ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಅಪಘಾತಗಳನ್ನು ತಗ್ಗಿಸಲು ರಸ್ತೆ ಅಭಿವೃದ್ದಿಯ ಎಲ್ಲಾ ಹಂತಗಳಲ್ಲಿ ಸುರಕ್ಷತೆ ಕುರಿತ ಲೆಕ್ಕಪರಿಶೋಧನೆ ಕಡ್ಡಾಯಗೊಳಿಸಲಾಗಿದೆ: ಶ್ರೀ ನಿತಿನ್ ಗಡ್ಕರಿ

प्रविष्टि तिथि: 05 JUL 2021 3:48PM by PIB Bengaluru

ಅಪಘಾತಗಳನ್ನು ತಗ್ಗಿಸಲು ರಸ್ತೆ ಅಭಿವೃದ್ಧಿಯ ಎಲ್ಲಾ ಹಂತಗಳಲ್ಲಿ ಸುರಕ್ಷತೆ ಕುರಿತ ಲೆಕ್ಕ ಪರಿಶೋಧನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ, ಎಂ.ಎಸ್.ಎಂ. ಸಚಿವ ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ.

ಅಪಘಾತಗಳಿಂದ ಸುರಕ್ಷತೆ ಕುರಿತ ವಿಚಾರ ಸಂಕಿರಣವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಮತ್ತು ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದ ಅಪಘಾತಗಳ ದರ ಇರುವುದನ್ನು ನಾವು ನೋಡುತ್ತಿದ್ದೇವೆ. ಪ್ರತಿ ವರ್ಷ 1.5 ಲಕ್ಷ ಮಂದಿ ಅಪಘಾತಗಳಿಂದ ಮೃತಪಡುತ್ತಿದ್ದು, ಇವು ಕೋವಿಡ್ ಸಾವುಗಳಿಗಿಂತ ಅಧಿಕ ಎಂದರು.

ಬರುವ 2030 ವೇಳೆಗೆ ಅಪಘಾತಗಳು ಮತ್ತು ಸಾವುಗಳನ್ನು ಶೂನ್ಯಕ್ಕೆ ಇಳಿಸುವ ಗುರಿ ಇದ್ದು, ಇದರಲ್ಲಿ ಶೇ 50 ಅಪಘಾತಗಳನ್ನು ತಗ್ಗಿಸಬೇಕಾಗಿದೆ. ಅಪಘಾತಗಳ ಸಾವಿನಲ್ಲಿ  ದ್ವಿಚಕ್ರ ವಾಹನಗಳ ಪಾಲು ಶೇ 50 ರಷ್ಟಿದೆ. ಈಗಿನ ಸಮಯದಲ್ಲಿ ಮೋಟಾರು ವಾಹನ ಸುರಕ್ಷತೆ ಮತ್ತು ರಕ್ಷಣೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಜಾಗತಿಕ ವಾಹನ ತಾಂತ್ರಿಕ ನಿಪುಣತೆಯ ತಂತ್ರಜ್ಞಾನ ಸಾಕಷ್ಟು ಪ್ರಬುದ್ಧತೆಯಿಂದ ಕೂಡಿದೆ ಮತ್ತು ಅಪಘಾತ ಸಂದರ್ಭದಲ್ಲಿ ಸಾವುಗಳನ್ನು ತಗ್ಗಿಸುವ ತಾಂತ್ರಿಕತೆಯಲ್ಲಿ ಸುಧಾರಣೆ ತರಬೇಕಾಗಿದೆ ಎಂದ ಸಚಿವರು, ಚಾಲಕರ ತರಬೇತಿಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಅತ್ಯಾಧುನಿಕ ತರಬೇತಿ ಸಂಸ್ಥೆಗಳು ಮತ್ತು ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ರಸ್ತೆಗಳನ್ನು ನಿರ್ಮಿಸುವುದು ಮತ್ತು ರಸ್ತೆ ಮೂಲ ಸೌಕರ್ಯ ಸುಧಾರಣೆ ಮಾಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ನಮ್ಮ ಗುರಿ ಸಾಧನೆ ಮತ್ತು ಜಾಗೃತಿ ಮೂಡಿಸಲು ಎಲ್ಲಾ ಪಾಲುದಾರರ ಸಹಕಾರ, ಸಂಪರ್ಕ ಮತ್ತು ಸಮನ್ವಯತೆ ಅಗತ್ಯವಾಗಿದೆ ಎಂದು ಸಚಿವ ಶ್ರೀ ನಿತಿನ್ ಗಡ್ಕರಿ ಹೇಳಿದರು.

ಕಾರ್ಯಕ್ರಮದ ಸಂಪೂರ್ಣ ವಿವರ ಲಿಂಕ್ ನಲ್ಲಿದೆ - https://youtu.be/OEkRhMItvsM

***


(रिलीज़ आईडी: 1732841) आगंतुक पटल : 1241
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Tamil , Telugu , Malayalam