ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಗಣಿಗಳ ಹರಾಜು ಅವಧಿ ಪರಿಷ್ಕರಣೆ
ಬಿಡ್ ಕೊನೆಯ ದಿನಾಂಕ 2021 ರ ಜುಲೈ 8ಕ್ಕೆ ವಿಸ್ತರಣೆ
Posted On:
22 JUN 2021 4:02PM by PIB Bengaluru
ಕಲ್ಲಿದ್ದಲು ಗಣಿಗಳ ಹರಾಜು ಅವಧಿಯನ್ನು ಕೇಂದ್ರ ಗಣಿ ಸಚಿವಾಲಯ [12 ನೇ ಕಲ್ಲಿದ್ದಲು ಗಣಿಗಳ ಹರಾಜು [ವಿಶೇಷ ನಿಬಂಧನೆಗಳು] ಕಾಯ್ದೆ 2015] [2 ನೇ ಗಣಿ ಮತ್ತು ಖನಿಜಗಳ ಹರಾಜು [ಅಭಿವೃದ್ಧಿ ಮತ್ತು ನಿಯಂತ್ರಣ] ಕಾಯ್ದೆ 1957] ಅವಧಿಯನ್ನು ಪರಿಷ್ಕರಿಸಲಾಗಿದೆ.
2021, ಮಾರ್ಚ್ 25 ರಂದು ಟೆಂಡರ್ ನೋಟಿಸ್ ಗೆ ಆಮಂತ್ರಣ ನೀಡಲಾಗಿತ್ತು. ಎಂ.ಎಸ್.ಟಿ.ಸಿ. ವೆಬ್ ಸೈಟ್ ನಲ್ಲಿ ಬಿಡ್ ದಾರರ ನೋಂದಣಿ ಮತ್ತು ಟೆಂಡರ್ ದಾಖಲೆಗಳ ಸಲ್ಲಿಕೆ ಮತ್ತು ಬಿಡ್ ಬಾಕಿ ದಿನಾಂಕವನ್ನು ಪರಿಷ್ಕರಿಸಲಾಗಿದೆ. ಗುರುವಾರದಂದು ಬಿಡ್ ಕೊನೆ ದಿನಾಂಕವನ್ನು ಪರಿಷ್ಕರಿಸಲಾಗಿದ್ದು, 2021 ರ ಜುಲೈ 8 ರ ವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ದಿನಾಂಕಗಳ ಮಾಹಿತಿಯನ್ನು ಎಂ.ಎಸ್.ಟಿ.ಸಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗಿದೆ.
ನೋಟಿಸ್ ಗಾಗಿ ಈ ಕೆಳಗಡೆ ಕ್ಲಿಕ್ ಮಾಡಿ
http://www.coal.nic.in/sites/default/files/2021-06/22-06-2021.pdf
***
(Release ID: 1729426)