ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಇತ್ತೀಚಿನ ವರದಿ

Posted On: 13 JUN 2021 9:18AM by PIB Bengaluru

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 10,26,159 ಆಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳ ಅವಧಿಯಲ್ಲಿ 54,531ರಷ್ಟು ಇಳಿದಿದೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 80,834 ಹೊಸ ಪ್ರಕರಣಗಳು ವರದಿಯಾಗಿದ್ದು, 71 ದಿನಗಳಲ್ಲೇ ಅತ್ಯಂತ ಕಡಿಮೆಯಾಗಿದೆ.
ಈವರೆಗೆ ದೇಶದಾದ್ಯಂತ ಚೇತರಿಕೆಯ ಒಟ್ಟು ಸಂಖ್ಯೆ 2,80,43,446
1,32,062 ರೋಗಿಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. 
ಸತತ 31ನೇ ದಿನವೂ ಚೇತರಿಕೆಯ ಸಂಖ್ಯೆಯೇ ದೈನಿಕ ಹೊಸ ಪ್ರಕರಣಗಳಿಗಿಂತಲೂ ಹೆಚ್ಚಾಗಿದೆ.
ಚೇತರಿಕೆಯ ದರ ಶೇ. 95.26ಕ್ಕೆ ಹೆಚ್ಚಳವಾಗಿದೆ.
ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗೆ ಇಳಿದಿದ್ದು ಪ್ರಸ್ತುತ ಶೇ.4.74 ಆಗಿದೆ.
ದೈನಿಕ ಪಾಸಿಟಿವಿಟಿ ದರ ಕೂಡ ಶೇತ4.25ಗಿದ್ದು, ಸತತ 20ನೇ ದಿನವೂ ಶೇ.10ಕ್ಕಿಂತ ಕಡಿಮೆ ಇದೆ.
ಪರೀಕ್ಷೆಯ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದ್ದು ಒಟ್ಟು 37.81 ಕೋಟಿ ಪರೀಕ್ಷೆ ನಡೆಸಲಾಗಿದೆ.
25.31 ಕೋಟಿ ಲಸಿಕೆ ಡೋಸ್ ಗಳನ್ನು ಈವರೆಗೆ ದೇಶದಾದ್ಯಂತ ಲಸಿಕಾ ಅಭಿಯಾನದಲ್ಲಿ ನೀಡಲಾಗಿದೆ.

***



(Release ID: 1726799) Visitor Counter : 165