ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡೆಲ್ಟಾ ಪ್ಲಸ್ ರೂಪಾಂತರಿಯನ್ನು ಇನ್ನೂ ಕಳವಳಕಾರಿ ರೂಪಾಂತರಿ ಎಂದು ವರ್ಗೀಕರಿಸಲಾಗಿಲ್ಲ: ಡಾ. ಪಾಲ್


ದೇಶದಲ್ಲಿ ಅದರ ಸಂಭಾವ್ಯ ಉಪಸ್ಥಿತಿ ಮತ್ತು ವೃದ್ಧಿಯನ್ನು ನಿರಂತರವಾಗಿ ನಿಗಾ ಮತ್ತು ಪತ್ತೆ ಮಾಡುವುದು ಮುಂದಿನ ಮಾರ್ಗವಾಗಿದೆ: ನೀತಿ ಆಯೋಗದ (ಆರೋಗ್ಯ) ಸದಸ್ಯ

Posted On: 16 JUN 2021 11:38AM by PIB Bengaluru

ಹೊಸದಾಗಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರವು ಇನ್ನೂ ಕಳವಳಕಾರಿ ರೂಪಾಂತರಿ ಎಂದು ವರ್ಗೀಕರಿಸಲಾಗಿಲ್ಲ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ.ವಿ.ಕೆ. ಪಾಲ್ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಹೊಸ ರೂಪಾಂತರಗಳನ್ನು ಪತ್ತೆಹಚ್ಚುವ ಕುರಿತ ಸಾರ್ವಜನಿಕ ಉಪನ್ಯಾಸದಲ್ಲಿ ಅವರು, “ಹೌದು ಒಂದು ಹೊಸ ರೂಪಾಂತರಿ ಪತ್ತೆಯಾಗಿದೆ, ಅದರ ಉಪಸ್ಥಿತಿ ಇದೆ. ಇದು ಈವರೆಗೆ ಆಸಕ್ತಿಯ ರೂಪಾಂತರಿಯಾಗಿದೆ (VoI), ಆದರೆ ಇದನ್ನು ಇನ್ನೂ ಕಳವಳಕಾರಿ ರೂಪಾಂತರಿ(VoC) ಎಂದು ವರ್ಗೀಕರಿಸಲಾಗಿಲ್ಲ. VoC ಎನ್ನುವುದು ಮಾನವ ಕುಲಕ್ಕೆ ಪ್ರತೀಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ಇದು ಹೆಚ್ಚಿನ ಪ್ರಸರಣ ಅಥವಾ ಹರಡುವ ಕಾರಣದಿಂದಾಗಿ ಹೀಗೆನಿಸಿರಬಹುದು. ಡೆಲ್ಟಾ ಪ್ಲಸ್ ರೂಪಾಂತರಿಯ ಬಗ್ಗೆ ಈ ಕ್ಷಣದಲ್ಲಿ ನಮಗೆ ಹೆಚ್ಚು ತಿಳಿದಿಲ್ಲ.” ಎಂದು ಡಾ. ಪಾಲ್ ಕೋವಿಡ್-19 ಕುರಿತಂತೆ ಈ ವಾರ ದೆಹಲಿಯ ಪಿಐಬಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.  


ನಮ್ಮ ಮುಂದಿನ ಹಾದಿ: ನಿಗಾ, ಪತ್ತೆ ಮತ್ತು ಸ್ಪಂದನೆ
ದೇಶದಲ್ಲಿ ಅದರ ಸಂಭಾವ್ಯ ಉಪಸ್ಥಿತಿಯ ಮೇಲೆ ನಿಗಾ ಮತ್ತು ಸೂಕ್ತವಾದ ಸಾರ್ವಜನಿಕ ಆರೋಗ್ಯ ಸ್ಪಂದನೆ ಮುಂದಿನ ಮಾರ್ಗವಾಗಿದೆ ಎಂದು ಡಾ. ಪಾಲ್ ಹೇಳಿದ್ದಾರೆ. "ಈ ಬದಲಾವಣೆಯ ಪರಿಣಾಮವನ್ನು, ಈ ರೂಪಾಂತರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಾವು ಗಮನಿಸಬೇಕಾಗಿದೆ; ಇದು ನಮ್ಮ ದೇಶದ ಹೊರಗೆ ಕಂಡುಬಂದಿದೆ. ನಮ್ಮ ದೇಶದಲ್ಲಿ ಅದರ ಸಂಭಾವ್ಯ ಉಪಸ್ಥಿತಿ ಮತ್ತು ವೃದ್ಧಿಯನ್ನು ನಿರ್ಣಯಿಸಲು ಮತ್ತು ಪತ್ತೆಹಚ್ಚಲು ನಾವು ಇದನ್ನು ಭಾರತೀಯ ಎಸ್.ಎ.ಆರ್.ಎಸ್.-ಸಿ.ಓ.ವಿ-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (ಐ.ಎನ್.ಎಸ್.ಎ.ಸಿ.ಓ.ಜಿ) ಮೂಲಕ ನಿಗಾ ಇಡಬೇಕಾಗಿದೆ. ವೈರಾಣುವಿಗೆ ಸಂಬಂಧಿಸಿದಂತೆ ಇದು ಮುಂದಿನ ದಾರಿಯಾಗಿದೆ” ಎಂದು ಡಾ. ಪಾಲ್ ಹೇಳಿದರು.  ಸುಮಾರು 28 ಪ್ರಯೋಗಾಲಯಗಳ ನಮ್ಮ ಸಮಗ್ರ ವ್ಯವಸ್ಥೆಗೆ ಇದು ಭವಿಷ್ಯದ ಕಾರ್ಯದ ಪ್ರಮುಖ ಕ್ಷೇತ್ರವಾಗಿದೆ. ವ್ಯವಸ್ಥೆಯು ಇದನ್ನು ನಿರಂತರವಾಗಿ ನಿಗಾ ಇಡುತ್ತದೆ ಮತ್ತು ಅದರ ಮಹತ್ವವನ್ನು ಅಧ್ಯಯನ ಮಾಡುತ್ತದೆ. ಇದು ವಿಜ್ಞಾನವು ನೋಡಬೇಕಾದ ಮತ್ತು ಅರ್ಥಮಾಡಿಕೊಳ್ಳುವ ವಿಷಯವಾಗಿದೆ ಎಂದು ಡಾ. ಪಾಲ್ ಹೇಳಿದರು.


 “ರೂಪಾಂತರಿಯನ್ನು ದೂರವಿಡಲು ನಿಖರವಾದ ಶಸ್ತ್ರವಿಲ್ಲ”
ಈ ರೂಪಾಂತರಿಯ ಸೋಂಕು ನಿಯಂತ್ರಣ ಮತ್ತು ಕಂಟೈನ್ಮೆಂಟ್ ಕ್ರಮಗಳು ಮತ್ತು ನಡವಳಿಕೆಯ ಮಹತ್ವದ ಬಗ್ಗೆ ನಮಗೆ ಎಚ್ಚರಿಕೆಯಾಗಿದೆ ಎಂದು ನೀತಿ ಆಯೋಗದ ಸದಸ್ಯರು ಹೇಳಿದರು. “ಭವಿಷ್ಯದಲ್ಲಿ ಅವು ಗೋಚರಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ನಿಖರ ಶಸ್ತ್ರ ಬಳಕೆಗೆ ಲಭ್ಯವಿಲ್ಲ, ನಾವು ಈ ರೂಪಾಂತರಿಗಳನ್ನು ಹೊಡೆದೋಡಿಸಲು ಯಾವುದೇ ಮಾರ್ಗವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಮಾಡಬೇಕಾದದ್ದು ನಮ್ಮ ಮೇಲೆ ಅವುಗಳ ಪರಿಣಾಮಗಳ ಬಗ್ಗೆ ಜಾಗೃತರಾಗಿರುವುದು, ಅವರ ನಡವಳಿಕೆಯ ಮೇಲೆ ನಿಗಾ ಇಡುವುದು, ಅರ್ಥಮಾಡಿಕೊಳ್ಳುವುದು ಮತ್ತು ಸೂಕ್ತವಾದ ಸ್ಪಂದನೆಯನ್ನು ರೂಪಿಸುವುದಾಗಿದೆ. ಸೂಕ್ತವಾದ ಸ್ಪಂದನೆಯಲ್ಲಿ ಒಂದೇ ತತ್ವಗಳನ್ನು ಒಳಗೊಂಡಿದೆ, ಅವುಗಳೆಂದರೆ  ಕಂಟೈನ್ಮೆಂಟ್ ಕ್ರಮಗಳು ಮತ್ತು ಸೂಕ್ತ ಕೋವಿಡ್ ನಡವಳಿಕೆ” ಎಂದರು.
ಮೂಲ ಕಾರಣವನ್ನು ತಿಳಿಸುವ ಮತ್ತು ಪ್ರಸರಣದ ಸರಪಳಿಯನ್ನು ಮುರಿಯುವ ಮಹತ್ವದ ಕುರಿತು ಮಾತನಾಡಿದ ಅವರು, “ಯಾವುದೇ ಹೊಸ ರೂಪಾಂತರಿಯನ್ನು ನಿಭಾಯಿಸುವ ಪ್ರಮುಖ ಸಾಧನವೆಂದರೆ ಕೋವಿಡ್  ಸೂಕ್ತ ನಡವಳಿಕೆಯನ್ನು ಅನುಸರಿಸುವುದು. ಆದ್ದರಿಂದ, ನಾವು ಮೂಲ ಕಾರಣವನ್ನು ಪರಿಹರಿಸಲು ಮತ್ತು ಪ್ರಸರಣದ ಸರಪಳಿಗಳನ್ನು ಮುರಿಯಲು ಸಾಧ್ಯವಾದರೆ, ನಾವು ಯಾವುದೇ ರೂಪಾಂತರಿಯಾಗಿದ್ದರೂ ಹರಡುವಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ. ” ಎಂದರು.


ಪುನರಾವರ್ತನೆಯಲ್ಲಿನ ದೋಷಗಳು ರೂಪಾಂತರಿ ಕಳವಳಕಾರಿಯಾಗಿ ಹೊರಹೊಮ್ಮಲು ಕಾರಣವಾಗಬಹುದು
ಡೆಲ್ಟಾ ಪ್ಲಸ್ ರೂಪಾಂತರಿಯ ಮೂಲವನ್ನು ವಿವರಿಸಿದ ಡಾ. ಪಾಲ್: “ಎರಡನೇ ಅಲೆಯ ಸಮಯದಲ್ಲಿ, ಡೆಲ್ಟಾ ರೂಪಾಂತರ - ಬಿ .1.617.2 ಅದರ ಪರಿಣಾಮವನ್ನು ಪ್ರದರ್ಶಿಸಿತು; ಅದರ ಹೆಚ್ಚಿನ ಪ್ರಸರಣವು ಅಲೆಯನ್ನು ತೀವ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅದೇ ಸಾಲಿನಲ್ಲಿ, ಹೆಚ್ಚುವರಿ ರೂಪಾಂತರವನ್ನು ಪತ್ತೆಮಾಡಲಾಗಿದೆ, ಇದನ್ನು ಜಾಗತಿಕ ದತ್ತಾಂಶ ವ್ಯವಸ್ಥೆಗೆ ಸಹ ಸಲ್ಲಿಸಲಾಗಿದೆ. ಇದನ್ನು 'ಡೆಲ್ಟಾ ಪ್ಲಸ್' ಅಥವಾ 'ಎ.ವೈ .1' ರೂಪಾಂತರ ಎಂದು ಉಲ್ಲೇಖಿಸಲಾಗಿದೆ. ಮಾರ್ಚ್ ನಲ್ಲಿ ಯುರೋಪಿನಲ್ಲಿ ಈ ರೂಪಾಂತರವನ್ನು ಗುರುತಿಸಲಾಯಿತು ಮತ್ತು ಕೇವಲ ಎರಡು ದಿನಗಳ ಹಿಂದೆ ಜೂನ್ 13 ರಂದು ಇದರ ಬಗ್ಗೆ ತಿಳಿಸಲಾಗಿದೆ ಮತ್ತು ಸಾರ್ವಜನಿಕವಾಗಿ ಬಹಿರಂಗ ಮಾಡಲಾಗಿದೆ. " ಎಂದರು.
ಎಂ.ಆರ್.ಎನ್.ಎ ವೈರಾಮುಗಳು ಅವುಗಳ ಪುನರಾವರ್ತನೆಯಲ್ಲಿನ ದೋಷಗಳಿಗೆ ವಿಶೇಷವಾಗಿ ಮುಂದಾಗುತ್ತವೆ ಎಂದು ಅವರು ವಿವರಿಸಿದರು. ಅವುಗಳ ಆರ್‌.ಎನ್‌.ಎ ಪುನರಾವರ್ತನೆಯಲ್ಲಿ ದೋಷಗಳು ಸಂಭವಿಸಿದಾಗ, ವೈರಾಣು ಒಂದು ಹೊಸ ಪಾತ್ರವನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ಪಡೆಯುತ್ತದೆ. “ಕೆಲವೊಮ್ಮೆ, ಇದು ರೋಗದ ದೃಷ್ಟಿಕೋನದಿಂದ ಮಹತ್ವದ್ದಾಗಿರಬಹುದು, ಇದು ಸ್ಪೈಕ್ ಪ್ರೋಟೀನ್‌ ನಂತಹ ಪ್ರದೇಶದಲ್ಲಿರಬಹುದಾಗಿದ್ದು, ಅದರ ಮೂಲಕ ವೈರಸ್ ದೇಹದ ಜೀವಕೋಶಗಳಿಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ಆ ಭಾಗವು ಹಿಂದಿನ ಆವೃತ್ತಿಗಿಂತ ಚುರುಕಾಗಿದ್ದರೆ, ಅದು ನಮಗೆ ಅನಾನುಕೂಲವಾಗಿರುತ್ತದೆ. ಆದ್ದರಿಂದ ನಾವು ಅಂತಹ ರೂಪಾಂತರಿಗಳ ಬಗ್ಗೆ ಚಿಂತಿತರಾಗಿದ್ದೇವೆ." ಎಂದು ತಿಳಿಸಿದರು.



(Release ID: 1727529) Visitor Counter : 286