ಕಲ್ಲಿದ್ದಲು ಸಚಿವಾಲಯ
ಇಂಧನ ದಕ್ಷತೆಯತ್ತ ಮುನ್ನುಗ್ಗುತ್ತಿರುವ ಸಿ.ಐ.ಎಲ್. ಸಂಸ್ಥೆ.
Posted On:
29 JUN 2021 4:09PM by PIB Bengaluru
ಕೋಲ್ ಇಂಡಿಯಾ ಲಿಮಿಟೆಡ್ (ಸಿ.ಐ.ಎಲ್) ಸಂಸ್ಥೆಯು ಇಂಧನ ದಕ್ಷತೆಯ ಕ್ರಮಗಳಿಗೆ ವಿಶೇಷ ಒತ್ತು ನೀಡುತ್ತಿದೆ ಮತ್ತು ಸಂಸ್ಥೆಯ ಎಲ್ಲಾ ಕಲ್ಲಿದ್ದಲು ಉತ್ಪಾದಿಸುವ ಕಂಪನಿಗಳ ಗಣಿಗಾರಿಕೆ ಕಾರ್ಯಾಚರಣೆಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಾ ತನ್ನ ಎಲ್ಲಾ ಕಾರ್ಯಾಚರಣೆಯ ಕ್ಷೇತ್ರದಲ್ಲಿಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದೆ. ಶಕ್ತಿಯ ಸಮರ್ಥ ಬಳಕೆಗಾಗಿ ವಿವಿಧ ರೀತಿಯ ತಕ್ಷಣದ ಕ್ರಮ ಸಕಾಲಿಕವಾಗಿ ತೆಗೆದುಕೊಳ್ಳುವುದರ ಹೊರತಾಗಿ, ಸಿ.ಐ.ಎಲ್. ಸಂಸ್ಥೆಯು ತನ್ನ ಕಾರ್ಯಾಚರಣೆಯ ವಿವಿಧ ಕ್ಷೇತ್ರಗಳಲ್ಲಿ ಮುಂದಿನ 5 ವರ್ಷಗಳ ಮಹತ್ವಾಕಾಂಕ್ಷೆಯ ಇಂಗಾಲದ ಕಡಿತಮೂಲಕ ನಿಯಂತ್ರಣ ಯೋಜನೆಯನ್ನು ರೂಪಿಸಿದೆ.
ದಕ್ಷ ಇಂಧನ ಶಕ್ತಿ (ವಿದ್ಯುತ್) ಸರಬರಾಜು ನಿರ್ವಹಣೆಯ ಹೊರತಾಗಿ ಜನವಸತಿಯ ವಸಾಹತುಗಳು, ಕಟ್ಟಡ ಸಮುಚ್ಛಯಗಳು, ಕಚೇರಿಗಳು, ಕೈಗಾರಿಕಾ ಸಂಸ್ಥೆಗಳು ಮುಂತಾದ ಕ್ಷೇತ್ರಗಳ ಇಂಧನ ದಕ್ಷತೆಯ ಪೂರಕ ಕ್ರಮಗಳನ್ನು ಅನುಷ್ಠಾನಗೊಳಿಸಲು (ಜಾರಿಗೆ ತರಲು) ಕಲ್ಲಿದ್ದಲು ಕಂಪನಿಗಳು ಹಲವಾರು ವಿಧಾನಗಳನ್ನು ಕೂಡಾ ಸಂಸ್ಥೆ ಹೊಂದಿವೆ. ಆದಾಗ್ಯೂ, ಬೃಹತ್ ಭೂಅಗೆತದ ಯಂತ್ರಗಳು (ಹೆವಿ ಅರ್ಥ್ ಮೂವಿಂಗ್ ಯಂತ್ರಗಳು - ಎಚ್.ಇ.ಎಂ.ಎಂ), ಸಾರಿಗೆ, ಗಾಳಿ ಪೂರೈಸುವ ವಾತಾಯನ, ಪಂಪಿಂಗ್ ಮುಂತಾದ ವಿವಿಧ ಗಣಿಗಾರಿಕೆ ಬೃಹತ್ ಚಟುವಟಿಕೆಗಳಿಂದ ಇಂಗಾಲದ ಹೊರಸೂಸುವಿಕೆಯ ಪ್ರಮುಖ ಕಡಿತವಾಗಿದೆ. ತನ್ನ ಅಂಗಸಂಸ್ಥೆಗಳ ಸಹಾಯದಿಂದ ಸಿ.ಐ.ಎಲ್. ಸಂಸ್ಥೆಯು ಹಲವಾರು ವರ್ಷಗಳಿಂದ ವಿವಿಧ ಇಂಧನ ಸಂರಕ್ಷಣೆ ಮತ್ತು ದಕ್ಷತೆಯ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಈಗ ಪರಿಸರ ಮಾಲಿನ್ಯಕ್ಕೆ ಕಾರಣವಾದ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ ಸಂವೇದನಾ ಪೂರ್ವಕವಾಗಿ ಮುಂದುವರಿಯುತ್ತಿದೆ.
ಸಿ.ಐ.ಎಲ್. ಸಂಸ್ಥೆಯು ತನ್ನ ವಿಭಾಗೀಯವಾಗಿ ಅಥವಾ ಒಪ್ಪಂದದ ಪ್ರಕಾರ ಕಾರ್ಯನಿರತವಾಗಿರುವ ಡೀಸೆಲ್ ಬಳಸುವ ಬೃಹತ್ ಉಪಕರಣಗಳನ್ನು ಎಲ್.ಎನ್.ಜಿ. ಇಂಧನಕ್ಕೆ ಬದಲಿಸುವುದು ಪ್ರಮುಖ ಹೆಜ್ಜೆಯಾಗಿದೆ. ವೆಚ್ಚವನ್ನು ಕಡಿತಗೊಳಿಸುವುದರಲ್ಲಿ ಇದು ಪ್ರಮುಖ ಪ್ರಗತಿಯಾಗಲಿದೆ, ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಿ ಕಡಿಮೆ ಮಾಡುತ್ತದೆ. ಎಲ್.ಎನ್.ಜಿ.ಯ ಬೃಹತ್ ಬಳಕೆಯನ್ನು ಪ್ರಾರಂಭಿಸುವ ಮೊದಲು ಸಿ.ಐ.ಎಲ್. ಸಂಸ್ಥೆಯ ಕೆಲವು ಗಣಿ ತಾಣಗಳಲ್ಲಿ ಗೇಲ್ (ಜಿ.ಎ.ಐ.ಎಲ್) ಸಹಯೋಗದೊಂದಿಗೆ ಪ್ರಾಯೋಗಿಕ ಹಂತದ (ಪೈಲಟ್) ಯೋಜನೆಗೆ ತೊಡಗಿಕೊಳ್ಳಲು ಸಿ.ಐ.ಎಲ್. ಸಂಸ್ಥೆಯು ಉಪಕ್ರಮಗಳನ್ನು ಪ್ರಾರಂಭಿಸಿದೆ. ಈ ಕಾರ್ಯಾಚರಣೆಗಳಿಗೆ ಅಗತ್ಯ ಎಲ್.ಎನ್.ಜಿ ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಗೇಲ್ (ಜಿ.ಎ.ಐ.ಎಲ್)ಸ್ಥಾಪಿಸುತ್ತದೆ, ಎಲ್.ಎನ್.ಜಿಯನ್ನು ಸಂಗ್ರಹ ಕೇಂದ್ರಗಳಿಂದ (ಟರ್ಮಿನಲ್) ಗಣಿ ತಾಣಗಳಿಗೆ ಸಾಗಿಸಲು ಬೇಕಾದ ವ್ಯವಸ್ಥೆ ಕೂಡಾ ಮಾಡುತ್ತದೆ, ಹಾಗೂ ಇದಕ್ಕೆ ಬೇಕಾಗಿರುವ ಕೆ.ಐ.ಟಿ ಮತ್ತು ರೆಟ್ರೊಫಿಟಿಂಗ್ ವ್ಯವಸ್ಥೆಯನ್ನು ಮಾಡಲಿದೆ. ಎಲ್ಲಾ ತಾಂತ್ರಿಕ ನೆರವನ್ನು ಬಿ.ಇ.ಎಂ.ಎಲ್ ಸಂಸ್ಥೆಯು ನೀಡಲಿದೆ. ಡಂಪರ್ ಮತ್ತು ಎಂಜಿನ್ನ ಕಾರ್ಯಕ್ಷಮತೆಯನ್ನು ಕಮ್ಮಿನ್ಸ್ ಸಹಯೋಗದೊಂದಿಗೆ ಇಡೀ ಪ್ರಾಯೋಗಿಕ ಹಂತದ (ಪೈಲಟ್) ಯೋಜನೆ ಅವಧಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಸಂಪೂರ್ಣವಾಗಿ ಅಧ್ಯಯನ ಮಾಡಲಾಗುತ್ತದೆ. ಒಡಿಶಾದ ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ನ ಭರತ್ಪುರ ಓಪನ್ಕ್ಯಾಸ್ಟ್ ಮೈನ್ನಲ್ಲಿನ ಪೈಲಟ್ ಯೋಜನೆಯೊಂದನ್ನು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು. ಮುಂಬರುವ ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬೃಹತ್ (ಹೆವಿ) ವಾಹನಗಳನ್ನು ಎಲ್.ಎನ್.ಜಿ.ಗೆ ಪರಿವರ್ತಿಸಲು ಬೇಕಾದ ಅಗತ್ಯ ಸಮಗ್ರ ಮಾದರಿಯನ್ನು ರೂಪಿಸಲಾಗುತ್ತಿದೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸಿ.ಐ.ಎಲ್.ನ ಎಲ್ಲಾ ಗಣಿಗಾರಿಕೆ ಪ್ರದೇಶಗಳಲ್ಲಿ ಸುಮಾರು 1500 ಇ-ವಾಹನವನ್ನು ಪರಿಚಯಿಸುವುದು ಮತ್ತೊಂದು ಪ್ರಮುಖ ಸೇರ್ಪಡೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು 200 ಇ-ವಾಹನಗಳನ್ನು ಮಾತ್ರ ಕಾರ್ಯರೂಪಕ್ಕೆ ತರಲಾಗುವುದು.
ತೆರೆದ ಭೂಭಾಗದ ಗಣಿ (ಓಪನ್ಕ್ಯಾಸ್ಟ್ ) ಮತ್ತು ಭೂಗತ ಗಣಿಗಳಲ್ಲಿ ನೀರನ್ನು ಪಂಪ್ ಮಾಡುವುದನ್ನು ಸಾಂಪ್ರದಾಯಿಕ ಸಾಧನಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ, ಇದರಿಂದಾಗಿ ಹೆಚ್ಚಿನ ಶಕ್ತಿಯ ಬಳಕೆ ಉಂಟಾಗುತ್ತದೆ. ಸಿ.ಐ.ಎಲ್ ತನ್ನ ಎಲ್ಲಾ ಗಣಿಗಾರಿಕೆ ಕಾರ್ಯಾಚರಣೆಗಳಲ್ಲಿ ಸುಮಾರು 1700 ಇಂಧನ ದಕ್ಷ ಮೋಟರ್ಗಳನ್ನುಬಳಸುವ ಮೂಲಕ ನೀರೆತ್ತುವ ಕ್ರಮವನ್ನು ಅನುಷ್ಠಾನಗೊಳಿಸಲಿದೆ.
ತನ್ನ ವಿವಿಧ ಉಪಸಂಸ್ಥೆಗಳಲ್ಲಿ, ಸುಮಾರು 5000 ಸಾಂಪ್ರದಾಯಿಕ ಎ.ಸಿ.ಗಳು ಮತ್ತು ಇತರ ಉಪಕರಣಗಳನ್ನು ಇಂಧನ ದಕ್ಷತೆಯ ಸ್ಟಾರ್ ರೇಟೆಡ್ ಉಪಕರಣಗಳಿಗೆ ಸಿ.ಐ.ಎಲ್. ಸಂಸ್ಥೆಯು ಬದಲಾಯಿಸಲಿದೆ. ಅಂತೆಯೇ, ಇಂಧನವನ್ನು ಉಳಿಸಲು ಸಾಂಪ್ರದಾಯಿಕ ದೀಪಗಳ ಬದಲಿಗೆ ಸುಮಾರು 2.5 ಲಕ್ಷ ಎಲ್.ಇ.ಡಿ. ದೀಪಗಳನ್ನು ಅಳವಡಿಸಲಾಗುವುದು. ಹಳೆಯದನ್ನು ಬದಲಾಯಿಸುವ ಮೂಲಕ ಕಚೇರಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಇಂಧನ ದಕ್ಷ ಸೂಪರ್ ಫ್ಯಾನ್ ಗಳನ್ನು ಬಳಸಲಾಗುತ್ತದೆ. ವಸಾಹತುಗಳಲ್ಲಿ, ಇಂಧನಶಕ್ತಿಯನ್ನು ಉಳಿಸಲು ಸುಮಾರು 2200 ಬೀದಿ ದೀಪಗಳಿಗೆ ಆಟೋ ಟೈಮರ್ ಅನ್ನು ಅಳವಡಿಸಲಾಗುವುದು.
ಇಂಧನ ದಕ್ಷತೆಯ ಈ ಮೇಲೆ ತಿಳಿಸಿದ ಹಲವಾರು ಉಪಕ್ರಮಗಳ ಅನುಷ್ಠಾನದ ಜೊತೆಗೆ, ಮುಂದಿನ ಐದು ವರ್ಷಗಳಲ್ಲಿ ಸುಮಾರು 2.5 ಲಕ್ಷ ಟನ್ಗಳಷ್ಟು ಇಂಗಾಲ ಕಡಿತ ಮೂಲಕ ನಿಯಂತ್ರಣ ರೂಪಿಸಲು ಕೂಡಾ ಸಿ.ಐ.ಎಲ್. ಸಂಸ್ಥೆಯು ಉದ್ದೇಶಿಸಿದೆ. ಮೇಲಿನ ಎಲ್ಲಾ ಕ್ಷೇತ್ರಗಳಲ್ಲಿ ಇಂಧನ ಉಳಿತಾಯದ ಉಪಕ್ರಮಗಳ ಸಕ್ರಿಯ ಅನುಷ್ಠಾನದೊಂದಿಗೆ, ಈ ವರ್ಷದ ಅಂತ್ಯದ ವೇಳೆಗೆ 60000 ಟನ್ ಗಳಿಗಿಂತ ಹೆಚ್ಚಿನ ಇಂಗಾಲ ಕಡಿತ ಸಾಧಿಸಲು ಸಿ.ಐ.ಎಲ್. ಸಂಸ್ಥೆಯ ಬದ್ಧವಾಗಿದೆ ಎಂಬುದು ಪ್ರಗತಿಯ ಒಂದು ಪ್ರಮುಖ ಅಂಶವಾಗಿದೆ
***
(Release ID: 1731253)
Visitor Counter : 196