ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ದೇಶಾದ್ಯಂತ ಪಿಯುಸಿ [ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ] ವಿತರಣೆಗೆ ಸಾಮಾನ್ಯ ವಿಧಾನ ಜಾರಿಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಅಧಿಸೂಚನೆ

Posted On: 17 JUN 2021 1:05PM by PIB Bengaluru

ದೇಶಾದ್ಯಂತ ಪಿಯುಸಿ [ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ] ವಿತರಣೆಗಾಗಿ ಸಾಮಾನ್ಯ ವಿಧಾನ ಜಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 1989 ಕೇಂದ್ರ ಮೋಟಾರು ವಾಹನ ನಿಯಮಗಳಡಿ ಅಧಿಸೂಚನೆ ಹೊರಡಿಸಿದೆ. ಇದರ ಪ್ರಮುಖ ಅಂಶಗಳು ಕೆಳಕಂಡಂತಿದೆ.

[] ದೇಶಾದ್ಯಂತ ಏಕರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ [ಪಿಯುಸಿ] ವಿತರಣೆ ಮತ್ತು ರಾಷ್ಟ್ರೀಯ ನೋಂದಣಿ ದತ್ತಾಂಶದಲ್ಲಿ ಪಿಯುಸಿ ಜೋಡಣೆ

[ಬಿ] ಇದೇ ಮೊದಲ ಬಾರಿಗೆ ನಿರಾಕರಣೆ ಮಾಡುವ ಚೀಟಿಯ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆಪರೀಕ್ಷಾ ಫಲಿತಾಂಶದ ಮೌಲ್ಯ ಅನುಮತಿಸುವ ಗರಿಷ್ಠ ಮೌಲ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ವಾಹನ ಮಾಲೀಕರಿಗೆ ನಿರಾಕರಣೆಯ ಚೀಟಿ ನೀಡಲು ಅವಕಾಶ ಕಲ್ಪಿಸಿದ್ದು, ಸಂಬಂಧಿಸಿದ ಮಾಲಿನ್ಯ ಮಾನದಂಡಗಳಲ್ಲಿ ಇದು ಕಡ್ಡಾಯವಾಗಿದೆವಾಹನಗಳನ್ನು ಸರ್ವೀಸ್ ಮಾಡಿಸುವಾಗ ದಾಖಲೆಗಳನ್ನು  ಪ್ರದರ್ಶಿಸಬಹುದು ಅಥವಾ ಪಿಯುಸಿ ಕೇಂದ್ರ ಉತ್ತಮವಾಗಿ ಕೆಲಸ ಮಾಡದಿದ್ದರೆ ಮತ್ತೊಂದು ಕೇಂದ್ರದಲ್ಲಿ ಪರೀಕ್ಷೆ ಮಾಡಿಸುವಾಗ ಇದನ್ನು ತೋರಿಸಬಹುದು

[ಸಿ] ಮಾಹಿತಿಯ ಗೋಪ್ಯತೆ ಇರುತ್ತದೆ.

[i] ವಾಹನ ಮಾಲೀಕರ ಮೊಬೈಲ್ ಸಂಖ್ಯೆ, ಹೆಸರು ಮತ್ತು ವಿಳಾಸ

[ii] ಎಂಜಿನ್ ಸಂಖ್ಯೆ ಮತ್ತು ಚಾಸ್ಸಿ ಸಂಖ್ಯೆ (ವಾಹನದ ಕೊನೆಯ ನಾಲ್ಕು ಡಿಜಿಟ್ ಸಂಖ್ಯೆ ಮಾತ್ರ ಕಾಣುವಂತೆ, ಇತರೆ ಡಿಜಿಟ್ ಸಂಖ್ಯೆಯನ್ನು ಮರೆ ಮಾಚಬೇಕಾಗುತ್ತದೆ)

[ಡಿ] ಮಾಲೀಕರ ಮೊಬೈಲ್ ಸಂಖ್ಯೆ ಕಡ್ಡಾಯವಾಗಿರಬೇಕು, ಶುಲ್ಕ ಮತ್ತು ಯಾವಾಗ ಅವಧಿ ಕೊನೆಗೊಳ್ಳುತ್ತದೆ ಎನ್ನುವ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ಕಳುಹಿಸಲಾಗುತ್ತದೆ.

[]   ಮೋಟಾರು ವಾಹನವು ಮಾಲಿನ್ಯ ಹೊರಸೂಸುವ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಜಾರಿಗೊಳಿಸುವ ಅಧಿಕಾರಿ ಚಾಲಕ ಅಥವಾ ವಾಹನದ ಉಸ್ತುವಾರಿ ಹೊಂದಿರುವ ಯಾವುದೇ ವ್ಯಕ್ತಿಗೆ ನಿರ್ದೇಶನ ನೀಡಲು ಲಿಖಿತ ಅಥವಾ ವಿದ್ಯುನ್ಮಾನ ಮಾದರಿ ಮೂಲಕ ಸಂವಹನ ಮಾಡಬಹುದಾಗಿದ್ದು, ಅಧಿಕೃತ ಮಾಲಿನ್ಯ ನಿಯಂತ್ರಣ ಪರೀಕ್ಷಾ [ಪಿಯುಸಿ] ಕೇಂದ್ರಗಳಲ್ಲಿ ಯಾವುದಾದರೂ ಒಂದು ಕಡೆ ಪರೀಕ್ಷೆ ಮಾಡಿಸಬಹುದಾಗಿದೆ. ವಾಹನದ ಚಾಲಕ ಅಥವಾ ಉಸ್ತುವಾರಿ ವ್ಯಕ್ತಿಯು ವಾಹನದ ಸುಸ್ಥಿತಿ ದಾಖಲೆಗಳನ್ನು ಸಲ್ಲಿಸಲು ವಿಫಲವಾದಲ್ಲಿ ಅಥವಾ ವಾಹನ ಸುಸ್ಥಿತಿಯಲ್ಲಿದ್ದರೆ ದಂಡ ಪಾವತಿಸಲು ಮಾಲೀಕರು ಜವಾಬ್ದಾರರಾಗಿರುತ್ತಾರೆವಾಹನ ಮಾಲೀಕರು ದಂಡ ಪಾವತಿಸಲು ವಿಫಲವಾದಲ್ಲಿ ನೋಂದಣಿ ಪ್ರಾಧಿಕಾರ ಕಾರಣವನ್ನು ಬರವಣಿಗೆ ಮೂಲಕ ದಾಖಲಿಸಿ, ವಾಹನದ ನೋಂದಣಿ ಪ್ರಮಾಣ ಪತ್ರವನ್ನು  ಅಮಾನತ್ತಿನಲ್ಲಿಡಬಹುದು ಮತ್ತು ಮಾಲಿನ್ಯ ನಿಯಂತ್ರಣದಲ್ಲಿದೆ ಎನ್ನುವ ಪ್ರಮಾಣ ಪತ್ರ ಸಲ್ಲಿಸುವ ತನಕ ಯಾವುದೇ ಅನುಮತಿ ನೀಡುವಂತಿಲ್ಲ.

[ಎಫ್] ಇದು ಐಟಿ ಆಧರಿತ ಜಾರಿ ಕ್ರಮವಾಗಿದೆ ಮತ್ತು ಮಾಲಿನ್ಯಕಾರಕ ವಾಹನಗಳ ಮೇಲೆ ಉತ್ತಮ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.  

[ಜಿ] ನಮೂನೆಯಲ್ಲಿ ಕ್ಯೂಆರ್ ಸಂಹಿತೆಯನ್ನು ಮುದ್ರಿಸಲಾಗಿದೆ. ಪಿಯುಸಿ ಕೇಂದ್ರದ ಸಂಪೂರ್ಣ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ.

***


(Release ID: 1728018) Visitor Counter : 266