ಸಂಪುಟ

ಭಾರತ ಮತ್ತು ಸೈಂಟ್ ವಿನ್ಸೆಂಟ್ ಮತ್ತು ಗ್ರೆನಾಡೀನ್ ನಡುವಿನ ಒಪ್ಪಂದ ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯ ಮತ್ತು ತೆರಿಗೆ ಸಂಗ್ರಹಣೆಗೆ ನೆರವಿಗೆ ಸಂಪುಟದ ಅನುಮೋದನೆ

Posted On: 23 JUN 2021 12:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯ ಮತ್ತು ಸೈಂಟ್ ವಿನ್ಸೆಂಟ್ ಮತ್ತು ಗ್ರೆನಾಡೀನ್ ನಡುವಿನ ಒಪ್ಪಂದ ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯ ಮತ್ತು ಸಂಗ್ರಹಣೆಗೆ ನೆರವಿಗೆ ತನ್ನ ಅನುಮೋದನೆ ನೀಡಿದೆ.

ಒಪ್ಪಂದದ ವಿವರಗಳು:

i)   ಭಾರತ ಗಣರಾಜ್ಯ ಮತ್ತು ಸೈಂಟ್ ವಿನ್ಸೆಂಟ್ ಮತ್ತು ಗ್ರೆನಾಡೀನ್ ನಡುವೆ ಇದು ಹೊಸ ಒಪ್ಪಂದವಾಗಿದೆ. ಈ ಎರಡು ರಾಷ್ಟ್ರಗಳ ನಡುವೆ ಈ ಹಿಂದೆ ಇಂತಹ ಯಾವುದೇ ಒಪ್ಪಂದ ಇರಲಿಲ್ಲ.

ii)   ಈ ಒಪ್ಪಂದದ ಮುಖ್ಯ ಉದ್ದೇಶ ಎರಡು ರಾಷ್ಟ್ರಗಳ ನಡುವೆ ಮಾಹಿತಿಯ ವಿನಿಮಯ ಮತ್ತು ತೆರಿಗೆ ಕ್ಲೇಮ್ ಗಳ ಸಂಗ್ರಹಣೆಗೆ ಪರಸ್ಪರ ನೆರವು ಒದಗಿಸುವುದಾಗಿದೆ.

iii)  ಈ ಒಪ್ಪಂದವು ವಿದೇಶದಲ್ಲಿ ತೆರಿಗೆ ಪರಿಶೀಲನೆಯನ್ನು ಸಹ ಒಳಗೊಂಡಿದ್ದು, ಇದು ಒಂದು ದೇಶವು ಇತರ ದೇಶದ ಪ್ರತಿನಿಧಿಗಳಿಗೆ ತನ್ನ ಭೂಪ್ರದೇಶವನ್ನು ಪ್ರವೇಶಿಸಲು (ಅದರ ದೇಶೀಯ ಕಾನೂನುಗಳ ಅಡಿಯಲ್ಲಿ ಅನುಮತಿಸಲಾದ ಮಟ್ಟಿಗೆ ಮಾತ್ರ) ವ್ಯಕ್ತಿಗಳನ್ನು ಸಂದರ್ಶಿಸಲು ಮತ್ತು ತೆರಿಗೆ ಉದ್ದೇಶಗಳಿಗಾಗಿ ದಾಖಲೆಗಳನ್ನು ಪರಿಶೀಲಿಸಲು ಅನುಮತಿಸುತ್ತದೆ.

 

ಪರಿಣಾಮಗಳು:

ಭಾರತ ಗಣರಾಜ್ಯ ಮತ್ತು ಸೈಂಟ್ ವಿನ್ಸೆಂಟ್ ಮತ್ತು ಗ್ರೆನಾಡೀನ್ ನಡುವಿನ ಈ ಒಪ್ಪಂದ ಕಾನೂನು ಮತ್ತು ಉಪಯುಕ್ತ ಮಾಲೀಕತ್ವದ ಮಾಹಿತಿ, ಬ್ಯಾಂಕ್ ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿನ ಮಾಹಿತಿಯೂ ಒಳಗೊಂಡಂತೆ ಎರಡೂ ದೇಶಗಳ ನಡುವೆ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡುತ್ತದೆ.  ಇದು ಎರಡೂ ದೇಶಗಳ ನಡುವೆ ತೆರಿಗೆಯ ಕ್ಲೇಮ್ ಗಳ ಸಂಗ್ರಹಣೆಗೂ ನೆರವು ನೀಡುತ್ತದೆ. ಹೀಗಾಗಿ, ಇದು ಸಾಗರದಾಚೆ ತೆರಿಗೆ ವಂಚಿಸುವ ಮತ್ತು ತೆರಿಗೆ ತಪ್ಪಿಸುವ ಮೂಲಕ ಲೆಕ್ಕಕ್ಕೆ ಸಿಗದಂತೆ ಕಪ್ಪು ಹಣವನ್ನು ಸೃಷ್ಟಿಸುವ ಪದ್ಧತಿ ನಿಗ್ರಹಿಸುವ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ.

ಹಿನ್ನೆಲೆ:

ಸೈಂಟ್ ವಿನ್ಸೆಂಟ್ ನೊಂದಿಗೆ ಈ ಹಿಂದೆ ಇಂತಹ ಒಪ್ಪಂದ ಮತ್ತು ಮಾರ್ಗಸೂಚಿ ಇರಲಿಲ್ಲ ಮತ್ತು ಭಾರತ ಈ ಒಪ್ಪಂದಕ್ಕಾಗಿ ದೀರ್ಘಕಾಲದಿಂದ ಪ್ರಯತ್ನ ಮಾಡುತ್ತಿತ್ತು. ಸೈಂಟ್ ವಿನ್ಸೆಂಟ್ ಮತ್ತು ಗ್ರೇನಾಡಿನ್ ಅಂತಿಮವಾಗಿ ಭಾರತದೊಂದಿಗೆ ಒಪ್ಪಂದ ಆಖೈರುಗೊಳಿಸಲು ಸಮ್ಮತಿಸಿವೆ, ಇದು ಎರಡೂ ದೇಶಗಳ ನಡುವೆ ಮಾಹಿತಿಯ ವಿನಿಮಯ ಮತ್ತು ಬಾಕಿ ಇರುವ ತರಿಗೆ ಕ್ಲೇಮ್ ಗಳ ಸಂಗ್ರಹಣೆಯ ಮೂಲಕ ತೆರಿಗೆ ಸಹಕಾರವನ್ನು ಉತ್ತೇಜಿಸುತ್ತದೆ.

*******



(Release ID: 1729771) Visitor Counter : 155