ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯದಿಂದ ಬೇಳೆಕಾಳುಗಳ ಬೆಲೆ ನಿಯಂತ್ರಣಕ್ಕೆ ಕ್ರಮ


ತೊಗರಿ ಬೇಳೆ, ಹೆಸರು ಬೇಳೆ ಮತ್ತು ಉದ್ದಿನ ಬೇಳೆ ಬೆಲೆ ಸ್ಥಿರ ಮತ್ತು ಇಳಿಕೆ ಪ್ರವೃತ್ತಿಯಲ್ಲಿ

2021 ರ ಏಪ್ರಿಲ್ 1 ರಿಂದ 2021 ರ ಜೂನ್ 16 ರ ಅವಧಿಯಲ್ಲಿ ಈ ಮೂರು ದ್ವಿದಳ ಧಾನ್ಯಗಳ ಸರಾಸರಿ ಹೆಚ್ಚಳ 2021 ರ ಜನವರಿ 1 ರಿಂದ 2021 ರ ಮಾರ್ಚ್ 31 ಕ್ಕೆ ಹೋಲಿಸಿದರೆ ಶೇ 0.95 ರಷ್ಟು ಹೆಚ್ಚಳವಾಗಿದೆ: ಇದು 2020 ಕ್ಕೆ ಹೋಲಿಸಿದರೆ ಶೇ 8,93 ಮತ್ತು ಇದಕ್ಕೂ ಹಿಂದಿನ 2019 ವರ್ಷದಲ್ಲಿ ಶೇ 4.13 ರಷ್ಟು ತುಂಬಾ ಕಡಿಮೆ ಇದೆ

ದಾಸ್ತಾನು ವಿಲೇವಾರಿ ಹೆಚ್ಚಾಗಿದೆ ಮತ್ತು ದ್ವಿದಳ ಧಾನ್ಯಗಳ ಸಂಗ್ರಹದ ಮೇಲ್ವಿಚಾರಣೆಗೆ ಕ್ರಮ

Posted On: 18 JUN 2021 6:56PM by PIB Bengaluru

ಬೇಳೆಕಾಳುಗಳ ಬೆಲೆಗಳನ್ನು ನ್ಯಾಯೋಚಿತ ಮತ್ತು ಸಮಂಜಸ ಮಟ್ಟದಲ್ಲಿರುವಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಗ್ರಾಹಕ ವ್ಯವಹಾರಗಳ ಇಲಾಖೆ ಅಗತ್ಯ ವಸ್ತುಗಳ ಬೆಲೆಗಳ ಮೇಲೆ ನಿಯಮಿತವಾಗಿ ನಿಗಾವಹಿಸುತ್ತಿದ್ದು, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಅದರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು., ಬೇಡಿಕೆ ಮತ್ತು ಪೂರೈಕೆ ಅಂತರವನ್ನು ಕಡಿಮೆ ಮಾಡಲು ದಾಸ್ತಾನಿನ ಘೋಷಣೆ ಮತ್ತು ದ್ವಿದಳ ಧಾನ್ಯಗಳ ಮೇಲ್ವಿಚಾರಣೆಯನ್ನು ಕೈಗೊಂಡಿದೆ.  

 

ದಾಸ್ತಾನಿನ ಘೋಷಣೆಯ ಆದೇಶ

 

2.1 ಅಗತ್ಯ ಸರಕುಗಳಿಗೆ ಸಂಬಂಧಿಸಿದಂತೆ ಮಾಹಿತಿ ಅಥವಾ ಅಂಕಿಅಂಶಗಳನ್ನು ಸಂಗ್ರಹಿಸುವ ಆದೇಶಗಳನ್ನು ನೀಡುವ ಅಧಿಕಾರವನ್ನು ಕೇಂದ್ರ ಸರ್ಕಾರ 9.6.1978 ರ ಆದೇಶದ ಮೂಲಕ ರಾಜ್ಯ ಸರ್ಕಾರಕ್ಕೆ ವಹಿಸಿದೆ. 14.5.2021 ರಂದು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ಗಿರಣಿಗಳು, ವ್ಯಾಪಾರಿಗಳು, ಆಮದುದಾರರು ಮುಂತಾದ ಎಲ್ಲಾ ಸಂಗ್ರಹಕಾರರಿಗೆ ದ್ವಿದಳ ಧಾನ್ಯದ ಸಂಗ್ರಹವನ್ನು ಘೋಷಿಸುವಂತೆ ಇಸಿ ಕಾಯ್ದೆ ಸೆಕ್ಷನ್ 3[2]. [ಎಚ್] ಮತ್ತು 3 [2] [ಐ] ಅಡಿ ಸೂಚಿಸಲಾಗಿದೆ. ಘೋಷಿಸಿದ ದಾಸ್ತಾನನ್ನು ರಾಜ್ಯಗಳು/ ಕೇಂದ್ರಗಳು ಪರಿಶೀಲಿಸಬೇಕು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ದ್ವಿದಳ ಧಾನ್ಯಗಳ ಬೆಲೆಯನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡುವಂತೆ ಕೋರಲಾಗಿದೆ.  ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ದೇಶಾದ್ಯಂತ ಬೇಳೆಕಾಳುಗಳ ದಾಸ್ತಾನು ಮಾಹಿತಿ ಪಡೆಯುವ, ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆಗೆ ಕಾರಣವಾಗುವ, ಕಾಳಸಂತೆಕೋರರನ್ನು ನಿಯಂತ್ರಿಸಲು ಇದರಿಂದ ಸಾಧ್ಯವಾಗಲಿದೆ.  

2.2  ಈ ಪ್ರಕ್ರಿಯೆಯನ್ನು ಸರಾಗೊಳಿಸುವ ಮತ್ತು ವರದಿ ಮಾಡುವ ಸ್ವರೂಪವನ್ನು ಪ್ರಾಮಾಣೀಕರಿಸಲು ಆನ್ ಲೈನ್ ಪೋರ್ಟಲ್ ಅನ್ನು ರಚಿಸಲಾಗಿದೆ. 17.05.2021 ರಂದು ನಡೆದ ]ವಿಡಿಯೋ ಕಾನ್ಪರೆನ್ಸ್ ಮೂಲಕ] ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಭೆಯಲ್ಲಿ ಬೇಳೆಕಾಳುಗಳ  ಸಂಗ್ರಹಕಾರರು ತಮ್ಮನ್ನು ಆನ್ ಲೈನ್ ಪೋರ್ಟಲ್ ನಲ್ಲಿ ನೋಂದಾಯಿಸಲು ಮತ್ತು ತಮ್ಮ ದಾಸ್ತಾನು ಘೋಷಿಸುವಂತೆ ನಿರ್ದೇಶಿಸಲು ಸೂಚಿಸಲಾಯಿತು,.  

 2.3 ಇದೇ ಸಂದರ್ಭದಲ್ಲಿ 25.05.2021 ಮತ್ತು 02.06.2021 ಮತ್ತೆ ಎರಡು ಸಭೆಗಳನ್ನು ನಡೆಸಿ, ಆನ್ ಲೈನ್ ಪೋರ್ಟಲ್ ನಲ್ಲಿ ಬೇಳೆಕಾಳುಗಳ ಮಾಹಿತಿ ಘೋಷಿಸಲು ಇರುವ ಎಲ್ಲಾ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ನಿರ್ಧರಿಸಲಾಯಿತು. ಜತೆಗೆ ಸಂಗ್ರಹಕಾರರು ತಮ್ಮಲ್ಲಿರುವ ಬೇಳೆಕಾಳುಗಳನ್ನು ಪ್ರಕಟಿಸುವಂತೆ ಮತ್ತೊಮ್ಮೆ ನಿರ್ದೇಶನ ನೀಡಲಾಯಿತು.

2.4 ರಾಜ್ಯಗಳು ಮತ್ತು ಸಂಗ್ರಹಕಾರರ ಜತೆ ನಿರಂತರ ಸಮಾಲೋಚನೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಮತ್ತು ಪೋರ್ಟಲ್ ಲೋಕಾರ್ಪಣೆ ಮಾಡಿದ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ  28.66 ಲಕ್ಷ ಮೆಟ್ರಿಕ್ ಟನ್ ದಾಸ್ತಾನನ್ನು ಘೋಷಿಸಿಕೊಳ್ಳಲಾಗಿದೆ ಮತ್ತು ವಿವಿಧ ವಲಯಗಳ 6823 ಮಂದಿ ನೋಂದಣಿ ಮಾಡಿಕೊಂಡಿದ್ದು, ದೇಶದಲ್ಲಿ ಪ್ರಸ್ತುತ ಇರುವ ಅಂದಾಜು ದಾಸ್ತಾನಿನ ಕುರಿತು ನಫೆಡ್ ನಡೆಸಿದ ಪರಿಶೋಧನೆಯಿಂದ ಶೇ 20 ರಷ್ಟು ದಾಸ್ತಾನು ಪತ್ತೆಯಾಗಿದೆ.  

2.5 ಪ್ರತಿಯೊಂದು ರಾಜ್ಯ ಮತ್ತು ಚಾಲ್ತಿಯಲ್ಲಿರುವ ಬೆಲೆಗಳನ್ನು ಉಲ್ಲೇಖಿಸಿ ಪೋರ್ಟಲ್ ನಲ್ಲಿ ಒದಗಿಸಲಾದ ದಾಸ್ತಾನು ವಿವರಗಳನ್ನು ವಿಶ್ಲೇಷಿಸಲಾಗಿದೆ ಮತ್ತು ರಾಷ್ಟ್ರೀಯ ಸರಾಸರಿ ಬೆಲೆಗಿಂತ ಹೆಚ್ಚಿರುವ ರಾಜ್ಯಗಳ ಬಗ್ಗೆ ಸೂಕ್ಷ್ಮತೆ ಹೊಂದಲಾಗಿದೆ. ದ್ವಿದಳ ಧಾನ್ಯಗಳ ನಿಯಮಿತ ಸಾಗಣೆ ಮತ್ತು ದಾಸ್ತಾನುಗಳ ಪರಿಶೀಲನೆ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ.

3. ಕಾಪು ದಾಸ್ತಾನು ಮೂಲಕ ಸಂಗ್ರಹಣೆ ಹೆಚ್ಚಿಸುವ ಮತ್ತು ಕಾಪು ದಾಸ್ತಾನು ಗುರಿಗಳನ್ನು ಹೆಚ್ಚಿಸುವ ಕುರಿತು  

. ಬೆಲೆ ಸ್ಥಿರೀಕರಣದ ಕಡೆ ಹೆಚ್ಚು ಪರಿಣಾಮಕಾರಿಯಾದ ಮಧ್ಯಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಬೆಲೆ ಸ್ಥಿರೀಕರಣ ನಿಧಿ [ಪಿ.ಎಸ್.ಪಿ] ಅಡಿಯಲ್ಲಿ ಪ್ರಸಕ್ತ ವರ್ಷ [ಹಣಕಾಸು ವರ್ಷ 2021-22] ನಿರ್ವಹಿಸಬೇಕಾದ ಉದ್ದೇಶಿತ ದ್ವಿದಳ ಧಾನ್ಯಗಳ ಕಾಪು ದಾಸ್ತಾನು ಗುರಿಯನ್ನು 23 ಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸಲಾಗಿದೆ. ಕಡೆಲೆಕಾಳು, ಕೆಂಪು ಬೇಳೆ ಮತ್ತು ಹೆಸರು ಬೇಳೆ ಸಂಗ್ರಹ ಪ್ರಗತಿಯಲ್ಲಿದೆ. ದ್ವಿದಳ ಧಾನ್ಯಗಳ ಸಂಗ್ರಹಣೆಗಾಗಿ ಗ್ರಾಹಕ ವ್ಯವಹಾರಗಳ ಇಲಾಖೆಯ ಪರವಾಗಿ ನಫೆಡ್ ರಾಜ್ಯ ಸರ್ಕಾರಿ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದೆ.

4.ಪಿ.ಎಂ.ಜಿ.ಎ.ವೈ ಮತ್ತು ವಿವಿಧ ಕಲ್ಯಾಣ ಯೋಜನೆಯಡಿ ಬೇಳೆಕಾಳುಗಳನ್ನು ಬಿಡುಗಡೆ ಮಾಡಲಾಗಿದೆ.

4.1. ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳಿಗೆ ಬೇಳೆಕಾಳುಗಳನ್ನು ಪೂರೈಸಲಾಗಿದೆ.

·     2017 ರಲ್ಲಿ ಕೈಗೊಂಡ ತೀರ್ಮಾನದಂತೆ, ಸಚಿವಾಲಗಳು/ ಇಲಾಖೆಗಳು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮಗಳಿಗಾಗಿ ಕಾಪು ದಾಸ್ತಾನಿನಲ್ಲಿರುವ ಬೇಳೆಕಾಳುಗಳನ್ನು ಬಳಕೆ ಮಾಡಿಕೊಳ‍್ಳಬಹುದಾಗಿದೆ ಅಥವಾ ಆಹಾರ ಪೂರೈಕೆ, ಆಸ್ಪತ್ರೆ ಸೇವೆಗಳು, ಪಡಿತರ ಪೂರೈಕೆ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ ಮತ್ತು ಐಸಿಡಿಎಸ್ ಯೋಜನೆಗಳಿಗಾಗಿ ಬೇಳೆಕಾಳುಗಳನ್ನು ಬಳಸಿಕೊಳ್ಳಬಹುದಾಗಿದೆ.  

·     ಕೇಂದ್ರ ಸರ್ಕಾರ ರಾಜ್ಯಗಳ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಬೇಳೆಕಾಳುಗಳನ್ನು ಪೂರೈಕೆ ಮಾಡುತ್ತಿದೆ, 2020 – 21 ರಲ್ಲಿ ಐಸಿಡಿಎಸ್ ಮತ್ತು ಪಡಿತರ ಪೂರೈಕೆ ವ್ಯವಸ್ಥೆಯಡಿ ಒಟ್ಟು 1.18 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಪೂರೈಸಲಾಗಿದೆ.  

·     ಕಾಪು ದಾಸ್ತಾನಿನಲ್ಲಿ ಸೇನೆ ಮತ್ತು ಕೇಂದ್ರ ಅರೆ ಮಿಲಿಟರಿ ಪಡೆಗಳ ಬೇಳೆ ಅಗತ್ಯಗಳನ್ನು ಪೂರೈಸಲಾಗಿದೆ ಮತ್ತು 75,000 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ.

4.2. ಪಿ.ಎಂ.ಜಿ.ಕೆ.ಎ.ವೈ ನಡಿ ಬೇಳೆಕಾಳುಗಳ ಪೂರೈಕೆ

·     ಗ್ರಾಹಕ ವ್ಯವಹಾರಗಳ ಇಲಾಖೆ 2020-21 ರ ಸಾಲಿನಲ್ಲಿ ಪಿ.ಎಸ್.ಎಫ್ ಕಾಪು ದಾಸ್ತಾನಿನಲ್ಲಿ ಪ್ರತಿಯೊಂದು ಕುಟುಂಬಕ್ಕೆ ತಿಂಗಳಿಗೆ ಒಂದು ಕೆ.ಜಿ. ಬೇಳೆಕಾಳುಗಳನ್ನು ಉಚಿತವಾಗಿ ವಿತರಿಸಿದೆ, 19.4 ಕೋಟಿ ಎನ್.ಎಫ್.ಎಸ್.ಎ ಫಲಾನುಭವಿ ಕುಟುಂಬಗಳಿಗೆ ಕೋವಿಡ್ -19 ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ 2020ರ ಏಪ್ರಿಲ್ ನಿಂದ ಜೂನ್ ವರೆಗೆ ವಿತರಿಸಲಾಗಿದೆ. ನಂತರ 2020 ರಲ್ಲಿ ಮತ್ತೆ ಐದು ತಿಂಗಳ ಕಾಲ ಅಂದರೆ ನವೆಂಬರ್ ವರೆಗೆ ಈ ಕಾರ್ಯಕ್ರಮ ವಿಸ್ತರಿಸಲಾಗಿತ್ತು.   

·     14.23 ಲಕ್ಷ ಮೆಟ್ರಿಕ್ ಟನ್ ಗಿರಣಿಯಿಂದ ಬಂದ ಬೇಳೆಕಾಳುಗಳನ್ನು ಪಿ.ಎಂ.ಜಿ.ಕೆ.ಎ.ವೈ ನಡಿ ಪಿಡಿಎಸ್ ವ್ಯವಸ್ಥೆಗೆ ಪೂರೈಸಲಾಗಿದೆ.

·     ಬೇಳೆಕಾಳುಗಳನ್ನು ಸಂಗ್ರಹಿಸುವ ಸ್ಥಳಗಳನ್ನು ರಾಜ್ಯ ಸರ್ಕಾರಗಳು ನಫೆಡ್ ನೊಂದಿಗೆ ಸೇರಿ ಅಂತಿಮಗೊಳಿಸಲಿವೆ ಮತ್ತು ವಿತರಣೆ ಕೇಂದ್ರಗಳು, ಬಡ ಕುಟುಂಬಗಳಿಗೆ ಬೇಳೆಕಾಳುಗಳನ್ನು ತಲುಪುವಂತೆ ಮಾಡುವ ಮತ್ತು ಅವರ ಪೌಷ್ಟಿಕ ಭದ್ರತೆಗೆ ಕೊಡುಗೆ ನೀಡುವಂತೆ ರೂಪಿಸಲಿವೆ. ಇದಲ್ಲದೇ ದುರ್ಬಲ ವರ್ಗಗಳಿಗೆ ಮೂಲ ಪೌಷ್ಟಿಕಾಂಶ ನೀಡುವ ಹೊರತಾಗಿಯೂ ದ್ವಿದಳ ಧಾನ್ಯಗಳ ಬೆಲೆಯನ್ನು ನಿಯಂತ್ರಿಸಲು ಈ ಕಾರ್ಯಕ್ರಮ ಮಹತ್ವದ ಕೊಡುಗೆ ನೀಡಿದೆ.  

5 ಚಿಲ್ಲರೆ ಮಾರುಕಟ್ಟೆ ಮಧ್ಯಪ್ರವೇಶ

·     2020 – 21 ರಲ್ಲಿ ದರಗಳನ್ನು ನಿಯಂತ್ರಿಸುವ ಉದ್ದೇಶದಿಂದ ಚಿಲ್ಲರೆ ಮಾರುಕಟ್ಟೆ ಮಧ್ಯಪ್ರವೇಶ ವ್ಯವಸ್ಥೆಯನ್ನು ತಂದಿದ್ದು, ಇದರಿಂದ ನೇರ ಮತ್ತು ತಕ್ಷಣದ ಪರಿಣಾಮವಾಗಿ ಕಾಪು ದಾಸ್ತಾನಿನಿಂದ ಬೇಳೆಕಾಳುಗಳನ್ನು ಬಿಡುಗಡೆ ಮಾಡಿ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ.

·     ಈ ವ್ಯವಸ್ಥೆಯಡಿ ಹೆಸರು ಬೇಳೆ, ಉದ್ದಿನ ಬೇಳೆ ಮತ್ತು ತೊಗರಿ ಬೇಳೆಯನ್ನು ಇ.ಪಿ.ಎಸ್. ನಡಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಚಿಲ್ಲರೆ ಮಾರಾಟ ಮಳಿಗೆಗಳು, ಡೈರಿ ಮತ್ತು ತೋಟಗಾರಿಕಾ ಮಳಿಗೆಗಳು, ಗ್ರಾಹಕ ಸಹಕಾರ ಸೊಸೈಟಿಗಳು ಮತ್ತಿತರ ಮಳಿಗೆಗಳಿಗೆ ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿದೆ.

·     ಗಿರಣಿ, ಸಂಸ್ಕರಣೆ, ಸಾರಿಗೆ, ಪ್ಯಾಕೇಜಿಂಗ್, ಅಂಚು ವೆಚ್ಚ, ಎಪ್.ಪಿ.ಎಸ್. ವಿತರಕರ ಸರಬರಾಜು ವೆಚ್ಚವನ್ನು ಇಲಾಖೆ ಭರಿಸಿದೆ.

·     ಚಿಲ್ಲರೆ ಮಾರುಕಟ್ಟೆ ಮಧ್ಯ ಪ್ರವೇಶದಡಿ ಈ ಮೂರು ಬೇಳೆಕಾಳುಗಳನ್ನು ಈವರೆಗೆ 2.3 ಲಕ್ಷ ಮೆಟ್ರಿಕ್ ಟನ್ ಪೂರೈಸಲಾಗಿದೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕಾಗಿ 2 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಬಿಡುಗಡೆ ಮಾಡಲಾಗಿದೆ.

ಹೀಗಾಗಿ ತೊಗರಿ ಬೇಳೆ, ಹೆಸರು ಮತ್ತು ಉದ್ದಿನ ಬೇಳೆಗಳ ಚಿಲ್ಲರೆ ಬೆಲೆಗಳ ಮೇಲಿನ ಒತ್ತಡ 2021 ರಲ್ಲಿ ಸ್ಥಿರವಾಗಿದೆ ಮತ್ತು ಸ್ಥಿರ ಅಥವಾ ಕ್ಷೀಣಿಸುತ್ತಿರುವ ಪ್ರವೃತ್ತಿಯಲ್ಲಿದೆ. 2021 ರ ಏಪ್ರಿಲ್ 1 ರಿಂದ 2021 ರ ಜೂನ್ 16 ರ ಅವಧಿಯಲ್ಲಿ ಈ ಮೂರು ದ್ವಿದಳ ಧಾನ್ಯಗಳ ಸರಾಸರಿ ಹೆಚ್ಚಳ 2021 ರ ಜನವರಿ 1 ರಿಂದ 2021 ರ ಮಾರ್ಚ್ 31 ಕ್ಕೆ ಹೋಲಿಸಿದರೆ ಶೇ 0.95 ರಷ್ಟು ಹೆಚ್ಚಳವಾಗಿದೆ:  ಇದು 2020 ಕ್ಕೆ ಹೋಲಿಸಿದರೆ ಶೇ 8,93 ಮತ್ತು ಇದಕ್ಕೂ ಹಿಂದಿನ 2019 ವರ್ಷದಲ್ಲಿ ಶೇ 4.13 ರಷ್ಟು  ತುಂಬಾ ಕಡಿಮೆ ಇದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

***

 



(Release ID: 1728474) Visitor Counter : 188