ರೈಲ್ವೇ ಸಚಿವಾಲಯ

ಆಮ್ಲಜನಕ ಎಕ್ಸ್ ಪ್ರೆಸ್ ನಿಂದ ರಾಷ್ಟ್ರಕ್ಕೆ 32000 ಎಂ.ಟಿ.ಗೂ ಅಧಿಕ  ಎಲ್.ಎಂ.ಒ. ಪೂರೈಕೆ


ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ದೇಶದ ದಕ್ಷಿಣದ ರಾಜ್ಯಗಳಿಗೆ 17600 ಎಂ.ಟಿ.ಗೂ ಅಧಿಕ  ಎಲ್.ಎಂ.ಒ. ಒದಗಣೆ

ದೇಶಾದ್ಯಂತ 443ಅಮ್ಲಜನಕ ಎಕ್ಸ್ ಪ್ರೆಸ್ ಗಳಿಂದ ಆಮ್ಲಜನಕ ಪೂರೈಕೆ ಪೂರ್ಣ

ಇದುವರೆಗೆ ಆಮ್ಲಜನಕ ಎಕ್ಸ್ ಪ್ರೆಸ್ ರೈಲುಗಳ  ಮೂಲಕ 1830  ಟ್ಯಾಂಕರ್ ಎಲ್.ಎಂ.ಒ. ಸಾಗಾಟ, ಮತ್ತು 15 ರಾಜ್ಯಗಳಿಗೆ ಪರಿಹಾರ ಲಭ್ಯ

ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ತಮಿಳುನಾಡಿನಲ್ಲಿ  5600 ಎಂ.ಟಿ.ಗೂ ಅಧಿಕ  ಎಲ್.ಎಂ.ಒ. ಇಳಿಕೆ

ತೆಲಂಗಾಣ,ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಿಗೆ ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ಅನುಕ್ರಮವಾಗಿ  3200, 4000 ಮತ್ತು 4100 ಎಂ.ಟಿ ಎಂ.ಎಲ್.ಒ. ಒದಗಣೆ

ಮಹಾರಾಷ್ಟ್ರದಲ್ಲಿ 614 ಎಂ.ಟಿ. ಆಮ್ಲಜನಕವನ್ನು ಇಳಿಸಲಾಗಿದ್ದರೆ, ಸುಮಾರು 3797 ಎಂ.ಟಿ.ಯನ್ನು ಉತ್ತರ ಪ್ರದೇಶದಲ್ಲಿ, 656 ಎಂ.ಟಿ.ಯನ್ನು ಮಧ್ಯ ಪ್ರದೇಶದಲ್ಲಿ, 5722 ಎಂ.ಟಿ. ಯನ್ನು ದಿಲ್ಲಿಯಲ್ಲಿ , 2354 ಎಂ.ಟಿ.ಯನ್ನು ಹರ್ಯಾಣಾದಲ್ಲಿ, 98 ಎಂ. ಟಿ.ಯಷ್ಟನ್ನು ರಾಜಸ್ಥಾನದಲ್ಲಿ,  4149 ಎಂ.ಟಿ.ಯನ್ನು ಕರ್ನಾಟಕದಲ್ಲಿ, 320 ಎಂ.ಟಿ.ಯನ್ನು ಉತ್ತರಾಖಂಡದಲ್ಲಿ, 5674 ಎಂ.ಟಿ.ಯನ್ನು ತಮಿಳುನಾಡಿನಲ್ಲಿ, 4036 ಎಂ.ಟಿ.ಯನ್ನು ಆಂಧ್ರ ಪ್ರದೇಶದಲ್ಲಿ, 225 ಎಂ.ಟಿ.ಯನ್ನು ಪಂಜಾಬಿನಲ್ಲಿ, 513 ಎಂ.ಟಿ.ಯನ್ನು ಕೇರಳದಲ್ಲಿ, 3255 ಎಂ.ಟಿ.ಯನ್ನು ತೆಲಂಗಾಣದಲ್ಲಿ, 38 ಎಂ.ಟಿ.ಯನ್ನು ಜಾರ್ಖಂಡದಲ್ಲಿ  ಮತ್ತ

Posted On: 17 JUN 2021 6:18PM by PIB Bengaluru

ಎಲ್ಲಾ ಅಡೆ ತಡೆಗಳನ್ನು ಮೀರಿ ಮತ್ತು ಹೊಸ ಪರಿಹಾರಗಳನ್ನು ಹುಡುಕಿ, ಭಾರತೀಯ ರೈಲ್ವೇಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್.ಎಂ..) ಪೂರೈಕೆ ಮಾಡಿ ತನ್ನ ಪರಿಹಾರ ತರುವ ಯಾನವನ್ನು ಮುಂದುವರೆಸಿದೆ.

ಆಮ್ಲಜನಕ ಎಕ್ಸ್ ಪ್ರೆಸ್ ರಾಷ್ಟ್ರಕ್ಕೆ ಸೇವೆ ಮಾಡುವ ನಿಟ್ಟಿನಲ್ಲಿ ಇದುವರೆಗೆ ಪೂರೈಸಿರುವ ದ್ರವೀಕೃತ ವೈದ್ಯಕೀಯ ಆಮ್ಲಜನಕ  (ಎಲ್.ಎಂ..) ಪ್ರಮಾಣ 32000 ಎಂ.ಟಿ. ದಾಟಿದೆ.

ಇದುವರೆಗೆ ಭಾರತೀಯ ರೈಲ್ವೇಯು 1830 ಕ್ಕೂ ಅಧಿಕ ಟ್ಯಾಂಕರ್ ಗಳಲ್ಲಿ  32017 ಎಂ.ಟಿ.ಗೂ ಅಧಿಕ  ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಿದೆ.

ಇದುವರೆಗೆ 443 ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಪ್ರಯಾಣ ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರ ತಂದಿವೆ ಎಂಬುದು ಗಮನಾರ್ಹ ಸಂಗತಿ. .

ದೇಶದ ದಕ್ಷಿಣದ ರಾಜ್ಯಗಳಿಗೆ  ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ 17600 ಎಂ.ಟಿ. ಗೂ ಅಧಿಕ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್.ಎಂ..) ಪೂರೈಕೆ ಮಾಡಲಾಗಿದೆ.

ಆಮ್ಲಜನಕ ಎಕ್ಸ್ ಪ್ರೆಸ್ 5600 ಎಂ.ಟಿ.ಗೂ ಅಧಿಕ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್.ಎಂ..) ವನ್ನು ತಮಿಳು ನಾಡು  ರಾಜ್ಯದಲ್ಲಿ ಇಳಿಸಿದೆ.

ತೆಲಂಗಾಣ,ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಿಗೆ ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ಅನುಕ್ರಮವಾಗಿ  3200, 4000 ಮತ್ತು 4100 ಎಂ.ಟಿ ಎಂ.ಎಲ್.. ಪೂರೈಕೆಯಾಗಿದೆ.

ಹೇಳಿಕೆ ಬಿಡುಗಡೆಯಾಗುವವರೆಗೆ 1 ಆಮ್ಲಜನಕ ಎಕ್ಸ್ ಪ್ರೆಸ್  78 ಎಂ.ಟಿ.ಗೂ ಅಧಿಕ ಪ್ರಮಾಣದ  ದ್ರವೀಕೃತ ಆಮ್ಲಜನಕವನ್ನು 4 ಟ್ಯಾಂಕರುಗಳಲ್ಲಿ ತುಂಬಿಕೊಂಡು ಪ್ರಯಾಣದಲ್ಲಿವೆ.

ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಪೂರೈಕೆ/ಸರಬರಾಜನ್ನು 54 ದಿನಗಳ ಹಿಂದೆ ಆರಂಭ ಮಾಡಿದ್ದವು ಎಂಬುದನ್ನಿಲ್ಲಿ ಸ್ಮರಿಸಬಹುದು. ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ  126 ಎಂ.ಟಿ. ಯಷ್ಟನ್ನು ಪೂರೈಕೆ  ಮಾಡಲಾಗಿತ್ತು.

ಕೋರಿಕೆ ಸಲ್ಲಿಸಿದ ರಾಜ್ಯಗಳಿಗೆ ಸಾದ್ಯ ಇರುವಷ್ಟು ಕಡಿಮೆ ಅವಧಿಯಲ್ಲಿ ಮತ್ತು ಸಾಧ್ಯ ಇರುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಎಲ್.ಎಂ..ವನ್ನು ಪೂರೈಕೆ ಮಾಡುವುದು ಭಾರತೀಯ ರೈಲ್ವೇಯ ಇರಾದೆಯಾಗಿದೆ.

ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣಾ, ತೆಲಂಗಾಣ, ಪಂಜಾಬ್, ಕೇರಳ, ದಿಲ್ಲಿ, ಉತ್ತರ ಪ್ರದೇಶ ಜಾರ್ಖಂಡ ಮತ್ತು ಅಸ್ಸಾಂ ಸಹಿತ 15 ರಾಜ್ಯಗಳಿಗೆ ಆಮ್ಲಜನಕ ಪರಿಹಾರ ತಲುಪಿದೆ.

ಪ್ರಕಟಣೆ ಹೊರಡಿಸುವವರೆಗೆ ಮಹಾರಾಷ್ಟ್ರದಲ್ಲಿ 614 ಎಂ.ಟಿ. ಆಮ್ಲಜನಕವನ್ನು ಇಳಿಸಲಾಗಿದ್ದರೆ, ಸುಮಾರು 3797 ಎಂ.ಟಿ.ಯನ್ನು ಉತ್ತರ ಪ್ರದೇಶದಲ್ಲಿ, 656 ಎಂ.ಟಿ.ಯನ್ನು ಮಧ್ಯ  ಪ್ರದೇಶದಲ್ಲಿ, 5722 ಎಂ.ಟಿ. ಯನ್ನು ದಿಲ್ಲಿಯಲ್ಲಿ , 2354 ಎಂ.ಟಿ.ಯನ್ನು ಹರ್ಯಾಣಾದಲ್ಲಿ, 98 ಎಂ.ಟಿ.ಯಷ್ಟನ್ನು ರಾಜಸ್ಥಾನದಲ್ಲಿ, 4149 ಎಂ.ಟಿ.ಯನ್ನು ಕರ್ನಾಟಕದಲ್ಲಿ, 320 ಎಂ.ಟಿ.ಯನ್ನು ಉತ್ತರಾಖಂಡದಲ್ಲಿ, 5674 ಎಂ.ಟಿ.ಯನ್ನು ತಮಿಳುನಾಡಿನಲ್ಲಿ, 4036 ಎಂ.ಟಿ.ಯನ್ನು ಆಂಧ್ರ ಪ್ರದೇಶದಲ್ಲಿ, 225 ಎಂ.ಟಿ.ಯನ್ನು ಪಂಜಾಬಿನಲ್ಲಿ, 513 ಎಂ.ಟಿ.ಯನ್ನು ಕೇರಳದಲ್ಲಿ, 3255  ಎಂ.ಟಿ.ಯನ್ನು ತೆಲಂಗಾಣದಲ್ಲಿ, ಮತ್ತು 38 ಎಂ.ಟಿ.ಯನ್ನು ಜಾರ್ಖಂಡದಲ್ಲಿ, 560 ಎಂ.ಟಿ.ಯನ್ನು ಅಸ್ಸಾಂನಲ್ಲಿ ಇಳಿಕೆ ಮಾಡಲಾಗಿದೆ.

ಇದುವರೆಗೆ ಆಮ್ಲಜನಕ ಎಕ್ಸ್ ಪ್ರೆಸ್ ಗಳು ದೇಶಾದ್ಯಂತ 15 ರಾಜ್ಯಗಳ ಸುಮಾರು 39 ನಗರಗಳಲ್ಲಿ/ಪಟ್ಟಣಗಳಲ್ಲಿ ಎಲ್.ಎಂ.. ವನ್ನು ಇಳಿಸಿವೆ. ಅವುಗಳೆಂದರೆ ಉತ್ತರ ಪ್ರದೇಶದ ಲಕ್ನೋ, ವಾರಾಣಾಸಿ, ಕಾನ್ಪುರ, ಬರೇಲಿ, ಗೋರಖ್ ಪುರ ಮತ್ತು ಆಗ್ರಾ, ಮಧ್ಯ ಪ್ರದೇಶದ ಸಾಗರ, ಜಬಲ್ಪುರ, ಕತ್ನಿ ಮತ್ತು ಬೋಪಾಲ್, ಮಹಾರಾಷ್ಟ್ರದ ನಾಗಪುರ, ನಾಶಿಕ್, ಪುಣೆ, ಮುಂಬಯಿ, ಮತ್ತು ಸೋಲಾಪುರ, ತೆಲಂಗಾಣದಲ್ಲಿ ಹೈದರಾಬಾದ್, ಹರ್ಯಾಣಾದಲ್ಲಿ ಫರಿದಾಬಾದ್ ಮತ್ತು ಗುರುಗ್ರಾಮ, ದಿಲ್ಲಿಯಲ್ಲಿ ತುಘಲಕಾಬಾದ್, ದಿಲ್ಲಿ ಕಂಟೋನ್ಮೆಂಟ್ ಮತ್ತು ಓಕ್ಲಾ, ರಾಜಸ್ಥಾನದಲ್ಲಿ ಕೋಟಾ ಮತ್ತು ಕನಕಪಾರಾ, ಕರ್ನಾಟಕದಲ್ಲಿ ಬೆಂಗಳೂರು, ಉತ್ತರಾಖಂಡದಲ್ಲಿ ಡೆಹ್ರಾಡೂನ್, ಆಂಧ್ರಪ್ರದೇಶದಲ್ಲಿ ನೆಲ್ಲೂರು, ಗುಂಟೂರು, ತಾಡಿಪತ್ರಿ, ಮತ್ತು ವಿಶಾಖಪಟ್ಟಣಂ, ಕೇರಳದ ಎರ್ನಾಕುಲಂ, ತಮಿಳುನಾಡಿನಲ್ಲಿ ತಿರುವಲ್ಲೂರ್, ಚೆನ್ನೈ, ಟ್ಯುಟಿಕೋರಿನ್, ಕೊಯಮುತ್ತೂರು, ಮತ್ತು ಮಧುರೈ, ಪಂಜಾಬಿನ ಭಟಿಂಡಾ ಮತ್ತು ಫಿಲ್ಲೌರ್, ಅಸ್ಸಾಂನ ಕಾಮರೂಪ ಮತ್ತು ಜಾರ್ಖಂಡದ ರಾಂಚಿ.

ಭಾರತೀಯ ರೈಲ್ವೇಯು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ವಿವಿಧ ಮಾರ್ಗಗಳ ನಕ್ಷೆಯನ್ನು ಸಿದ್ಧ ಮಾಡಿಟ್ಟುಕೊಂಡಿದೆ. ಮತ್ತು ಯಾವುದೇ ಸಂಭಾವ್ಯ ಸ್ಥಿತಿಯಲ್ಲಿ ರಾಜ್ಯಗಳ ಬೇಡಿಕೆಯನ್ನು ಈಡೇರಿಸಲು ತಯಾರಾಗಿದೆ. ರಾಜ್ಯಗಳು ಎಲ್.ಎಂ.. ತರಲು ಭಾರತೀಯ ರೈಲ್ವೇಗೆ ಟ್ಯಾಂಕರುಗಳನ್ನು ಒದಗಿಸಿಕೊಡುತ್ತವೆ.

ದೇಶಾದ್ಯಂತ ಓಡಾಟ ನಡೆಸುವ ಭಾರತೀಯ ರೈಲ್ವೇಯು ಪಶ್ಚಿಮದಲ್ಲಿ ಹಪಾ, ಬರೋಡಾ, ಮುಂದ್ರಾ ಮತ್ತು ಪೂರ್ವದಲ್ಲಿ ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಅಂಗುಲ್ ಗಳಿಂದ ಆಮ್ಲಜನಕ ಪಡೆದುಕೊಂಡು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳು ನಾಡು, ಹರ್ಯಾಣಾ, ತೆಲಂಗಾಣ, ಪಂಜಾಬ್, ಕೇರಳ, ದಿಲ್ಲಿ, ಉತ್ತರ ಪ್ರದೇಶ, ಮತ್ತು ಅಸ್ಸಾಂ ರಾಜ್ಯಗಳಿಗೆ ಅತ್ಯಂತ ಸಂಕೀರ್ಣ ಕಾರ್ಯಾಚರಣಾ ಮಾರ್ಗಗಳನ್ನು ಯೋಜಿಸಿ  ಸರಬರಾಜು ಮಾಡುತ್ತದೆ.

ಸಾದ್ಯ ಇರುವಷ್ಟು ತ್ವರಿತವಾಗಿ ಆಮ್ಲಜನಕ ಪರಿಹಾರ ತಲುಪಿಸುವ ಇರಾದೆಯಿಂದ, ರೈಲ್ವೇಯು ಹೊಸ ಗುಣಮಟ್ಟಗಳನ್ನು ರೂಪಿಸಿದೆ ಮತ್ತು ಆಮ್ಲಜನಕ ಎಕ್ಸ್ ಪ್ರೆಸ್ ಸರಕು ಸಾಗಣೆ ರೈಲುಗಳನ್ನು ಓಡಿಸುವಲ್ಲಿ ಅಭೂತಪೂರ್ವ ಗುಣಮಾನಕಗಳನ್ನು ಅಳವಡಿಸಿಕೊಂಡಿದೆ. ಸಂಕೀರ್ಣ ಸರಕು ಸಾಗಾಣಿಕೆ ರೈಲುಗಳ ಸರಾಸರಿ ವೇಗವು ದೂರ ಪ್ರಯಾಣ ಮಾರ್ಗದಲ್ಲಿ 55 ಕ್ಕಿಂತ ಹೆಚ್ಚಿರುತ್ತದೆ. ಗರಿಷ್ಟ ಆದ್ಯತೆಯ ಹಸಿರು ಕಾರಿಡಾರಿನಲ್ಲಿ ರೈಲುಗಳು ಓಡಾಡುತ್ತವೆ. ಅತ್ಯಂತ ಜರೂರು ಎಂಬ ಸೂಕ್ಷ್ಮತ್ವದೊಂದಿಗೆ, ವಿವಿಧ ವಲಯಗಳ ಕಾರ್ಯಾಚರಣಾ ತಂಡಗಳು ಆಮ್ಲಜನಕವನ್ನು ಸಾಧ್ಯವಾದಷ್ಟು ಅತ್ಯಂತ ತ್ವರಿತಗತಿಯಿಂದ ಸರಬರಾಜು ಮಾಡಲು ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಹಗಲು ರಾತ್ರಿ ಕಾರ್ಯನಿರತವಾಗಿವೆ. ವಿವಿಧ ವಿಭಾಗಗಳಲ್ಲಿ ಚಾಲಕ ಸಿಬ್ಬಂದಿ ಬದಲಾವಣೆಗಾಗಿರುವ ಕಾಲಾವಕಾಶವನ್ನು 1 ನಿಮಿಷಕ್ಕೆ ಇಳಿಕೆ ಮಾಡಿ, ತಾಂತ್ರಿಕ ನಿಲುಗಡೆಗಳನ್ನು ನೀಡಲಾಗುತ್ತಿದೆ.

ರೈಲು ಮಾರ್ಗಗಳನ್ನು ಮುಕ್ತವಾಗಿಡಲಾಗಿದ್ದು, ಆಮ್ಲಜನಕ ಎಕ್ಸ್ ಪ್ರೆಸ್ ಅಡೆ ತಡೆ ಇಲ್ಲದೆ ಸಾಗುವುದನ್ನು ಖಾತ್ರಿಪಡಿಸಲು ಗರಿಷ್ಟ ಜಾಗೃತಿಯನ್ನು ಘೋಷಿಸಿ, ಅದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.

ಇದನ್ನೆಲ್ಲ ಇತರ ಸರಕು ಕಾರ್ಯಾಚರಣೆಯ ವೇಗ ಕುಂಠಿತವಾಗದಂತೆ ನೋಡಿಕೊಂಡು ಮಾಡಲಾಗುತ್ತಿದೆ.

ಹೊಸ ಆಮ್ಲಜನಕ ಎಕ್ಸ್ ಪ್ರೆಸ್ ಗಳನ್ನು ಓಡಿಸುವುದು ಅತ್ಯಂತ ಚಲನಶೀಲ ಕಾರ್ಯಾಚರಣೆಯಾಗಿರುತ್ತದೆ. ಮತ್ತು ಅಂಕಿ ಅಂಶಗಳನ್ನು ಸದಾ ಕಾಲ ಸಕಾಲಿಕಗೊಳಿಸಲಾಗುತ್ತದೆ. ಇನ್ನಷ್ಟು ಆಮ್ಲಜನಕ ಎಕ್ಸ್ ಪ್ರೆಸ್ ಗಳು ಇಂದು ತಡರಾತ್ರಿ ತಮ್ಮ ಯಾನ ಆರಂಭಿಸುವ ನಿರೀಕ್ಷೆ ಇದೆ

***


(Release ID: 1728091) Visitor Counter : 149