ಭಾರತದ ಸ್ಪರ್ಧಾ ಆಯೋಗ

ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮತ್ತು ಜಪಾನ್ ನ್ಯಾಯಯುತ ವ್ಯಾಪಾರ ಆಯೋಗ (ಜೆಎಫ್ ಟಿಸಿ) ನಡುವೆ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ

Posted On: 08 JUL 2021 7:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಸ್ಪರ್ಧಾ ಕಾನೂನು ಮತ್ತು ನೀತಿ ವಿಚಾರದಲ್ಲಿ ಸಹಕಾರ ಬಲವರ್ಧನೆ ಮತ್ತು ಉತ್ತೇಜನ ಕುರಿತಂತೆ  ಭಾರತೀಯ ಸ್ಪರ್ಧಾ ಆಯೋಗ(ಸಿಸಿಐ) ಮತ್ತು ಜಪಾನ್ ನ್ಯಾಯಯುತ ವ್ಯಾಪಾರ ಆಯೋಗ (ಜೆಎಫ್ ಟಿಸಿ) ನಡುವೆ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಿದೆ.

ಪರಿಣಾಮ:

ಅನುಮೋದಿತ ಸಹಕಾರ ಒಪ್ಪಂದದಿಂದಾಗಿ ಮಾಹಿತಿ ವಿನಿಮಯದ ಮೂಲಕ (ಸಿಸಿಐ) ಜಪಾನ್ ನಲ್ಲಿರುವ ತನ್ನ ಪ್ರತಿಸ್ಪರ್ಧಿ ಸಂಸ್ಥೆ ಅನುಭವಗಳು ಮತ್ತು ಪಾಠಗಳನ್ನು ಅನುಕರಿಸಲು ಮತ್ತು ಕಲಿಯಲು ಸಾಧ್ಯವಾಗುತ್ತದೆ, ತನ್ನ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲಿದೆ. ಅಲ್ಲದೆ ಇದು ಸ್ಪರ್ಧಾ ಕಾಯ್ದೆ 2002ಅನ್ನು ಜಾರಿಗೊಳಿಸಲು (ಸಿಸಿಐ)ಗೆ ಸಹಾಯಕವಾಗಲಿದೆ. ಇದರಿಂದಾಗಿ ಹೊರಬರುವ ಫಲಿತಾಂಶಗಳು ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಒದಗಿಸಲಿವೆ ಮತ್ತು ಸಮಾನತೆ ಮತ್ತು ಎಲ್ಲರನ್ನು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.

ವಿವರಗಳು:

ಮಾಹಿತಿ ವಿನಿಮಯದ ಮೂಲಕ ಸ್ಪರ್ಧಾ ಕಾನೂನು ಮತ್ತು ನೀತಿ ವಿಚಾರದಲ್ಲಿ ಸಹಕಾರ ಬಲವರ್ಧನೆ ಮತ್ತು ಉತ್ತೇಜನಕ್ಕೆ ಇದು ಅನುವು ಮಾಡಿಕೊಡುವುದಲ್ಲದೆ ಅದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಹಕಾರ, ಅನುಭವ ಹಂಚಿಕೆ ಮತ್ತು ಜಾರಿ ಸಹಕಾರ ವಲಯಗಳಲ್ಲಿ ಸಾಮರ್ಥ್ಯವೃದ್ಧಿ ಉಪಕ್ರಮಗಳಿಗೆ ನೆರವಾಗಲಿದೆ.

ಹಿನ್ನೆಲೆ:

ಸ್ಪರ್ಧಾ ಕಾಯ್ದೆ 2002 ಸೆಕ್ಷನ್ 18 ಪ್ರಕಾರ ಸಿಸಿಐ ತನ್ನ ಕಾರ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಅಥವಾ ಕಾಯ್ದೆಯಡಿಯಲ್ಲಿನ ಕಾರ್ಯಗಳನ್ನು ನಿರ್ವಹಿಸಲು ಯಾವುದೇ ವಿದೇಶದ ಯಾವುದೇ ಸಂಸ್ಥೆಯೊಂದಿಗೆ ಒಪ್ಪಂದ ಅಥವಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ.

***


(Release ID: 1733994) Visitor Counter : 278