ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇಂದಿನ ಪರಿಷ್ಕೃತ ವರದಿ

Posted On: 26 JUN 2021 9:21AM by PIB Bengaluru

ದೇಶಾದ್ಯಂತ ಹಮ್ಮಿಕೊಂಡಿರುವ ಬೃಹತ್ ಕೋವಿಡ್-19 ಲಸಿಕಾ ಆಂದೋಲನದ ಅಡಿ ಇದುವರೆಗೆ ಒಟ್ಟು 31.50 ಕೋಟಿ  ಲಸಿಕಾ ಡೋಸ್ಗಳನ್ನು ನೀಡಲಾಗಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 61.19 ಲಕ್ಷ ಲಸಿಕಾ ಡೋಸ್|ಗಳನ್ನು ಹಾಕಲಾಗಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 48,698 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನೇದಿನೆ ಇಳಿಕೆ ಕಾಣುತ್ತಿದ್ದು, ಅದೀಗ 86 ದಿನಗಳ ನಂತರ 6 ಲಕ್ಷ ಮಟ್ಟದಿಂದ ಕೆಳಗಿದೆ. ದೇಶಾದ್ಯಂತ 5,95,565 ಸಕ್ರಿಯ ಪ್ರಕರಣಗಳಿವೆ.

ಇದುವರೆಗೆ ದೇಶಾದ್ಯಂತ ಒಟ್ಟು 2,91,93,085 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 64,818 ಮಂದಿ ರೋಗದಿಂದ ಚೇತರಿಸಿಕೊಂಡಿದ್ದಾರೆ.

 ದೈನಂದಿನ ಚೇತರಿಕೆ ಪ್ರಮಾಣ ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕುತ್ತಿದೆ. 44 ದಿನದಲ್ಲೂ ಪ್ರವೃತ್ತಿ ಮುಂದುವರಿದಿದೆ.

ಚೇತರಿಕೆ ದರ ಇದೀಗ 96.72%ಗೆ ಸುಧಾರಣೆ ಕಂಡಿದೆ.

ವಾರದ ಪಾಸಿಟಿವಿಟಿ ದರ 5% ಮಟ್ಟದಿಂದ ಕೆಳಗಿದ್ದು, ಅದೀಗ 2.97 %ಗೆ ತಗ್ಗಿದೆ.

ದೈನಂದಿನ ಪಾಸಿಟಿವಿಟಿ ದರ (ಸೋಂಕಿತರ ಪ್ರಮಾಣ) ಸತತ 19ನೇ ದಿನದಲ್ಲೂ 5% ಮಟ್ಟದಿಂದ ಕೆಳಗಿದ್ದು, ಅದು ಪ್ರಸ್ತುತ 2.79%ಗೆ ಇಳಿಕೆ ಕಂಡಿದೆ.

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ 40.18 ಕೋಟಿ ಜನರಿಗೆ ಪರೀಕ್ಷೆ ನಡೆಲಾಗಿದೆ.

***


(Release ID: 1730500) Visitor Counter : 260