ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಇಂದಿನ ಪರಿಷ್ಕೃತ ವರದಿ
Posted On:
08 JUL 2021 9:07AM by PIB Bengaluru
ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇದುವರೆಗೆ 36.48 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.
ದೇಶದಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 45,92 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಭಾರತದ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 4,60,704ಕ್ಕೆ ಇಳಿಕೆ ಕಂಡಿದೆ.
ಒಟ್ಟು ಕೊರೊನಾ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.50%ರಷ್ಟಿದೆ.
ದೇಶಾದ್ಯಂತ ಇಲ್ಲಿಯ ತನಕ 2,98,43,825 ಸೋಂಕಿತರು ಗುಣಮುಖರಾಗಿದ್ದಾರೆ.
ಕಳೆದ 24 ತಾಸುಗಳಲ್ಲಿ 44,291 ರೋಗಿಗಳು ಗುಣಮುಖರಾಗಿದ್ದಾರೆ.
ಇದರೊಂದಿಗೆ ಚೇತರಿಕೆ ದರ 97.18%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ 5% ಮಟ್ಟದ ಕೆಳಗೆ ಮುಂದುವರಿದಿದ್ದು, ಅದೀಗ 2.37%ಗೆ ಇಳಿಕೆ ಕಂಡಿದೆ.
ಸತತ 17ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರವೂ 3% ಮಟ್ಟದ ಕೆಳಗಿದ್ದು, 2.42% ಕಾಯ್ದುಕೊಂಡಿದೆ.
ದೇಶದೆಲ್ಲೆಡೆ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದುವರೆಗೆ 42.52 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1733585)
Visitor Counter : 283
Read this release in:
English
,
Urdu
,
Hindi
,
Marathi
,
Assamese
,
Bengali
,
Gujarati
,
Odia
,
Tamil
,
Telugu
,
Malayalam