ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಭಾರತಕ್ಕೆ ಆಮ್ಲಜನಕ ಯೋಜನೆ (ಪ್ರಾಜೆಕ್ಟ್‌ ಓ2)

Posted On: 13 JUN 2021 11:11AM by PIB Bengaluru

ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವೈದ್ಯಕೀಯ ಆಮ್ಲಜನಕಕ್ಕಾಗಿ ಭಾರಿ ಬೇಡಿಕೆ ಕಂಡು ಬಂದಿತು. ಪ್ರಸ್ತುತ ಬೇಡಿಕೆಯನ್ನು ಪೂರೈಸುವ ಜೊತೆಗೆ, ಭವಿಷ್ಯದಲ್ಲಿ ನಮಗೆ ಸಮರ್ಪಕ ಪೂರೈಕೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಸಹ ಮುಖ್ಯವಾಗಿದೆ. ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ʻಭಾರತಕ್ಕೆ ಆಮ್ಲಜನಕ ಯೋಜನೆʼಯು ('ಪ್ರಾಜೆಕ್ಟ್ ಓ2 ಫಾರ್ ಇಂಡಿಯಾ) ಹೆಚ್ಚಿದ ವೈದ್ಯಕೀಯ ಆಮ್ಲಜನಕದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸಲು ವಿವಿಧ ಪಾಲುದಾರರಿಗೆ ಅನುವು ಮಾಡಿಕೊಡುತ್ತದೆ. 
ʻಭಾರತಕ್ಕೆ ಆಮ್ಲಜನಕ ಯೋಜನೆʼ ಅಡಿಯಲ್ಲಿ,  ʻರಾಷ್ಟ್ರೀಯ ಆಮ್ಲಜನಕ ಒಕ್ಕೂಟʼವನ್ನು ರಚಿಸಲಾಗಿದ್ದು, ಇದು ಜಿಯೋಲೈಟ್‌ಗಳಂತಹ ಮುಖ್ಯವಾದ ಕಚ್ಚಾ ಪದಾರ್ಥಗಳ ಪೂರೈಕೆ; ಸಣ್ಣ ಆಮ್ಲಜನಕ ಸ್ಥಾವರಗಳ ಸ್ಥಾಪನೆ; ಆಮ್ಲಜನಕ
 ಸಾಂದ್ರಕಗಳು, ಆಮ್ಲಜನಕ ಘಟಕಗಳು, ವೆಂಟಿಲೇಟರ್‌ಗಳಂತಹ ಅಂತಿಮ ಉತ್ಪನ್ನಗಳ ಸ್ಥಾಪನೆಯಲ್ಲಿ ತೊಡಗಿದೆ. ಕೇವಲ ತಕ್ಷಣಕ್ಕೆ ಅಲ್ಪಾವಧಿಯ ಪರಿಹಾರವನ್ನು ಒದಗಿಸುವುದು ಮಾತ್ರವಲ್ಲದೆ, ದೀರ್ಘಕಾಲೀನ ಸನ್ನದ್ಧತೆಗಾಗಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಆಮ್ಲಜನಕ ಒಕ್ಕೂಟವು ಕೆಲಸ ಮಾಡುತ್ತಿದೆ. ತಜ್ಞರ ಸಮಿತಿಯು ಭಾರತ ಮೂಲದ ತಯಾರಕರು, ನವೋದ್ಯಮಗಳು ಮತ್ತು ʻಎಂಎಸ್‌ಎಂಇʼಗಳು ಉತ್ಪಾದಿಸುವ (ಎಫ್‌ಐಸಿಸಿಐ, ಎಂಇಎಸ್ಎ ಇತ್ಯಾದಿಗಳ ಸಹಭಾಗಿತ್ವದಲ್ಲಿ) ಆಕ್ಸಿಜನ್ ಘಟಕಗಳು, ಸಾಂದ್ರಕಗಳು ಮತ್ತು ವೆಂಟಿಲೇಟರ್‌ಗಳಂತಹ ನಿರ್ಣಾಯಕ ಉಪಕರಣಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಉತ್ಪಾದನಾ ಮತ್ತು ಪೂರೈಕೆ ಒಕ್ಕೂಟವು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್); ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌(ಟಿಸಿಇ); ಬೆಂಗಳೂರಿನ ಸಿ-ಕ್ಯಾಂಪ್; ಐಐಟಿ ಕಾನ್ಪುರ (ಐಐಟಿ-ಕೆ); ಐಐಟಿ ದೆಹಲಿ (ಐಐಟಿ-ಡಿ); ಐಐಟಿ ಬಾಂಬೆ (ಐಐಟಿ-ಬಿ), ಐಐಟಿ ಹೈದರಾಬಾದ್ (ಐಐಟಿ-ಎಚ್); ಐಐಎಸ್ಇಆರ್-ಭೋಪಾಲ್; ಪುಣೆಯ ವೆಂಚರ್‌ ಸೆಂಟರ್; ಹಾಗೂ 40ಕ್ಕೂ ಹೆಚ್ಚು ʻಎಂಎಸ್ಎಂಇʼಗಳನ್ನು ಒಳಗೊಂಡಿದೆ. 
ಒಕ್ಕೂಟವು  ʻಯುಎಸ್ಎಐಡಿʼ ಎಡ್ವರ್ಡ್ಸ್ ಲೈಫ್ ಸೈನ್ಸಸ್ ಫೌಂಡೇಶನ್, ಕ್ಲೈಮೇಟ್ ವರ್ಕ್ಸ್ ಫೌಂಡೇಶನ್ ಮುಂತಾದ ಸಂಸ್ಥೆಗಳಿಂದ ಸಿಎಸ್ಆರ್/ ಜನೋಪಕಾರಿ ಅನುದಾನವನ್ನು ಪಡೆಯಲು ಪ್ರಾರಂಭಿಸಿದೆ. ಹೋಪ್ ಫೌಂಡೇಶನ್, ಅಮೇರಿಕನ್ ಇಂಡಿಯನ್ ಫೌಂಡೇಶನ್, ವಾಲ್ ಮಾರ್ಟ್, ಹಿಟಾಚಿ, ಬಿಎನ್‌ಪಿ ಪರಿಬಾಸ್ ಮತ್ತು ಇನ್ಫೋಚಿಪ್ಸ್‌ ಸಂಸ್ಥೆಗಳು ಒಕ್ಕೂಟದ ಕಾರ್ಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ತಮ್ಮ ಸಿಎಸ್ಆರ್ ಪ್ರಯತ್ನಗಳ ಭಾಗವಾಗಿ ಆಮ್ಲಜನಕ ಸಾಂದ್ರಕಗಳು ಮತ್ತು ವಿಪಿಎಸ್ಎ/ಪಿಎಸ್ಎ ಘಟಕಗಳನ್ನು ಸಂಗ್ರಹಿಸುತ್ತಿವೆ. ಒಕ್ಕೂಟದಲ್ಲಿರುವ ತಯಾರಕರಿಗೆ ಜಿಯೋಲೈಟ್ ನಂತಹ ಕಚ್ಚಾ ವಸ್ತುಗಳ ಖರೀದಿಗೆ ಹಣ ನೀಡಲು ‘ಎನ್‌ಎಂಡಿಸಿ ಲಿಮಿಟೆಡ್’ ಒಪ್ಪಿಕೊಂಡಿದೆ.
 ಈ ಯೋಜನೆಯ ಬಗ್ಗೆ ಪ್ರಶ್ನೆಗಳಿಗೆ
industry-engagement[at]psa[dot]gov[dot]in ಗೆ ಬರೆಯಿರಿ.
ವಿವಿಧ ಕೋವಿಡ್-19 ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಭೇಟಿ
 ನೀಡಿ:
https://www.psa.gov.in/innovation-science-bharat

****



(Release ID: 1726804) Visitor Counter : 317