ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ - ಇಂದಿನ ಪರಿಷ್ಕೃತ ವರದಿ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರದಿಂದ 31.69 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್ ವಿತರಣೆ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 1.15 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್ ಇನ್ನೂ ಲಭ್ಯ
Posted On:
28 JUN 2021 11:07AM by PIB Bengaluru
ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆಯ ಬೃಹತ್ ಆಂದೋಲನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ನಡಿಗೆಯ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್-19 ಲಸಿಕೆ ಸಾರ್ವತ್ರೀಕರಣದ ಹೊಸ ಹಂತ ಜೂನ್ 21ರಿಂದ ಆರಂಭವಾಗಿದೆ. ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆ ನೀಡಿಕೆ ಆಂದೋಲನವನ್ನು ವ್ಯವಸ್ಥಿತವಾಗಿ ನಡೆಸಲು ಹಾಗೂ ಹೆಚ್ಚಿನ ಲಸಿಕೆ ಲಭ್ಯತೆ ಮತ್ತು ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ದೇಶವ್ಯಾಪಿ ಆಂದೋಲನವನ್ನು ವ್ಯಾಪಕಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಲಸಿಕಾ ಆಂದೋಲನದ ಭಾಗವಾಗಿ, ಭಾರತ ಸರ್ಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ವಿತರಿಸುತ್ತಿದೆ. ಅಲ್ಲದೆ, ಕೋವಿಡ್-19 ಲಸಿಕೆ ಆಂದೋಲನದ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶೀಯ ಲಸಿಕೆ ತಯಾರಿಕಾ ಕಂಪನಿಗಳಿಂದ 75% ಉತ್ಪಾದಿತ ಲಸಿಕೆಯನ್ನು ಖರೀದಿಸಿ, ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸಲಿದೆ.
ಭಾರತ ಸರ್ಕಾರ ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 31.69 ಕೋಟಿಗಿಂತ ಅಧಿಕ ಅಂದರೆ 31,69,40,160 ಲಸಿಕೆ ಡೋಸ್|ಗಳನ್ನು ಒದಗಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸಲು ಭಾರತ ಸರ್ಕಾರ ನಡೆಸುತ್ತಿರುವ ನೇರ ಖರೀದಿ ಮತ್ತು ರಾಜ್ಯಗಳೇ ನೇರವಾಗಿ ಖರೀದಿಸಲು ಮಾಡಿಕೊಟ್ಟಿರುವ ಮಾರ್ಗಗಳ ಮೂಲಕ ಈ ಖರೀದಿ ನಡೆಯುತ್ತಿದೆ.
ಇದರಲ್ಲಿ ಸವಕಳಿ ಸೇರಿದಂತೆ 30,54,17,617 ಲಸಿಕೆ ಡೋಸ್|ಗಳನ್ನು ಬಳಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ಅಂಕಿಅಂಶಗಳಿಂದ ಈ ವಿಚಾರ ತಿಳಿದುಬಂದಿದೆ.
1.15 ಕೋಟಿಗಿಂತ ಹೆಚ್ಚಿನ ಅಂದರೆ 1,15,22,543 ಲಸಿಕೆ ಡೋಸ್|ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದೆ, ಬಾಕಿ ಉಳಿದಿದೆ.
***
(Release ID: 1730821)
Visitor Counter : 239
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam