ರೈಲ್ವೇ ಸಚಿವಾಲಯ

ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯಿಂದ ಜೂನ್|ನಲ್ಲಿ 660 ಹೆಚ್ಚುವರಿ ರೈಲುಗಳಳ ಸಂಚಾರಕ್ಕೆ ಅನುಮೋದನೆ


18.06.2021ಕ್ಕೆ ಅನ್ವಯವಾಗುವಂತೆ 983 ಮೇಲ್/ ಎಕ್ಸ್|ಪ್ರೆಸ್ ರೈಲುಗಳ ಕಾರ್ಯಾಚರಣೆ

Posted On: 18 JUN 2021 6:09PM by PIB Bengaluru

ದೇಶದೆಲ್ಲೆಡೆ ಕೊರೊನಾ ಸೋಂಕು ತಗ್ಗುತ್ತಿರುವ ನಡುವೆಯೇ, ಭಾರತೀಯ ರೈಲ್ವೆಯು ಸಾರ್ವಜನಿಕರಿಗೆ ಪ್ರಯಾಣಿಕ ಸೌಲಭ್ಯ ಒದಗಿಸಲು ಮುಂದಾಗಿದೆ. ನಿಟ್ಟಿನಲ್ಲಿ ಅದು ದೇಶದ ವಿವಿಧ ಭಾಗಗಳಿಗೆ ಹೆಚ್ಚಿನ ಸಂಖ್ಯೆಯ ವಿಶೇಷ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳುತ್ತಿದೆ. ವಲಸೆ ಕಾರ್ಮಿಕರು ಮತ್ತು ರೈಲು ಪ್ರಯಾಣಕ್ಕೆ ಕಾಯುತ್ತಿರುವವರ ಪಟ್ಟಿ ಏರಿಕೆ ಕಾಣುತ್ತಿರುವುದರಿಂದ, ಭಾರತೀಯ ರೈಲ್ವೆಯು ರೈಲುಗಳ ಸಂಚಾರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಕೋವಿಡ್-19 2ನೇ ಅಲೆ ಕಾಣಿಸಿಕೊಳ್ಳುವ ಮುನ್ನ ದೇಶಾದ್ಯಂತ ದಿನನಿತ್ಯ ಸರಾಸರಿ 1768 ಮೇಲ್/ಎಕ್ಸ್|ಪ್ರೆಸ್ ರೈಲುಗಳು ಸಂಚರಿಸುತ್ತಿದ್ದವು.

18.06.2021ಕ್ಕೆ ಅನ್ವಯವಾಗುವಂತೆ, ದಿನನಿತ್ಯ ಸುಮಾರು 983 ಮೇಲ್/ಎಕ್ಸ್|ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಕೋವಿಡ್-ಪೂರ್ವದ ಮಟ್ಟಕ್ಕೆ ಹೋಲಿಸಿದರೆ ಶೇಕಡ 56ರಷ್ಟು ಪ್ರಮಾಣ ಇದಾಗಿದೆ. ಆದರೆ ಇದೀಗ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ.

01.06.2021ಕ್ಕೆ ಅನ್ವಯವಾಗುವಂತೆ, ಸುಮಾರು 800 ಮೇಲ್/ಎಕ್ಸ್|ಪ್ರೆಸ್ ರೈಲುಗಳು ಕಾರ್ಯಾಚರಣೆಯಲ್ಲಿವೆ. 01.06.2021ರಿಂದ 18.06.2021 ವರೆಗೆ ಹೆಚ್ಚುವರಿ 660 ಮೇಲ್/ಎಕ್ಸ್|ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿದೆ.

ವಿವರ ಕೆಳಗಿನಂತಿದೆ.

ಕ್ರಮ ಸಂಖ್ಯೆ

ರೈಲ್ವೆ

ಮೇಲ್/ಎಕ್ಸ್|ಪ್ರೆಸ್ ವಿಶೇಷ ರೈಲು

ರಜೆ(ಹಾಲಿಡೇ) ವಿಶೇಷ ರೈಲುಗಳು

ಒಟ್ಟು

1

ಕೇಂದ್ರೀಯ ರೈಲ್ವೆ

24

2

26

2

ಪೂರ್ವ ಕೇಂದ್ರೀಯ ರೈಲ್ವೆ

10

8

18

3

ಪೂರ್ವ ರೈಲ್ವೆ

64

4

68

4

ಉತ್ತರ ಕೇಂದ್ರೀಯ ರೈಲ್ವೆ

16

0

16

5

ಈಶಾನ್ಯ ರೈಲ್ವೆ

32

6

38

6

ಈಶಾನ್ಯ ಪ್ರಾಂತೀಯ ರೈಲ್ವೆ

28

0

28

7

ಉತ್ತರ ರೈಲ್ವೆ

158

0

158

8

ವಾಯವ್ಯ ರೈಲ್ವೆ

32

2

34

9

ದಕ್ಷಿಣ ಕೇಂದ್ರೀಯ ರೈಲ್ವೆ

20

64

84

10

ಆಗ್ನೇಯ ಕೇಂದ್ರೀಯ ರೈಲ್ವೆ

16

0

16

11

ಆಗ್ನೇಯ ರೈಲ್ವೆ

44

16

60

12

ದಕ್ಷಿಣ ರೈಲ್ವೆ

66

4

70

13

ಪಶ್ಮಿಮ ಕೇಂದ್ರೀಯ ರೈಲ್ವೆ

28

0

28

14

ಪಶ್ಚಿಮ ರೈಲ್ವೆ

14

2

16

ಒಟ್ಟು

552

108

660

ಸ್ಥಳೀಯ ಪರಿಸ್ಥಿತಿ, ಟಿಕೆಟ್ಗಳ ಬೇಡಿಕೆ ಮತ್ತು ಪ್ರದೇಶದಲ್ಲಿನ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರೈಲುಗಳನ್ನು ಶ್ರೇಣೀಕೃತ ರೀತಿಯಲ್ಲಿ ಮರುಸ್ಥಾಪಿಸಲು ವಲಯ ರೈಲ್ವೆಗೆ ಸೂಚಿಸಲಾಗಿದೆ ಎಂಬುದು ಗಮನಾರ್ಹ ವಿಷಯವಾಗಿದೆ.

***



(Release ID: 1728370) Visitor Counter : 200