಮ್ ನಡಿ ವಿಶೇಷ ಗಮನಹರಿಸಲಾಗಿದೆ.  

 

ಅಭಿಯಾನದ ನಿರೀಕ್ಷಿತ ಫಲಿತಾಂಶ ಹೀಗಿವೆ.

 

1.  ಆರೋಗ್ಯ ಸೌಲಭ್ಯಗಳ ಮೂಲಕ ಆಯುಷ್ ಸೇವೆಗಳನ್ನು ಹೆಚ್ಚಿಸುವ, ಆಯುಷ್ ಸೇವೆಗಳಿಗೆ ಒಳ್ಳೆಯ ಅವಕಾಶ ಹಾಗೂ ಔಷಧಗಳ ಉತ್ತಮ ಲಭ್ಯತೆ ಮತ್ತು ತರಬೇತಿ ಪಡೆದ ಮಾನವ ಶಕ್ತಿ ಒದಗಿಸಲು ಕ್ರಮ

2.  ಆಯುಷ್ ಶಿಕ್ಷಣ ಸಂಸ್ಥೆಗಳನ್ನು ಸುಸಜ್ಜಿತವಾಗಿ ಹೆಚ್ಚಿಸಿ ಆಯುಷ್ ಶಿಕ್ಷಣವನ್ನು ಸುಧಾರಿಸುವುದು.  

3.  ಆಯುಷ್ ವ್ಯವಸ್ಥೆಯಲ್ಲಿನ ಆರೋಗ್ಯ ಸೌಲಭ್ಯಗಳನ್ನು ಬಳಸಿಕೊಂಡು ಉದ್ದೇಶಿತ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಮೂಲಕ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಕಡಿಮೆ ಮಾಡುವತ್ತ ಗಮನಹರಿಸುವ ಉದ್ದೇಶ ಹೊಂದಲಾಗಿದೆ.  

 

*****



(Release ID: 1735616) Visitor Counter : 324