ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಮರಣ ಅಂಕಿಅಂಶಗಳ ಸತ್ಯ-ಮಿಥ್ಯ


ಕೋವಿಡ್-19 ಸಾವುಗಳ ಕುರಿತಾದ ಎಚ್‌ಎಂಐಎಸ್ ಮತ್ತು ಸಿಆರ್‌ಎಸ್ ದತ್ತಾಂಶಗಳ ಹೋಲಿಕೆಯಿಂದ ಬಂದ ನಿರ್ಣಯಗಳು ಸಂಪೂರ್ಣ ಸುಳ್ಳು ಮತ್ತು ಊಹಾಪೋಹ

ಕೋವಿಡ್-19 ಸಾವುಗಳ ದಾಖಲೆಗೆ ಭಾರತದಲ್ಲಿ ಉತ್ಕೃಷ್ಟ ವ್ಯವಸ್ಥೆ ಅಳವಡಿಕೆ

Posted On: 14 JUL 2021 11:24AM by PIB Bengaluru

ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಉಂಟಾಗಿರುವ ಸಾವುಗಳ ಪ್ರಮಾಣ ಕುರಿತು ರಾಷ್ಟ್ರೀಯ ಆರೋಗ್ಯ ಮಿಷನ್ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್ಎಂಐಎಸ್) ದತ್ತಾಂಶ ಆಧರಿಸಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ಅಧಿಕ ಸಾವಿನ ಸುದ್ದಿ ಕೇವಲ ವದಂತಿ, ಅದರಲ್ಲಿ ಯಾವುದೇ ಸತ್ಯಾಂಶಗಳಿಲ್ಲ, ಬರೀ  ಊಹೋಪೋಹದಿಂದ ಕೂಡಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್(ಸಿಆರ್|ಎಸ್) ಮತ್ತು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್ಎಂಐಎಸ್) ದತ್ತಾಂಶಗಳನ್ನು ಹೋಲಿಕೆ ಮಾಡಿ, ಅನುಮಾನಾಸ್ಪದ ತಪ್ಪು ವರದಿ ಪ್ರಕಟಿಸಲಾಗಿದೆ. ಅಂತಹ ವರದಿಗಳಲ್ಲಿ ಯಾವುದೇ ಆಧಾರಗಳಿಲ್ಲ, ಕೇವಲ ಊಹೋಪೋಹದಿಂದ ಕೂಡಿದ ವರದಿ ಅವಾಗಿವೆ.

ಎಚ್ಎಂಐಎಸ್ ವರದಿ ಆಧರಿಸಿ ಕೋವಿಡ್ ಸಾವಿನ ಸಂಖ್ಯೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇತರೆ ಮಾಹಿತಿಗಳ ಕೊರತೆಯಲ್ಲಿ ಸಂಭವಿಸಿರುವ ಎಲ್ಲಾ ಸಾವುಗಳನ್ನು ಕೋವಿಡ್-19 ಸಾವುಗಳು ಎಂದು ಪರಿಗಣಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರವೇ, 2,50,000ಕ್ಕಿಂತ ಹೆಚ್ಚಿನ ಸಾವುಗಳಿಗೆ ಕಾರಣ ಪತ್ತೆಯಾಗಿಲ್ಲ. ಯಾವುದೇ ಆಧಾರವಿಲ್ಲದೆ ಎಲ್ಲ ರೀತಿಯ ಸಾವುಗಳನ್ನು ಕೋವಿಡ್-19 ಸಾವು ಎಂದೇ ಪರಿಗಣಿಸುವುದು ತಪ್ಪು ನಿರ್ಧಾರವಾಗುತ್ತದೆ. ಅಂತಹ ವರದಿಗಳಲ್ಲಿ ಹುರುಳಿಲ್ಲ. ಅವು ನಿರಾಧಾರ ದತ್ತಾಂಶ ಆಧರಿಸಿದ ಕೇವಲ ಕಲ್ಪನೆಯ ಸುಳ್ಳು ವರದಿಗಳಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೋವಿಡ್-19 ದತ್ತಾಂಶ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಪಾರದರ್ಶಕ ವಿಧಾನವನ್ನು ಅಳವಡಿಸಿಕೊಂಡಿದೆ. ಕೋವಿಡ್-19 ಸಂಬಂಧಿತ ಎಲ್ಲಾ ಸಾವುಗಳ ದಾಖಲೆ ಮಾಡಿಕೊಳ್ಳಲು ಉತ್ಕೃಷ್ಟ ಗುಣಮಟ್ಟದ ವ್ಯವಸ್ಥೆಯನ್ನು ಈಗಾಗಲೇ ರೂಪಿಸಿಕೊಳ್ಳಲಾಗಿದೆ. ಉತ್ಕೃಷ್ಟ ವ್ಯವಸ್ಥೆಯಲ್ಲಿ ಕೋವಿಡ್ ಸಂಬಂಧಿತ ಎಲ್ಲಾ ದತ್ತಾಂಶಗಳ ಕ್ರೋಡೀಕರಣ, ಪರಿಷ್ಕರಣೆ  ಮಾಡುವ ನಿರಂತರ ಜವಾಬ್ದಾರಿಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರದಿಯಾಗುತ್ತಿರುವ ಸಾವಿನ ಸಂಖ್ಯೆಯ ಅಸಂಗತತೆ ತಪ್ಪಿಸಲು  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಕೋವಿಡ್-19 ಸಾವುಗಳ ಸಂಖ್ಯೆಯ ಸೂಕ್ತ ದಾಖಲೆಗೆ ಮಾರ್ಗಸೂಚಿ ಹೊರಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶಿಫಾರಸಿನಂತೆ, ಐಸಿಡಿ-10 ಕೋಡಿಂಗ್(ಸಂಕೇತ) ಪ್ರಕಾರವೇ ಎಲ್ಲಾ ಕೋವಿಡ್ ಸಾವುಗಳನ್ನು ದಾಖಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನಿಗದಿತ ಮಾರ್ಗಸೂಚಿಯಂತೆ ಕೋವಿಡ್ ಸಾವುಗಳನ್ನು ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಲವು ಬಾರಿ ವೀಡಿಯೊ ಕಾನ್ಫರೆನ್ಸ್ ಮೂಲಕ, ಕೇಂದ್ರ ತಂಡಗಳ ನಿಯೋಜನೆ ಮೂಲಕ ಹಾಗೂ ಇತರೆ ಔಪಚಾರಿಕ ಸಂವಹನಗಳ ಮೂಲಕ ಸೂಚನೆ ನೀಡುತ್ತಾ ಬರಲಾಗಿದೆ. ಕೋವಿಡ್ ಸಂಬಂಧಿತ ದತ್ತಾಂಶಗಳ ದೈನಂದಿನ ಆಧಾರದಲ್ಲಿ ನಿಯಮಿತ ನಿರ್ವಹಣೆ ಮಾಡುವಂತೆ ಹಾಗೂ ಉತ್ಕೃಷ್ಟ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಾಯ ಮಾಡುತ್ತಲೇ ಬಂದಿದೆ. ವಿಷಯಕ್ಕೆ ಅದು ನಿರಂತರ ಒತ್ತು ನೀಡುತ್ತಿದೆ.

 ಕೋವಿಡ್ ಸಾಂಕ್ರಾಮಿಕ ಸೋಂಕಿನಂತಹ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಕಾಣಿಸಿಕೊಂಡಾಗ ದಾಖಲಿಸಿಕೊಳ್ಳುವ ಮರಣ ಪ್ರಮಾಣದಲ್ಲಿ ಕೊಂಚ ಮಟ್ಟಿನ ವ್ಯತ್ಯಾಸಗಳು ಆಗುತ್ತವೆ ಎಂಬ ವಾಸ್ತವ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಕೋವಿಡ್ ಮರಣದ ಮೇಲೆ ನಡೆಯುವ ಸಂಶೋಧನೆಗಳು ಸಾಮಾನ್ಯವಾಗಿ ನಂಬಲರ್ಹ ಮೂಲಗಳಿಂದ ಪ್ರಕಟವಾಗುವ ವರದಿಯನ್ನು ಆಧರಿಸಿರುತ್ತವೆ. ಅಂತಹ ಅಧ್ಯಯನ ವಿಧಾನಗಳು ನಿಖರ ದತ್ತಾಂಶಗಳನ್ನು ಆಧರಿಸಿರುತ್ತವೆ.

***


(Release ID: 1735340) Visitor Counter : 276