ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಹೆಚ್ಚುವರಿ 1,14,000 ಲಿಪೊಸೊಮೊಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದು ಬಾಟಲ್ ಹಂಚಿಕೆ – ಶ್ರೀ ಡಿ.ವಿ. ಸದಾನಂದಗೌಡ
Posted On:
02 JUL 2021 8:18PM by PIB Bengaluru
ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ಲಿಪೊಸೊಮೊಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ 1,14,000 ಬಾಟಲ್|ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ಈ ಚಚ್ಚುಮದ್ದನ್ನು ಮ್ಯೂಕರ್|ಮೈಕೊಸಿಸ್ ಕಪ್ಪು ಶಿಲೀಂಧ್ರ ಸೋಂಕಿನ ಚಿಕಿತ್ಸೆಗೆ ಬಳಸಲಾಗುತ್ತದೆ.
ಇದುವರೆಗೆ ಲಿಪೊಸೊಮೊಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ 11 ಲಕ್ಷಕ್ಕಿಂತ ಹೆಚ್ಚಿನ ಬಾಟಲ್|ಗಳನ್ನು ದೇಶಾದ್ಯಂತ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಮ್ಯೂಕರ್|ಮೈಕೊಸಿಸ್ ಸೋಂಕಿತ ರೋಗಿಗಳಿಗೆ ನೀಡುವ ಈ ಚುಚ್ಚಮದ್ದಿನ ಸಾಕಷ್ಟು ದಾಸ್ತಾನು ಮತ್ತು ಲಭ್ಯತೆ ಕಾಪಾಡಲಾಗಿದೆ ಎಂದು ಅವರು ತಿಳಿಸಿದರು.
****
(Release ID: 1732484)
Visitor Counter : 242