ಕಲ್ಲಿದ್ದಲು ಸಚಿವಾಲಯ

‘ತಾತ್ಕಾಲಿಕ ಕಲ್ಲಿದ್ದಲು ಅಂಕಿಅಂಶ 2020-21’ ಅನ್ನು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ವಿಡಿಯೊ ಸಮಾವೇಶ ಮೂಲಕ ಬಿಡುಗಡೆ ಮಾಡಿದರು

Posted On: 29 JUN 2021 6:29PM by PIB Bengaluru

ಸಂಖ್ಯಾಶಾಸ್ತ್ರದ ಅಂಕಿಅಂಶಗಳ ಅಭಿವೃದ್ಧಿಯಲ್ಲಿ ಗಮನಾರ್ಹ ಕೊಡುಗೆ ನೀಡಿದ ಪ್ರೊ. ಪ್ರಸಂತ ಚಂದ್ರ ಮಹಾಲನೋಬಿಸ್ ಅವರ ಜನ್ಮ ದಿನಾಚರಣೆಯನ್ನು ಅಂಕಿಅಂಶ ದಿನವೆಂದು ಆಚರಿಸಲಾಗುತ್ತದೆ. ಈ ವಿಶೇಷ ಅಂಕಿಅಂಶ ದಿನದಂದು, ಸಂಸ್ಥೆಯ ಎರಡು ಪ್ರಮುಖ ಪ್ರಕಟಣೆಗಳಲ್ಲಿ ಒಂದಾಗಿರುವ “ತಾತ್ಕಾಲಿಕ ಕಲ್ಲಿದ್ದಲು ಅಂಕಿಅಂಶ 2020-21” ಅನ್ನು ಕೇಂದ್ರ ಕಲ್ಲಿದ್ದಲು ಸಚಿವಾಲಯದ ಅಧೀನ ಕಲ್ಲಿದ್ದಲು ನಿಯಂತ್ರಕ ಸಂಸ್ಥೆ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಕಲ್ಲಿದ್ದಲು ಸಚಿವಾಲಯ ಆಯೋಜಿಸಿರುವ ವಿಡಿಯೊ ಸಮಾವೇಶ ಮೂಲಕ ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಅಂಕಿಅಂಶಗಳ ಪ್ರಕಟಣೆಯನ್ನು ಬಿಡುಗಡೆ ಮಾಡಿದರು.

‘ತಾತ್ಕಾಲಿಕ ಕಲ್ಲಿದ್ದಲು ಅಂಕಿಅಂಶ 2020-21’ ಪ್ರಕಟಣೆಯು ಕಳೆದ 2020-21ರ ಆರ್ಥಿಕ ವರ್ಷದಲ್ಲಿ ಕಲ್ಲಿದ್ದಲು ಮತ್ತು ಲಿಗ್ನೈಟ್ ಕ್ಷೇತ್ರದ ಕಾರ್ಯಕ್ಷಮತೆಗೆ ಸಂಬಂಧಿಸಿದ ತಾತ್ಕಾಲಿಕ ಮಾಹಿತಿಯನ್ನು ಒಳಗೊಂಡಿದೆ. ಇದು ಸಂಬಂಧಪಟ್ಟ ಎಲ್ಲ ಪಾಲುದಾರರು, ನೀತಿ ಯೋಜಕರು, ಸಂಶೋಧಕರು, ರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಮೂಲ್ಯ ಮಾಹಿತಿ ಮತ್ತು ಸಮಗ್ರ ಸಿದ್ಧ ಉಲ್ಲೇಖವನ್ನು ಒದಗಿಸುತ್ತದೆ. ಸಿ.ಸಿ.ಒ. ಮತ್ತು ಎಂ.ಒ.ಸಿ.ಯ ಅಧಿಕೃತ ಜಾಲತಾಣದಿಂದ ಯಾರಾದರೂ ಸುಲಭವಾಗಿ ಪ್ರಕಟಣೆಯನ್ನು ಪಡೆಯಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಇದು ಪೂರ್ವ ಲೆಕ್ಕಪರಿಶೋಧಿತ ದತ್ತಾಂಶವನ್ನು ಹೊಂದಿದೆ ಮತ್ತು ಆದ್ದರಿಂದ 2020-21ರ ಅಂತಿಮ ದತ್ತಾಂಶವನ್ನು ಕಲ್ಲಿದ್ದಲು ಡೈರೆಕ್ಟರಿ ಆಫ್ ಇಂಡಿಯಾದ 2020-21ರಲ್ಲಿ ಪ್ರಕಟಿಸಲಾಗುವುದು ಎಂಬುದು ಇಲ್ಲಿ ಗಮನಾರ್ಹ.

  • ಕಲ್ಲಿದ್ದಲು ಇಲಾಖೆಯ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಜೈನ್, ಹೆಚ್ಚುವರಿ ಕಾರ್ಯದರ್ಶಿ ಶ್ರೀ ವಿನೋದ್ ಕುಮಾರ್ ತಿವಾರಿ, ಹೆಚ್ಚುವರಿ ಕಾರ್ಯದರ್ಶಿ ಶ್ರೀ ಎಂ.ನಾಗರಾಜು, ಡಿ.ಡಿ.ಜಿ ಶ್ರೀಮತಿ ಸಂತೋಷ್ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿಯ ಪೂರ್ಣ ಪಠ್ಯವನ್ನು ಕೊಂಡಿ ಮೂಲಕ ಪಡೆಯಬಹುದು-
https://coal.gov.in/sites/default/files/2021-06/Provisional-Coal-Statistics-2020-21.pdf

 

 

 

 

*****

 


(Release ID: 1731376) Visitor Counter : 233


Read this release in: English , Urdu , Hindi , Punjabi