ಚುನಾವಣಾ ಆಯೋಗ

ನೂತನ ಚುನಾವಣಾ ಆಯುಕ್ತರಾಗಿ ಶ್ರೀ ಅನೂಪ್ ಚಂದ್ರ ಪಾಂಡೆ ಅಧಿಕಾರ ಸ್ವೀಕಾರ

Posted On: 09 JUN 2021 5:17PM by PIB Bengaluru

ಭಾರತದ ನೂತನ ಚುನಾವಣಾ ಆಯುಕ್ತರಾಗಿ (ಇಸಿ) ಶ್ರೀ ಅನೂಪ್ ಚಂದ್ರ ಪಾಂಡೆ ಇಂದು ಅಧಿಕಾರ ವಹಿಸಿಕೊಂಡರು. ಮುಖ್ಯ ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ನೇತೃತ್ವದ ಭಾರತ ಚುನಾವಣಾ ಆಯೋಗಕ್ಕೆ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್  ಜೊತೆಗೆ ಶ್ರೀ ಪಾಂಡೆ ಎರಡನೇ ಚುನಾವಣಾ ಆಯುಕ್ತರಾಗಿ ಸೇರಿದ್ದಾರೆ.

https://static.pib.gov.in/WriteReadData/userfiles/image/image00118PQ.jpg

ಫೆಬ್ರವರಿ 15, 1959 ರಂದು ಜನಿಸಿದ ಶ್ರೀ ಅನೂಪ್ ಚಂದ್ರ ಪಾಂಡೆ 1984 ನೇ ತಂಡದ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದಾರೆ. ಸುಮಾರು 37 ವರ್ಷಗಳ ಭಾರತ ಸರ್ಕಾರದ ಸೇವೆಯ ಅವಧಿಯಲ್ಲಿ, ಶ್ರೀ ಪಾಂಡೆ ಅವರು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮತ್ತು ಅವರ ಕೇಡರ್ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಶ್ರೀ ಅನೂಪ್ ಚಂದ್ರ ಪಾಂಡೆ, ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಮತ್ತು ಪಂಜಾಬ್ ವಿಶ್ವವಿದ್ಯಾಲಯದಿಂದ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇತಿಹಾಸ ಅಧ್ಯಯನದಲ್ಲಿ ತೀವ್ರ ಆಸಕ್ತಿ ಹೊಂದಿರುವ ಅವರು ಮಗಧ್ ವಿಶ್ವವಿದ್ಯಾಲಯದಿಂದ ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

ಶ್ರೀ ಪಾಂಡೆ ಅವರು ಆಗಸ್ಟ್ 2019 ರಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಭಾರತದ ಚುನಾವಣಾ ಆಯೋಗಕ್ಕೆ ಸೇರುವ ಮೊದಲು, ಶ್ರೀ ಪಾಂಡೆ ಉತ್ತರ ಪ್ರದೇಶದ ಸದಸ್ಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೇಲ್ವಿಚಾರಣಾ ಸಮಿತಿಯಾಗಿ ಸೇವೆ ಸಲ್ಲಿಸುತ್ತಿದರು.

ಮುಖ್ಯ ಕಾರ್ಯದರ್ಶಿಯಾಗಿ ಅವರ ಆಡಳಿತದಲ್ಲಿ, ರಾಜ್ಯವು ಪ್ರಯಾಗರಾಜ್ನಲ್ಲಿ ಕುಂಭಮೇಳವನ್ನು ಮತ್ತು 2019 ರಲ್ಲಿ ವಾರಣಾಸಿಯಲ್ಲಿ ಪ್ರವಾಸಿ ಭಾರತೀಯ ದಿವಸವನ್ನು ಯಶಸ್ವಿಯಾಗಿ ಆಯೋಜಿಸಿತು.

ಇದಕ್ಕೂ ಮೊದಲು ಶ್ರೀ ಅನೂಪ್ ಚಂದ್ರ ಅವರು ರಾಜ್ಯದ ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿ ಸೇವೆ ಸಲ್ಲಿಸಿದರು ಮತ್ತು 2018 ರಲ್ಲಿ ಲಕ್ನೋದಲ್ಲಿ ಬೃಹತ್ ಹೂಡಿಕೆದಾರರ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದರು. ಸಿಂಗಲ್ ವಿಂಡೋ ನಿವೇಶ್ ಮಿತ್ರ ಪೋರ್ಟಲ್ ಸೇರಿದಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ನೀತಿ ಸುಧಾರಣೆಗಳನ್ನು ಅವರು ಪರಿಚಯಿಸಿದರು.

ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ಹಣಕಾಸು), ಶ್ರೀ ಪಾಂಡೆ ಅವರು ಮಾಡಿದ ಪ್ರಯತ್ನಗಳು ಉತ್ತರ ಪ್ರದೇಶದ ಕೃಷಿ ಸಾಲ ಮನ್ನಾ ಯೋಜನೆಯ ಯಶಸ್ವಿ ವಿನ್ಯಾಸ, ಯೋಜನೆ ಮತ್ತು ಅನುಷ್ಠಾನಕ್ಕೆ ಕಾರಣವಾಯಿತು.

ಶ್ರೀ ಪಾಂಡೆ ಅವರು ಕೇಂದ್ರ ಸರ್ಕಾರದಲ್ಲಿ ವಿವಿಧ ಕೆಲಸ ನಿರ್ವಹಿಸಿದ್ದಾರೆ. ಅವರು ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಮತ್ತು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ, ಅವರು ಜಿ 20 ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯಂತಹ ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶಕರೂ ಆಗಿದ್ದರು.

ಶ್ರೀ ಪಾಂಡೆ ಅವರು ಬರವಣಿಗೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ ಮತ್ತುಪ್ರಾಚೀನ ಭಾರತದಲ್ಲಿ ಆಡಳಿತಎಂಬ ಪುಸ್ತಕವನ್ನು ಬರೆದಿದ್ದಾರೆ, ಇದು ಪ್ರಾಚೀನ ಭಾರತೀಯ ನಾಗರಿಕ ಸೇವೆಯ ವಿಕಸನ, ಸ್ವರೂಪ, ವ್ಯಾಪ್ತಿ, ಕಾರ್ಯಗಳು ಮತ್ತು ಸಂಬಂಧಿತ ಅಂಶಗಳನ್ನು ಋಗ್ವೇದ ಕಾಲದಿಂದ ಕ್ರಿ. 650 ರವರೆಗೆ ಪರಿಶೋಧಿಸುತ್ತದೆ.

https://static.pib.gov.in/WriteReadData/userfiles/image/image002594C.jpg

ಮುಖ್ಯ ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಮತ್ತು ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರೊಂದಿಗೆ ಚುನಾವಣಾ ಆಯುಕ್ತ ಶ್ರೀ ಅನೂಪ್ ಚಂದ್ರ ಪಾಂಡೆ

***



(Release ID: 1725688) Visitor Counter : 15662