ಹಣಕಾಸು ಸಚಿವಾಲಯ

17 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ 9,871 ಕೋಟಿ ರೂಪಾಯಿ ಬಿಡುಗಡೆ


ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು 39,384 ಕೋಟಿ ರೂಪಾಯಿ ಆದಾಯ ಕೊರತೆ ಹಣ ಬಿಡುಗಡೆ

ಕರ್ನಾಟಕಕ್ಕೆ ಈ ಕಂತಿನಲ್ಲಿ 135.92 ಕೋಟಿ ರೂಪಾಯಿ: 2021-22 ನೇ ಸಾಲಿನಲ್ಲಿ ಒಟ್ಟು 543.67 ಕೋಟಿ ರೂಪಾಯಿ ಬಿಡುಗಡೆ

Posted On: 08 JUL 2021 11:17AM by PIB Bengaluru

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ವಿತರಣೆ ನಂತರದ ಆದಾಯ ಕೊರತೆಯ[ಪಿ.ಡಿ.ಆರ್.ಡಿ] 4 ನೇ ಮಾಸಿಕ ಅನುದಾನ ಮೊತ್ತ 9,871.00 ಕೋಟಿ ರೂಪಾಯಿಯನ್ನು  ನಿನ್ನೆ ಬಿಡುಗಡೆ ಮಾಡಿದೆ. ಈ ಕಂತಿನ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ 39,484.00 ಕೋಟಿ ರೂಪಾಯಿ ಹಣವನ್ನು ವಿತರಣೆ ನಂತರದ ಆದಾಯ ಕೊರತೆಯಡಿ ಬಿಡುಗಡೆ ಮಾಡಿದಂತಾಗಿದೆ. ಕರ್ನಾಟಕಕ್ಕೆ ಈ ಕಂತಿನಲ್ಲಿ 135.92 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, 2021-22 ನೇ ಸಾಲಿನಲ್ಲಿ ಒಟ್ಟು 543.67 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

2021 – 22 ನೇ ಸಾಲಿನಲ್ಲಿ ರಾಜ್ಯವಾರು ಮಾಸಿಕ ಬಿಡುಗಡೆ ಮಾಡಿರುವ ಪಿ.ಡಿ.ಆರ್.ಡಿ ಅನುದಾನವನ್ನು ಅನುಬಂಧದಲ್ಲಿ ನೀಡಲಾಗಿದೆ.

ವಿತರಣೆ ನಂತರದ ಆದಾಯ ಕೊರತೆ ಅನುದಾನವನ್ನು ಸಂವಿಧಾನದ 275 ನೇ ಪರಿಚ್ಛೇದದಡಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. ರಾಜ್ಯಗಳಿಗೆ ವಿತರಣೆ ನಂತರದ ಆದಾಯ ಕೊರತೆ ಅಂತರವನ್ನು ಪೂರೈಸಲು ಮಾಸಿಕ ಕಂತುಗಳಲ್ಲಿ 15 ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ಅನುದಾನ ಬಿಡುಗಡೆ ಮಾಡಲಾಗುತ್ತದೆ.  2021-22 ನೇ ಸಾಲಿನಲ್ಲಿ 17 ರಾಜ್ಯಗಳಿಗೆ ಪಿ.ಡಿ.ಆರ್.ಡಿ ಅನುದಾನ ಬಿಡುಗಡೆ ಮಾಡುವಂತೆ ಆಯೋಗ ಶಿಫಾರಸ್ಸು ಮಾಡಿತ್ತು.

ಅರ್ಹ ರಾಜ್ಯಗಳು ಅನುದಾನವನ್ನು ಸ್ವೀಕರಿಸಲಿವೆ ಮತ್ತು 2021-22 ನೇ ಸಾಲಿನಲ್ಲಿ ಹಂಚಿಕೆಯ ನಂತರದ ವೆಚ್ಚ ಹಾಗೂ ಆದಾಯದ ಅಂತರವನ್ನು ಪರಿಗಣಿಸಿ ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ.

2021 – 22 ನೇ ಹಣಕಾಸು ಸಾಲಿನಲ್ಲಿ 17 ರಾಜ್ಯಗಳಿಗೆ 15 ನೇ ಹಣಕಾಸು ಆಯೋಗ ಒಟ್ಟು 1,18,452 ಕೋಟಿ ರೂಪಾಯಿ ವಿತರಣೆ ನಂತರದ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಈ ಪೈಕಿ 4 ಕಂತಿನಲ್ಲಿ ಈ ವರೆಗೆ 39,484 ಕೋಟಿ ರೂಪಾಯಿ [ಶೇ 33.33 ರಷ್ಟು] ಬಿಡುಗಡೆ ಮಾಡಲಾಗಿದೆ.

ಪಿ.ಡಿ.ಆರ್.ಡಿ ಅನುದಾನ ಬಿಡುಗಡೆಗೆ 15 ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ರಾಜ್ಯಗಳೆಂದರೆ: ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ. ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.

ರಾಜ್ಯಗಳಿಗೆ ವಿತರಣೆ ನಂತರದ ಆದಾಯ ಕೊರತೆ ಅನುದಾನ ಬಿಡುಗಡೆ

ಕ್ರಮ ಸಂಖ್ಯೆ

ರಾಜ್ಯಗಳ ಹೆಸರು

2021  ಜುಲೈನಲ್ಲಿ ಬಿಡುಗಡೆ ಮಾಡಿದ ಮೊತ್ತ

(4 ನೇ ಕಂತು)

(ಕೋಟಿ ರೂಗಳಲ್ಲಿ)

2021-22 ನೇ ಸಾಲಿನಲ್ಲಿ ಒಟ್ಟು ಬಿಡುಗಡೆ ಮಾಡಿದ ಮೊತ್ತ

(ಕೋಟಿ ರೂ ಗಳಲ್ಲಿ )

 

ಆಂಧ್ರಪ್ರದೇಶ

1438.08

5752.33

 

ಅಸ್ಸಾಂ

531.33

2125.33

 

ಹರ್ಯಾಣ

11.00

44.00

 

ಹಿಮಾಚಲ ಪ್ರದೇಶ

854.08

3416.33

 

ಕರ್ನಾಟಕ

135.92

543.67

 

ಕೇರಳ

1657.58

6630.33

 

ಮಣಿಪುರ

210.33

841.33

 

ಮೇಘಾಲಯ

106.58

426.33

 

ಮಿಜೋರಾಂ

149.17

596.67

 

ನಾಗಾಲ್ಯಾಂಡ್

379.75

1519.00

 

ಪಂಜಾಬ್

840.08

3360.33

 

ರಾಜಸ್ಥಾನ

823.17

3292.67

 

ಸಿಕ್ಕಿಂ

56.50

226.00

 

ತಮಿಳು ನಾಡು

183.67

734.67

 

ತ್ರಿಪುರ

378.83

1515.33

 

ಉತ್ತರಾಖಂಡ

647.67

2590.67

 

ಪಶ್ಚಿಮ ಬಂಗಾಳ

1467.25

5869.00

 

ಒಟ್ಟು

9,871.00

39484.00

 ***


(Release ID: 1733688) Visitor Counter : 262