ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಆತ್ಮನಿರ್ಭರ ಭಾರತ್ ಅಭಿಯಾನದಡಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳಿಗೆ ಅನುಮೋದನೆ (ಪಿ.ಎಂ.ಎಫ್.ಎಂ.ಇ.) ಯೋಜನೆಗೆ ಒಂದು ವರ್ಷ ಪೂರ್ಣ


ಯೋಜನೆ ಅಡಿಯಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಮಿಶನ್ ಗೆ 25.25 ಕೋ.ರೂ. ಮೂಲ ಬಂಡವಾಳ ವಿತರಣೆ

35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 707 ಜಿಲ್ಲೆಗಳ “ಒಂದು ಜಿಲ್ಲೆ ಒಂದು ಉತ್ಪನ್ನ” ಕ್ಕೆ ಅನುಮೋದನೆ

17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 54 ಸಾಮಾನ್ಯ ಇನ್ಕ್ಯುಬೇಶನ್ ಕೇಂದ್ರಗಳಿಗೆ ಅನುಮೋದನೆ

Posted On: 29 JUN 2021 4:13PM by PIB Bengaluru

ಆಹಾರ ಸಂಸ್ಕರಣ ಉದ್ಯಮದಲ್ಲಿ ಅಸಂಘಟಿತ ವಲಯದಲ್ಲಿ ಇರುವ ವೈಯಕ್ತಿಕ ಕಿರು ಉದ್ಯಮಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಮತ್ತು ಅವುಗಳನ್ನು ಉತ್ತೇಜಿಸಲು  ಆತ್ಮನಿರ್ಭರ ಭಾರತ ಅಭಿಯಾನದಡಿ ಜಾರಿಗೆ ತಂದ ಕೇಂದ್ರ ಸರಕಾರ ಪ್ರಾಯೋಜಿತ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮ ಅನುಮೋದನೆ (ಪಿ.ಎಂ.ಎಫ್.ಎಂ..) ಯೋಜನೆ ತನ್ನ ಒಂದು ವರ್ಷ ಪೂರೈಸಿದೆ.

 

2020 ಜೂನ್ 29 ರಂದು ಆರಂಭಿಸಿದ ಪಿ.ಎಂ.ಎಫ್.ಎಂ..ಯೋಜನೆ ಪ್ರಸ್ತುತ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿದೆ. ಪಿ.ಎಂ.ಎಫ್.ಎಂ.. ಯೋಜನೆಯ ಆನ್ ಲೈನ್ ಪೋರ್ಟಲ್ ನ್ನು 2021 ಜನವರಿ 25 ರಿಂದ ಕಾರ್ಯಾರಂಭ ಮಾಡಲಾಗಿದೆ. 9000ಕ್ಕೂ ಅಧಿಕ ವೈಯಕ್ತಿಕ ಫಲಾನುಭವಿಗಳು ಪೋರ್ಟಲಿನಲ್ಲಿ ನೊಂದಾಯಿಸಿಕೊಂಡಿದ್ದಾರೆ, ಇವರಲ್ಲಿ 3500ಕ್ಕೂ ಅಧಿಕ ಅರ್ಜಿಗಳನ್ನು ಯೋಜನೆ ಅಡಿಯಲ್ಲಿ ಯಶಸ್ವಿಯಾಗಿ ಸಲ್ಲಿಕೆ ಮಾಡಲಾಗಿದೆ

ಪಿ.ಎಂ.ಎಫ್.ಎಂ.. ಯೋಜನೆ ಅಡಿಯಲ್ಲಿ ಸಾಧಿಸಲಾದ ಮೈಲಿಗಲ್ಲುಗಳು:

ಒಂದು ಜಿಲ್ಲೆ, ಒಂದು ಉತ್ಪನ್ನ

1.         ಪಿ.ಎಂ.ಎಫ್.ಎಂ.. ಯೋಜನೆಯ ಒಂದು ಜಿಲ್ಲೆ ಒಂದು ಉತ್ಪನ್ನ (.ಡಿ..ಪಿ.) ಘಟಕ ಯೋಜನೆ ಅಡಿಯಲ್ಲಿ ಆಹಾರ ಸಂಸ್ಕರಣ ಉದ್ಯಮಗಳ ಸಚಿವಾಲಯವು 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 707 ಜಿಲ್ಲೆಗಳಿಗೆ ಸಂಬಂಧಿಸಿ .ಡಿ..ಪಿ.ಗಳನ್ನು ಅನುಮೋದಿಸಿದೆ. ಇದರಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ಬಂದ 137 ವಿಶಿಷ್ಟ ಉತ್ಪನ್ನಗಳನ್ನು ಕುರಿತ ಶಿಫಾರಸುಗಳನ್ನು ಪರಿಗಣಿಸಲಾಗಿದೆ.

ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ .ಡಿ..ಪಿ.ಉತ್ಪನ್ನಗಳ ವಿವರಗಳನ್ನು ಒದಗಿಸುವ ಭಾರತದ ಜಿ..ಎಸ್. .ಡಿ..ಪಿ ಡಿಜಿಟಲ್ ನಕ್ಷೆಯನ್ನು ಆರಂಭಿಸಲಾಗಿದೆ. ಡಿಜಿಟಲ್ ನಕ್ಷೆಯು ಬುಡಕಟ್ಟುಗಳು, ಎಸ್.ಸಿ., ಎಸ್.ಟಿ., ಮತ್ತು ಆಶೋತ್ತರಗಳ ಜಿಲ್ಲೆಗಳ ಸೂಚಕಗಳನ್ನು ಒಳಗೊಂಡಿದೆ. ಇದು ಭಾಗೀದಾರರಿಗೆ ಮೌಲ್ಯ ಸರಪಳಿ ಅಭಿವೃದ್ಧಿಗೆ ದೃಢ ಪ್ರಯತ್ನಗಳನ್ನು ಮಾಡಲು ಅವಕಾಶ ಒದಗಿಸುತ್ತದೆ.

2.         ಒಮ್ಮುಖಗೊಳಿಸುವುದು

ಪಿ.ಎಂ.ಎಫ್.ಎಂ.. ಯೋಜನೆ ಅಡಿಯಲ್ಲಿ ಸಚಿವಾಲಯವು ಗ್ರಾಮೀಣಾಭಿವೃದ್ಧಿ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಜೊತೆಗೆ  ಮೂರು ಜಂಟಿ ಪತ್ರಗಳಿಗೆ ಸಹಿ ಹಾಕಿದೆ.

ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು ಭಾರತೀಯ ಕೃಷಿ ಸಂಶೋಧನಾ ಮಂಡಳಿ (.ಸಿ..ಆರ್.), ರಾಷ್ಟ್ರೀಯ ಸಹಕಾರ ಅಭಿವೃದ್ದಿ ನಿಗಮ (ಎನ್.ಸಿ.ಡಿ.ಸಿ.), ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ (ಟ್ರೈಫೆಡ್), ಭಾರತೀಯ ರಾಷ್ಟ್ರೀಯ ಕೃಷಿ ಸಹಾಕಾರಿ ಮಾರುಕಟ್ಟೆ ಒಕ್ಕೂಟ ಲಿಮಿಟೆಡ್ ( ನಫೆಡ್) , ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್.ಎಸ್.ಎಫ್.ಡಿ.ಸಿ.) ಮತ್ತು ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು (ಆರ್. ಎಸ್..ಟಿ..)- ಇವುಗಳ ಜೊತೆಗೆ ಆರು ತಿಳುವಳಿಕಾ ಒಡಂಬಡಿಕೆಗಳಿಗೆ (ಎಂ..ಯು.)  ಅಂಕಿತ ಹಾಕಿದೆ

ಯೋಜನೆಯ ನೋಡಲ್ ಬ್ಯಾಂಕ್ ಆಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ ಮತ್ತು ಪಿ.ಎಂ.ಎಫ್.ಎಂ.. ಯೋಜನೆಗೆ ಅಧಿಕೃತ ಮುಂಗಡ ಸಹಭಾಗಿಗಳೆಂದು 11 ಬ್ಯಾಂಕುಗಳ ಜೊತೆ ತಿಳುವಳಿಕಾ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

3.         ಸಾಮರ್ಥ್ಯ ವರ್ಧನೆ ಮತ್ತು ಇನ್ಕ್ಯುಬೇಶನ್ ಕೇಂದ್ರಗಳು

ಪಿ.ಎಂ.ಎಫ್. ಎಂ.. ಯೋಜನೆಯ ಸಾಮರ್ಥ್ಯ ವರ್ಧನೆ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತ್ವ ಮತ್ತು ನಿರ್ವಹಣಾ ಸಂಸ್ಥೆ ( ಎನ್..ಎಫ್.ಟಿ..ಎಂ.) ಮತ್ತು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (..ಎಫ್.ಪಿ.ಟಿ.) ಗಳು ಆಯ್ದ ಉದ್ಯಮಗಳು/ಗುಂಪುಗಳಿಗೆ/ಗುಚ್ಛಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ತರಬೇತಿ ಮತ್ತು ಸಂಶೋಧನಾ ಬೆಂಬಲವನ್ನು ನೀಡುವ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿವೆ. ವಿವಿಧ ಆಹಾರ ಡೊಮೈನ್ ಗಳು ಮತ್ತು ಉದ್ಯಮಶೀಲತ್ವ ಅಭಿವೃದ್ಧಿ ಕಾರ್ಯಕ್ರಮ (.ಡಿ.ಪಿ.) ಅಡಿಯಲ್ಲಿ 371 ಮಾಸ್ಟರ್ ತರಬೇತಿದಾರರ ತರಬೇತಿಯನ್ನು ನಡೆಸಲಾಗಿದೆ.

ಎನ್..ಎಫ್.ಟಿ..ಎಂ. ಮತ್ತು ..ಎಫ್.ಪಿ.ಟಿ.ಗಳು 137 .ಡಿ..ಪಿ. ಗಳ ತರಬೇತಿ ಮಾದರಿಗಳನ್ನು ತಯಾರಿಸಿವೆ. ಅವುಗಳಲ್ಲಿ 175 ಪ್ರದರ್ಶಿಕೆಗಳು, 157 ವೀಡಿಯೋಗಳು, 166 ಡಿ.ಪಿ.ಆರ್. ಗಳು ಮತ್ತು 177 ಕೋರ್ಸ್ ಸಾಮಗ್ರಿಗಳು/ಕೈಪಿಡಿಗಳು ಸೇರಿವೆ. 18 ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ 469 ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿದೆ ಮತ್ತು ಇತರ ರಾಜ್ಯಗಳಲ್ಲಿ ಅದು ಪ್ರಗತಿಯಲ್ಲಿದೆ. 302 ಜಿಲ್ಲೆಗಳಲ್ಲಿ  491 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ.

ಯೋಜನೆ ಅಡಿಯಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಮಧ್ಯ ಪ್ರದೇಶ, ತಮಿಳು ನಾಡು, ತೆಲಂಗಾಣ, ಛತ್ತೀಸ್ ಗಢ, ಹಿಮಾಚಲ ಪ್ರದೇಶ, ಕೇರಳ, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್,ಆಂಧ್ರ ಪ್ರದೇಶ, ಮೇಘಾಲಯ, ಮಿಜೋರಾಂ, ಒಡಿಶಾ ಮತ್ತು ಉತ್ತರಾಖಂಡಗಳಲ್ಲಿ 54 ಸಾಮಾನ್ಯ ಇನ್ಕ್ಯುಬೇಷನ್ ಕೇಂದ್ರಗಳನ್ನು ತೆರೆಯುವುದಕ್ಕೆ ಅನುಮೋದನೆ ನೀಡಲಾಗಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ..ಎಫ್.ಪಿ.ಟಿ ಜೊತೆಗೂಡಿ ಸಾಮಾನ್ಯ ಇನ್ಕ್ಯುಬೇಷನ್ ಕೇಂದ್ರಗಳ ಪ್ರಸ್ತಾವನೆಯನ್ನು ಸಲ್ಲಿಸಲು ಆನ್ ಲೈನ್ ಪೋರ್ಟಲನ್ನು ಅಭಿವೃದ್ಧಿಪಡಿಸಿದೆ. ಮತ್ತು ದೇಶಾದ್ಯಂತ ಇರುವ ಸಾಮಾನ್ಯ ಇನ್ಕ್ಯುಬೇಷನ್ ಕೇಂದ್ರಗಳ ಭೂಪಟವನ್ನು ಇನ್ಕ್ಯುಬೇಷನ್ ಕೇಂದ್ರಗಳ ವಿವರವನ್ನು ಪಡೆಯಲು ಅನುಕೂಲವಾಗುವಂತೆ ಆನ್ ಲೈನ್ ನಲ್ಲಿ ಲಭ್ಯ ಇರುವಂತೆ ಮಾಡಿದೆ.

4.         ಮೂಲ ಬಂಡವಾಳ

ಪಿ.ಎಂ.ಎಫ್.ಎಂ.. ಅಡಿಯಲ್ಲಿ ಎಸ್.ಎಚ್.ಜಿ.ಗಳಿಗೆ ಬಂಡವಾಳ ಒದಗಿಸುವ ಘಟಕವನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ (ಎನ್.ಆರ್.ಎಲ್.ಎಂ.) ಬೆಂಬಲದೊಂದಿಗೆ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯಾಚರಿಸುವ  ರಾಜ್ಯ ಗ್ರಾಮೀಣ ಜೀವನೋಪಾಯ ಮಿಶನ್ (ಎಸ್.ಆರ್.ಎಲ್.ಎಂ.ಗಳು) ಗಳ ಜಾಲದೊಂದಿಗೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಪಿ.ಎಂ.ಎಫ್.ಎಂ.. ಯೋಜನೆಯು 40,000 ರೂ.ಗಳವರೆಗೆ ಕಾರ್ಯಾಚರಣಾ ಬಂಡವಾಳ ಮತ್ತು ಆಹಾರ ಸಂಸ್ಕರಣೆಯಲ್ಲಿ ತೊಡಗಿಕೊಂಡಿರುವ ಎಸ್.ಎಚ್.ಜಿ.ಗಳ ಪ್ರತೀ ಸದಸ್ಯರಿಗೂ ಸಣ್ಣ ಸಣ್ಣ ಸಲಕರಣೆಗಳನ್ನು ಖರೀದಿಸಲು ನೆರವು ಒದಗಿಸುವ ಅಂಶಗಳನ್ನು ಒಳಗೊಂಡಿದೆ. ಇಂದಿನವರೆಗೆ ಎನ್.ಆರ್.ಎಲ್.ಎಂ. 43,086 ಎಸ್.ಎಚ್.ಜಿ. ಸದಸ್ಯರನ್ನು ರಾಜ್ಯ ನೋಡಲ್ ಏಜೆನ್ಸಿಗಳಿಗೆ (ಎಸ್.ಎನ್..) 123.54 ಕೋ.ರೂ.ಗಳ ಮೊತ್ತದ ಸಹಾಯಕ್ಕಾಗಿ ಶಿಫಾರಸು ಮಾಡಿದೆ. ಎಸ್.ಎನ್..ಯು 8040 ಸದಸ್ಯರಿಗೆ ಮೂಲ ಬಂಡವಾಳಕ್ಕೆ ಅನುಮೋದನೆ ನೀಡಿದೆ ಮತ್ತು 25.25 ಕೋ.ರೂ.ಗಳನ್ನು ಎಸ್.ಆರ್.ಎಲ್.ಎಂ.ಗಳಿಗೆ ವಿತರಿಸಿದೆ

5.         ಮಾರುಕಟ್ಟೆ ಮತ್ತು ಬ್ರಾಂಡಿಂಗ್

ಯೋಜನೆ ಅಡಿಯಲ್ಲಿ ನಾಫೆಡ್ ಮತ್ತು ಟ್ರೈಫೆಡ್ ಗಳ ಜೊತೆ ತಲಾ 10 ಉತ್ಪನ್ನಗಳ ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಬೆಂಬಲ ನೀಡುವುದಕ್ಕೆ ಸಂಬಂಧಿಸಿ ಎಂ..ಯು.ಗಳಿಗೆ ಅಂಕಿತ ಹಾಕಲಾಗಿದೆ. ನಾಫೆಡ್ ಅನಾನಾಸು, ಸಣ್ಣ ಕಾಳುಗಳನು ಆಧರಿಸಿದ ಉತ್ಪನ್ನಗಳು, ಕೊತ್ತಂಬರಿ, ನರಿ ಕಾಯಿ, ಜೇನು, ರಾಗಿ, ಬೇಕರಿ, ಇಸಾಬ್ಗೋಲ್ಅರಸಿನ ಮತ್ತು ಚೆರ್ರಿ ಗಳನ್ನು ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲಕ್ಕೆ ಆಯ್ಕೆ ಮಾಡಿಕೊಂಡಿದೆ. ಟ್ರೈಫೆಡ್ ಜೇನು, ಹುಣಿಸೆ, ಸಾಂಬಾರು ಪದಾರ್ಥಗಳು, ಆಮ್ಲ, ಬೇಳೆ ಕಾಳುಗಳು, ಸೀತಾಫಲ, ಗೇರು, ಅಣಬೆ, ಕಪ್ಪು ಅಕ್ಕಿ ಉತ್ಪನ್ನಗಳನ್ನು  ಯೋಜನೆಯಲ್ಲಿ ಆಯ್ಕೆ ಮಾಡಿಕೊಂಡಿದೆ.

6.         ಸಾಂಸ್ಥಿಕ ವ್ಯವಸ್ಥೆ

ಎಲ್ಲಾ 35 ಭಾಗೀದಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ತಮ್ಮ ರಾಜ್ಯ ನೋಡಲ್ ಏಜೆನ್ಸಿಗಳನ್ನು, ರಾಜ್ಯ ಮಟ್ಟದ ಅನುಮೋದನೆ ಸಮಿತಿಗಳನ್ನು, ಜಿಲ್ಲಾ ಮಟ್ಟದ ಸಮಿತಿಗಳನ್ನು ಮತ್ತು ರಾಜ್ಯ ಮಟ್ಟದ ತಾಂತ್ರಿಕ ಸಂಸ್ಥೆಗಳನ್ನು ಗುರುತಿಸಿವೆ ಅಥವಾ  ರಚಿಸಿವೆ. ಎನ್..ಎಫ್.ಟಿ..ಎಂ ನಲ್ಲಿ ಯೋಜನೆಯ ಭಾಗೀದಾರರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರಿಗೆ ಮಾರ್ಗದರ್ಶನ ಮಾಡಲು .ಕಾಲ್ ಸೆಂಟರ್ ಸ್ಥಾಪಿಸಲಾಗಿದೆ

7.         ಪಿ.ಎಂ.ಎಫ್.ಎಂ.. ಯೋಜನೆಯ ಉತ್ತೇಜನ ಮತ್ತು ಪ್ರಚಾರ

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಜೊತೆಗೂಡಿ ಪಿ.ಎಂ.ಎಫ್.ಎಂ.. ಯೋಜನೆಯ ಉತ್ತೇಜನ ಮತ್ತು ಪ್ರಚಾರದ ಬಗ್ಗೆ ಭಾಗೀದಾರಲ್ಲಿ ಸಂವೇದನೆ ಮೂಡಿಸಲು ರೇಡಿಯೋ, ಮುದ್ರಣ ಮಾಧ್ಯಮ, ಕಾರ್ಯಾಗಾರಗಳು, ವೆಬಿನಾರ್ ಗಳು, ಪ್ರಾದೇಶಿಕ ಭಾಷಾ ಕರಪತ್ರಗಳು, ಕೈಪಿಡಿಗಳು, ಬಾಹ್ಯ ಪ್ರಚಾರ ಮತ್ತು ಜಾಲತಾಣಗಳು, ಆಪ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆಗಳ ಸಹಿತ  ಡಿಜಿಟಲ್ ಮಾಧ್ಯಮದ ಮೂಲಕ ರಾಷ್ಟ್ರವ್ಯಾಪೀ ಪ್ರಚಾರ ಕಾರ್ಯ ಕೈಗೊಳ್ಳಲಿದೆ. ಪಿ.ಎಂ.ಎಫ್.ಎಂ.. ಯೋಜನೆಯ ತಿಂಗಳ -ವಾರ್ತಾಪತ್ರವನ್ನು 5 ಲಕ್ಷಕ್ಕೂ ಅಧಿಕ ಭಾಗೀದಾರರಿಗೆ ಕಳುಹಿಸಲಾಗುತ್ತಿದೆ. ಪಿ.ಎಂ.ಎಫ್.ಎಂ.. ಪೊಡ್ ಕಾಸ್ಟ್ ಸರಣಿಯನ್ನು ಕೃಷಿ ಉದ್ಯಮ ಇನ್ಕ್ಯುಬೇಟರ್ ಗಳೊಂದಿಗೆ, ಉದ್ಯಮ ತಜ್ಞರೊಂದಿಗೆ ಮತ್ತು ನವೋದ್ಯಮಗಳ ಜೊತೆ ಸಂವಾದಕ್ಕೆಂದು ಆರಂಭ ಮಾಡಲಾಗಿದೆ.

ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಸ್ಮರಣಾರ್ಥ, ಅಜಾ಼ದಿ ಕಾ ಅಮೃತ್ ಮಹೋತ್ಸವ ಉಪಕ್ರಮದಡಿಯಲ್ಲಿ, ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ 75 ವಿಶಿಷ್ಟ ಒಂದು ಜಿಲ್ಲೆ ಒಂದು ಉತ್ಪನ್ನ (.ಡಿ..ಪಿ.) ವೆಬಿನಾರ್/ಕಾರ್ಯಾಗಾರಗಳನ್ನು ದೇಶಾದ್ಯಂತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಎನ್..ಎಫ್.ಟಿ..ಎಂ. ಮತ್ತು ..ಎಫ್.ಪಿ.ಟಿ. ಗಳ ಸಹಯೋಗದೊಂದಿಗೆ ಆಯೋಜಿಸಲಿದೆ. “ಕಹಾನಿ ಸೂಕ್ಷ್ಮ ಉದ್ಯಮೋಂ ಕೀಶೀರ್ಷಿಕೆಯ ಸಾಪ್ತಾಹಿಕ ಸರಣಿ ಕಾರ್ಯಕ್ರಮವನ್ನು ಈಗಿರುವ ಆಹಾರ ಸಂಸ್ಕರಣಾ ಉದ್ಯಮಗಳ 75 ಯಶೋಗಾಥೆಗಳನ್ನು ಬಿತ್ತರಿಸುವುದಕ್ಕಾಗಿ ಆರಂಭಿಸಲಾಗಿದೆ

ಪಿ.ಎಂ.ಎಫ್,ಎಂ.. ಯೋಜನೆ ಬಗ್ಗೆ

ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಆರಂಭ ಮಾಡಲಾದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಮಾನ್ಯತಾ (ಪಿ.ಎಂ.ಎಫ್.ಎಂ..) ಯೋಜನೆ ಕೇಂದ್ರ ಪುರಸ್ಕೃತ ಯೋಜನೆಯಾಗಿದೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕಾ ವಲಯದಲ್ಲಿ ಈಗಿರುವ ವೈಯಕ್ತಿಕ ಕಿರು ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಹಾಗು ವಲಯಕ್ಕೆ ಮಾನ್ಯತೆಯನ್ನು ಉತ್ತೇಜಿಸಿ ಕೃಷಿಕರ ಉತ್ಪಾದನಾ ಸಂಘಟನೆಗಳಿಗೆ, ಸ್ವ ಸಹಾಯ ಗುಂಪುಗಳಿಗೆ ಮತ್ತು ಉತ್ಪಾದಕರ ಸಹಕಾರಿಗಳಿಗೆ ಅವುಗಳ ಇಡೀ ಮೌಲ್ಯ ಸರಪಳಿಯೊಂದಿಗೆ ಬೆಂಬಲ ಒದಗಿಸುವುದೂ ಇದರಲ್ಲಿ ಸೇರಿದೆ. 2020-21 ರಿಂದ 2024-25 ರವರೆಗೆ ಐದು ವರ್ಷಗಳ ಅವಧಿಗೆ ಒಟ್ಟು 10,000 ಕೋ.ರೂ.ಗಳ ಯೋಜನಾ ಗಾತ್ರವನ್ನು ಹೊಂದಿರುವ ಯೋಜನೆ 2,00,000 ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ನೇರವಾಗಿ ಹಣಕಾಸು, ತಾಂತ್ರಿಕ ಮತ್ತು ಈಗಿರುವ ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಮೇಲ್ದರ್ಜೆಗೇರಿಸಲು ವ್ಯಾಪಾರೋದ್ಯಮ ಬೆಂಬಲವನ್ನು  ಒದಗಿಸುವ ಉದ್ದೇಶವನ್ನು ಒಳಗೊಂಡಿದೆ.

ಹೆಚ್ಚಿನ ವಿವರಗಳಿಗಾಗಿ, ಭೇಟಿ ಕೊಡಿ, https://pmfme.mofpi.gov.in/pmfme/#/Home-Page

***



(Release ID: 1731404) Visitor Counter : 543