ಪ್ರವಾಸೋದ್ಯಮ ಸಚಿವಾಲಯ

ಪ್ರವಾಸೋದ್ಯಮ ಸಚಿವಾಲ ಮತ್ತು ಕ್ಷೇತ್ರೀಯ ಕಚೇರಿಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಆನ್ ಲೈನ್ ಮೂಲಕ ಒಂದು ವಾರ 2021 ರ ಅಂತಾರಾಷ್ಟ್ರೀಯ ಯೋಗ ದಿನ - ಐಡಿವೈ ಆಚರಣೆ


ವೆಬಿನಾರ್ ಮೂಲಕ 2021 ರ ಜೂನ್ 19 ರಂದು “ರೋಗ ನಿರೋಧಕ ಶಕ್ತಿಗಾಗಿ ಯೋಗ” ಆಯೋಜನೆ

Posted On: 17 JUN 2021 6:59PM by PIB Bengaluru

ಭಾರತ ಅನೇಕ ಪುರಾತನ ಕ್ಷೇಮ ಕಲಾ ಪ್ರಕಾರಗಳ ನಿಧಿಯಾಗಿದ್ದು, ಯೋಗ ದೇಶದ ಪ್ರಾಚೀನ ಸಂಪ್ರದಾಯಗಳು, ಗುಣಪಡಿಸುವ, ಪ್ರಗತಿ ಮತ್ತು ಸ್ವಯಂ ಸಾಕ್ಷಾತ್ಕಾರವನ್ನು ಗುರಿಯಾಗಿಸಿಕೊಂಡಿರುವ ಹಳೆಯ ತಂತ್ರಗಳ ನಿಧಿಯಾಗಿದೆ. ಯೋಗ ಆರೋಗ್ಯಕರ ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ವಿಧಾನವಾಗಿದೆ. ಇಂದಿನ ಸನ್ನಿವೇಶದಲ್ಲಿ ಜಾಗತಿಕವಾಗಿ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮ ಪರ್ಯಾಯಗಳಲ್ಲಿ ಯೋಗ ಕೂಡ ಒಂದಾಗಿದೆಆಸನಗಳ ಮೂಲಕ ಯೋಗ ಮಾಡುವ ಜತೆಗೆ ಮನಸ್ಸು, ದೇಹ, ಆತ್ಮದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಪ್ರಾಣಯಾಮ ಸಹ ಸಹಾಯಮಾಡುತ್ತದೆ.

2015 ರಿಂದ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು [.ಡಿ.ವೈ] ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಸಚಿವಾಲಯ ಮತ್ತದರ ದೇಶೀಯ ಮತ್ತು ಸಾಗರೋತ್ತರ ಕ್ಷೇತ್ರೀಯ ಕಚೇರಿಗಳಲ್ಲಿ ದೊಡ್ಡ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಸಂದರ್ಭದಲ್ಲಿ ಪತ್ರಕರ್ತರು, ಪ್ರಭಾವಿಗಳು, ಪ್ರವಾಸಗಳನ್ನು ಆಯೋಜಿಸುವವರು ಮತ್ತಿತರರನ್ನೊಳಗೊಂಡಂತೆ ಯೋಗಕ್ಕೆ ಮೀಸಲಾದ ವಿವರಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆಈಗಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಯಾಣ  ಮಾಡುವುದು ಸೂಕ್ತವಲ್ಲ. ಹೀಗಾಗಿ  ಆಯುಷ್ ಸಚಿವಾಲಯದ ಮನೆಯಲ್ಲಿ ಇದ್ದು ಯೋಗ ಆಚರಿಸಿಘೋಷವಾಕ್ಯದಂತೆ ಪ್ರವಾಸೋದ್ಯಮ ಸಚಿವಾಲಯ ಮತ್ತದರ ಭಾರತ, ಸಾಗರೋತ್ತರ ಕ್ಷೇತ್ರೀಯ ಕಚೇರಿಗಳಲ್ಲಿ ಆನ್ ಲೈನ್ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ

ಪ್ರವಾಸೋದ್ಯಮ ಸಚಿವಾಲಯ ಯೋಗವನ್ನು ಸ್ವಾಸ್ಥ್ಯ ಪ್ರವಾಸೋದ್ಯಮ ಮತ್ತು ಆದ್ಯಾತ್ಮಿಕ ಪ್ರವಾಸೋದ್ಯಮದ ಸಂಯೋಜನೆಯಾಗಿ ಉತ್ತೇಜಿಸುತ್ತಿದ್ದು, ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದೆಒಂದು ವಾರದ ಯೋಗ ಆಚರಣೆಯಲ್ಲಿ ಯೋಗದ ಮಹತ್ವವನ್ನು ಪ್ರದರ್ಶಿಸುವ ಭಿತ್ತಿ ಚಿತ್ರಗಳು, ಚಿತ್ರಗಳು, ವಿಡಿಯೋಗಳನ್ನು ಸಚಿವಾಲಯದ ವಿವಿಧ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಪ್ರದರ್ಶಿಸುತ್ತಿದೆ. ಯೋಗ ತಮ್ಮ ಜೀವನದಲ್ಲಿ ಹೇಗೆ ಪರಿವರ್ತನೆ ತಂದಿದೆ ಎನ್ನುವ ಕುರಿತು ಯೋಗ ಶಿಕ್ಷಕರು. ಬ್ಲಾಗರ್ಸ್ ಗಳು, ಪ್ರಭಾವಿಗಳ ಅನುಭವಗಳನ್ನು ನೇರ ಆನ್ ಲೈನ್ ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡಲು ಪ್ರವಾಸೋದ್ಯಮ ಸಚಿವಾಲಯ ಕಾರ್ಯಕ್ರಮಗಳನ್ನು ರೂಪಿಸಿದೆ.

ವರ್ಷದ ಮನೆಯಲ್ಲಿ ಇದ್ದು ಯೋಗ ಆಚರಿಸಿಎಂಬ ಘೋಷವಾಕ್ಯದಡಿ ಪ್ರವಾಸೋದ್ಯಮ ಸಚಿವಾಲಯ ರೋಗ ನಿರೋಧಕ ಶಕ್ತಿಗಾಗಿ ಯೋಗಕುರಿತು 2021 ಜೂನ್ 19 ರಂದು ಶನಿವಾರ ಬೆಳಿಗ್ಗೆ 11.00 ಗಂಟೆಗೆ ಈಶಾ ಪ್ರತಿಷ್ಠಾನದೊಂದಿಗೆ ವೆಬಿನಾರ್ ಆಯೋಜಿಸಿದೆ. ವೆಬಿನಾರ್ ನಲ್ಲಿ ಈಶಾ ಪ್ರತಿಷ್ಠಾನದ ಯೋಗ ತಜ್ಞರು ಸಿಂಹ ಕ್ರಿಯಾ ಯೋಗ, ರೋಗ ನಿರೋಧಕ ಶಕ್ತಿ ಸುಧಾರಣೆ ಮತ್ತು ಒಟ್ಟಾರೆ ಬಲವರ್ಧನೆಗೆ ಸರಳ ಮತ್ತು ಶಕ್ತಿಯುತ ಯೋಗ ಪ್ರದರ್ಶನ ಮಾಡಲಿದ್ದಾರೆ

ಪ್ರವಾಸೋದ್ಯಮ ಸಚಿವಾಲಯದ ದೇಶೀಯ ಮತ್ತು ಸಾಗರೋತ್ತರ ಕ್ಷೇತ್ರೀಯ ಕಚೇರಿಗಳಲ್ಲಿ ಸಮಾಜದ ಎಲ್ಲಾ ವರ್ಗಗಳು ಮತ್ತು ಎಲ್ಲಾ ವಯೋಮಾನದವರಲ್ಲಿ ಯೋಗದ ಮಹತ್ವ, ಮತ್ತು ಜೀವನ ಶೈಲಿಯಲ್ಲಿ ಯೋಗ ಹೇಗೆ ಆರೋಗ್ಯಪೂರ್ಣ ಎನ್ನುವ ಕುರಿತು ಅರಿವು ಮೂಡಿಸಲು ವಿವಿಧ ವಲಯಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ದೈನಂದಿನ ಬದುಕಿನಲ್ಲಿ ಯೋಗದ ಮಹತ್ವ, ಆನ್ ಲೈನ್ ಪ್ರಬಂಧ, ದೈನಂದಿನ ಬದುಕಿನಲ್ಲಿ ಯೋಗದ ಮಹತ್ವ, ರಸಪ್ರಶ್ನೆ, ಚಿತ್ರಕಲೆ, ಯೋಗ ಭಿತ್ತಿಪತ್ರ ವಿನ್ಯಾಸ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ, ಯೋಗಾಸದ ನೇರ ಪ್ರದರ್ಶನವಿರುವ ವೆಬಿನಾರ್ ಗಳು, ಯೋಗ ಪುಸ್ತಕ ಮತ್ತು ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಿಸ್ಮಯ ಭಾರತವನ್ನು ಅನುಸರಿಸಿ:

ಇನ್ಸ್ಟಾಗ್ರಾಮ್: https://instagram.com/incredibleindia?igshid=v02srxcbethv

ಟ್ವಿಟರ್: https://twitter.com/incredibleindia?s=21

ಫೇಸ್ ಬುಕ್: https://www.facebook.com/incredibleindia/

ಲಿಂಕ್ಡಿನ್: https://www.linkedin.com/company/incredibleindia

ವೆಬ್ ಸೈಟ್: https://www.incredibleindia.org/

ಯೂಟ್ಯೂಬ್: https://www.youtube.com/channel/UCMxJPchGLE_CJ1MJbJy-xDQ

***


(Release ID: 1728077) Visitor Counter : 201