ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ: ತಪ್ಪು ಕಲ್ಪನೆ ವಿರುದ್ಧ ವಾಸ್ತವ


ಸ್ವಂತ ಮೊಬೈಲ್ ಸಂಖ್ಯೆ ಅಥವಾ ಒಂಭತ್ತು ನಿರ್ದಿಷ್ಟ ಗುರುತಿನ ಚೀಟಿ ಇಲ್ಲದೇ ಇರುವವರಿಗಾಗಿ ಲಸಿಕೆ ಹಾಕಿಸಲು ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ

ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮನೆ ಸಮೀಪವೇ ಲಸಿಕೆ ಸೇವೆ ಒದಗಿಸಲು ಕ್ರಮ

ಗ್ರಾಮೀಣ ಜಿಲ್ಲೆಗಳು/ ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್ – 19 ಲಸಿಕೆ ಅಭಿಯಾನ ರಾಷ್ಟ್ರೀಯ ಸರಾಸರಿಗಿಂತ ಉತ್ತಮ

Posted On: 23 JUN 2021 2:22PM by PIB Bengaluru

ತಾಂತ್ರಿಕ ಅವಶ್ಯಕತೆಗಳ ಅಲಭ್ಯತೆಯಿಂದಾಗಿ ಮನೆಯಿಲ್ಲದ ಜನರಿಗೆ ಕೋವಿಡ್ – 19 ಲಸಿಕೆಗಾಗಿ ನೋಂದಾಯಿಸುವುದನ್ನು ನಿರ್ಬಂಧಿಸಲಾಗಿದೆ ಮತ್ತು ಸ್ಪಷ್ಟವಾಗಿ ಅವರನ್ನು ಸೇವೆಯಿಂದ ಹೊರಗಿಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಡಿಜಿಟಲ್ ನೋಂದಣಿ ಮಾಡುವ ಅವಶ್ಯಕತೆ, ಇಂಗ್ಲಿಷ್ ಜ್ಞಾನ, ಕಂಪ್ಯೂಟರ್ ಅಥವಾ ಅಂತರ್ಜಾಲ ಸೌಲಭ್ಯ ಇಲ್ಲದ ಸ್ಮಾರ್ಟ್ ಫೋನ್ ಇಲ್ಲದ ಕಾರಣಕ್ಕೆ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಇದೇ ವರದಿಗಳು ಹೇಳಿವೆ.

ಇವು ಆಧಾರರಹಿತವಾಗಿವೆ ಮತ್ತು ಸತ್ಯವನ್ನು ಆಧರಿಸಿಲ್ಲ. ಕುರಿತು ಸ್ಪಷ್ಟನೆ ನೀಡಲಾಗಿದೆ.

  1. ಮೊಬೈಲ್ ಮಾಲಿಕತ್ವವು ಕೋವಿಡ್ 19 ಲಸಿಕೆಗೆ ಪೂರ್ವಾಪೇಕ್ಷಿತವಲ್ಲ
  2. ಲಸಿಕೆ ಪಡೆಯಲು ವಿಳಾಸದ ಪುರಾವೆ ಒದಗಿಸುವುದು ಸಹ ಕಡ್ಡಾಯವಲ್ಲ.
  3. ಲಸಿಕೆ ಪಡೆಯಲು ಕೋ-ವಿನ್ ಪೋರ್ಟಲ್ ನಲ್ಲಿ ಪೂರ್ವಾನ್ವಯವಾಗುವಂತೆ ನೋಂದಣಿ ಮಾಡಿಕೊಳ್ಳುವುದು ಸಹ ಕಡ್ಡಾಯವಲ್ಲ.
  4. ಬಳಕೆದಾರರಿಗೆ ಸುಲಭವಾಗಿ ಅರ್ಥವಾಗಲು ಕೋ-ವಿನ್ ಪೋರ್ಟಲ್ ಇದೀಗ 12 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ ಸೇರಿದಂತೆ ಮಲಯಾಳಂ, ತಮಿಳ್, ತೆಲಗು, ಕನ್ನಡ, ಮರಾಠಿ, ಗುಜರಾತಿ, ಒಡಿಯಾ. ಬೆಂಗಾಳಿ, ಅಸ್ಸಾಮಿ, ಗುರುಮುಖಿ [ಪಂಜಾಬ್] ಮತ್ತು ಇಂಗ್ಲೀಷ್

ಕೋವಿನ್ ಪ್ಲಾಟ್ ಫಾರಂ ಒಂದು ಅಂತರ್ಗತ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಾಗಿದ್ದು, ಇದು ದೇಶದ ದೂರದ ಪ್ರದೇಶಗಳು ಮತ್ತು ದುರ್ಗಮ ಭಾಗದಲ್ಲಿರುವವರಿಗೂ ಒದಗಿಸಲು ಎಲ್ಲಾ ವೈಶಿಷ್ಟ್ಯಗಳೊಂದಿಗೆ ಹೊಂದಿಕೊಳ್ಳುವ ಚೌಕಟ್ಟನ್ನು ಒದಗಿಸುತ್ತದೆ. ಆಧಾರ್, ಭಾವಚಿತ್ರವಿರುವ ಚುನಾವಣಾ ಗುರುತಿನ ಚೀಟಿ, ಛಾಯಾಚಿತ್ರವಿರುವ ಪಡಿತರ ಚೀಟಿ, ವಿಶೇಷ ಚೇತನರ ಗುರುತಿನ ಚೀಟಿ ಸೇರಿ 9 ಗುರುತಿನ ಚೀಟಿಗಳು ಲಸಿಕೆಗಾಗಿ ಅಗತ್ಯವಾಗಿದೆ. ಸ್ವಂತ ಮೊಬೈಲ್ ಸಂಖ್ಯೆ ಅಥವಾ ಒಂಭತ್ತು ನಿರ್ದಿಷ್ಟ ಗುರುತಿನ ಚೀಟಿ ಇಲ್ಲದೇ ಇರುವವರಿಗಾಗಿ ಲಸಿಕೆ ಹಾಕಿಸಲು ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ.

ಇಂತಹ ನಿಬಂಧನೆಗಳ ಪೂರ್ಣ ಲಾಭ ಪಡೆದು 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಈವರೆಗೆ ಲಸಿಕೆ ಹಾಕಲಾಗಿದೆ. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮನೆ ಸಮೀಪವೇ ಲಸಿಕೆ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. 2021 ಮೇ 27 ರಂದು ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗಾಗಿ ಮನೆ ಸಮೀಪವೇ ಲಸಿಕೆ ಒದಗಿಸಲು ಭಾರತ ಸರ್ಕಾರ ಸಲಹೆ ಹೊರಡಿಸಿದೆ.

https://www.mohfw.gov.in/pdf/GuidanceNeartoHomeCovidVaccinationCentresforElderlyandDifferentlyAbledCitizens.pdf

ಅಂತರ್ಜಾಲ ಅಥವಾ ಸ್ಮಾರ್ಟ್ ಫೋನ್ ಗಳು ಅಥವಾ ಕನಿಷ್ಠ ಮೊಬೈಲ್ ಪೋನ್ ಗಳ ಸೌಲಭ್ಯ ಇಲ್ಲದವರಿಗಾಗಿ ಉಚಿತವಾಗಿ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲು [ಜನಪ್ರಿಯವಾಗಿ ಕರೆಯಲ್ಪಡುವ ವಾಕ್ ಇನ್ ] ಅವಕಾಶ ಕಲ್ಪಿಸಲಾಗಿದೆ ಮತ್ತು ಸರ್ಕಾರದ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ.

ಶೇ 80 ರಷ್ಟು ಲಸಿಕೆಯನ್ನು ನೇರವಾಗಿ ನೋಂದಣಿ ಮಾಡಿಕೊಂಡು ಲಸಿಕೆ ಹಾಕಲಾಗಿದೆ. ಆನ್ ಸೈಟ್ [ಅಥವಾ ವಾಕ್ ಇನ್] ಲಸಿಕಾ ಕಾರ್ಯಕ್ರಮದಲ್ಲಿ ನೋಂದಣಿ, ಲಸಿಕೆ ಮತ್ತು ಪ್ರಮಾಣಪತ್ರಗಳನ್ನು ಸಿದ್ಧಮಾಡಿ ದತ್ತಾಂಶಗಳನ್ನು ಲಸಿಕೆ ಹಾಕುವ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಫಲಾನುಭವಿಗಳು ಆಕೆ/ ಆತ ಕೇವಲ ಕನಿಷ್ಠ ಮೂಲಭೂತ ಅಗತ್ಯ ಮಾಹಿತಿ ಒದಗಿಸುವುದು ಅಗತ್ಯವಾಗಿದೆ.

ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್ – 19 ಲಸಿಕೆ ಅಭಿಯಾನ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಶೇ 70 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿವೆ ಎಂದು ಅಂಕಿ ಅಂಶಗಳು ತಿಳಿಸಿದ್ದು, ಇಲ್ಲಿ 26,000 ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳು, 26,000 ಕ್ಕೂ ಹೆಚ್ಚು ಉಪ ಆರೋಗ್ಯ ಕೇಂದ್ರಗಳಿವೆ.

***



(Release ID: 1729831) Visitor Counter : 253