ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ರಾಮಗುಂಡಂ ರಸಗೊಬ್ಬರ ಮತ್ತು ರಾಸಾಯನಿಕ ಕಂಪನಿಗೆ ಹೊಸ ಹೂಡಿಕೆ ನೀತಿ (ಎನ್ಐಪಿ) -2012 ರ ತಿದ್ದುಪಡಿಯನ್ನು ಅನ್ವಯಿಸಲು ಸಂಪುಟದ ಅನುಮೋದನೆ

प्रविष्टि तिथि: 09 JUN 2021 3:48PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ರಾಮಗುಂಡಂ ರಸಗೊಬ್ಬರ ಮತ್ತು ರಾಸಾಯನಿಕ ಲಿಮಿಟೆಡ್ (ಆರ್ಎಫ್ಸಿಎಲ್) ಕಂಪನಿಗೆ ಹೊಸ ಹೂಡಿಕೆ ನೀತಿ (ಎನ್ಐಪಿ) -2012 ಕ್ಕೆ 7 ನೇ ಅಕ್ಟೋಬರ್ 2014 ರಂದು ಮಾಡಿದ ತಿದ್ದುಪಡಿಯನ್ನು ಅನ್ವಯಿಸುವಂತೆ  ರಸಗೊಬ್ಬರ ಇಲಾಖೆಯು ಮಾಡಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಆರ್ಎಫ್ಸಿಎಲ್ ಜಂಟಿ ಉದ್ಯಮ ಕಂಪನಿಯಾಗಿದ್ದು, ಇದು ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್ಎಫ್ಎಲ್), ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಮತ್ತು ಫರ್ಟಿಲೈಸರ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎಫ್ಸಿಐಎಲ್) ಗಳನ್ನು ಒಳಗೊಂಡಿದೆ, ಇದನ್ನು 17.02.2015 ರಂದು ಸಂಯೋಜಿಸಲಾಯಿತು. ಆರ್ಎಫ್ಸಿಎಲ್ ಎಫ್ಸಿಐಎಲ್ನ ಹಿಂದಿನ ರಾಮಗುಂಡಂ ಘಟಕವನ್ನು ಪುನರುಜ್ಜೀವನಗೊಳಿಸುತ್ತಿದೆ, ಹೊಸ ಅನಿಲ ಆಧಾರಿತ ಹಸಿರು ಕ್ಷೇತ್ರ ಬೇವು ಲೇಪಿತ ಯೂರಿಯಾ ಸ್ಥಾವರವನ್ನು ಸ್ಥಾಪಿಸುವ ಮೂಲಕ ವರ್ಷಕ್ಕೆ 12.7 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿಪಿಎ) ಸ್ಥಾಪಿತ ಸಾಮರ್ಥ್ಯ ಹೊಂದಿದೆ. ಆರ್ಎಫ್ಸಿಎಲ್ ಯೂರಿಯಾ ಯೋಜನೆಯ ವೆಚ್ಚ 6165.06 ಕೋಟಿ ರೂಗಳು. ಜಿಎಸ್ಪಿಎಲ್ ಇಂಡಿಯಾ ಟ್ರಾನ್ಸ್ಕೊ ಲಿಮಿಟೆಡ್ (ಜಿಐಟಿಎಲ್) ಎಂಬಿಬಿವಿಪಿಎಲ್ (ಮಲ್ಲಾವರಂ-ಭೋಪಾಲ್-ಭಿಲ್ವಾರ-ವಿಜೈಪುರ ಅನಿಲ ಮಾರ್ಗ) ಮೂಲಕ ಗ್ಯಾಸ್ ಟು ಆರ್ಎಫ್ಸಿಎಲ್  ಗೆ ಅನಿಲವನ್ನು ಗೇಲ್ (GAIL) ಪೂರೈಸುತ್ತದೆ.

ಯೂರಿಯಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಎಫ್ಸಿಐಎಲ್ / ಎಚ್ಎಫ್ಸಿಎಲ್ನ ಮುಚ್ಚಿದ ಯೂರಿಯಾ ಘಟಕಗಳನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಕೈಗೊಂಡ ಉಪಕ್ರಮದ ಒಂದು ಭಾಗವೇ ಅತ್ಯಾಧುನಿಕ ಅನಿಲ ಆಧಾರಿತ ಆರ್ಎಫ್ಸಿಎಲ್ ಘಟಕವಾಗಿದೆ. ರಾಮಗುಂಡಂ ಸ್ಥಾವರ ಪ್ರಾರಂಭದಿಂದಾಗಿ ದೇಶಕ್ಕೆ 12.7 ಎಲ್ಎಮ್ಟಿಪಿಎ ದೇಶೀಯ ಯೂರಿಯಾ ಉತ್ಪಾದನೆ ಸೇರ್ಪಡೆಯಾಗುತ್ತದೆ ಮತ್ತು ಯೂರಿಯಾ ಉತ್ಪಾದನೆಯಲ್ಲಿ ಭಾರತವನ್ನು ಆತ್ಮನಿರ್ಭರ’ (ಸ್ವಾವಲಂಬಿ) ವನ್ನಾಗಿ ಮಾಡುವ ಮಾನ್ಯ ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ. ಇದು ದಕ್ಷಿಣ ಭಾರತದ ಅತಿದೊಡ್ಡ ರಸಗೊಬ್ಬರ ಉತ್ಪಾದನಾ ಘಟಕಗಳಲ್ಲಿ ಒಂದಾಗಲಿದೆ. ಯೋಜನೆಯು ರೈತರಿಗೆ ಗೊಬ್ಬರದ ಲಭ್ಯತೆಯನ್ನು ಸುಧಾರಿಸುವುದಲ್ಲದೆ, ರಸ್ತೆಗಳು, ರೈಲ್ವೆಗಳು, ಪೂರಕ ಉದ್ಯಮ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ.

ಅತಿದೊಡ್ಡ ಏಕ ರೈಲು ಸಾಮರ್ಥ್ಯದ ಯೂರಿಯಾ ಸ್ಥಾವರವಾದ ಆರ್ಎಫ್ಸಿಎಲ್ ನಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಯೂರಿಯಾ ಉತ್ಪಾದನೆಯಲ್ಲಿ ಇಂಧನನ್ನು ಉಳಿಸಲು  ಇತ್ತೀಚಿನ ತಂತ್ರಜ್ಞಾನವಾದ ಎಚ್ಟಿಆರ್ (ಹಾಲ್ಡರ್ ಟಾಪ್ಸ್ ಎಕ್ಸ್ಚೇಂಜ್ ರಿಫಾರ್ಮರ್), ಅತ್ಯುತ್ತಮ ಗುಣಮಟ್ಟದ ಯೂರಿಯಾ ಪ್ರಿಲ್ಗಳು, ಸಂಪೂರ್ಣ ಸ್ವಯಂಚಾಲಿತ ಚೀಲಗಳಿಗೆ ತುಂಬಿಸುವಿಕೆ ಮತ್ತು ರೈಲು / ಟ್ರಕ್ ಲೋಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು 140 ಮೀಟರ್ ಹೈ ಪ್ರಿಲ್ಲಿಂಗ್ ಟವರ್ ಅನ್ನು ಹೊಂದಿದೆ. ದಿನಕ್ಕೆ 4000 ಮೆಟ್ರಿಕ್ ಟನ್ ಯೂರಿಯಾವನ್ನು ರವಾನಿಸುವ ಸಾಮರ್ಥ್ಯದ ಸೌಲಭ್ಯ, ಡಿಸಿಎಸ್ (ಡಿಸ್ಟ್ರಿಬ್ಯೂಟೆಡ್ ಕಂಟ್ರೋಲ್ ಸಿಸ್ಟಮ್), ಇಎಸ್ಡಿ (ಸುಧಾರಿತ ಸುರಕ್ಷತೆ ಮತ್ತು ಲಭ್ಯತೆಗಾಗಿ ತುರ್ತು ಸ್ಥಗಿತಗೊಳಿಸುವ ವ್ಯವಸ್ಥೆ), ಎಂಸಿಆರ್ (ಮುಖ್ಯ ನಿಯಂತ್ರಣ ಕೊಠಡಿ), ಆನ್-ಲೈನ್ ಎಂಎಂಎಸ್ (ಯಂತ್ರ ಮೇಲ್ವಿಚಾರಣೆ ವ್ಯವಸ್ಥೆ), ಒಟಿಎಸ್ (ಆಪರೇಟರ್ ಟ್ರೈನಿಂಗ್ ಸಿಮ್ಯುಲೇಟರ್), ಪರಿಸರ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಹೊಂದಿದೆ. ವ್ಯವಸ್ಥೆಗಳನ್ನು ಹೆಚ್ಚು ಪ್ರೇರಿತ, ಸಮರ್ಪಿತ, ಉತ್ತಮ ತರಬೇತಿ ಪಡೆದ ಕಾರ್ಯಾಚರಣೆಗಳಿಂದ ನಿರ್ವಹಿಸಲಾಗುತ್ತದೆ.

ಸೌಲಭ್ಯವು ತೆಲಂಗಾಣದಲ್ಲಿ ಮಾತ್ರವಲ್ಲದೆ ಭಾರತದ ಇತರ ದಕ್ಷಿಣ ಮತ್ತು ಮಧ್ಯ ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್ಗಡ, ಮಹಾರಾಷ್ಟ್ರ ಇತ್ಯಾದಿ ರಾಜ್ಯಗಳಲ್ಲಿ ಯೂರಿಯಾ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿರುವ ವಿಶ್ವದ ಅತ್ಯುತ್ತಮ ತಂತ್ರಜ್ಞಾನಗಳನ್ನು ಹೊಂದಿದೆ. ಆರ್ಎಫ್ಸಿಎಲ್ನಲ್ಲಿ ಉತ್ಪಾದಿಸುವ ಯೂರಿಯಾವನ್ನು ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಮಾರಾಟ ಮಾಡುತ್ತದೆ.

ಸುಮಾರು 40 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಪ್ರಮುಖ ಪಿಎಸ್ಯುಗಳ ಜಂಟಿ ಉದ್ಯಮಗಳ ರಚನೆಯೊಂದಿಗೆ, ರಾಮಗುಂಡಂ (ತೆಲಂಗಾಣ), ತಲ್ಚರ್ (ಒಡಿಶಾ), ಗೋರಖ್ಪುರ (ಉತ್ತರ ಪ್ರದೇಶ), ಸಿಂಧ್ರಿ (ಜಾರ್ಖಂಡ್) ಮತ್ತು ಬರೌನಿ (ಬಿಹಾರ) ಗಳಲ್ಲಿ ತಲಾ 12.7 ಎಲ್ಎಮ್ಟಿಪಿಎ ಸಾಮರ್ಥ್ಯದ ಹೊಸ ಅಮೋನಿಯಾ ಯೂರಿಯಾ ಪ್ಲಾಂಟ್ಗಳನ್ನು ಸ್ಥಾಪಿಸುವ ಮೂಲಕ ಭಾರತ ಸರ್ಕಾರವು ಎಫ್ಸಿಐಎಲ್ / ಎಚ್ಎಫ್ಸಿಎಲ್ನ ಐದು ಮುಚ್ಚಿದ ಘಟಕಗಳನ್ನು ಪುನರುಜ್ಜೀವಗೊಳಿಸುತ್ತಿದೆ.

ಘಟಕಗಳ ಕಾರ್ಯಾಚರಣೆಯಿಂದಾಗಿ, ದೇಶೀಯ ಯೂರಿಯಾ ಉತ್ಪಾದನೆಯನ್ನು 63.5 ಎಲ್ಎಮ್ಟಿಪಿಎ ನಷ್ಟು ಹೆಚ್ಚಲಿದ್ದು, ಅದು ಯೂರಿಯಾ ಆಮದನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡುತ್ತದೆ ಮತ್ತು ಅಪಾರ ಪ್ರಮಾಣದ ವಿದೇಶಿ ವಿನಿಮಯವನ್ನು ಉಳಿಸುತ್ತದೆ. ಮತ್ತು ಯೂರಿಯಾ ವಲಯದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರ ಆತ್ಮನಿರ್ಭರ್ ಭಾರತದೃಷ್ಟಿಕೋನವನ್ನು ಸಾಕಾರಗೊಳಿಸಲು ಕಾರಣವಾಗುತ್ತದೆ.

***


(रिलीज़ आईडी: 1725670) आगंतुक पटल : 300
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Bengali , Manipuri , Punjabi , Gujarati , Odia , Tamil , Telugu