ಪ್ರಧಾನ ಮಂತ್ರಿಯವರ ಕಛೇರಿ

ದಿವಂಗತ ಶ್ರೀಮತಿ ಬಲ್ಜಿತ್ ಕೌರ್ ತುಳಸಿ ಜಿ ಬರೆದಿರುವ “ದಿ ರಾಮಾಯಣ ಆಫ್ ಶ್ರೀ ಗುರು ಗೋವಿಂದ್ ಸಿಂಗ್ ಜಿ“ ಕೃತಿಯ ಮೊದಲ ಪುಸ್ತಕ ಸ್ವೀಕರಿಸಿದ ಪ್ರಧಾನಮಂತ್ರಿ 

Posted On: 09 JUL 2021 3:33PM by PIB Bengaluru

ದಿವಂಗತ ಶ್ರೀಮತಿ ಬಲ್ಜಿತ್ ಕೌರ್ ತುಳಸಿ ಜಿ ಅವರು ಬರೆದಿರುವದಿ ರಾಮಾಯಣ ಆಫ್ ಶ್ರೀ ಗುರು ಗೋವಿಂದ್ ಸಿಂಗ್ ಜಿಕೃತಿಯ ಮೊದಲ ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಕರಿಸಿದರು. ದಿವಂಗತ ಬಲ್ಜಿತ್ ಕೌರ್ ಅವರು ಖ್ಯಾತ ವಕೀಲರಾದ ಶ್ರೀ ಕೆ.ಟಿ.ಎಸ್ ತುಳಸಿ ಜಿ ಅವರ ತಾಯಿ.

ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು, ದಿವಂಗತ ಶ್ರೀಮತಿ ಬಲ್ಜಿತ್ ಕೌರ್ ತುಳಸಿ ಜಿ ಬರೆದಿರುವದಿ ರಾಮಾಯಣ ಆಫ್ ಶ್ರೀ ಗುರು ಗೋವಿಂದ್ ಸಿಂಗ್ ಜಿಕೃತಿಯ ಮೊದಲ ಪುಸ್ತಕ ಸ್ವೀಕರಿಸಿದ್ದೇನೆ. ಕೃತಿ ರಚನೆಕಾರರು ಖ್ಯಾತ ವಕೀಲರಾದ ಶ್ರೀ ಕೆ.ಟಿ.ಎಸ್. ತುಳಸಿ ಜಿ ಅವರ ತಾಯಿ ಆಗಿದ್ದಾರೆ. ಕೃತಿಯನ್ನು .ಜಿ.ಎನ್.ಸಿ. ಸಂಸ್ಥೆ ಪ್ರಕಟಿಸಿರುವುದಾಗಿ ತಿಳಿಸಿದ್ದಾರೆ

ಶ್ರೀ ಕೆ.ಟಿ.ಎಸ್. ತುಳಸಿ ಜಿ ಅವರು ಸಂವಾದದ ಸಂದರ್ಭದಲ್ಲಿ ಸಿಖ್ ಧರ್ಮದ ಉದಾತ್ತ ಸಿದ್ಧಾಂತಗಳ ಬಗ್ಗೆ ಮಾತನಾಡಿದರು ಮತ್ತು ಗುರ್ಬಾನಿ ಶಬಾದ್ ಅನ್ನು ಪಠಿಸಿದರು. ಇದು ತಮಗೆ ಮೆಚ್ಚುಗೆಯಾಯಿತು. ಇಲ್ಲಿದೆ ಧ್ವನಿ ಮುದ್ರಣ https://t.co/0R9z836sLi" ಎಂದು ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

***



(Release ID: 1734239) Visitor Counter : 224