ಉಕ್ಕು ಸಚಿವಾಲಯ

ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಕರ್ನಾಟಕದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಮತ್ತು ಸರಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಿದರು


ಸಮಾಜದಲ್ಲಿ ಲಸಿಕೆಯ ಕುರಿತು ಇರುವ ಹಿಂಜರಿಕೆಯನ್ನು ತೊಲಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಶ್ರೀ ಪ್ರಧಾನ್ ಕರೆ ನೀಡಿದರು

Posted On: 22 JUN 2021 1:43PM by PIB Bengaluru

ಉಕ್ಕು ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಕರ್ನಾಟಕದಲ್ಲಿ ಸಾರ್ವಜನಿಕ ವಲಯದ ಉಕ್ಕು ಘಟಕ ʻಕೆಐಒಸಿಎಲ್ʼ ಕಾರ್ಯಗತಗೊಳಿಸಿದ ಹಲವಾರು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಿದರುಇವುಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ, ಸರಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳು, 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ಮತ್ತು ಬ್ಯಾರೆಲ್ ಮಾದರಿಯ ಬ್ಲೆಂಡರ್ ರೀಕ್ಲೈಮರ್  ಸೇರಿವೆ. ಸಂದರ್ಭದಲ್ಲಿ ಉಕ್ಕು ಖಾತೆ ಸಹಾಯಕ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಸಹ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್ ಅವರು, ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಅಭೂತಪೂರ್ವ ಸವಾಲುಗಳು ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಅಪಾರ ಒತ್ತಡಕ್ಕೆ ದೇಶವು ಸಾಕ್ಷಿಯಾಗಿದೆ ಎಂದು ಹೇಳಿದರುದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಅವಶ್ಯಕತೆ ಭಾರಿ ಪ್ರಮಾಣದಲ್ಲಿ ಹೆಚ್ಚಿತು. ನಮ್ಮ ಖಾಸಗಿ ಮತ್ತು ಸರಕಾರಿ ಎರಡೂ ವಲಯದ ಉಕ್ಕು ಮತ್ತು ಪೆಟ್ರೋಲಿಯಂ ಕಂಪನಿಗಳು ಸಂದರ್ಭಕ್ಕೆ ತುರ್ತಾಗಿ ಸ್ಪಂದಿಸಿ ದ್ರವ ರೂಪದ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿದವು. ಕಳೆದ ತಿಂಗಳಲ್ಲಿ ದೇಶದಲ್ಲಿ ಆಮ್ಲಜನಕದ ಅವಶ್ಯಕತೆಯು ದಿನಕ್ಕೆ 10,000 ಮೆಟ್ರಿಕ್ ಟನ್‌ಗೆ ಏರಿತ್ತು. ದೇಶದ ಬೇಡಿಕೆಯನ್ನು ಪೂರೈಸಲು ಉಕ್ಕು ಕಂಪನಿಗಳು ಉಕ್ಕಿನ ಉತ್ಪಾದನೆಯನ್ನೂ ತಗ್ಗಿಸಲು ಮುಂದಾದವು. ಆಮ್ಲಜನಕ ಉತ್ಪಾದನಾ ಘಟಕಗಳು ದೇಶದ ಪೂರ್ವ ಭಾಗಗಳಲ್ಲಿವೆ. ಆದರೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಗರಿಷ್ಠ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿತ್ತು. ಆದರೂ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲಾಯಿತು ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲಾಯಿತು ಎಂದರು. ಇಂದು, ದೇಶದಲ್ಲಿ ಆಮ್ಲಜನಕ ಸಾಂದ್ರಕಗಳು, ಸಿಲಿಂಡರ್‌ಗಳು ಮತ್ತು ಪಿಎಸ್ಎ ಘಟಕಗಳಿಗೆ ಕೊರತೆಯಿಲ್ಲ ಎಂದರು. ಸಾಂಕ್ರಾಮಿಕವನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಶ್ರೀ ಪ್ರಧಾನ್ ಅವರು ಕರ್ನಾಟಕ ಸರಕಾರವನ್ನು ಅಭಿನಂದಿಸಿದರು. ರಾಜ್ಯವು ಆರಂಭಿಕ ದಿನಗಳಲ್ಲಿ ತನ್ನ ನೆರೆಯ ರಾಜ್ಯಗಳಿಗೆ ಸಹ ಆಮ್ಲಜನಕವನ್ನು ಒದಗಿಸಿತು ಎಂದರು.

ದೇಶದ ಲಸಿಕೆ ಅಭಿಯಾನದಲ್ಲಿ ಸಾಧಿಸಲಾದ ದೊಡ್ಡ ಮಟ್ಟದ ಜಿಗಿತದ ಬಗ್ಗೆ ವಿವರಿಸಿದ ಶ್ರೀ ಪ್ರಧಾನ್ ಅವರು, “ನಿನ್ನೆ 8.2 ದಶಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿಯವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ದೇಶವು ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ದೇಶದಲ್ಲಿ ಲಸಿಕೆಗಳು ಹೇರಳವಾಗಿ ಲಭ್ಯವಿದ್ದು, ಡಿಸೆಂಬರ್ ವೇಳೆಗೆ ಎಲ್ಲಾ ಅರ್ಹ ವಯಸ್ಕರು ಲಸಿಕೆ ಪಡೆಯುವ ಸಾಧ್ಯತೆಯಿದೆ ಎಂದರು. ಲಸಿಕೆಯ ಬಗ್ಗೆ ಜನರಲ್ಲಿ ಇರುವ ಯಾವುದೇ ರೀತಿಯ ಹಿಂಜರಿಕೆ ಅಥವಾ ನಿರ್ಲಕ್ಷ್ಯವನ್ನು ತೊಡೆದುಹಾಕಲು ಹಾಗೂ ಅವರಲ್ಲಿರುವ ಅನುಮಾನಗಳನ್ನು ಪರಿಹರಿಸಿ ಜಾಗೃತಿ ಮೂಡಿಸಲು ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಆರೋಗ್ಯ ವೃತ್ತಿಪರರು ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲರೂ ಬೆಂಬಲಿಸಬೇಕು ಎಂದು ಸಚಿವರು ಕರೆ ನೀಡಿದರು. "ಲಸಿಕೆ ಪಡೆಯಲು ಹಿಂಜರಿಕೆಯು ನಾವು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ನಾವು ಸಂವೇದನಾಶೀಲ ಸಮಾಜದ ಭಾಗವಾಗಿರುವ ಹಿನ್ನೆಲೆಯಲ್ಲಿ ಇಂತಹ ಸಂದರ್ಭಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಲಸಿಕೆಯ ಹಿಂಜರಿಕೆಯನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುವಂತೆ ನಾನು ಎಲ್ಲಾ ಮಧ್ಯಸ್ಥಗಾರರಿಗೆ ಕರೆ ನೀಡುತ್ತೇನೆ." ಎಂದು ಪ್ರಧಾನ್‌ ಹೇಳಿದರು.

ಕೋವಿಡ್‌ನ 3ನೇ ಅಲೆಯಿಂದ ಭಾರತವನ್ನು ರಕ್ಷಿಸಬೇಕಾಗಿದೆ  ಮತ್ತು ಅದಕ್ಕೆ ಲಸಿಕೆಯೊಂದೇ ಏಕೈಕ ಮಾರ್ಗ ಎಂದು ಶ್ರೀ ಪ್ರಧಾನ್ ಹೇಳಿದರು. ನಿನ್ನೆ ಅಂತಾರಾಷ್ಟ್ರೀಯ ಯೋಗ ದಿನವನ್ನೂ ಆಚರಿಸಲಾಯಿತು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ರೋಗಗಳನ್ನು ದೂರವಿಡಲು ಯೋಗವು ಪರಿಣಾಮಕಾರಿ ಅಭ್ಯಾಸವಾಗಿದೆ. ಯೋಗ ದಿನದಂದೇ ನಾವು ಕೋವಿಡ್ ಅನ್ನು ದೂರವಿಡಲು ಪರಿಣಾಮಕಾರಿ ಮಾರ್ಗವಾಗಿರುವ ಲಸಿಕೆಯಲ್ಲಿ ದಾಖಲೆ ಮಾಡಿರುವುದು  ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. ಲಸಿಕೆ ಆಂದೋಲನದಲ್ಲಿ ರಾಜ್ಯವು ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಹಾಗೂ ನಿನ್ನೆ ಒಂದೇ ದಿನ 8.7 ಲಕ್ಷ ಜನರಿಗೆ ಲಸಿಕೆ ನೀಡುವ ಮೂಲಕ ಅತಿ ಹೆಚ್ಚು ಲಸಿಕೆ ನೀಡಿದ ದೇಶದ ಎರಡನೇ ರಾಜ್ಯವಾಗಿ ಹೊರಹೊಮ್ಮಿದ್ದಕ್ಕಾಗಿ  ಅವರು ರಾಜ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ: ʻಕೆಐಒಸಿಎಲ್ʼ, ಸುಮಾರು 90 ಲಕ್ಷ ರೂ.ಗಳ ಹೂಡಿಕೆಯೊಂದಿಗೆ ದಿನಕ್ಕೆ 1000 ಕ್ಯೂಬಿಕ್‌ ಮೀಟರ್‌(m3) ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ದಾನ ಮಾಡಿದೆ. ಇದು ದಿನಕ್ಕೆ ಸುಮಾರು 100 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಘಟಕವನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಡೆಸುತ್ತಿರುವ ಕರ್ನಾಟಕದ ʻಎಐಎಂಎಸ್ʼಗೆ ಹಸ್ತಾಂತರಿಸಲಾಗಿದೆ. ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಎಐಎಂಎಸ್) 1986ರಲ್ಲಿ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಬಿಜಿ ನಗರದಲ್ಲಿ ಸ್ಥಾಪಿಸಲಾಯಿತು.

ಮಂಗಳೂರಿನ ಮೂಡಬಿದರೆಯಲ್ಲಿ ಸರಕಾರಿ ಆಸ್ಪತ್ರೆಗೆ 50 ಹಾಸಿಗೆಗಳ ದೇಣಿಗೆ: ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ʻಕೆಐಒಸಿಎಲ್ʼ 50 ಹಾಸಿಗೆಗಳನ್ನು ವಿತರಿಸಿದೆ. ಈಗ ಕಂಪನಿಯು ಕೋವಿಡ್ ರೋಗಿಗಳ ಚಿಕಿತ್ಸೆ ಉದ್ದೇಶಕ್ಕಾಗಿ ಮೂಡಬಿದರೆಯಲ್ಲಿರುವ ಸರಕಾರಿ ಆಸ್ಪತ್ರೆಗೆ 50 ಹಾಸಿಗೆಗಳನ್ನು ದಾನ ಮಾಡುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಒದಗಿಸಲು ಕಂಪನಿಯು ಸುಮಾರು 18 ಲಕ್ಷ ರೂ. ಖರ್ಚು ಮಾಡಿದೆ.

ಕರ್ನಾಟಕದಲ್ಲಿ 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರದ ವಿವರ: ಕರ್ನಾಟಕದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಕತ್ರಿಕೆಹಾಳ್‌ ಗ್ರಾಮದಲ್ಲಿ 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಒಟ್ಟು 24.44 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಕಂಪನಿಯ ಒಟ್ಟು ಸಾಮರ್ಥ್ಯ ಈಗ 6.35 ಮೆಗಾವ್ಯಾಟ್‌ಗೆ ಏರಿದೆ. ʻಕೆಐಒಸಿಎಲ್ ಲಿಮಿಟೆಡ್‌ʼ ವಿದ್ಯುತ್ ಅಗತ್ಯವನ್ನು ಪೂರೈಸಲು ಸೌರ ವಿದ್ಯುತ್ ಉತ್ಪಾದನೆ ಸಹಾಯ ಮಾಡುತ್ತದೆ. ಮಂಗಳೂರಿನಲ್ಲಿ ಸಂಸ್ಥೆಯ ಪೆಲೆಟ್‌ ಸ್ಥಾವರಕ್ಕೆ ಒಟ್ಟು 30 ಮೆಗಾವ್ಯಾಟ್ ವಿದ್ಯುತ್‌ ಅವಶ್ಯಕತೆಯಿದ್ದು, ಪೈಕಿ ಹೊಸ ಸೌರ ವಿದ್ಯುತ್‌ ಘಟಕದಿಂದ 5 ಮೆಗಾವ್ಯಾಟ್ ದೊರೆಯಲಿದೆ. ʻಕೆಐಒಸಿಎಲ್ʼ ಕೈಗೊಂಡಿರುವ ಉಪಕ್ರಮವು ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮೂಲಕ ಪೆಲೆಟ್ ಸ್ಥಾವರದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಸ ವಿದ್ಯುತ್‌ ಘಟಕದಿಂದ ವಾರ್ಷಿಕ ಅಂದಾಜು 10 ದಶಲಕ್ಷ ಕಿಲೊ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದ್ದು, ಇದರಿಂದ ವರ್ಷಕ್ಕೆ ಸುಮಾರು 6.2 ಕೋಟಿ ರೂ. ಉಳಿತಾಯವಾಗಲಿದೆ. ಘಟಕದ ಅಂದಾಜು ಕಾರ್ಯನಿರ್ವಹಣೆ ಅವಧಿಯು 25 ವರ್ಷಗಳಾಗಿದ್ದು, 56 ತಿಂಗಳಲ್ಲಿ ಹೂಡಿಕೆ ಮರುಗಳಿಕೆಯಾಗಲಿದೆ.

ʻಕೆಐಒಸಿಎಲ್ʼ ಮಂಗಳೂರು ಪೆಲೆಟ್ ಸ್ಥಾವರದಲ್ಲಿ ಪ್ರತಿ ಗಂಟೆಗೆ 1000 ಟನ್ ಸಾಮರ್ಥ್ಯದ ಬ್ಯಾರೆಲ್ ಮಾದರಿಯ ಬ್ಲೆಂಡರ್ ರೀಕ್ಲೈಮರ್: ʻಕೆಐಒಸಿಎಲ್ ಲಿಮಿಟೆಡ್ʼ ಮಂಗಳೂರಿನಲ್ಲಿರುವ ತನ್ನ ವಾರ್ಷಿಕ 3.5 ಮೆಟ್ರಿಕ್‌ಟನ್‌ ಸಾಮರ್ಥ್ಯದ ಪೆಲೆಟ್ ಸ್ಥಾವರದ ಆಧುನೀಕರಣದ ಭಾಗವಾಗಿ, 17.50 ಕೋಟಿ ರೂವೆಚ್ಚದಲ್ಲಿ ಪ್ರತಿ ಗಂಟೆಗೆ 1000 ಟನ್ ಸಾಮರ್ಥ್ಯದ ಬ್ಯಾರೆಲ್ ಮಾದರಿಯ ಬ್ಲೆಂಡರ್ ರೀಕ್ಲೈಮರ್ ಅನ್ನು ಅಳವಡಿಸಿದೆ. ಉಪಕರಣವು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವ ಮೂಲಕ ವಿವಿಧ ರೀತಿಯ ಕಬ್ಬಿಣದ ಅದಿರಿನ ಕಣಗಳನ್ನು ಏಕರೂಪವಾಗಿ ಬೆರೆಸುತ್ತದೆ. ಇದರಿಂದ ಕಾರ್ಯಾಚರಣೆಯ ನಮ್ಯತೆಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.

***


(Release ID: 1729425) Visitor Counter : 253