ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಖಾದ್ಯ ತೈಲಗಳ ಬೆಲೆ ಇಳಿಕೆ ಆರಂಭ ಮತ್ತು ತರುತ್ತಿದೆ ಗ್ರಾಹಕರಿಗೆ ಪರಿಹಾರ


ಕೆಲವು ವರ್ಗಗಳಲ್ಲಿ ಬಹುತೇಕ ಶೇ 20 ರಷ್ಟು ದರ ಇಳಿಕೆ

ಸಮಸ್ಯೆಗೆ ಸ್ಥಿರವಾದ ಪರಿಹಾರ ಕಂಡುಕೊಳ್ಳಲು ಮಧ್ಯಕಾಲೀನ ಮತ್ತು ದೀರ್ಘಾವಧಿಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾದ ಸರ್ಕಾರ

ಖಾದ್ಯ ತೈಲದ ಬೆಲೆಗಳು ಅಂತಾರಾಷ್ಟ್ರೀಯ ದರ ಮತ್ತು ದೇಶೀಯ ಉತ್ಪಾದನೆ ಒಳಗೊಂಡಿರುವ ಸಂಕಿರ್ಣ ಅಂಶಗಳ ಮೇಲೆ ಅವಲಂಬಿತ

Posted On: 16 JUN 2021 4:47PM by PIB Bengaluru

ಭಾರತದಲ್ಲಿ ಖಾದ್ಯ ತೈಲ ಬೆಲೆಗಳು ವ್ಯಾಪಕವಾಗಿ ಇಳಿಕೆಯಾಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಗ್ರಾಹಕ ವ್ಯಹಾರಗಳ ಸಚಿವಾಲಯದಿಂದ ದೊರೆತಿರುವ ಮಾಹಿತಿ ಪ್ರಕಾರ ಕಳೆದ ಒಂದು ತಿಂಗಳಿಂದ ಖಾದ್ಯ ತೈಲ ದರಗಳು ಇಳಿಕೆಯಾಗುತ್ತಿದೆ. ಆದರೆ ಕೆಲವು ಪ್ರಕರಣಗಳಲ್ಲಿ ಶೇ 20 ರಷ್ಟು ದರ ತಗ್ಗಿದ್ದು, ಮುಂಬೈ ಮಾರುಕಟ್ಟೆಯಲ್ಲಿ ಇದು ಗೋಚರವಾಗಿದೆ.

2021 ರ ಮೇ 7 ರಂದು ತಾಳೇ ಎಣ‍್ಣೆ ದರ 142 ರೂಪಾಯಿ ಇತ್ತು, ಇದೀಗ 115 ಕ್ಕೆ ತಗ್ಗಿದೆ. ಶೇ 19 ರಷ್ಟು ಇಳಿಕೆಯಾಗಿದೆ.

ಸೂರ್ಯಕಾಂತಿ ಎಣ‍್ಣೆ 21 ರ ಮೇ 5 ರಂದು 188 ರೂಪಾಯಿ ಇತ್ತು, ಈಗ 157 ರೂಪಾಯಿಗೆ ಇಳಿಕೆಯಾಗಿದೆ, ಶೇ 16 ರಷ್ಟು ತಗ್ಗಿದೆ.

ಸೋಯಾ ಎಣ್ಣೆ 21 ರ ಮೇ 20 ರಂದು 162 ರೂಪಾಯಿ ಇತ್ತು. ಈಗ ಮುಂಬೈನಲ್ಲಿ 138 ಕ್ಕೆ ಇಳಿಕೆಯಾಗಿದೆ. ಶೇ 15 ರಷ್ಟು ಕಡಿಮೆಯಾಗಿದೆ.

ಸಾಸಿವೆ ಎಣ‍್ಣೆ 21 ರ ಮೇ 16 ರಂದು 175 ರೂಪಾಯಿ ಇತ್ತು, ಇದೀಗ 157 ರೂಪಾಯಿಯಾಗಿದ್ದು, ಶೇ 10 ರಷ್ಟು ಇಳಿಕೆ ಕಂಡಿದೆ.

ಕಡಲೆಕಾಯಿ ಎಣ್ಣೆ 21 ರ ಮೇ 14 ರಂದು 190 ರೂಪಾಯಿಯಷ್ಟಾಗಿತ್ತು. ಇದೀಗ ಶೆ 8 ರಷ್ಟು ತಗ್ಗಿದ್ದು, 174 ರೂಪಾಯಿಗೆ ಇಳಿಕೆಯಾಗಿದೆ.

ವನಸ್ಪತಿ ದರ 21 ರ ಮೇ 2 ರಂದು 154 ರೂಪಾಯಿಯಷ್ಟಿತ್ತು. ಇದೀಗ 141 ರೂಪಾಯಿಗೆ ಇಳಿದಿದ್ದು, ಶೇ 8 ರಷ್ಟು ಕಡಿಮೆಯಾಗಿದೆ.

ಖಾದ್ಯ ತೈಲದ ಬೆಲೆಗಳು ಅಂತಾರಾಷ್ಟ್ರೀಯ ದರ ಮತ್ತು ದೇಶೀಯ ಉತ್ಪಾದನೆ ಒಳಗೊಂಡಿರುವ ಸಂಕಿರ್ಣ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಗಮನಿಸಬೇಕು. ದೇಶೀಯ ಬಳಕೆ ಮತ್ತು ಉತ್ಪಾದನೆಯ ನಡುವೆ ಅಂತರ ಹೆಚ್ಚಿದ್ದು, ಗಮನಾರ್ಹ ಪ್ರಮಾಣದಲ್ಲಿ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಮಧ್ಯಕಾಲೀನ ಮತ್ತು ದೀರ್ಘಾವಧಿಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ  ಕಾರ್ಯೋನ್ಮುಖವಾಗಿದೆ.

ಭಾರತದಲ್ಲಿ ಅಡುಗೆ ತಯಾರಿಸಲು ಖಾದ್ಯ ತೈಲ ಪ್ರಮುಖ ಅಂಶವಾಗಿದ್ದು, ಈ ಕ್ರಮಗಳು ಖಾದ್ಯ ತೈಲದಲ್ಲಿ ಸ್ವಾವಲಂಬಿ ಭಾರತವಾಗಲು ಕೊಡುಗೆ ನೀಡುತ್ತವೆ.

***
 



(Release ID: 1727837) Visitor Counter : 202