ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕಾ ಅಭಿಯಾನದ ಅಪ್ಡೇಟ್


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 29.10 ಕೋಟಿಗೂ ಅಧಿಕ ಲಸಿಕಾ ಡೋಸ್ ಗಳ ಒದಗಣೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡುವಿಕೆಗೆ ಇನ್ನೂ 3.06 ಕೋಟಿಗೂ ಅಧಿಕ ಡೋಸ್ ಗಳು ಲಭ್ಯ

Posted On: 20 JUN 2021 10:16AM by PIB Bengaluru

ರಾಷ್ಟ್ರೀಯ ಲಸಿಕಾ ಆಂದೋಲನದ ಅಂಗವಾಗಿ, ಭಾರತ ಸರಕಾರವು  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಒದಗಿಸಿ ಬೆಂಬಲವನ್ನು ನೀಡುತ್ತಿದೆ. ಇದಲ್ಲದೆ ಭಾರತ ಸರಕಾರವು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳ ನೇರ ಖರೀದಿಗೂ ಸೌಲಭ್ಯವನ್ನು ಒದಗಿಸಿದೆ. ಜಾಗತಿಕ ಸಾಂಕ್ರಾಮಿಕದ ಪ್ರಸರಣವನ್ನು ನಿರ್ಬಂಧಿಸುವಲ್ಲಿ ಮತ್ತು ಅದರ ನಿರ್ವಹಣೆಯಲ್ಲಿ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸಮುಚಿತ ವರ್ತನೆಗಳ ಜೊತೆ ಲಸಿಕಾಕರಣ ಕೂಡಾ ಸರಕಾರದ ಸಮಗ್ರ ತಂತ್ರದ ಪ್ರಮುಖ ಅಂಗವಾಗಿದೆ.

ಕೋವಿಡ್-19 ಲಸಿಕಾ ಕಾರ್ಯಕ್ರಮದ  ಮುಕ್ತ ಮತ್ತು ತ್ವರಿತಗತಿಯ ಹಂತ -3 ನ್ನು 2021 ಮೇ 1 ರಿಂದ ಅನುಷ್ಠಾನಕ್ಕೆ ತರಲಾಗಿದೆ.

ತಂತ್ರದಡಿಯಲ್ಲಿ, ಪ್ರತೀ ತಿಂಗಳೂ ಕೇಂದ್ರೀಯ ಔಷಧಿ ಪ್ರಯೋಗಾಲಯ (ಸಿ.ಡಿ.ಎಲ್.)  ಅನುಮತಿಸುವ ಒಟ್ಟು ಲಸಿಕಾ ಡೋಸ್ ಗಳಲ್ಲಿ, ಅದರ ಉತ್ಪಾದಕರು ಯಾರೇ ಇರಲಿ, 50% ದಷ್ಟನ್ನು ಭಾರತ ಸರಕಾರ ಖರೀದಿಸುತ್ತದೆ. ಮತ್ತು ಡೋಸ್ ಗಳನ್ನು ಮೊದಲು ಮಾಡುತ್ತಿದ್ದಂತೆ ರಾಜ್ಯ ಸರಕಾರಗಳಿಗೆ ಉಚಿತವಾಗಿ ಒದಗಿಸುತ್ತಿರುತ್ತದೆ.

ಭಾರತ ಸರಕಾರವು ಇದುವರೆಗೆ ಉಚಿತ ವಿಭಾಗದಲ್ಲಿ  ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ 29.10 ಕೋಟಿಗೂ ಅಧಿಕ ಲಸಿಕಾ ಡೋಸ್ ಗಳನ್ನು (29,10,54,050) ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿದೆ.

ಇದರಲ್ಲಿ ಪೋಲಾದ/ವ್ಯರ್ಥವಾದ  ಡೋಸ್ ಸಹಿತ ಒಟ್ಟು ಬಳಕೆ 26,04,19,412 ಡೋಸ್ ಗಳು (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಾದ ದತ್ತಾಂಶಗಳ ಅನ್ವಯ)

3.06 ಕೋಟಿಗೂ ಅಧಿಕ  ಕೋವಿಡ್ ಲಸಿಕಾ ಡೋಸ್ (3,06,34,638) ಗಳು ಈಗಲೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನಿಡಿಕೆಗೆ ಲಭ್ಯ ಇವೆ.

ಇದಲ್ಲದೆ, 24,53,080 ಲಕ್ಷಕ್ಕೂ ಅಧಿಕ  ಲಸಿಕಾ ಡೋಸ್ ಗಳು ರವಾನೆಯಾಗುತ್ತಿದ್ದು ಅವುಗಳನ್ನು ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಡೆದುಕೊಳ್ಳಲಿವೆ.

***



(Release ID: 1728747) Visitor Counter : 209