ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಇಂದಿನ ಪರಿಷ್ಕೃತ ವರದಿ
Posted On:
09 JUL 2021 9:05AM by PIB Bengaluru
ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇದುವರೆಗೆ 36.89 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 43,393 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 4,58,727ಕ್ಕೆ ಇಳಿಕೆ ಕಂಡಿದೆ.
ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ 1.49%ಗೆ ತಗ್ಗಿದೆ.
ದೇಶಾದ್ಯಂತ ಇದುವರೆಗೆ 2,98,88,284 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕಳೆದ 24 ತಾಸುಗಳಲ್ಲಿ 44,459 ರೋಗಿಗಳು ಗುಣಮುಖರಾಗಿದ್ದಾರೆ.
ಇದರೊಂದಿಗೆ ಒಟ್ಟಾರೆ ಚೇತರಿಕೆ ದರ 97.17%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ (ಸೋಂಕಿತರ ಸಂಖ್ಯೆ) 5% ಮಟ್ಟದಿಂದ ಕೆಳಗಿದ್ದು, ಅದೀಗ 2.36% ಇದೆ.
ಸತತ 18ನೇ ದಿನದಲ್ಲೂ ದೈನಂದಿನ ಪಾಸಿಟಿವಿಟಿ ದರ 3% ಮಟ್ಟದಿಂದ ಕೆಳಗಿದ್ದು, ಅದೀಗ 2.42%ಗೆ ಇಳಿಕೆ ಕಂಡಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದುವರೆಗೆ 42.70 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1734149)
Visitor Counter : 236