ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕ್ಯೂ.ಎಸ್. ವಿಶ್ವ ವಿದ್ಯಾಲಯ ಶ್ರೇಯಾಂಕಗಳು 2022 ರಲ್ಲಿ ಉನ್ನತ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಭಾರತದ ಮೂರು ವಿಶ್ವವಿದ್ಯಾಲಯಗಳು


ಸಂಶೋಧನೆಗಾಗಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆದ ಐ.ಐ.ಎಸ್.ಸಿ. ಬೆಂಗಳೂರು

ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ದಾಪುಗಾಲಿಕ್ಕಿದೆ ಭಾರತ ಮತ್ತು ಅದೀಗ ವಿಶ್ವಗುರುವಾಗುತ್ತಿದೆ-ಶ್ರೀ ರಮೇಶ್ ಪೋಖ್ರಿಯಾಲ್ ’ನಿಶಾಂಕ್’

Posted On: 09 JUN 2021 4:29PM by PIB Bengaluru

ಭಾರತದ ಮೂರು ವಿಶ್ವವಿದ್ಯಾಲಯಗಳು ಕ್ಯೂ.ಎಸ್. ವಿಶ್ವವಿದ್ಯಾಲಯ ಶ್ರೇಯಾಂಕಗಳು 2022ರಲ್ಲಿ ಉನ್ನತ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.ಬೆಂಗಳೂರಿನ ಐ.ಐ.ಎಸ್.ಸಿ.ಯು ಸಂಶೋಧನೆಗೆ ಸಂಬಂಧಿಸಿ ವಿಶ್ವದಲ್ಲಿಯೇ ಒಂದನೇ ಸ್ಥಾನದಲ್ಲಿದೆ. ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ಇಂದು ಜಾಗತಿಕ ಅಂತಾರಾಷ್ಟ್ರೀಯ ಶ್ರೇಯಾಂಕಗಳ 18 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 

 



ಐ.ಐ.ಟಿ. ಬಾಂಬೆ 177 ನೇ ಸ್ಥಾನವನ್ನು ಗಳಿಸಿದೆ. ಐ.ಐ.ಟಿ. ದಿಲ್ಲಿ 185 ನೇ ಸ್ಥಾನ ಪಡೆದಿದೆ ಮತ್ತು ಐ.ಐ.ಎಸ್.ಸಿ ಬೆಂಗಳೂರು,  ವಿಶ್ವವಿದ್ಯಾಲಯಗಳ ಶ್ರೇಯಾಂಕಗಳಲ್ಲಿ 186 ನೇ ಸ್ಥಾನ ಪಡೆದಿದ್ದು,   ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ರಮೇಶ ಪೋಖ್ರಿಯಾಲ್ ’ನಿಶಾಂಕ್’ ಇವುಗಳನ್ನು  ಅಭಿನಂದಿಸಿದ್ದಾರೆ.

ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಭಾರತವು ದಾಪುಗಾಲಿಕ್ಕುತ್ತಿದೆ ಮತ್ತು ಅದು ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದ್ದಾರೆ. ನಾವು ಗುರು ವಿನಂತಹ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಹೊಂದಿರುವ ಬಗ್ಗೆ ಅಷ್ಟೇ ಹೆಮ್ಮೆ ಪಡುತ್ತೇವೆ, ಅವರು ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಭಾರತೀಯ ಶಿಕ್ಷಣ ವಲಯದ ಇತರ ಎಲ್ಲಾ ಭಾಗೀದಾರರ ಕಲ್ಯಾಣದ ಬಗ್ಗೆ  ನಿರಂತರ ಚಿಂತಿಸುತ್ತಿರುತ್ತಾರೆ ಎಂದೂ ಅವರು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಶ್ರೇಷ್ಠತಾ ಸಂಸ್ಥೆಗಳಂತಹ ಉಪಕ್ರಮಗಳು ನಮ್ಮ ಕಾಲೇಜುಗಳನ್ನು ಮತ್ತು ಸಂಸ್ಥೆಗಳನ್ನು ಜಾಗತಿಕವಾಗಿ ಶ್ರೇಯಾಂಕಕ್ಕೆ ಪರಿಗಣಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿವೆ ಎಂದೂ ಸಚಿವರು ಹೇಳಿದ್ದಾರೆ. ಇದನ್ನು ಕ್ಯೂ ಎಸ್ ಮತ್ತು ಟೈಮ್ಸ್ ಗುಂಪು ಘೋಷಿಸಿದ ವಿಶ್ವವಿದ್ಯಾಲಯ ಶ್ರೇಯಾಂಕಗಳನ್ನು ನೋಡಿದಾಗ ಅನುಭವಕ್ಕೆ ಬರುತ್ತದೆ ಎಂದೂ ಅವರು ತಿಳಿಸಿದ್ದಾರೆ.

***



(Release ID: 1725752) Visitor Counter : 210