ಪ್ರಧಾನ ಮಂತ್ರಿಯವರ ಕಛೇರಿ

ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಜೊತೆ ಪ್ರಧಾನ ಮಂತ್ರಿ ಅವರ ಅಚ್ಚರಿಯ ಸಂವಾದದ ಇಂಗ್ಲೀಷ್ ಅವತರಣಿಕೆ

ಪ್ರಕಟಣಾ ದಿನಾಂಕ: 03 JUN 2021 11:45PM by PIB Bengaluru

ಶಾಲೆಯ ಪ್ರಾಂಶುಪಾಲರು: ನಮಸ್ತೆ ಸರ್ !
ಪ್ರಧಾನ ಮಂತ್ರಿ ಮೋದಿ: ನಮಸ್ತೇ!.
ಪ್ರಧಾನ ಮಂತ್ರಿ ಮೋದಿ: ನಾನು ನಿಮಗೆ ಅಡಚಣೆ ಉಂಟು ಮಾಡುತ್ತಿಲ್ಲ ಎಂದು ಭಾವಿಸುತ್ತೇನೆ?. ನೀವೆಲ್ಲ ಬಹಳ ಸಂತೋಷದಿಂದಿರುವಿರಿ. ನೀವು ಕ್ಯಾಲರಿಗಳನ್ನು ಆನ್ ಲೈನ್ ನಲ್ಲಿ ಕರಗಿಸುತ್ತಿರುವಿರಿ!.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ: ನಮಸ್ಕಾರ ಸರ್! ನಮ್ಮೊಂದಿಗೆ ಸೇರಿಕೊಂಡದ್ದಕ್ಕೆ ತಮಗೆ ಬಹಳ ಧನ್ಯವಾದಗಳು ಸರ್! ನಾನು ಈಗಷ್ಟೇ ಅವರಿಗೆ ಹೇಳಿದ್ದೆ, ವಿಶೇಷ ಅತಿಥಿಯೊಬ್ಬರು ಸೇರಿಕೊಳ್ಳುತ್ತಾರೆ ಎಂಬುದಾಗಿ. ಸರ್, ನೀವು ನಮ್ಮೊಂದಿಗೆ ಸೇರಿಕೊಳ್ಳುವಿರೆಂದು ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನೀವು ಸೇರಿಕೊಳ್ಳುವುದಕ್ಕೆ ಮೊದಲು ಅವರು ನಿಮ್ಮ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ನಿಮ್ಮ ಬಹಳಷ್ಟು ಅಭಿಮಾನಿಗಳಿದ್ದಾರೆ.
ಪ್ರಧಾನ ಮಂತ್ರಿ ಮೋದಿ: ಸರಿ!. ನಾನು ಸುಮ್ಮನೆ ಬಂದೆ, ಆದರೆ ನಾನು ನಿಮಗೆ ಅಡಚಣೆ ಉಂಟು ಮಾಡಲು ಬಯಸುವುದಿಲ್ಲ. ಯಾಕೆಂದರೆ ನೀವು ಬಹಳ ಹರ್ಷೋಲ್ಲಾಸದಿಂದ ಇದ್ದೀರಿ ಮತ್ತು ನಾನು ಕಂಡುಕೊಂಡೆ - ಅಲ್ಲಿ ಪರೀಕ್ಷೆಯ ಟೆನ್ಷನ್ ಇಲ್ಲ ಎಂಬುದಾಗಿ. ಅದರಿಂದಾಗಿ ನಿಮ್ಮ ಸಂತೋಷಕ್ಕೆ ಕೊನೆ ಇಲ್ಲದಂತಾಗಿದೆ ಎಂದು ಕಾಣುತ್ತದೆ. ಮತ್ತು ನೀವು ಕೂಡಾ ಮುಚ್ಚಿದ ಕೊಠಡಿಗಳ ಒಳಗೆ ಕ್ಯಾಲರಿಗಳನ್ನು ಹೇಗೆ ಕರಗಿಸಬೇಕು ಎಂಬುದನ್ನೂ ಕಲಿತುಕೊಂಡಿದ್ದೀರಿ.
ಪ್ರಧಾನ ಮಂತ್ರಿ ಮೋದಿ: ಹಾಗಿದ್ದರೆ, ನೀವೆಲ್ಲಾ ಹೇಗಿದ್ದೀರಿ
ವಿದ್ಯಾರ್ಥಿಗಳು: ಬಹಳ ಚೆನ್ನಾಗಿದ್ದೇವೆ ಸರ್.
ಪ್ರಧಾನ ಮಂತ್ರಿ ಮೋದಿ: ನೀವೆಲ್ಲಾ ಕ್ಷೇಮವೇ?.
ವಿದ್ಯಾರ್ಥಿಗಳು: ಹೌದು ಸರ್, ನಾವೆಲ್ಲರೂ ಕ್ಷೇಮ.
ಪ್ರಧಾನ ಮಂತ್ರಿ ಮೋದಿ: ನಿಮ್ಮ ಇಡೀ ಕುಟುಂಬದ ಸದಸ್ಯರೂ ಕ್ಷೇಮವಾಗಿದ್ದಾರೆಯೇ ?.
ವಿದ್ಯಾರ್ಥಿಗಳು: ಹೌದು ಸರ್!.
ಪ್ರಧಾನ ಮಂತ್ರಿ ಮೋದಿ: ನಿಮಗೆ ವಿಷಯ ತಿಳಿಯುವುದಕ್ಕೆ ಮುನ್ನಾ ದಿನ ( ಮಂಡಳಿ ಪರೀಕ್ಷೆ ರದ್ದಾದ ಬಗ್ಗೆ ) ನಿಮ್ಮಲ್ಲಿ ಉದ್ವಿಗ್ನತೆ ಇತ್ತೆ?. ಈಗ ಉದ್ವಿಗ್ನತೆ ಇಲ್ಲ, ಹೌದಲ್ಲವೇ?. 
ವಿದ್ಯಾರ್ಥಿಗಳು: ನಿಜವಾಗಿಯೂ ಹೌದು ಸರ್.
ಪ್ರಧಾನ ಮಂತ್ರಿ ಮೋದಿ: ಹಾಗಾದರೆ, ನಿಮಗೆ ಪರೀಕ್ಷೆಯ ಬಗ್ಗೆ ಉದ್ವಿಗ್ನತೆ ಇತ್ತೇ?.
ವಿದ್ಯಾರ್ಥಿಗಳು: ಹೌದು ಸರ್, ಬಹಳಷ್ಟು.
ಪ್ರಧಾನ ಮಂತ್ರಿ ಮೋದಿ: ಹಾಗಾದ್ರೆ ನನ್ನ ಪುಸ್ತಕ ಪ್ರಯೋಜನಕ್ಕೆ ಬರಲಿಲ್ಲ, ಯಾಕೆಂದರೆ ನಾನು ಎಕ್ಸಾಂ ವಾರಿಯರ್ ನಲ್ಲಿ ಉದ್ವಿಗ್ನರಾಗಬೇಡಿ ಎಂದು ಬರೆದಿದ್ದೆ. ಹಾಗಿರುವಾಗ,  ನೀವೇಕೆ ಉದ್ವಿಗ್ನರಾಗಿರುತ್ತಿದ್ದಿರಿ?
ವಿದ್ಯಾರ್ಥಿಗಳು: ಸರ್, ನಾವು ಪ್ರತೀ ದಿನ ತಯಾರಿ ಮಾಡಿಕೊಂಡಿರುತ್ತಿದ್ದಾಗ, ಅಲ್ಲಿ ಉದ್ವಿಗ್ನತೆ ಇರುತ್ತಿರಲಿಲ್ಲ.
ಪ್ರಧಾನ ಮಂತ್ರಿ ಮೋದಿ: ಹಾಗಾದ್ರೆ, ಯಾವಾಗ ಉದ್ವಿಗ್ನತೆ ಇರುತ್ತದೆ ?.
ವಿದ್ಯಾರ್ಥಿ: ಹಾಗೆ, ಉದ್ವಿಗ್ನತೆ ಇರಲಿಲ್ಲ. ಯುವಜನತೆಯ ಆರೋಗ್ಯ ಬಹಳ ಮುಖ್ಯ. ಇಂತಹ ಬಲು ದೊಡ್ಡ ನಿರ್ಧಾರಕ್ಕಾಗಿ ನಾವು ಸದಾ ನಿಮಗೆ ಕೃತಜ್ಞರಾಗಿರುತ್ತೇವೆ.
ಪ್ರಧಾನ ಮಂತ್ರಿ ಮೋದಿ: ನಿಮ್ಮ ಶುಭ ನಾಮವೇನು?
ವಿದ್ಯಾರ್ಥಿ: ಸರ್, ಹಿತೇಶ್ವರ ಶರ್ಮಾ, ಪಂಚಕುಲದಿಂದ
ಪ್ರಧಾನ ಮಂತ್ರಿ ಮೋದಿ: ಹಿತೇಶ್ವರ ಶರ್ಮಾಜೀ! ನೀವು ಪಂಚಕುಲದಲ್ಲಿ ವಾಸಿಸುತಿದ್ದೀರೋ?.
ವಿದ್ಯಾರ್ಥಿ: ಹೌದು ಸರ್.
ಪ್ರಧಾನ ಮಂತ್ರಿ ಮೋದಿ: ಯಾವ ಸೆಕ್ಟರ್ ನಲ್ಲಿ?.
ವಿದ್ಯಾರ್ಥಿ: ಸರ್ ಸೆಕ್ಟರ್ 10.
ಪ್ರಧಾನ ಮಂತ್ರಿ ಮೋದಿ: ನಾನು ಸೆಕ್ಟರ್ 7 ರಲ್ಲಿ ಹಲವು ವರ್ಷಗಳ ಕಾಲ ಇದ್ದೆ.
ವಿದ್ಯಾರ್ಥಿ: ನನಗೆ ಇವತ್ತಷ್ಟೇ ಗೊತ್ತಾಯಿತು ಸರ್.
ಪ್ರಧಾನ ಮಂತ್ರಿ ಮೋದಿ: ಹೌದು, ನಾನು ಅಲ್ಲಿ ವಾಸಿಸುತ್ತಿದ್ದೆ.
ವಿದ್ಯಾರ್ಥಿ: ಸರ್, ಅಲ್ಲಿ ಹಲವು ಮಂದಿ ನಿಮ್ಮ ಬೆಂಬಲಿಗರಿದ್ದಾರೆ ಮತ್ತು ಇಲ್ಲಿ ಮತ್ತೆ ನಿಮ್ಮನ್ನು ಕಾಣಲು ಇಚ್ಛಿಸುತ್ತಾರೆ.
ಪ್ರಧಾನ ಮಂತ್ರಿ ಮೋದಿ: ನನಗೆ ಹೇಳು, ನೀನು ಹತ್ತನೇ ತರಗತಿಯಲ್ಲಿ ಟಾಪರ್ ಆಗಿದ್ದೆ. ನೀನು ಮತ್ತೆ ಹನ್ನೆರಡನೇ ತರಗತಿಯಲ್ಲೂ ಟಾಪರ್ ಆಗಲು ತಯಾರಿ ಮಾಡಿರಬಹುದು.ಈಗ ಅಲ್ಲಿ ಪರೀಕ್ಷೆಗಳಿಲ್ಲ, ಹಾಗಿರುವಾಗ ಈಗ ಏನು?.
ವಿದ್ಯಾರ್ಥಿ: ನಾನೂ ಅದನ್ನೇ ಹೇಳುತ್ತಿದ್ದೆ. ಅಲ್ಲಿ ನಿರೀಕ್ಷೆಗಳಿದ್ದವು. ಪರೀಕ್ಷಾ ಒತ್ತಡ ಹೆಚ್ಚುತ್ತಿದ್ದಂತೆ, ನಾನು ಆ ನಿರ್ಧಾರವನ್ನು ಮೆಚ್ಚುತ್ತೇನೆ. ನಾನು ಖಾಲಿಯಾಗುವ ಹಂತ ತಲುಪಿದ್ದೆ. ಮತ್ತು ಅದು ಸುರಕ್ಷಿತ ಅಲ್ಲ ಎಂಬ ಭಾವನೆಯೂ ನಮ್ಮಲ್ಲಿತ್ತು. ನೀವು ಬಹಳ ದೊಡ್ಡ ನಿರ್ಧಾರ ಮಾಡಿದ್ದೀರಿ.  ಟಾಪರ್ ಆಗಿದ್ದವರು ಅಥವಾ ಪ್ರಯತ್ನಗಳನ್ನು ಹಾಕಿದವರು, ಅವರ ಪ್ರಯತ್ನಗಳು ವ್ಯರ್ಥವಾಗಲಾರವು  ಮತ್ತು ಜ್ಞಾನವು ಸದಾ ನಮ್ಮೊಂದಿಗೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ದೃಢವಾಗಿ ತಯಾರಿ ಮಾಡುತ್ತಿದ್ದವರು ಯಾವುದೇ ಮಾನದಂಡ ಇರಲಿ ಅವರು ಟಾಪರ್ ಆಗಿಯೇ ಇರುತ್ತಾರೆ. ಆದುದರಿಂದ ಅವರಿಗೆ ಯಾವುದೇ ಉದ್ವಿಗ್ನತೆಗೊಳಬೇಕಾದ ಅವಶ್ಯಕತೆ ಇಲ್ಲ. ಕೆಲವರು ಹೇಳುತ್ತಿದ್ದರು, ಟಾಪರ್ ಗಳಿಗೆ ನಿರಾಸೆಯಾಗಿದೆ ಎಂದು. ಅಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿದೆ. ಮತ್ತು ಅವರು ಪರೀಕ್ಷೆಯನ್ನೂ ಬರೆಯಬಹುದು. ನಾನು ಈ ನಿರ್ಧಾರವನ್ನು ಬಹಳ ಚಿಂತನೆ ಮಾಡಿ ಕೈಗೊಳ್ಳಲಾಗಿದೆ ಎಂದು ಭಾವಿಸುತ್ತೇನೆ. ಮತ್ತು ನಾವು ನಿಮಗೆ ಸದಾ ಋಣಿಯಾಗಿರುತ್ತೇವೆ.
ಪ್ರಧಾನ ಮಂತ್ರಿ ಮೋದಿ: ಸರಿ ಮಕ್ಕಳೇ, ಕೆಲವು ಜನರು ತಾವು ಧೈರ್ಯಶಾಲಿಗಳು ಎಂದುಕೊಂಡಿರುತ್ತಾರೆ ಮತ್ತು ಅವರು ತಾವು ಮುಖಗವಸು ಧರಿಸುವುದಿಲ್ಲ ಎನ್ನುತ್ತಾರೆ ಅಥವಾ ನಿಯಮಗಳನ್ನು ಪಾಲಿಸುವುದಿಲ್ಲ. ಅದರ ಬಗ್ಗೆ ನಿಮಗೇನನಿಸುತ್ತದೆ?.
ವಿದ್ಯಾರ್ಥಿ: ಸರ್, ನಾವು ನಿಯಮಗಳನ್ನು ಪಾಲಿಸಬೇಕು. ನೀವು ಈಗಷ್ಟೇ ಹೇಳಿದಂತೆ ಅಲ್ಲಿ ಕಲೆವರಿದ್ದಾರೆ, ಮುಖಗವಸು ಧರಿಸದವರು ಮತ್ತು ಕೋವಿಡ್ ಮಾರ್ಗದರ್ಶಿಗಳನ್ನು ಅನುಸರಿಸದವರು,ಇದು ಬಹಳ ನಿರಾಶಾದಾಯಕ, ಯಾಕೆಂದರೆ ನಮ್ಮ ಸರಕಾರ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳು ಈ ಜಾಗತಿಕ ಸಾಂಕ್ರಾಮಿಕದ ಬಗ್ಗೆ ಬಹಳಷ್ಟು ಜಾಗೃತಿಯನ್ನು ಮೂಡಿಸುತ್ತಿವೆ. ಜನರು ಅದನ್ನು ಅರ್ಥ ಮಾಡಿಕೊಳ್ಳದೇ ಇರುವಾಗ, ಬಹಳ ಕೆಡುಕೆನಿಸುತ್ತದೆ. ನಾನು ನಿಮ್ಮೊಂದಿಗೆ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲಿಚ್ಛಿಸುತ್ತೇನೆ. ಲಾಕ್ ಡೌನ್ ತೆರವು ಮಾಡಿದಾಗ ನಮ್ಮ ಸ್ಥಳೀಯ ಪ್ರದೇಶದಲ್ಲಿ ನಾವು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಕೋವಿಡ್ ಮಾರ್ಗದರ್ಶಿಗಳ ಬಗ್ಗೆ ನಾವು ಬೀದಿ ನಾಟಕಗಳನ್ನು ಆಯೋಜಿಸಿದ್ದೆವು. ಮತ್ತು ಅದನ್ನು ಅನುಸರಿಸುವಂತೆ ಜನರಿಗೆ ಹೇಳಿದೆವು. ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸಿದೆವು. ಮುಖಗವಸುಗಳನ್ನು ಧರಿಸುವಂತೆ ಮತ್ತು ಆಗಾಗ ಕೈಗಳನ್ನು ತೊಳೆಯುವಂತೆ ಹೇಳಿದೆವು. ನಾವು ನಮ್ಮ ಮಟ್ಟದಲ್ಲಿ ಉಪಕ್ರಮವನ್ನು ಕೈಗೊಂಡಾಗ ದೊಡ್ಡ ಬದಲಾವಣೆ ಕಾಣ ಬರಬಹುದು ಎಂದು ನಾನು ಭಾವಿಸುತ್ತೇನೆ.
ಪ್ರಧಾನ ಮಂತ್ರಿ ಮೋದಿ: ಮಕ್ಕಳು ಹನ್ನೆರಡನೇ ತರಗತಿಯಲ್ಲಿದ್ದಾಗ ಅವರು ಮತ್ತು ಅವರ ಕುಟುಂಬದ ಸದಸ್ಯರು ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತಿತರಾಗಿರುತ್ತಾರೆ. ನಾನು ತಿಳಿಯಲಿಚ್ಛಿಸುತ್ತೇನೆ, ಒಂದು ದಿನಕ್ಕೆ ಮೊದಲು ಅಂದರೆ ಜೂನ್ 1 ರಂದು ನೀವೆಲ್ಲರೂ ಪರೀಕ್ಷೆಗೆ ಕುಳಿತುಕೊಳ್ಳುವ ಮನಸ್ಥಿತಿಯಲ್ಲಿದ್ದಿರಿ ಮತ್ತು ಅದಕ್ಕಾಗಿ ಸೂಕ್ತ ವೇಳಾಪಟ್ಟಿಯನ್ನು ಸಿದ್ದವಾಗಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಿಕೊಂಡಿರುತ್ತೀರಿ. ಈಗ ಅಲ್ಲ್ಲಿ ಪರೀಕ್ಷೆ ಇಲ್ಲ, ಅಲ್ಲಿ ನಿರ್ವಾತ ಇದೆ. ನೀವು ಈ ನಿರ್ವಾತವನ್ನು ಹೇಗೆ ತುಂಬುತ್ತೀರಿ?.
ವಿದ್ಯಾರ್ಥಿ: ನಮಸ್ತೆ ಸರ್, ನಾನು ವಿಧಿ ಚೌಧುರಿ, ಗುವಾಹಟಿ ರಾಯಲ್ ನೋಬಲ್ ಶಾಲೆಯಿಂದ.
ಪ್ರಧಾನ ಮಂತ್ರಿ ಮೋದಿ: ನೀವು ಗುವಾಹಟಿಯವರೇ ?
ವಿದ್ಯಾರ್ಥಿ: ಹೌದು ಸರ್.
ವಿದ್ಯಾರ್ಥಿ: ನೀವು ಈಗಾಗಲೇ ಹೇಳಿದಂತೆ ಈ ನಿರ್ಧಾರ ಮಾಡುವುದಕ್ಕೆ ಮೊದಲು ಒಬ್ಬೊಬ್ಬರ ಮನಸ್ಸಿನಲ್ಲಿ ಹಲವಾರು ಸಂಗತಿಗಳಿದ್ದವು ಎಂಬುದನ್ನು ನಾನು ನಿಮಗೆ ತಿಳಿಯಪಡಿಸಲಿಚ್ಛಿಸುತ್ತೇನೆ ಸರ್. ನಾನು ಎಕ್ಸಾಂ ವಾರಿಯರ್ಸ್ ಬಗ್ಗೆ ಹೇಳಲಿಚ್ಛಿಸುತ್ತೇನೆ. ನಾನು ಹತ್ತನೇ ತರಗತಿಯಲ್ಲಿರುವಾಗ, ನಾನು ಕೋಲ್ಕೊತ್ತಾದಿಂದ ಗುವಾಹಟಿಗೆ ಪ್ರಯಾಣಿಸುತ್ತಿದ್ದೆ. ಆಗ ನಾನು ವಿಮಾನ ನಿಲ್ದಾಣದಲ್ಲಿ ನಾನು ನಿಮ್ಮ ಪುಸ್ತಕ ನೋಡಿದೆ. ನನ್ನ ಹತ್ತನೇ ತರಗತಿಯ ಪರೀಕ್ಷೆಗಳು ಇನ್ನಷ್ಟೇ ಆರಂಭವಾಗಲಿದ್ದವು. ಆದುದರಿಂದ ನಾನು ತಕ್ಷಣವೇ ಪುಸ್ತಕವನ್ನು ಖರೀದಿಸಿದೆ. ನಾನು ಆ ಪುಸ್ತಕವನ್ನು ಪ್ರತೀ ದಿನ ಒಂದು ತಿಂಗಳು ಕಾಲ ಓದಿದೆ. ಸರ್, ನೀವು ಪುಸ್ತಕವನ್ನು ಪರೀಕ್ಷೆಯನ್ನು ಹಬ್ಬದಂತೆ ಆಚರಿಸಬೇಕು ಎಂಬ ಸಲಹೆಯೊಂದಿಗೆ ಆರಂಭಿಸಿದ್ದೀರಿ. ಆದುದರಿಂದ ಸರ್, ಹಬ್ಬಕ್ಕೆ ಭಯದ ಪ್ರಶ್ನೆ ಎಲ್ಲಿದೆ?. ನಾವು ಹಬ್ಬಕ್ಕೆ ತಯಾರಾಗುವಾಗ , ನಾವು ಅದು ಯಶಸ್ವಿಯಾಗಬೇಕು ಎಂದು ಆಶಿಸುತ್ತೇವೆ. ತಾವು ಪುಸ್ತಕವನ್ನು ಯೋಗದ ಶ್ರೇಷ್ಠ ಮಂತ್ರದೊಂದಿಗೆ ಮುಕ್ತಾಯಗೊಳಿಸಿದ್ದೀರಿ. ಈ ಎರಡು ಸಂಗತಿಗಳು ನನ್ನಲ್ಲಿ ಉಳಿದಿವೆ. ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ನಾನು ನನ್ನ ಹನ್ನೆರಡನೇ ತರಗತಿಯ ಪರೀಕ್ಷೆಗೆ ತಯಾರಾಗಿದ್ದೆ. ಪುಸ್ತಕಕ್ಕಾಗಿ ನಾನು ನಿಮಗೆ ಧನ್ಯವಾದ ಸಲ್ಲಿಸುತ್ತೇನೆ.
ಪ್ರಧಾನ ಮಂತ್ರಿ ಮೋದಿ: ಆದರೆ ನನ್ನ ಪ್ರಶ್ನೆಗೆ ಉತ್ತರ ಬಾಕಿ ಉಳಿದಿದೆ. ಅಲ್ಲೊಬ್ಬ ಹುಡುಗ ತನ್ನ ಕೈ ಎತ್ತುತ್ತಿದ್ದಾನೆ, ಅವರಿಗೆ ಅವಕಾಶ ಸಿಕ್ಕಿಲ್ಲ (ಮಾತನಾಡಲು). ನಿಮ್ಮ ಶುಭ ನಾಮವೇನು?
ವಿದ್ಯಾರ್ಥಿ: ಸರ್, ನನ್ನ ಹೆಸರು ನಂದನ್ ಹೆಗ್ಡೆ
ಪ್ರಧಾನ ಮಂತ್ರಿ ಮೋದಿ: ನೀನು ಕರ್ನಾಟಕದವನೇ?
ವಿದ್ಯಾರ್ಥಿ: ಹೌದು ಸರ್, ಬೆಂಗಳೂರಿನಿಂದ
ಪ್ರಧಾನ ಮಂತ್ರಿ ಮೋದಿ: ಆಯಿತು, ನನಗೆ ಹೇಳು.
ವಿದ್ಯಾರ್ಥಿ: ಸರ್, ನನ್ನ ಬದುಕಿನ ಎಲ್ಲಾ ಪರೀಕ್ಷೆಗಳ ಕೊನೆ ಇದು ಎಂದು ನಾನು ಭಾವಿಸುವುದಿಲ್ಲ. ಭವಿಷ್ಯದಲ್ಲಿ ಬಹಳಷ್ಟು ಪರೀಕ್ಷೆಗಳಿರುತ್ತವೆ. ನಾವು ಆರೋಗ್ಯವಂತರಾಗಿರಬೇಕು, ಆಗ ನಾವು ಬರಲಿರುವ ಪರೀಕ್ಷೆಗಳಿಗೆ ತಯಾರಾಗಬಹುದು.
ಪ್ರಧಾನ ಮಂತ್ರಿ ಮೋದಿ: ಸರಿ, ನೀವೀಗ ಪರೀಕ್ಷೆಯಿಂದ ಬಿಡುಗಡೆಯಾಗಿದ್ದೀರಿ, ನೀವು ನಿಮ್ಮ ಕಾಲವನ್ನು ಎಲ್ಲಿ ಕಳೆಯುತ್ತೀರಿ?. ಐ.ಪಿ.ಎಲ್. ನೋಡುತ್ತಲೋ ಅಥವಾ ಚಾಂಪಿಯನ್ ಲೀಗ್ ಫೈನಲ್ ನೋಡುತ್ತಲೋ, ಅಥವಾ ಜುಲೈಯಿಂದ ಆರಂಭಗೊಳ್ಳಲಿರುವ ಒಲಿಂಪಿಕ್ಸ್ ನೋಡುತ್ತಲೋ ? ಭಾರತದಿಂದ ಒಲಿಂಪಿಕ್ಸ್ ನಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ, ಅವರ ಹಿನ್ನೆಲೆ ಏನು? ಅಥವಾ ನೀವು ಜೂನ್ 21 ರಂದು ಬರುವ ಯೋಗ ದಿವಸದ ಬಗೆ ಚಿಂತಿಸುವಿರಾ?
ವಿದ್ಯಾರ್ಥಿ: ಪ್ರತಿಯೊಂದನ್ನೂ ಸರ್.
ಪ್ರಧಾನ ಮಂತ್ರಿ ಮೋದಿ: ಈ ..ಮಗಳು ಏನನ್ನೋ ಹೇಳಬಯಸುತ್ತಿದ್ದಾರೆ, ಬಹಳ ಸಮಯದಿಂದ ಅವರಿಗೆ ಅವಕಾಶ ಸಿಕ್ಕಿಲ್ಲ.
ವಿದ್ಯಾರ್ಥಿ: ನಮಸ್ಕಾರ ಸರ್. ನೀವು ಪರೀಕ್ಷೆಯನ್ನು ರದ್ದು ಮಾಡಿದ ನಿರ್ಧಾರ ನನಗೆ ತಿಳಿದಾಕ್ಷಣ, ಒತ್ತಡವೊಂದು ಕಡಿಮೆಯಾಯಿತು ಎಂದು ನಾನು ಬಹಳ ಸಂತೋಷಪಟ್ಟೆ. ಆದರೆ ಈಗ ಗೊತ್ತಾಗಿದೆ, ನಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಿಯಬೇಕಾಗಿದೆ ಎಂದು. ಈ ಮೊದಲು ನಾವು ಮಂಡಳಿ ಪರೀಕ್ಷೆಗೆ ತಯಾರಾಗುತ್ತಿದ್ದೆವು. ಮತ್ತು ಆ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದೆವು. ನಮಗೀಗ ಸಾಕಷ್ಟು ಸಮಯಾವಕಾಶವಿದೆ. ನಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಉತ್ತಮವಾಗಿ ತಯಾರಾಗಬಹುದು. ನಾನು ನಿಮಗೆ ಬಹಳ ಋಣಿ ಸರ್.
ಪ್ರಧಾನ ಮಂತ್ರಿ ಮೋದಿ: ಹಾಗಾದ್ರೆ ಪರೀಕ್ಷೆಯ ವಿಷಯ ನಿಮ್ಮ ಮನಸ್ಸಿನಿಂದ ಹೊರಗೆ ಹೋಗಿಲ್ಲ?
ವಿದ್ಯಾರ್ಥಿ: ಹೌದು ಸರ್.
ಪ್ರಧಾನ ಮಂತ್ರಿ ಮೋದಿ: ನೀವು ನಿಮ್ಮ ಮನೆಯಲ್ಲಿದ್ದೀರಿ, ನಿಮ್ಮ ಪೋಷಕರು ಎಲ್ಲವನ್ನೂ ಈಗ ಆಲಿಸುತ್ತಿರಬಹುದು.
ವಿದ್ಯಾರ್ಥಿ: ಹೌದು ಸರ್.
ಪ್ರಧಾನ ಮಂತ್ರಿ ಮೋದಿ: ತೋರಿಸು, ಅವರೆಲ್ಲಿದ್ದಾರೆ?.
ವಿದ್ಯಾರ್ಥಿ: ಸರ್, ನಾನವರನ್ನು ಕರೆಯುತ್ತೇನೆ.
ಪ್ರಧಾನ ಮಂತ್ರಿ ಮೋದಿ: ನಮಸ್ತೇ ಜೀ
ಪೋಷಕರು: ನಮಸ್ಕಾರ ಸರ್.
ಪ್ರಧಾನ ಮಂತ್ರಿ ಮೋದಿ: ನಿಮ್ಮ ಮಗಳು ಈಗ ನಿರಾಳವಾಗಿದ್ದಾರೆ (ಪರೀಕ್ಷೆಗಳಿಂದ), ನಿಮಗೇನನಿಸುತ್ತದೆ?
ಪೋಷಕರು: ಸರ್, ಅದು ಒಳ್ಳೆಯ ನಿರ್ಧಾರ, ಯಾಕೆಂದರೆ ಇಡೀ ದೇಶದಲ್ಲಿ ಪರಿಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ.
ಪ್ರಧಾನ ಮಂತ್ರಿ ಮೋದಿ: ನೀವು ನಿರ್ಧಾರವನ್ನು ಧನಾತ್ಮಕವಾಗಿ ತೆಗೆದುಕೊಂಡಿರುವುದಕ್ಕೆ ನಾನು ಹರ್ಷಿತನಾಗಿದ್ದೇನೆ.
ವಿದ್ಯಾರ್ಥಿ: ನಮಸ್ಕಾರ ಸರ್! ನಾನು ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ, ನಾನು ನಿಮ್ಮ ಬಹಳ ದೊಡ್ಡ ಅಭಿಮಾನಿ.
ಪ್ರಧಾನ ಮಂತ್ರಿ ಮೋದಿ: ಧನ್ಯವಾದಗಳು.
ವಿದ್ಯಾರ್ಥಿ: ಸರ್, ನಿಮ್ಮ ನಿರ್ಧಾರ ಬಹಳ ಉತ್ತಮವಾದುದು, ಯಾಕೆಂದರೆ ತಲೆ ಸುರಕ್ಷಿತವಾಗಿದ್ದರೆ ಹಲವು ಮುಂಡಾಸುಗಳನ್ನು /ಶಿರಸ್ತ್ರಾಣಗಳನ್ನು ಕಟ್ಟಬಹುದು/ಧರಿಸಬಹುದು
ಪ್ರಧಾನ ಮಂತ್ರಿ ಮೋದಿ: ನಮ್ಮ ದೇಶದಲ್ಲಿ ಆರೋಗ್ಯವೇ ಸಂಪತ್ತು ಎಂಬ ಮಾತಿದೆ.
ವಿದ್ಯಾರ್ಥಿ: ಹೌದು ಸರ್, ನೀವು ನಮಗೆ ಪ್ರೇರಣೆ.
ಪ್ರಧಾನ ಮಂತ್ರಿ ಶ್ರೀ ಮೋದಿ: ನೀವು ತಲೆಯ ಬಗ್ಗೆ ಮಾತನಾಡುವಾಗ, ನೀವು ಬರೇ ಅದರ ಬಗ್ಗೆ ಮಾತ್ರ ಯೋಚಿಸುತ್ತೀರೋ ಅಥವಾ ಇಡೀ ದೇಹದ ಬಗ್ಗೆ ಯೋಚಿಸುತ್ತೀರೋ?
ವಿದ್ಯಾರ್ಥಿ: ದೈಹಿಕವಾಗಿ ಸರ್.
ಪ್ರಧಾನ ಮಂತ್ರಿ ಮೋದಿ: ಓ.ಕೆ. ದೈಹಿಕ ಕ್ಷಮತೆಗೆ ನೀವೇನು ಮಾಡುತ್ತೀರಿ?. ನೀವೆಷ್ಟು ಸಮಯ ವ್ಯಯಿಸುತ್ತೀರಿ ಮತ್ತು ಏನು ಮಾಡುತ್ತೀರಿ?.
ವಿದ್ಯಾರ್ಥಿ: ಸರ್, ನಾನು ಯೋಗ ಮತ್ತು ಇತರ ವ್ಯಾಯಾಮಗಳನ್ನು 30 ನಿಮಿಷ ಕಾಲ ನನ್ನ ಕಿರಿಯ ಸಹೋದರನೊಂದಿಗೆ ಪ್ರತೀ ದಿನ ಬೆಳಗ್ಗೆ ಮಾಡುತ್ತೇನೆ.
ಪ್ರಧಾನ  ಮಂತ್ರಿ  ಮೋದಿ: ನಿಮ್ಮ ಕುಟುಂಬದ ಸದಸ್ಯರು ನೀವು ಹೇಳುತ್ತಿರುವುದನ್ನು ಕೇಳುತ್ತಿದ್ದಾರೆಯೇ. ನೀವು ಸಿಕ್ಕಿ ಹಾಕಿಕೊಳ್ಳುತ್ತೀರಿ, ನಾನವರನ್ನು ಕೇಳಿದರೆ.
ವಿದ್ಯಾರ್ಥಿ: ಇಲ್ಲ ಸರ್, ನಾನು ಮತ್ತು ನನ್ನ ಸಹೋದರ ಪ್ರತೀ ದಿನ 30 ನಿಮಿಷ ಯೋಗ ಮಾಡುತ್ತೇವೆ. ನಾನು ನನ್ನ ಮನಸ್ಸನ್ನು ಸದಾ ಉಲ್ಲಾಸದಾಯಕ ವಾಗಿಡಲು ತಬ್ಲಾ ಕೂಡಾ ಬಾರಿಸುತ್ತೇನೆ. ನಾನು ಒಂದು ವರ್ಷದಿಂದ ತರಬೇತಿ ಪಡೆಯುತ್ತಿದ್ದೇನೆ.
ಪ್ರಧಾನ ಮಂತ್ರಿ ಮೋದಿ: ಸಂಗೀತ ನಿಮ್ಮ ಕುಟುಂಬದ ಪ್ರತಿಯೊಬ್ಬರಲ್ಲೂ ಸ್ವಭಾವವಾಗಿದೆಯೇ?
ವಿದ್ಯಾರ್ಥಿ: ಹೌದು ಸರ್, ನನ್ನ ತಾಯಿ ಕೂಡಾ ಸಿತಾರ್ ಮತ್ತು ತಾನ್ಪುರ ನುಡಿಸುತ್ತಾರೆ.
ಪ್ರಧಾನ ಮಂತ್ರಿ ಮೋದಿ: ಆದುದರಿಂದ ಅಲ್ಲಿ ಮನೆಯಲ್ಲಿ ಸಂಗೀತದ ವಾತಾವರಣವಿದೆ.
ಪ್ರಧಾನ ಮಂತ್ರಿ ಮೋದಿ: ಈಗ, ನಾನು ಮಾತನಾಡಲು ಸಾಧ್ಯವಾಗದವರಿಗೆ ಅವಕಾಶ ಕೊಡುತ್ತೇನೆ. ನನ್ನೆದುರು ಆ ಹುಡುಗಿ ಇದ್ದಾರೆ. ಬಿಳಿ ಇಯರ್ ಫೋನ್ ಹಾಕಿದವರು ಮತ್ತು ಅವರು ಏನನ್ನೋ ಹೇಳಬಯಸುತ್ತಿದ್ದಾಳೆ.
ವಿದ್ಯಾರ್ಥಿ: ನಮಸ್ತೇ ಸರ್. ನನ್ನ ಹೆಸರು ಕಾಶಿಶ್ ನೇಗಿ. ನಾನು ಹಿಮಾಚಲ ಪ್ರದೇಶದ ಸೋಲನ್ ನ ಎಂ.ಆರ್.ಎ.ಡಿ.ಎ.ವಿ. ಪಬ್ಲಿಕ್ ಶಾಲೆಯ ವಿದ್ಯಾರ್ಥಿ. ನಾನು ನಿಮಗೆ ಹೇಳಲಿಚ್ಛಿಸುವುದೇನೆಂದರೆ ಇದು ನನಸಾದ ಕನಸು. ನಾನು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ನಿಮ್ಮ ಸರಿಯಾದ ನಿರ್ಧಾರಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ. ಯಾಕೆಂದರೆ ನಮ್ಮ ಜೀವನ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ. ಅಲ್ಲಿ ಅಭಿವೃದ್ಧಿ ಇಲ್ಲ. ನಾನು ನಿಮ್ಮ ನಿರ್ಧಾರದಿಂದ ಸಂತೋಷಗೊಂಡಿದ್ದೇನೆ. ಧನ್ಯವಾದಗಳು.
ಪ್ರಧಾನ ಮಂತ್ರಿ ಮೋದಿ: ಆ ಹುಡುಗಿ ಬೆರಳು ಮೇಲೆತ್ತಿದವರು, ಹೌದು ಹೇಳಿ.
ವಿದ್ಯಾರ್ಥಿ: ನಮಸ್ತೆ ಸರ್. ನಾನು ರಾಜಸ್ಥಾನದ ಜೈಪುರದಲ್ಲಿಯ ದಿಲ್ಲಿ ಪಬ್ಲಿಕ್ ಶಾಲೆಯ ಹನ್ನೆರಡನೇ ತರಗತಿ ವಿದ್ಯಾರ್ಥಿನಿ. ನನ್ನ ಹೆಸರು ಜನ್ನಾತ್ ಸಾಕ್ಷಿ. ಮಂಡಳಿ ಪರೀಕ್ಷೆಗೆ ಸಂಬಂಧಿಸಿ ತಾವು ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಈಗಿರುವ ಸ್ಥಿತಿಯಲ್ಲಿ ಈ ನಿರ್ಧಾರ ಬಹಳ ಸರಿಯಾದುದು. ಯಾಕೆಂದರೆ ಮಕ್ಕಳ ಸುರಕ್ಷೆ ಮತ್ತು ಕ್ಷೇಮ ಬಹಳ ಮುಖ್ಯವಾದುದು. ಸಿ.ಬಿ.ಎಸ್.ಇ.ಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ, ಅವರ ಮೌಲ್ಯಮಾಪನ ವಿಧಾನ ನಮ್ಮ ಹಿತಾಸಕ್ತಿಯನ್ನು ಒಳಗೊಂಡಿರುತ್ತವೆ. ನಮ್ಮ ಪ್ರಯತ್ನಗಳು ಫಲ ನೀಡುತ್ತವೆ ಎಂಬ ಬಗ್ಗೆ ನಮಗೆ ಭರವಸೆ ಇದೆ. ಧನ್ಯವಾದಗಳು ಸರ್.
ಪ್ರಧಾನ ಮಂತ್ರಿ ಮೋದಿ: ಎಲ್ಲಾ ಪೋಷಕರೂ ಪರದೆ ಎದುರು ಬನ್ನಿ. ಇದರಿಂದ ನೀವು ಸತ್ಯ ಹೇಳುತ್ತಿರುವಿರೋ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನಾನು ಓರ್ವ ಯುವಕನನ್ನು ನನ್ನೆದುರು ಕಾಣುತ್ತಿದ್ದೇನೆ. ಆ ಬಿಳಿ ಶರಟು ಧರಿಸಿದ ಸುಸಂಸ್ಕೃತ ವ್ಯಕ್ತಿ ಮಾತನಾಡುತ್ತಿದ್ದಾರೆ.
ವಿದ್ಯಾರ್ಥಿ !: ಸರ್, ನನ್ನ ತಾಯಿ ಇಲ್ಲಿಲ್ಲ.ನಾವು ಒಟ್ಟಿಗೆ ಕುಳಿತಾಗ, ಆಕೆ ಹೇಳುತ್ತಾರೆ ಮೋದೀಜಿ ಅಲ್ಲಿದ್ದಾರೆ, ಚಿಂತೆ ಮಾಡಬೇಡ , ಎಲ್ಲವನ್ನೂ ಅವರು ಮಾಡುತ್ತಾರೆ ಎಂಬುದಾಗಿ. ಲಾಕ್ ಡೌನ್ ಅವಧಿಯಲ್ಲಿ ನನ್ನ ಗಡ್ದ ಕೂಡಾ ಬೆಳೆದಿದೆ. ನನ್ನ ತಾಯಿ ಆಗಾಗ ಗಡ್ಡದ ಬಗ್ಗೆ ಕೇಳುತ್ತಾರೆ. ಮೋದಿಯವರ ಅಭಿಮಾನಿಯಾಗಿ ನಾನು ಗಡ್ಡ ಬೆಳೆಸುತ್ತೇನೆ ಎಂದು ನಾನವರಿಗೆ ಹೇಳುತ್ತೇನೆ.
ವಿದ್ಯಾರ್ಥಿ 2: ಸರ್, ನನ್ನ ಹೆಸರು ಶಿವಾಂಜಲಿ ಅಗರವಾಲ್. ನಾನು ಹೊಸದಿಲ್ಲಿಯ ಜೆ.ಎನ್.ಯು. ನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ. ನಾನು ನಿಮಗೆ ಹೇಳಬಯಸುತ್ತೇನೆ ಏನೆಂದರೆ, ಈಗ ಪರೀಕ್ಷೆಗಳು ರದ್ದಾಗಿವೆ. ನಾನು ಆ ಹೆಚ್ಚುವರಿ ಸಮಯವನ್ನು ಈಗ ಪ್ರವೇಶ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಳಸುತ್ತೇನೆ. ಪರೀಕ್ಷೆಗಳನ್ನು ರದ್ದು ಮಾಡಿದುದಕ್ಕಾಗಿ ನಿಮಗೆ ಬಹಳ ಧನ್ಯವಾದಗಳು.
ಪ್ರಧಾನ ಮಂತ್ರಿ ಮೋದಿ: ನೀವೊಂದು ಕೆಲಸ ಮಾಡಿ. ನಿಮ್ಮ ಪೇಪರ್ ಮೇಲೆ ಒಂದು ನಂಬರ್ ಬರೆಯಿರಿ. ನಾನು ನಿಮ್ಮನ್ನು ನಂಬರಿನಿಂದ ಕರೆಯುತ್ತೇನೆ. ಇಲ್ಲದಿದ್ದರೆ ಏನಾಗುತ್ತದೆ ಎಂದರೆ ನನಗೆ ನಿಮ್ಮ ಹೆಸರು ಗೊತ್ತಾಗುವುದಿಲ್ಲ ಮತ್ತು ನಾನು ಅನಗತ್ಯವಾಗಿ ನಿಮಗೆ ತೊಂದರೆ ಕೊಟ್ಟಂತಾಗುತ್ತದೆ.
ಪೋಷಕರು: ನಮಸ್ತೇ ಸರ್. ನಾವು ನಿಮ್ಮ ಅಭಿಮಾನಿಗಳು. ನೀವು ಯಾವುದೇ ನಿರ್ಧಾರ ಕೈಗೊಳ್ಳಿ, ಅದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡುದಾಗಿರುತ್ತದೆ. ನಾವು ನಿಮ್ಮೊಂದಿಗೆ ಇದ್ದೇವೆ ಮತ್ತು ಎಂದೆಂದಿಗೂ ಇರುತ್ತೇವೆ.
ಪ್ರಧಾನ ಮಂತ್ರಿ ಮೋದಿ: ನಂಬರ್ ಒನ್?
ಪೋಷಕರು: ನಮಸ್ಕಾರ ಸರ್. ನಿಮಗೆ ಬಹಳ ಬಹಳ ಧನ್ಯವಾದಗಳು ಸರ್. ನಿಮ್ಮ ನಿರ್ಧಾರ ನಮ್ಮ ಮಕ್ಕಳಿಗೆ ಬಹಳ ಫಲಪ್ರದವಾಗಿದೆ.
ಪ್ರಧಾನ ಮಂತ್ರಿ ಮೋದಿ: ಈಗಷ್ಟೇ ನಾನು ಪ್ರತಿಯೊಬ್ಬರಿಗೂ ಹೇಳಿದೆ, ಪರೀಕ್ಷೆಯ ವಿಷಯದಿಂದ ಹೊರಗೆ ಬನ್ನಿ ಎಂಬುದಾಗಿ. ನಾವು ಬೇರೇನನ್ನಾದರೂ ಮಾತನಾಡಬಹುದೇ?.
ಪೋಷಕರು: ಖಂಡಿತವಾಗಿ ಸರ್. ಶಾರೂಖ್ ಖಾನ್ ಭೇಟಿಯಾದರೂ ನನಗೆ ನಿಮ್ಮನ್ನು ಭೇಟಿಯಾದಷ್ಟು ಖುಷಿಯಾಗದು ಎಂದು ನಾನು ಹೇಳುತ್ತೇನೆ. ನೀವು ಅತ್ಯುತ್ತಮ ಸರ್. ನಾವು ನಮ್ಮ ಮಕ್ಕಳು ಸಮಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂಬುದನ್ನು ಆಶಿಸುತ್ತೇವೆ.
ಪ್ರಧಾನ ಮಂತ್ರಿ ಮೋದಿ; ನಂಬರ್ 26
ವಿದ್ಯಾರ್ಥಿ: ಸರ್, ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ನಾನು ನೃತ್ಯ ಮಾಡಲು ಇಚ್ಛಿಸುತ್ತೇನೆ. ನಾನು ಕಥಕ್ ಮಾಡುತ್ತೇನೆ. ನಾನು ಸೈಕಲಿಂಗ್ ಕೂಡಾ ಮಾಡುತ್ತೇನೆ. ನಿಮ್ಮ ನಿರ್ಧಾರದ ಬಳಿಕ (ಮಂಡಳಿ ಪರೀಕ್ಷೆ ರದ್ದಾದ ಬಳಿಕ) ನಾನು ಮಾಡಿದ ಮೊದಲ ಕೆಲಸ ಮಧ್ಯಾಹ್ಣ 12 ಗಂಟೆಯವರೆಗೆಮಲಗಿದೆ. ಪರೀಕ್ಷೆಗಳು ಇದ್ದುದರಿಂದ ಪ್ರತೀದಿನ ನಾನು ಬೆಳಿಗ್ಗೆ 8 ಗಂಟೆಗೆ ಏಳಬೇಕಾಗುತ್ತಿತ್ತು.
ವಿದ್ಯಾರ್ಥಿ: ಸರ್, ನಾನು ತಮಿಳುನಾಡಿನ ವಿದ್ಯಾರ್ಥಿ. ಮಂಡಳಿ ಪರೀಕ್ಷೆಗಳು ರದ್ದಾಗುತ್ತವೆ ಎಂಬುದು ನನಗೆ ಗೊತ್ತಿತ್ತು. ಅದರಿಂದಾಗಿ ನಾನು ಬಹಳವೇನೂ ಓದಿರಲಿಲ್ಲ. ನಾವು ರಾಜಸ್ಥಾನದವರಾದರೂ  ವಾಸ್ತವ್ಯ ಇರುವುದು ತಮಿಳುನಾಡಿನಲ್ಲಿ.
ಪ್ರಧಾನ ಮಂತ್ರಿ ಮೋದಿ: ಅಂದರೆ, ನಿಮಗೆ ಜ್ಯೋತಿಷ್ಯ ಕೂಡಾ ಗೊತ್ತು? ಅದು ರದ್ದಾಗುತ್ತದೆ (ಪರೀಕ್ಷೆಗಳು) ಎಂಬುದು ನಿಮಗೆ ಹೇಗೆ ಗೊತ್ತಾಯಿತು.
ವಿದ್ಯಾರ್ಥಿ: ಹೌದು ಸರ್, ನಾನು ಅದನ್ನು ನಿರೀಕ್ಷೆ ಮಾಡಿದ್ದೆ. ಅದು ಉತ್ತಮ ನಿರ್ಧಾರ. ನಾನು ಲಾಕ್ ಡೌನ್ ನಿಂದಾಗಿ ನನ್ನ ಕುಟುಂಬದ ಜೊತೆ ಖುಷಿಯಿಂದ ಸಮಯ ಕಳೆದೆ.
ಪ್ರಧಾನ ಮಂತ್ರಿ ಮೋದಿ: ನೀವು ನೋಡಿ, ನಿಮ್ಮ ಕುಟುಂಬದ ಸದಸ್ಯರು ನೀವು ಏನನ್ನಾದರೂ ಮಾಡದಿದ್ದರೆ ಸಿಟ್ಟಿಗೇಳುತ್ತಾರೆ, ಬೇಗ ಏಳದಿದ್ದರೆ, ಸ್ನಾನ ಮಾಡದಿದ್ದರೆ. ನಿಮಗೆ ನಿಮ್ಮ ತಂದೆ ಈಗ ಬರುತ್ತಾರೆ ಮತ್ತು ನಿನಗೆ ಬೈಯುತ್ತಾರೆ ಎಂದು ಹೇಳುತ್ತಾರೆ.
ವಿದ್ಯಾರ್ಥಿ: ನಮಸ್ತೆ ಸರ್, ನಾನು ತಮಣ್ಣ, ಪಶ್ಚಿಮ ಬಂಗಾಳದ ಡಿ.ಎ.ವಿ. ಮಾದರಿ ಶಾಲೆಯ ವಿದ್ಯಾರ್ಥಿ. ನೀವು ಈಗಾಗಲೇ ಹೇಳಿದಂತೆ ನಮ್ಮ ಬಳಿ ಬಹಳ ಸಮಯಾವಕಾಶ ಇದೆ. ಆದುದರಿಂದ ನಾನು ನನ್ನ ಸ್ನೇಹಿತರ ಜೊತೆ  ಸೇರಿ ಯು ಟ್ಯೂಬ್ ಚಾನೆಲ್ ಮಾಡಿದ್ದೇನೆ...
ಪ್ರಧಾನ ಮಂತ್ರಿ ಮೋದಿ: ನಿಮ್ಮ ಯು ಟ್ಯೂಬ್ ಚಾನೆಲ್ ಹೆಸರೇನು?
ವಿದ್ಯಾರ್ಥಿ: ತಮಣ್ಣಶರ್ಮಿಲಿ. ನಾವು ವಿವಿಧ ವೀಡಿಯೋಗಳನ್ನು ಹಾಕುತ್ತಿರುತ್ತೇವೆ. ನಾವು ಕಾವ್ಯ ಮತ್ತು ಕಿರು ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದೇವೆ.
ಪ್ರಧಾನ ಮಂತ್ರಿ ಮೋದಿ: ನಂಬರ್ 21, ಹೌದು ಹೇಳು,  ಮಗು
ವಿದ್ಯಾರ್ಥಿ: ನಾನು ನನ್ನ ಆಜ್ಜಿ ಮತ್ತು ತಂದೆಯ ಜೊತೆಗಿದ್ದೇನೆ.
ಪೋಷಕರು: ಸರ್, ನಮ್ಮ ದೇಶಕ್ಕಾಗಿ ಮಾಡಿರುವ ಪ್ರತಿಯೊಂದು ಕೆಲಸಕ್ಕೂ ಧನ್ಯವಾದಗಳು ಸರ್. ಬಹಳ ಬಹಳ ಧನ್ಯವಾದಗಳು. ನನ್ನಲ್ಲಿ ಹೇಳಲು ಇನ್ನೇನು ಶಬ್ದಗಳಿಲ್ಲ. ವಿವಿಧ ಕ್ಷೇತ್ರಗಳಲ್ಲಿ ನೀವು ಏನೇನೆಲ್ಲ ಮಾಡಿರುವಿರೋ ಅದಕ್ಕೆಲ್ಲ ಬಹಳ ಬಹಳ ಧನ್ಯವಾದಗಳು.
ವಿದ್ಯಾರ್ಥಿ: ಸರ್, ನನ್ನ ಅಜ್ಜಿ ಸಕಾಲಿಕ ವಿಷಯಗಳ ಬಗ್ಗೆ ನನಗಿಂತ ಹೆಚ್ಚು ತಿಳಿದಿರುತ್ತಾರೆ. ಅವರು ನಿಮಗೆ ಸಂಬಂಧಿಸಿದ ಪ್ರತಿಯೊಂದೂ ಸುದ್ದಿಗಳನ್ನು ತಿಳಿದುಕೊಂಡು ನೀವು ಮಾಡಿದ ಘೋಷಣೆಗಳ ಬಗ್ಗೆ ಹೇಳುತ್ತಿರುತ್ತಾರೆ. ಅವರು ನಿಮ್ಮ ಅತಿ ದೊಡ್ಡ ಅಭಿಮಾನಿ.
ಪ್ರಧಾನ ಮಂತ್ರಿ ಮೋದಿ: ಹಾಗಾದರೆ, ಅಜ್ಜಿ ರಾಜಕೀಯಕ್ಕೆ ಸಂಬಂಧಿಸಿದ ಪ್ರತಿಯೊಂದನ್ನೂ ತಿಳಿದುಕೊಂಡಿರುತ್ತಾರೆ?.
ವಿದ್ಯಾರ್ಥಿ: ಹೌದು ಸರ್. ನನ್ನ ಅಜ್ಜಿ ರಾಜಕೀಯಕ್ಕೆ ಸಂಬಂಧಿಸಿ ಪ್ರತಿಯೊಂದನ್ನೂ ತಿಳಿದಿರುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳ ಸುದ್ದಿಗಳ ಬಗ್ಗೆ ಅವರು ಸಕಾಲಿಕ ಮಾಹಿತಿಯನ್ನು ಹೊಂದಿರುತ್ತಾರೆ.
ಪ್ರಧಾನ ಮಂತ್ರಿ ಮೋದಿ: ಈ ವರ್ಷ ನಮ್ಮ ಸ್ವಾತಂತ್ರ್ಯೋತ್ಸವದ 75 ನೇ ವಾರ್ಷಿಕೋತ್ಸವ. ನೀವು ನಿಮ್ಮ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಏನಾಗಿತ್ತು ಎಂಬ ಬಗ್ಗೆ ಪ್ರಬಂಧ ಬರೆಯಬಲ್ಲಿರಾ?
ವಿದ್ಯಾರ್ಥಿ: ಹೌದು ಸರ್. ಖಚಿತವಾಗಿ ನಾವು ಬರೆಯಬಲ್ಲೆವು.
ಪ್ರಧಾನ ಮಂತ್ರಿ ಮೋದಿ: ನೀವು ಸಂಶೋಧನೆ ಮಾಡಬಲ್ಲಿರೇ?
ವಿದ್ಯಾರ್ಥಿ : ಹೌದು ಸರ್
ಪ್ರಧಾನ ಮಂತ್ರಿ ಮೋದಿ: ಪ್ರಮಾಣಪೂರ್ವಕವಾಗಿ?
ವಿದ್ಯಾರ್ಥಿ: ಹೌದು ಸರ್.
ಪ್ರಧಾನ ಮಂತ್ರಿ ಮೋದಿ: ಆಯಿತು ಹಾಗಿದ್ದರೆ, ಒಳ್ಳೆಯದು.
ಪೋಷಕರು: ನಾನು ನಿಮ್ಮ ಬಲು ದೊಡ್ಡ ಅಭಿಮಾನಿ. ಸರ್, ನೀವು ಅತ್ಯುತ್ತಮವಾದ ನಿರ್ಧಾರ ಕೈಗೊಂಡಿರುವಿರಿ. ನೀವು ಮಕ್ಕಳ ಬಗ್ಗೆ ಚಿಂತಿಸಿದ್ದೀರಿ. ಮತ್ತು ಸರ್, ನಾನು ಕೂಡಾ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವನ್ನು ಮೆಚ್ಚಿಕೊಂಡಿದ್ದೇನೆ.
ಪ್ರಧಾನ ಮಂತ್ರಿ ಮೋದಿ: ನಿಮಗೆ ಧನ್ಯವಾದಗಳು
ವಿದ್ಯಾರ್ಥಿ; ಸರ್ ನನ್ನ ಪೋಷಕರು ಇಲ್ಲಿದ್ದಾರೆ.
ಪ್ರಧಾನ ಮಂತ್ರಿ ಮೋದಿ: ನೀವು ಏನೆಲ್ಲಾ ಹೇಳಿದ್ದೀರೋ ಅದೆಲ್ಲಾ ಅವರಿಗೆ ಗೊತ್ತಾಗಿದೆ. ಈಗ ನೀವದನ್ನು ಅನುಸರಿಸಬೇಕಾಗುತ್ತದೆ.
ಪೋಷಕರು: ಸರ್, ನಾನು ಕೆಲ ವಿಷಯಗಳನ್ನು ಹೇಳಬೇಕು. ನಾನು ನಿಮ್ಮ ಎಲ್ಲಾ ಗುಣವಿಶೇಷಗಳನ್ನು ಗೌರವಿಸುತ್ತೇನೆ. ನಿಮ್ಮ ಪ್ರಾಮಾಣಿಕತೆಯ ಬಗ್ಗೆ ನನಗೆ ಅರಿವಿದೆ. ಆದರೆ, ನಾನು ಒಂದು ಕೋರಿಕೆ ಮಾಡುತ್ತೇನೆ. ಆದಾಗ್ಯೂ, ಜನರು ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುವವರು ನಮ್ಮ ದೇಶದಲ್ಲಿ ಶೋಷಣೆಗೆ ಒಳಗಾಗುತ್ತಾರೆ. ಆ ಜನರು ಗೌರವಿಸಲ್ಪಡುವಂತೆ ಮತ್ತು ಮಕ್ಕಳು ಹಾಗು ಇತರರ್ರು ಅವರ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಳ್ಳುವಂತಾಗಲು ದಯವಿಟ್ಟು ನೀತಿಯನ್ನು ರೂಪಿಸಿ.
ಪ್ರಧಾನ ಮಂತ್ರಿ ಮೋದಿ: ನೀತಿಗಳನ್ನು ರೂಪಿಸಲಾಗುತ್ತಿದೆ. ಆದರೆ ಕೆಲವು ವ್ಯಕ್ತಿಗಳ ಉದ್ದೇಶ ಪ್ರಮುಖ ಹಿಂಜರಿತಕ್ಕೆ ಕಾರಣವಾಗಿದೆ. ನಾವೆಲ್ಲರೂ ಮುಂದೆ ಬಂದು ಅಂತಹ ವಾತಾವರಣವನ್ನು ನಿರ್ಮಾಣ ಮಾಡಿದರೆ, ಅದನ್ನು ಮಾಡಬಹುದು.
ಪ್ರಧಾನ ಮಂತ್ರಿ ಮೋದಿ: ನಂಬರ್ 31?
ವಿದ್ಯಾರ್ಥಿ: ಜೈಹಿಂದ್ ಸರ್.
ಪ್ರಧಾನ ಮಂತ್ರಿ ಮೋದಿ: ಜೈ ಹಿಂದ್. ಹೌದು ನೀವೇನು ಹೇಳಲು ಬಯಸುತ್ತೀರಿ?
ವಿದ್ಯಾರ್ಥಿ: ಸರ್, ನನ್ನ ಹೆಸರು ಅರಣಿಶಾಮ್ಲೆ ಮತ್ತು ನಾನು ಇಂದೋರ್ ನ ಆನಿಬೆಸೆಂಟ್ ಶಾಲೆಯಲ್ಲಿ ಕಲಿಯುತ್ತಿದ್ದೇನೆ. ನೀವು ತೆಗೆದುಕೊಂಡ ನಿರ್ಧಾರ ಬಹಳ ಉತ್ತಮವಾದುದು ಮತ್ತು ಅದಲ್ಲದೆ...
ಪ್ರಧಾನ ಮಂತ್ರಿ: ಇಂದೋರ್ ಯಾವುದಕ್ಕೆ ಪ್ರಸಿದ್ಧ?
ವಿದ್ಯಾರ್ಥಿ: ಸ್ವಚ್ಛತೆಗೆ.
ಪ್ರಧಾನ ಮಂತ್ರಿ ಮೋದಿ: ಇಂದೋರ್ ಬಗ್ಗೆ, ಅದರ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಾರೆ. ನನಗೆ ನಂಬರ್ ಸರಿಯಾಗಿ ಕಾಣಿಸುತ್ತಿಲ್ಲ, ನಿಮ್ಮದು ಐದನೇ ನಂಬರೇ?
ವಿದ್ಯಾರ್ಥಿ: ನಮಸ್ಕಾರ ಸರ್. ಸರ್, ನಾನು ಹಿಮಾಚಲ ಪ್ರದೇಶದ ಮಂಡಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ. ನನ್ನ ತಂದೆ ನಿಮ್ಮ ಬಲು ದೊಡ್ಡ ಅಭಿಮಾನಿ.
ಪ್ರಧಾನ ಮಂತ್ರಿ ಮೋದಿ: ನಿಮ್ಮ ಗ್ರಾಮ ಎಲ್ಲಿದೆ?.
ಪೋಷಕರು: ಹಿಮಾಚಲ ಪ್ರದೇಶದ ಮಂಡಿಯಲ್ಲಿದೆ ಅದು. ಅದು ಮಂಡಿಯಿಂದ ಸುಮಾರು 8-9 ಕಿಲೋಮೀಟರ್ ದೂರದಲ್ಲಿದೆ. ನೀವು ಕ್ಷೇಮವೇ?.
ಪ್ರಧಾನ ಮಂತ್ರಿ ಮೋದಿ: ನಾನು ಆರೋಗ್ಯವಾಗಿದ್ದೇನೆ. ಮೊದಲು ನಾನು ನಿಮ್ಮ ವಲಯದಿಂದ ಸೇವ್ ಬಡಿಯನ್ನು ಪಡೆಯುತ್ತಿದ್ದೆ.
ನಿಮ್ಮೊಂದಿಗೆ ಮಾತನಾಡುತ್ತಿರುವುದು ಬಹಳ ಸಂತೋಷದ ಸಂಗತಿ. ಭಾರತದ ಯುವಜನತೆ ಧನಾತ್ಮಕವಾಗಿ ಚಿಂತಿಸುತ್ತಾರೆ, ಪ್ರಾಯೋಗಿಕವಾಗಿಯೂ ಇದ್ದಾರೆ ಎಂಬ ನನ್ನ ನಂಬಿಕೆ ಇದರಿಂದ ಇನ್ನಷ್ಟು ಗಟ್ಟಿಯಾಗಿದೆ. ಋಣಾತ್ಮಕ ಚಿಂತನೆಗಳಿಗೆ ಬದಲಾಗಿ ನೀವು ಪ್ರತೀ ಸವಾಲನ್ನು ಮತ್ತು ಸಂಕಷ್ಟವನ್ನು ನಿಮ್ಮ ಬಲವನ್ನಾಗಿ ಪರಿವರ್ತಿಸಿಕೊಂಡಿದ್ದೀರಿ. ಮನೆಯಲ್ಲಿ ನಿರ್ಬಂಧಿಸಲ್ಪಟ್ಟಿರಬೇಕಾದ ಸಂದರ್ಭದಲ್ಲಿ ನೀವು ನಡೆಸಿದ ಅನ್ವೇಷಣೆಗಳು ಮತ್ತು ನೀವು ಕಲಿತ ಹೊಸ ಸಂಗತಿಗಳು ನಿಮ್ಮಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿವೆ. ನಿಮಗೆ ಯಾವುದೇ ಪೂರ್ವ ಸೂಚನೆ ನೀಡದೆ ಇದ್ದಕ್ಕಿದ್ದಂತೆ ನಾನು ಪ್ರವೇಶ ಮಾಡಿದಾಗ ನೀವು ನನ್ನೊಂದಿಗೆ ಮಾತನಾಡುವಾಗ ತಡವರಿಸಲಿಲ್ಲ, ನಾನದನ್ನು ಗಮನಿಸಿದ್ದೇನೆ. ನಿಮ್ಮ ಶಿಕ್ಷಕರ ಜೊತೆ ಮಾತನಾಡುವಂತೆ , ನಿಮ್ಮ ಪೋಷಕರ ಜೊತೆ ಮಾತನಾಡಿದಂತೆ ಅದೇ ರೀತಿಯಲ್ಲಿ ನನ್ನ ಜೊತೆಯೂ ನೀವು ಮಾತನಾಡಿದಿರಿ.ಇದರ ಬಗ್ಗೆ ನಾನು ಬಹಳ ಸಂತೋಷಪಡುತ್ತೇನೆ. ನಾನು ಬಹಳ ಮಂದಿ ಮಕ್ಕಳ ಜೊತೆ ಬಹಳ ಅನುಕೂಲಕರ ರೀತಿಯಲ್ಲಿ ಮಾತನಾಡಲು ಸಮರ್ಥನಾದೆ . ಇದು ಬಹಳ ಸಂತೋಷದ ಅನುಭವ. ಇಲ್ಲದಿದ್ದರೆ ಏನಾಗುತ್ತದೆ ಎಂದರೆ ವ್ಯಕ್ತಿಗಳು ಯಾರನ್ನಾದರೂ ನೋಡಿದರೆ ಹಿಂದೆ ಸರಿಯುತ್ತಾರೆ. ಮತ್ತು ಅವರು ಮುಕ್ತವಾಗಿ ಮಾತನಾಡುವುದಿಲ್ಲ. ಆದರೆ ನೀವೆಲ್ಲರೂ ಬಹಳ ಆತ್ಮವಿಶ್ವಾಸದಿಂದ ಮಾತನಾಡುವುದನ್ನು ನಾನು ಗಮನಿಸಿದ್ದೇನೆ. ಇದು ನನಗೆ ಬಹಳ ಸುಂದರ ಅನುಭವ.
ಸ್ನೇಹಿತರೇ,
ನಿಮ್ಮ ಅನುಭವಗಳು ನಿಮ್ಮ ಬದುಕಿನ ಪ್ರತೀ ಹಂತದಲ್ಲಿಯೂ ಬಹಳ ಉಪಯೋಗಕ್ಕೆ ಬರಲಿವೆ. ಕಠಿಣತಮವಾದ ಪರಿಸ್ಥಿತಿಗಳನ್ನು ನೆನಪಿಸಿಕೊಳ್ಳುತ್ತಾ, ಪರಿತಪಿಸುತ್ತಾ ಸಮಯ ವ್ಯರ್ಥ ಮಾಡಿಕೊಳ್ಳುತ್ತಾ ಕುಳಿತುಕೊಳ್ಳಬೇಡಿ. ಕಠಿಣ ಪರಿಸ್ಥಿತಿಯಲ್ಲಿ ನೀವು ಏನನ್ನಾದರೂ ಕಲಿತುಕೊಂಡಿರುತ್ತೀರಿ. ಅಂತಹ ಅನುಭವಗಳಿಂದ ಕಲಿತುಕೊಳ್ಳುವ ಮೂಲಕ ನೀವು ಬಲವನ್ನು, ಶಕ್ತಿಯನ್ನು ಗಳಿಸಿಕೊಳ್ಳುತ್ತೀರಿ. ನೀವು ಯಾವುದೇ ಕ್ಷೇತ್ರಕ್ಕೆ ಹೋಗಿ ನೀವು ಬಹಳಷ್ಟು ಹೊಸ ಸಂಗತಿಗಳನ್ನು ಮಾಡಲು ಸಮರ್ಥರಾಗಿರುತ್ತೀರಿ. ನಾವು ಸತತವಾಗಿ ತಂಡ ಸ್ಫೂರ್ತಿಯ ಬಗ್ಗೆ ಹೇಳುತ್ತಿರುವುದನ್ನು, ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳುತ್ತಿರುವುದನ್ನು,   ನೀವು ಗಮನಿಸಿರಬಹುದು. ಆದರೆ ಕೊರೊನಾ ಕಠಿಣ ಪರಿಸ್ಥಿತಿಗಳ ನಡುವೆ, ನಾವು ಈ ಸಂಬಂಧಗಳ ಬಗ್ಗೆ ನಿಕಟವಾದ ಗಮನ ಹರಿಸುವಂತಹ ಹೊಸ ಅವಕಾಶ ಲಭಿಸಿತು. ಅವುಗಳನ್ನು ಅರ್ಥ ಮಾಡಿಕೊಂಡು ನಮ್ಮ ಬದುಕನ್ನು ಹೊಸ ರೀತಿಯಲ್ಲಿ ನಡೆಸುವುದಕ್ಕೆ ಇದು ಅವಕಾಶ ಒದಗಿಸಿತು. ನಮ್ಮ ಸಮಾಜದಲ್ಲಿಯ ಪ್ರತಿಯೊಬ್ಬರೂ ಹೇಗೆ ಪರಸ್ಪರ ಕೈಹಿಡಿದುಕೊಂಡು ನಡೆದರು ಮತ್ತು ದೇಶವು ಇಂತಹ ಬಹಳ ದೊಡ್ಡ ಸವಾಲನ್ನು ತಂಡ ಸ್ಫೂರ್ತಿಯಿಂದ ಹೇಗೆ ಎದುರಿಸಿತು. ನಾವಿದನ್ನೆಲ್ಲಾ ಅನುಭವಿಸಿದೆವು. ನನಗೆ ಖಚಿತವಿದೆ, ಸಾರ್ವಜನಿಕ ಸಹಭಾಗಿತ್ವದ ಈ ಅನುಭವ ಮತ್ತು ತಂಡ ರೂಪಿಯಾಗಿ ಮಾಡಿದ ಕೆಲಸ ನಿಮಗೆ ಕೂಡಾ ಹೊಸ ಬಲ ನೀಡಲಿದೆ.
ಸ್ನೇಹಿತರೇ,
ಬಹಳ ಕಠಿಣ ಸಮಯದಲ್ಲಿ ಕೂಡಾ, ನಮ್ಮ ದೇಶದ ಚರಿತ್ರೆಯನ್ನು ನೋಡಿದರೆ, ಈ ಸಮಯದಲ್ಲಿಯೂ ಕೂಡಾ ನಾವು ಕಾಣುತ್ತೇವೆ. ನಾನು ಯಾರೊಂದಿಗೋ ಮಾತನಾಡುತ್ತಿದ್ದಾಗ.. ಆ ಮಗಳು ಹೇಳಿದಳು ಅವಳು ಅವಳ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಳು ಎಂಬುದಾಗಿ. ಇದು ಜೀವನದಲ್ಲಿ ಸಣ್ಣ ಸಂಗತಿಯೇನಲ್ಲ. ಅದಾಗ್ಯೂ ಆಕೆಯ ಕಣ್ಣಿನಲ್ಲಿ ನಂಬಿಕೆ ಇತ್ತು. ಪ್ರತಿಯೊಬ್ಬರೂ ವಿಪತ್ತು ಬಂದಿದೆ ಎಂಬ ಭಾವನೆಯನ್ನು ಹೊಂದಿದ್ದರು. ಆದರೆ ನಾವು ಜಯಶೀಲರಾಗಿ ಹೊರಹೊಮ್ಮಲಿದ್ದೇವೆ. ಪ್ರತಿಯೊಬ್ಬ ಭಾರತೀಯರೂ ಇದೊಂದು ಜಾಗತಿಕ ಸಾಂಕ್ರಾಮಿಕ ಎಂದು ಹೇಳುತ್ತಿದ್ದಾರೆ. ಒಂದು ಶತಮಾನದಲ್ಲಿ ಇಂತಹದೊಂದು ಬಿಕ್ಕಟ್ಟು ಎದುರಾಗಿರಲಿಲ್ಲ. ಕಳೆದ ನಾಲ್ಕೈದು ತಲೆಮಾರುಗಳಲ್ಲಿ ಇಂತಹದನ್ನು ಯಾರೂ ಕೇಳಿರಲಿಲ್ಲ. ಆದರೆ ಅದು ನಮ್ಮ ಕಾಲದಲ್ಲಿ ಬಂದಿತು. ಆದಾಗ್ಯೂ ಪ್ರತೀ ಭಾರತೀಯರೂ ನಾವಿದನ್ನು ಸೋಲಿಸುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ನಾವು ಈ ಬಿಕ್ಕಟ್ಟಿನಿಂದ ಹೊರಬಂದು ಹೊಸ ಶಕ್ತಿಯೊಂದಿಗೆ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳುತ್ತಿದ್ದಾರೆ. ನಾವೆಲ್ಲರೂ ಜೊತೆಗೂಡಿ ಮುನ್ನಡೆಯಬೇಕು. ನೀವು ಎಲ್ಲೆಲ್ಲಿ ಹೋಗುತ್ತೀರೋ, ನೀವು ಜೊತೆಗೂಢಿ ಮುನ್ನಡೆಯುವುದನ್ನು ಮುಂದುವರಿಸಿ. ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿರಿ, ನನಗೆ ಆ ಭರವಸೆ ಇದೆ.
ಮತ್ತು ನಾನು ಹೇಳಿದಂತೆ, ಜೂನ್ 5 ಪರಿಸರ ದಿನಾಚರಣೆ, ಪರಿಸರಕ್ಕಾಗಿ ಏನಾದರೂ ಮಾಡಿರಿ. ಯಾಕೆಂದರೆ ಭೂಮಿಯನ್ನು ಮತ್ತು ಪ್ರಕೃತಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅದೇ ರೀತಿ, ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ. ಬಹುತೇಕ ರಾಷ್ಟ್ರಗಳು ಈ ಯೋಗ ದಿನದ ನಿರ್ಧಾರಕ್ಕೆ ಬೆಂಬಲ ನೀಡಿವೆ. ವಿಶ್ವ ಸಂಸ್ಥೆಯಲ್ಲಿ ಬಹುತೇಕ ಎಲ್ಲಾ ರಾಷ್ಟ್ರಗಳು ಬೆಂಬಲಿಸಿದಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಯೋಗವನ್ನು ಅಂಗೀಕರಿಸಿ ಮತ್ತು ಅದನ್ನು ನಿಮ್ಮ ಕುಟುಂಬದ ಜೊತೆ ನಡೆಸಿ. ನಾನು ಈ ಮೊದಲು ಹೇಳಿದಂತೆ ಅಲ್ಲಿ ಹಲವಾರು ಪಂದ್ಯಾಟಗಳಿವೆ. ಒಲಿಂಪಿಕ್ಸ್ ಕೂಡಾ ಇದೆ. ನಮ್ಮ ದೇಶದಿಂದ ಒಲಿಂಪಿಕ್ಸ್ ನಲ್ಲಿ ಯಾರು ಭಾಗವಹಿಸುತ್ತಾರೆ ಎಂಬ ಬಗ್ಗೆ  ನಾವು ತಿಳಿದುಕೊಳ್ಳಬೇಕು. ಈ ಆಟಗಾರರು ಹಾಕುವ ಶ್ರಮ, ಪ್ರಯತ್ನಗಳು ಫಲ ನೀಡಿದ್ದನ್ನು ನಾವು ನೋಡಿದಾಗ ಮತ್ತು ಅವರು ಹೇಗೆ ಈ ಸಂಕಷ್ಟದ ಪರಿಸ್ಥಿತಿಗಳನ್ನು ನಿಭಾಯಿಸಿ ಹೇಗೆ ಹೊರಬಂದರು ಎಂಬುದು ನಮ್ಮ ಅರಿವಿಗೆ ಬಂದಾಗ ನಮಗೆ ಹೊಸ ಪ್ರೇರಣೆ  ದೊರೆಯುತ್ತದೆ. ಎಲ್ಲಾ ಯುವಜನತೆ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ನನಗೆ ಭರವಸೆ ಇದೆ.  
ಈ ಕೊರೊನಾ ಅವಧಿಯಲ್ಲೂ, ನೀವು ನಿಮ್ಮ ಕುಟುಂಬ ಸದಸ್ಯರನ್ನು ಲಸಿಕೆ ಪಡೆಯಲು ನೋಂದಾಯಿಸಬಹುದು. ನಿಮ್ಮ ಸ್ಥಳೀಯ ಪ್ರದೇಶದ ಜನರನ್ನು ಲಸಿಕಾ ಕಾರ್ಯಕ್ರಮಕ್ಕೆ ನೊಂದಾಯಿಸಿರಿ. ಲಸಿಕೆಗಳು ಲಭ್ಯವಾಗುತ್ತಿರುವಂತೆಯೇ ಅವರಿಗೆ ಲಸಿಕೆ ನೀಡಲಾಗುತ್ತದೆ. ಸೇವೆಯನ್ನು ನಿಮ್ಮ ಕೆಲಸದ ಭಾಗವಾಗಿಸಿ. ನನ್ನ ಶುಭ ಹಾರೈಕೆಗಳು ನಿಮ್ಮೊಂದಿಗೆ ಇವೆ. ನಿಮ್ಮ ಪೋಷಕರ ಆಶೀರ್ವಾದವೂ ನಿಮ್ಮ ಮೇಲಿರಲಿ!. ನಿಮ್ಮ ಕನಸಿನಂತೆ ಬದುಕಿ. ಮತ್ತು ನಿಮ್ಮ ಪೋಷಕರು ನಿಮ್ಮ ಕನಸುಗಳ ಬಗೆಗೆ ಹೆಮ್ಮೆ ಪಡುವಂತಾಗಲಿ. ನಾನು ನಿಮ್ಮೊಂದಿಗೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ಸೇರಿಕೊಂಡರೂ ಅದೊಂದು ಬಹಳ ಖುಷಿಯ ಉತ್ತಮ ಭಾವನೆಯನ್ನು ಮೂಡಿಸುವ ಕಾರ್ಯಕ್ರಮವಾಯಿತು. ಹಾಸ್ಯವನ್ನು ಮಾಡುತ್ತಾ ನೀವು ಕಾಲ ಕಳೆಯುತ್ತಿರಬೇಕಾದರೆ ನಾನು ನಿಮ್ಮನ್ನು ಸ್ವಲ್ಪ ತೊಂದರೆಗೆ ಈಡು ಮಾಡಿದೆ. ಆದರೆ ಅದು ಉತ್ತಮ ಅನುಭವ. ನಾನು ನಿಮಗೆ ಅಭಾರಿಯಾಗಿದ್ದೇನೆ.
ಬಹಳ ಧನ್ಯವಾದಗಳು

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

****
 


(ಪ್ರಕಟಣೆ ಐ.ಡಿ.: 1727534) ವಿಸಿಟರ್ ಕೌಂಟರ್ : 467