ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ʻಲಿಪೊಸೋಮಲ್ ಆಂಫೊಟೆರಿಸಿನ್-ಬಿʼ ಔಷಧದ ಹೆಚ್ಚುವರಿ 2,12,540 ವೈಯಲ್ಗಳನ್ನು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ - ಶ್ರೀ ಡಿ.ವಿ.ಸದಾನಂದ ಗೌಡ

ಪ್ರಕಟಣಾ ದಿನಾಂಕ: 28 JUN 2021 7:33PM by PIB Bengaluru

ಮ್ಯೂಕೋರ್ಮೈಕೋಸಿಸ್ (ಬ್ಲ್ಯಾಕ್ ಫಂಗಸ್) ಚಿಕಿತ್ಸೆಯಲ್ಲಿ ಬಳಸಲಾಗುವ ʻಲಿಪೊಸೋಮಲ್ ಆಂಫೊಟೆರಿಸಿನ್-ಬಿʼ ಔಷಧದ ಹೆಚ್ಚುವರಿ 2,12,540 ವೈಯಲ್ಗಳನ್ನು ಇಂದು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಘೋಷಿಸಿದರು.

ದೇಶಾದ್ಯಂತ ಈವರೆಗೆ ಸುಮಾರು 10 ಲಕ್ಷ ವೈಯಲ್ಗಳನ್ನು ಹಂಚಿಕೆ ಮಾಡಲಾಗಿದ್ದು, ಆ ಮೂಲಕ ಮ್ಯೂಕರ್ ಮೈಕೋಸಿಸ್ ರೋಗಿಗಳಿಗೆ ಸಾಕಷ್ಟು ಔಷಧ ಲಭ್ಯತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದರು.

***


(ಪ್ರಕಟಣೆ ಐ.ಡಿ.: 1731034) ವಿಸಿಟರ್ ಕೌಂಟರ್ : 258
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Punjabi , Tamil