ಆಯುಷ್

7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (ಐಡಿವೈ) ಸಂದರ್ಭದಲ್ಲಿ ಪ್ರಧಾನಿಮಂತ್ರಿಗಳು ಪ್ರಮುಖ ಉಪಕ್ರಮಗಳನ್ನು ಪ್ರಕಟಿಸಿದರು


ಐಡಿವೈ ಚಟುವಟಿಕೆಗಳು 1 ಲಕ್ಷಕ್ಕೂ ಹೆಚ್ಚು ಗ್ರಾಮಗಳನ್ನು ತಲುಪುತ್ತವೆ

Posted On: 21 JUN 2021 6:40PM by PIB Bengaluru

ಸೀಮಿತ ಭೌತಿಕ ಕಾರ್ಯಕ್ರಮಗಳ  ಮೂಲಕ ಮತ್ತು ಕೋವಿಡ್ ನಿರ್ಬಂಧಗಳು ಅನ್ವಯವಾಗುತ್ತಿರುವ ಜನರ ಮನೆಗಳಲ್ಲಿ ಏಳನೆಯ ಅಂತರರಾಷ್ಟ್ರೀಯ ಯೋಗ ದಿನವನ್ನು (ಐಡಿವೈ) ಒಗ್ಗೂಡಿ ಆಚರಿಸಲಾಯಿತು. ಐಡಿವೈ ಚಟುವಟಿಕೆಗಳು ಇಂದು ಒಂದು ಲಕ್ಷಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ನಮ್ಮ ಜೀವನದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮವನ್ನು, ವಿಶೇಷವಾಗಿ ವಿಶ್ವವು ಕೋವಿಡ್ ಸಾಂಕ್ರಾಮಿಕ ರೋಗದಿಂದ ತತ್ತರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕಾಪಾಡಿಕೊಳ್ಳುವ ಪಾತ್ರವನ್ನು ಒತ್ತಿಹೇಳಿದರು. ಪ್ರಪಂಚದಾದ್ಯಂತ ಸಾಂಕ್ರಾಮಿಕ ಸಮಯದಲ್ಲಿ ಯೋಗವು ಹೇಗೆ ಭರವಸೆಯ ಕಿರಣವಾಗಿದೆ ಎನ್ನುವುದನ್ನು ಅವರು ಉಲ್ಲೇಖಿಸಿದರು. ಕಳೆದ ಎರಡು ವರ್ಷಗಳಲ್ಲಿ ಐಡಿವೈಗಾಗಿ ಯಾವುದೇ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗದಿದ್ದರೂ, ಯೋಗದ ಬಗ್ಗೆ ಜಗತ್ತು ಹೊಂದಿರುವ ಆಸಕ್ತಿ  ಮತ್ತು ಉತ್ಸಾಹ ಕಡಿಮೆಯಾಗಿಲ್ಲ. ಜೊತೆಗೆ, ಅವರು ಯೋಗ ವಹಿಸಿರುವ ಪಾತ್ರವನ್ನು ಎತ್ತಿ ತೋರಿಸಿದರು ಮತ್ತು ಮುಂದಿನ ವರ್ಷಗಳಲ್ಲಿ ವೈಯಕ್ತಿಕ ಯೋಗಕ್ಷೇಮದ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವಲ್ಲಿ, ದೈಹಿಕ ಮತ್ತು ಮಾನಸಿಕ ಎರಡೂ ವರ್ಷದ ಥೀಮ್ನಲ್ಲಿ (#YogaforWellness) ಸಹ ಪಾಲಿಸಲ್ಪಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯುಷ್ ಸಚಿವಾಲಯದ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ಅಭಿವೃದ್ಧಿಪಡಿಸಿದಎಂ-ಯೋಗ”  ಆ್ಯಪ್ ಅನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು ಆ್ಯಪ್   ಸಾಮಾನ್ಯ ಯೋಗ ನಿಯಮಗಳ ಆಧಾರದ ಮೇಲೆ ತರಬೇತಿ ಮತ್ತು ಅಭ್ಯಾಸದ ವೀಡಿಯೊಗಳು ಮತ್ತು ಆಡಿಯೊಗಳನ್ನು ಒಳಗೊಂಡಿರುತ್ತದೆ, ಇದನ್ನು ಎಲ್ಲರೂ ಬಳಸಬಹುದಾಗಿದೆ  “‘ಒಂದು ವಿಶ್ವ- ಒಂದು ಆರೋಗ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ.

ಇಂದಿನ ಮತ್ತೊಂದು ಗಮನಾರ್ಹ ಅಂಶವೆಂದರೆ  ಆರೋಗ್ಯ ಫೌಂಡೇಶನ್ ಆಫ್ ಇಂಡಿಯಾ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಐಡಿವೈ ಆಚರಿಸಿರುವುದು. ಆರೋಗ್ಯ ಫೌಂಡೇಶನ್ ತನ್ನ ಸ್ವಯಂಸೇವಕರಿಗೆ ಮೇ ತಿಂಗಳಿನಿಂದ ಐಡಿವೈಗಾಗಿ ತರಬೇತಿ ನೀಡುತ್ತಿತ್ತು ಮತ್ತು ಇಂದು ಅವರು ದೇಶಾದ್ಯಂತ ಏಕಲ್ ವಿದ್ಯಾಲಯದ ವಿಶಾಲ ಜಾಲದ ಸಹಾಯದಿಂದ ಸಾಧನೆ ಮಾಡಿದ್ದಾರೆ. ಆರೋಗ್ಯ ಫೌಂಡೇಶನ್ ತನ್ನ ಏಕಲ್ ಅಭಿಯಾನ್ ಮೂಲಕ ಆಯೋಜಿಸಿದ ಐಡಿವೈ ಕಾರ್ಯಕ್ರಮವು  ಉತ್ತರ ಪ್ರದೇಶದ 18 ಸಾವಿರಕ್ಕೂ ಹೆಚ್ಚು ಹಳ್ಳಿಗಳು ಮತ್ತು ಮಧ್ಯ ಪ್ರದೇಶ, ಹಿಮಾಂಚಲ ಪ್ರದೇಶ ಮತ್ತು ಜಾರ್ಖಂಡ್ನಲ್ಲಿ ತಲಾ 8 ಸಾವಿರಕ್ಕೂ ಹೆಚ್ಚು ಗ್ರಾಮಗಳು, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ಗಢ, ಜಮ್ಮು ಮತ್ತು ಕಾಶ್ಮೀ್ರ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳ 4 ಸಾವಿರಕ್ಕೂ ಹೆಚ್ಚು ಹಳ್ಳಿಗಳು ಚಟುವಟಿಕೆಗೆ ಸಾಕ್ಷಿಯಾಗಿವೆ.

ಕೋವಿಡ್-19 ಸಾಂಕ್ರಾಮಿಕ ಮತ್ತು ಜನಸೇರುವ ಚಟುವಟಿಕೆಗಳಲ್ಲಿನ ನಿರ್ಬಂಧಗಳ ದೃಷ್ಟಿಯಿಂದ, ಅಂತರರಾಷ್ಟ್ರೀಯ ಯೋಗ ದಿನಾಚರಣೆ (ಐಡಿವೈ) 2021 ಪ್ರಮುಖ ಕಾರ್ಯಕ್ರಮವಾದ  ಪ್ರಧಾನಮಂತ್ರಿಯವರ ಭಾಷಣವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತುಆಯುಷ್ ಸಚಿವಾಲಯವು ಅದರ ಭಾಗಿದಾರರ  ಸಮನ್ವಯದಿಂದ ದಿನದ ಆಚರಣೆಯನ್ನು ಡಿಜಿಟಲ್ ರೂಪದಲ್ಲಿ ಸಕ್ರಿಯಗೊಳಿಸಿತು. ಕಾರ್ಯಕ್ರಮದಲ್ಲಿ ಆಯುಷ್ ರಾಜ್ಯ ಸಚಿವರಾದ ಶ್ರೀ ಕಿರೆನ್ ರಿಜಿಜು ಅವರ ಭಾಷಣ ಮತ್ತು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನೇರ ಯೋಗ ಪ್ರದರ್ಶನವೂ ಸೇರಿತ್ತು.

ಸಂದರ್ಭದಲ್ಲಿ, ಆಯುಷ್ ರಾಜ್ಯ ಸಚಿವ ಶ್ರೀ ಕಿರೆನ್ ರಿಜಿಜು 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ ಎಲ್ಲರನ್ನೂ ಅಭಿನಂದಿಸಿದರು ಮತ್ತು 2014 ರಲ್ಲಿ ಮಾನ್ಯತೆ ಪಡೆದ ನಂತರ ಜಾಗತಿಕವಾಗಿ ಗಳಿಸಿದ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ಯೋಗವನ್ನು ಕೇವಲ ಭಾರತದ ಸ್ಥಳೀಯವಾದ ವ್ಯಾಯಾಮವಲ್ಲ ಆದರೆ ಇದನ್ನು ಎಲ್ಲರೂ ತಮ್ಮದೇ ಎಂದು ಒಪ್ಪಿಕೊಂಡಿರುವ ಜಗತ್ತಿಗೆ ಭಾರತದ ಉಡುಗೊರೆ ಎಂದು ಅವರು ಉಲ್ಲೇಖಿಸಿದರು ,

ಭಾಷಣದ ನಂತರ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ತಜ್ಞರು ಸಾಮಾನ್ಯ ಯೋಗ ನಿಯಮದ ನೇರ ಪ್ರದರ್ಶನವನ್ನು ನೀಡಿದರು. ದೂರದರ್ಶನದ ಎಲ್ಲಾ ಚಾನೆಲ್ಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು.

ಜಾಗತಿಕವಾಗಿಯೂ, ವಿವಿಧ ದೇಶಗಳಲ್ಲಿ ಐಡಿವೈ ಅನ್ನು ಆಚರಿಸಲಾಯಿತು ಮತ್ತು ದಿನದಲ್ಲಿ  ಹಲವಾರು ದೇಶಗಳು ಸ್ಥಳೀಯ ಕಾರ್ಯಕ್ರಮಗಳನ್ನು ಹೊಂದಿರುತ್ತವೆ. ವಿಶ್ವದಾದ್ಯಂತದ ವಿವಿಧ ಭಾರತೀಯ ನಿಯೋಗಗಳು ಪ್ರಖ್ಯಾತ ವ್ಯಕ್ತಿಗಳ ಸಮ್ಮುಖದಲ್ಲಿ ಅವರು ಆಯೋಜಿಸಿರುವ ಐಡಿವೈ ಆಚರಣೆಗಳನ್ನು ಹಂಚಿಕೊಳ್ಳುತ್ತಿವೆ ಮತ್ತು ತೋರಿಸುತ್ತಿವೆ. ಇವುಗಳಲ್ಲಿ ಕೆಲವು ಜಮೈಕಾ, ಜಪಾನ್, ಗ್ವಾಟೆಮಾಲಾ, ನೇಪಾಳ, ಕಾಂಬೋಡಿಯಾ, ವಿಯೆಟ್ನಾಂ ಸೇರಿವೆ.

ಅನೇಕ ದೇಶಗಳಲ್ಲಿ ಐಡಿವೈ ಚಟುವಟಿಕೆಗಳು ಜೂನ್ 21 ಮೊದಲು ಉತ್ತಮವಾಗಿ ಪ್ರಾರಂಭವಾಗಿವೆ ಮತ್ತು ಜೂನ್ 24 ರವರೆಗೆ ಮುಂದುವರಿಯುತ್ತದೆ. ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ನಲ್ಲಿ, ಐಡಿವೈ ಆಚರಿಸಲಾಯಿತು ಮತ್ತು ವಾಷಿಂಗ್ಟನ್ನ ಭಾರತೀಯ ರಾಯಭಾರ ಕಚೇರಿಯು ಅದೇ ದಿನ ಅಂತಾರಾಷ್ಟ್ರೀಯ ಯೊಗ ದಿನವನ್ನು ಆಚರಿಸಿತು. ಅಂತೆಯೇ, ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿ ಟೋಕಿಯೊ, ರಿಯಾದ್, ತೆಲಾವಿವ್, ಅಬುಧಾಬಿ ಮತ್ತು ದುಬೈನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಟ್ಟಾರೆಯಾಗಿ, ಸುಮಾರು 190 ದೇಶಗಳು ಅವಧಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು  ಆಚರಿಸುವ ನಿರೀಕ್ಷೆಯಿದೆ.

ದೂರದರ್ಶನದ ನೇರ ಕಾರ್ಯಕ್ರಮದಲ್ಲಿ ಅನೇಕ ಯೋಗ ಗುರುಗಳು ಮತ್ತು ಪ್ರತಿಪಾದಕರು ತಮ್ಮ ಅರಿವನ್ನು  ಹಂಚಿಕೊಂಡರು. ಇದರಲ್ಲಿ ಶ್ರೀ ಹೆಚ್.ಆರ್.ನಾಗೇಂದ್ರ, ಶ್ರೀ ಶ್ರೀ ರವಿಶಂಕರ್, ಸದ್ಗುರು ಜಗ್ಗಿ ವಾಸುದೇವ, ಸ್ವಾಮಿ ಚಿದಾನಂದ ಸರಸ್ವತಿ, ಡಾ.ಪ್ರಣವ್ ಪಾಂಡ್ಯ, ಮಾ ಹನ್ಸ ಜಿ, ಡಾ.ಡಿ.ವಿ.ಹೆಗ್ಡೆ, ಸೋದರಿ ಶಿವಾನಿ, ಸ್ವಾಮಿ ಭಾರತಿ ಭೂಷಣ್, ಡಾ..ಪಿ ತಿವಾರಿ, ಶ್ರೀ ಕಮಲೇಶ್ ಪಟೇಲ್ ಮತ್ತು ಇತರರು ಸೇರಿದ್ದಾರೆ.

***


(Release ID: 1729319) Visitor Counter : 271