ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವಾಲಯದಿಂದ ಕೋವಿಡ್-19 ಕುರಿತು 12 ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಮಾಧ್ಯಮ ವೃತ್ತಿಪರರು/ ಆರೋಗ್ಯ ವರದಿಗಾರರಿಗಾಗಿ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ


ಕೋವಿಡ್ ಸಂವೇದನೆಯ ವರ್ತನೆ, ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ ಮತ್ತು ವ್ಯಾಕ್ಸಿನೇಷನ್‌ ಇವುಗಳು ಕೋವಿಡ್-19 ವಿರುದ್ಧ ಹೋರಾಟದ ಐದು ಮುಖದ ಕಾರ್ಯತಂತ್ರದ ಪ್ರಬಲ ಅಸ್ತ್ರಗಳು: ಕೇಂದ್ರ ಆರೋಗ್ಯ ಇಲಾಖೆಯ  ಕಾರ್ಯದರ್ಶಿ

"ಜನಸಾಮಾನ್ಯರಿಗೆ ಮಾಹಿತಿ ತಿಳಿಸುವ ಮತ್ತು ಸೂಕ್ತ ಶಿಕ್ಷಣ ನೀಡುವ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಮಾಧ್ಯಮವು ಕೋವಿಡ್ -19 ವಿರುದ್ಧದ ನಮ್ಮ ಸಾಮೂಹಿಕ ಹೋರಾಟದಲ್ಲಿ ಒಂದು ಪ್ರಮುಖ ಆಧಾರಸ್ತಂಭವಾಗಿದೆ"

ವದಂತಿಗಳನ್ನು ಎದುರಿಸಲು ಮತ್ತು ಲಸಿಕೆ ವಿರೋಧಿಗಳನ್ನು ಮೀರಿಸುವಲ್ಲಿ ಮಾಧ್ಯಮದ ಪಾತ್ರ ಪ್ರಮುಖವಾಗಿದೆ

Posted On: 23 JUN 2021 6:08PM by PIB Bengaluru

ಭಾರತದಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿ, ಕೋವಿಡ್ ಲಸಿಕೆಗಳು ಮತ್ತು ಲಸಿಕೆ ಬಗ್ಗೆ ವದಂತಿಗಳನ್ನು ತಡೆಯುವಂತೆ ಮಾಡುವ ಅಗತ್ಯತೆ ಮತ್ತು ಪ್ರಕ್ರಿಯೆಯ ಬಲವರ್ಧನೆ ಹಾಗೂ ಕೋವಿಡ್ ಸಂವೇದನಾ ಸೂಕ್ತ ವರ್ತನೆಯ ಪ್ರಾಮುಖ್ಯತೆ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇಂದು ಯುನಿಸೆಫ್‌ ನ ಸಹಭಾಗಿತ್ವದಲ್ಲಿ ದೇಶದಾದ್ಯಂತ ಮಾಧ್ಯಮ ವೃತ್ತಿಪರರು ಮತ್ತು ಆರೋಗ್ಯ ವರದಿಗಾರರಿಗಾಗಿ ವಿಶೇಷ ಸಾಮರ್ಥ್ಯ ವೃದ್ಧಿಸುವ ಕಾರ್ಯಾಗಾರವನ್ನು ಹಮ್ಮಿಕೊಂಡಿತು.

ದೇಶದಾದ್ಯಂತ 300 ಕ್ಕೂ ಹೆಚ್ಚು ಆರೋಗ್ಯ ಪತ್ರಕರ್ತರು ಮತ್ತು ದೂರದರ್ಶನ ಸುದ್ದಿ( ನ್ಯೂಸ್), ಅಖಿಲ ಭಾರತ ರೇಡಿಯೊ (ಆಕಾಶವಾಣಿ)ಗಳ ಹಿರಿಯ ಅಧಿಕಾರಿಗಳು, ವಿವಿಧ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಪ್ರೆಸ್ ಇನ್ಫೋರ್ಮೇಷನ್ ಬ್ಯೂರೋದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ಕಾರ್ಯಾಗಾರದ ವಿಷಯದ ಕುರಿತು ಮಾತನಾಡಿದರು. ಕಾರ್ಯಾಗಾರದ ಆರಂಭದಲ್ಲಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ಅವರು ಎಲ್ಲಾ ಮಾಧ್ಯಮ ವೃತ್ತಿಪರರಿಗೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸತತ ಪ್ರಯತ್ನ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕೋವಿಡ್ -19 ವಿರುದ್ಧದ ನಮ್ಮ ಸಾಮೂಹಿಕ ಹೋರಾಟದಲ್ಲಿ ಜನಸಾಮಾನ್ಯರಿಗೆ ತಿಳಿಸಲು ಮತ್ತು ಶಿಕ್ಷಣ ನೀಡುವ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಮಾಧ್ಯಮವು ಕೂಡಾ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅವರು ಹೇಳಿದರು. ಎರಡನೇ ಅಲೆಯು (ತರಂಗವು) ಸ್ಥಿರವಾಗುತ್ತಿದ್ದಂತೆ ಮತ್ತು ದೇಶಾದ್ಯಂತ ದೈನಂದಿನ ಪ್ರಕರಣಗಳು ಕ್ಷೀಣಿಸುತ್ತಿರುವುದರಿಂದ, ಲಸಿಕೆಯತ್ತ  ಮತ್ತು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆಯನ್ನು ನಿವಾರಿಸುವುದರತ್ತ ನಾವೆಲ್ಲರೂ ಗಮನ ಹರಿಸಬೇಕು. ಪರಿಷ್ಕೃತ ಲಸಿಕೆ ಮಾರ್ಗಸೂಚಿಗಳ ಪ್ರಕಾರ, ಈಗ ದೇಶಾದ್ಯಂತ 18 ವರ್ಷ ಪ್ರಾಯ ಪೂರ್ತಿ ಆದವರಿಗೆ ಲಸಿಕೆಗಳು ಉಚಿತವಾಗಿದ್ದು, ಲಸಿಕೆ ಪಡೆಯಲು ಜನರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಕಾರ್ಯಾಗಾರದಲ್ಲಿ ಹೇಳಿದರು. 

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಮಾಧ್ಯಮ ಸದಾ ಅಮೂಲ್ಯ ಪಾಲುದಾರ ಆಗಿ ನಿಂತಿದೆ. ಬಹು ಪಾಲುದಾರಿಕೆ (ಮಲ್ಟಿ ಸ್ಟೇಕ್ ಹೋಲ್ಡರ್) ಮತ್ತು ಕೋವಿಡ್ -19 ಲಸಿಕೆ ಕುರಿತ ನಿರಂತರ ಅಭಿಯಾನಗಳು ನಕಲಿ ಸುದ್ದಿ / ವದಂತಿಗಳನ್ನು ಇಂದು ಪರಿಣಾಮಕಾರಿಯಾಗಿ ಎದುರಿಸಬೇಕಾಗುತ್ತದೆ ಮತ್ತು ವದಂತಿಗಳನ್ನು ಎದುರಿಸುವಲ್ಲಿ ಮಾಧ್ಯಮಗಳ ಪಾತ್ರವು ಬಹಳ ಮಹತ್ವದ್ದಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದರು. ನಾವು ಮುಂದೆ ಸಾಗುತ್ತಿರುವಾಗ, ಕೋವಿಡ್ ಸಂವೇದನಾ ವರ್ತನೆ, ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ ಮತ್ತು ಲಸಿಕೆ ಈ ಐದು-ಹಂತದ ಕಾರ್ಯತಂತ್ರವನ್ನು ಅನುಸರಿಸುವುದು ಸಮಯದ ಅಗತ್ಯವಾಗಿದೆ. ಸಾರ್ಸ್ -ಕೊವ್2 ವೈರಸ್, ಲಸಿಕೆ ಮತ್ತು ಕೋವಿಡ್ ಸಂವೇದನಾ ವರ್ತನೆ (ಸಿಎಬಿ) ಯ ಕ್ರಿಯಾತ್ಮಕ ಕ್ಲಿನಿಕಲ್ ಸ್ವರೂಪವನ್ನು ಪರಿಗಣಿಸಿ ಮುಖಗವಸು ಅನ್ನು ಸರಿಯಾಗಿ ಧರಿಸುವುದು, ಆಗಾಗ್ಗೆ ಕೈ ತೊಳೆಯುವುದು ಮತ್ತು ಆರು ಅಡಿ ಅಂತರವನ್ನು ಕಾಪಾಡಿಕೊಳ್ಳುವುದು ಸಾಂಕ್ರಾಮಿಕ ಕೋವಿಡ್ ಸಂಪರ್ಕ ಮತ್ತು ಹರಡುವಿಕೆ ತಡೆಹಿಡಿಯವ ಪ್ರಕ್ರಿಯೆಯಲ್ಲಿ ಪ್ರಮುಖ ಮಧ್ಯಸ್ಥಿಕೆಗಳಾಗಿವೆ ಎಂದು ಅವರು ಹೇಳಿದರು. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಲಾವ್ ಅಗರ್ವಾಲ್ ಅವರು ಭಾರತ ಸರ್ಕಾರವು ಅಳವಡಿಸಿಕೊಂಡಿರುವ ಕೋವಿಡ್ ಕಾರ್ಯತಂತ್ರದ ಸಂಕ್ಷಿಪ್ತ ವಿವರಣೆ ನೀಡಿದರು. ವೈರಸ್‌ನ್ನು ಒಳಗೊಂಡಿರುವಲ್ಲಿ ಸಮುದಾಯದ ಸಹಭಾಗಿತ್ವ ಮುಖ್ಯವಾಗಿದೆ, ಸಾಂಕ್ರಾಮಿಕ ರೋಗದ ಸಾಮೂಹಿಕ ಮತ್ತು ಸಹಕಾರಿ ಹೋರಾಟದಲ್ಲಿ ವೈರಸ್‌ಗೆ ಯಾವುದೇ ಗಡಿರೇಖೆಗಳಿಲ್ಲ ಮತ್ತು ಕೇಂದ್ರ-ರಾಜ್ಯ ಸಮನ್ವಯ ಮತ್ತು ಸಮುದಾಯದ ಒಳಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆಎಂದು ಜಂಟಿ ಕಾರ್ಯದರ್ಶಿ ಅವರು ಹೇಳಿದರು.

ದೇಶವು ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದ್ದಂತೆ, ಸಾಮಾಜಿಕ ಮತ್ತು ಇತರ ಒಟ್ಟುಗೂಡಿಸುವಿಕೆಯ ಅಪಾಯವು ವೈರಸ್ ಹರಡುವ ಸಾಧ್ಯತೆಯನ್ನು ಪುನಃ ಹೆಚ್ಚಿಸುತ್ತದೆಎಂದು ಅವರು ಹೇಳಿದರು. "ಸಂವಹನ ಸಂದೇಶಗಳು ಅನೇಕ ಜನರಿಗೆ ಕುರುಡು ತಾಣವಾಗಿ ಮಾರ್ಪಟ್ಟಿವೆ, ಇದು ಕಡಿಮೆ ಅಪಾಯದ ಗ್ರಹಿಕೆ ಉಂಟುಮಾಡಬಹುದು ಅಥವಾ ಗಮನಿಸದೆ ಹೋಗಬಹುದು. ನಮ್ಮ ಸಂದೇಶ ಕಳುಹಿಸುವಿಕೆಯನ್ನು ನಾವು ಹೊಸತನವನ್ನು ಮಾಡಬೇಕಾಗಿದೆ ಮತ್ತು ಮಾಧ್ಯಮವು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಜಂಟಿ ಕಾರ್ಯದರ್ಶಿ ಅವರು ಹೇಳಿದರು.   

ಕಾರ್ಯಾಗಾರದಲ್ಲಿ ಭಾಗವಹಿಸಿದ ಪತ್ರಕರ್ತರು ಲಸಿಕೆ ಹಾಕಿಸಿಕೊಳ್ಳಲು ಕೆಲವರಲ್ಲಿರುವ ಹಿಂಜರಿಕೆಯ ವಿವಿಧ ಕಾರಣಗಳ ಬಗ್ಗೆ ಅರಿಯುವುದರ ಜೊತೆಗೆ, ಇದು ಸ್ಥಳೀಯವಾಗಿರಬಹುದು ಮತ್ತು ವಿವಿಧ ಸಮುದಾಯ ಗುಂಪುಗಳಿಗೆ ಬದಲಾಗಬಹುದು ಮುಂತಾದ ವಿಷಯಗಳು ಸೇರಿದಂತೆ ಪ್ರತಿಕೂಲ ಘಟನೆಯ ನಂತರದ ರೋಗನಿರೋಧಕ (ಎ.ಇ.ಎಫ್‌.ಐ), ಅದರ ನಿರ್ವಹಣೆ ಮತ್ತು ಎ.ಇ.ಎಫ್‌.ಐ ಕುರಿತು ವರದಿ ಮಾಡುವಾಗ ಉತ್ತಮ ಅಭ್ಯಾಸಗಳ ಬಗ್ಗೆಯೂ ಅರಿತುಕೊಂಡರು.

ರಾಷ್ಟ್ರೀಯ ಕಾರ್ಯಾಗಾರದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಯುನಿಸೆಫ್, ದೂರದರ್ಶನ ನ್ಯೂಸ್, ಪಿ.ಐ.ಬಿ, ಆಲ್ ಇಂಡಿಯ ರೇಡಿಯೊ ನ್ಯೂಸ್ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಪತ್ರಕರ್ತರು ಭಾಗವಹಿಸಿದ್ದರು.

***


(Release ID: 1730503) Visitor Counter : 244