ನೀತಿ ಆಯೋಗ

ಭಾರತ 2020ರಿಂದ 2050ರ ನಡುವೆ 311 ಲಕ್ಷ ಕೋಟಿ ರೂ. ಮೌಲ್ಯದ ಸಾರಿಗೆ ಇಂಧನ ಉಳಿತಾಯ ಮಾಡಬಹುದು; ವರದಿ

ನೀತಿ ಆಯೋಗ ಮತ್ತು ಆರ್ ಎಂಐ ಹೊಸ ವಿಶ್ಲೇಷಣೆಯಲ್ಲಿ ಭಾರತ ಮುಂದಿನ ಮೂರು ದಶಕಗಳಲ್ಲಿ ಒಟ್ಟು 10 ಗಿಗಾಟನ್ ಸಾಮರ್ಥ್ಯದ ಇಂಗಾಲ ಉಳಿಸಬಹುದು

Posted On: 09 JUN 2021 2:52PM by PIB Bengaluru

ನೀತಿ ಆಯೋಗ, ಆರ್ ಎಂಐ ಮತ್ತು ಆರ್ ಎಂಐ ಭಾರತದ ಹೊಸ ವರದಿ ಭಾರತದಲ್ಲಿ ತ್ವರಿತಗತಿಯ ಸಾರಿಗೆ: ಶುದ್ಧ ಮತ್ತು ಕಡಿಮೆ ವೆಚ್ಚದ ಸರಕು ಸಾಗಣೆ ನೀಲನಕ್ಷೆಯಲ್ಲಿ ಭಾರತದ ಸಾಗಣೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ ಪ್ರಮುಖ ಅವಕಾಶಗಳನ್ನು ಪ್ರಸ್ತಾಪಿಸಲಾಗಿದೆ.

ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಸರಕು ಸಾಗಣೆ ಬೇಡಿಕೆ ಇನ್ನಷ್ಟು ಕ್ಷಿಪ್ರವಾಗಿ ಹೆಚ್ಚಾಗುವುದೆಂದು ನಿರೀಕ್ಷಿಸಲಾಗುತ್ತಿದೆ. ಆರ್ಥಿಕ ಅಭಿವೃದ್ಧಿಗೆ ಸರಕು ಸಾಗಣೆ ಅತ್ಯಂತ ಅವಶ್ಯಕವಾಗಿದ್ದು, ಅದನ್ನು ಅಧಿಕ ಸಾಗಣೆ ವೆಚ್ಚದಿಂದ ಬಳಲುತ್ತಿದೆ ಮತ್ತು  ನಗರಗಳಲ್ಲಿ ವಾಯುಮಾಲಿನ್ಯ ಮತ್ತು ಇಂಗಾಲದ ಮಾಲಿನ್ಯ ಹೆಚ್ಚಾಗಲು ಕಾರಣವಾಗಿದೆ.

ವರದಿಯ ಪ್ರಕಾರ ಭಾರತದಲ್ಲಿ ಸಾಮರ್ಥ್ಯ ಇದೆ:

  1. ಸಾರಿಗೆ ವೆಚ್ಚವನ್ನು ಜಿಡಿಪಿಯ ಶೇ.4ರಷ್ಟು ಇಳಿಕೆ ಮಾಡುವುದು.
  2. 2020ರಿಂದ 2050 ನಡುವಿನ ಅವಧಿಯಲ್ಲಿ ಒಟ್ಟು 10 ಗಿಗಾಟನ್ ಸಿಒ2 ಆಮ್ಲ ಹೊರಸೂಸುವಿಕೆಯನ್ನು ತಗ್ಗಿಸುವ ಸಾಧನೆ ಮಾಡುವುದು.
  3. ಸಾರಜನಕ ಆಮ್ಲ(ಎನ್ಒಎಕ್ಸ್) ಮತ್ತು ಪರ್ಟಿಕ್ಯುಲೇಟ್ ಮ್ಯಾಟರ್(ಪಿಎಂ) ಮಾಲಿನ್ಯ 2050 ವರೆಗೆ ಕ್ರಮವಾಗಿ ಶೇ.35 ಮತ್ತು ಶೇ.28ರಷ್ಟು ಇಳಿಕೆ ಮಾಡುವುದು.

ಭಾರತದ ಆರ್ಥಿಕತೆಯ ಬೆಳವಣಿಗೆಗೆ ಸರಕು ಸಾಗಾಣೆ ಅತ್ಯಂತ ಮಹತ್ವದ ಬೆನ್ನೆಲುಬಾಗಿದೆ ಮತ್ತು ಮೊದಲಿಗಿಂತ ಹೆಚ್ಚಾಗಿ ಸಾರಿಗೆ ವ್ಯವಸ್ಥೆ ಅತ್ಯಂತ ಪರಿಣಾಮಕಾರಿ, ವೆಚ್ಚದಾಯಕ ಮತ್ತು ಶುದ್ಧವಾಗಿರುವಂತೆ ಮಾಡುವುದು ಅತ್ಯಂತ ಪ್ರಮುಖವಾಗಿದೆ. ಸದ್ಯ ಜಾರಿಯಲ್ಲಿರುವ ಅಭಿಯಾನಗಳಾದ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಮತ್ತು ಡಿಜಿಟಲ್ ಇಂಡಿಯಾ ಉಪಕ್ರಮಗಳ ಪ್ರಯೋಜನಗಳನ್ನು ಪಡೆಯುವಲ್ಲಿ ಪರಿಣಾಮಕಾರಿ ಸರಕು ಸಾಗಣೆ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆಎಂದು ನೀತಿ ಆಯೋಗದ ಸಲಹೆಗಾರ(ಸಾರಿಗೆ ಮತ್ತು ವಿದ್ಯುನ್ಮಾನ ವಾಹನಗಳ ಸಂಚಾರ) ಸುಧೇಂದು ಜೆ. ಸಿನ್ಹಾ ಹೇಳಿದ್ದಾರೆ.

2050 ವೇಳೆಗೆ ಭಾರತದ ಸರಕು ಸಾಗಣೆ ಚಟುವಟಿಕೆ ಐದು ಪಟ್ಟು ಹೆಚ್ಚಾಗಲಿದೆ ಮತ್ತು ಸುಮಾರು 400 ಮಿಲಿಯನ್ ಜನರು ನಗರ ಪ್ರದೇಶಗಳಿಗೆ ವರ್ಗಾವಣೆಗೊಳ್ಳಲಿದ್ದಾರೆ. ಹಾಗಾಗಿ ಇಡೀ ವ್ಯವಸ್ಥೆ ಸರಕು ಸಾಗಣೆ ವಲಯದ ಬಲವರ್ಧನೆಗೆ ಅಗತ್ಯವಾಗಿದೆ.

ರೂಪಾಂತರವನ್ನು ಸಮರ್ಥ ರೈಲು ಆಧಾರಿತ ಸಾರಿಗೆ, ಸಾರಿಗೆ ಮತ್ತು ಪೂರೈಕೆ ಸರಣಿಯ ಗರಿಷ್ಠ ಬಳಕೆ ಮತ್ತು ಎಲೆಕ್ಟ್ರಿಕ್ ಹಾಗೂ ಇತರೆ ಶುದ್ಧ ಇಂಧನ ವಾಹನಗಳಿಗೆ ಪರಿವರ್ತನೆಗೊಳ್ಳುವುದು ಸೇರಿದಂತೆ ಲಭ್ಯವಿರುವ ಹಲವು ಅವಕಾಶಗಳ ಪರಿವರ್ತನೆ ನಿಟ್ಟಿನಲ್ಲಿ ವ್ಯಾಖ್ಯಾನಿಸಲಾಗುವುದು. ಪರಿಹಾರಗಳಿಂದಾಗಿ ಮುಂದಿನ ಮೂರು ದಶಕಗಳಲ್ಲಿ ಭಾರತ ಒಟ್ಟಾರೆ 311 ಲಕ್ಷ ಕೋಟಿ ರೂ.ಗಳನ್ನು ಉಳಿತಾಯ ಮಾಡಬಹುದುಎಂದು ಆರ್ ಎಂಐನ ವ್ಯವಸ್ಥಾಪಕ ನಿರ್ದೇಶಕ ಕ್ಲೇ ಸ್ಟ್ರೇಂಜರ್ ಹೇಳಿದ್ದಾರೆ

ಸರಕು ಸಾಗಣೆ ವಲಯಕ್ಕೆ ಸಂಬಂಧಿಸಿದ ನೀತಿ, ತಂತ್ರಜ್ಞಾನ, ಮಾರುಕಟ್ಟೆ, ವ್ಯಾಪಾರ ಮಾದರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪರಿಹಾರಗಳನ್ನು ವರದಿಯಲ್ಲಿ ವಿವರಿಸಲಾಗಿದೆ. ರೈಲು ಜಾಲ ಸಾಮರ್ಥ್ಯವೃದ್ಧಿ, ಇಂಟರ್ ಮಾಡಲ್ ಸಾರಿಗೆ ಉತ್ತೇಜನ, ಗೋದಾಮುಗಳು ಮತ್ತು ಸರಕುಗಳನ್ನು ತುಂಬುವುದು ಮತ್ತು ಇಳಿಸುವ ಪದ್ಧತಿ ಸುಧಾರಣೆ, ಶುದ್ಧ ಇಂಧನ ಅಳವಡಿಕೆಗೆ ಪ್ರಾಯೋಗಿಕ ಯೋಜನೆಗಳು ಮತ್ತು ನೀತಿ ನಿರೂಪಣೆಗಳು ಹಾಗೂ ಕಠಿಣ ಇಂಧನ ಆರ್ಥಿಕತೆ ಮಾನದಂಡಗಳು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ವರದಿಯಲ್ಲಿ ಸೂಚಿಸಲಾಗಿದೆ.

ಉದ್ದೇಶಿತ ಪರಿಹಾರಗಳಿಂದಾಗಿ ಯಶಸ್ವಿಯಾಗಿ ನಿಯೋಜನೆಗೊಳಿಸಿದರೆ, ಭಾರತ ಸಾರಿಗೆ ಆವಿಷ್ಕಾರ ಮತ್ತು ದಕ್ಷತೆಯಲ್ಲಿ ತಾನೇ ನಾಯಕನಾಗಿ ಹೊರಹೊಮ್ಮಲಿದೆ ಮತ್ತು ಏಷ್ಯಾ ಪೆಸಿಫಿಕ್ ಪ್ರಾಂತ್ಯ ಹಾಗೂ ಅದರ ಹೊರತಾಗಿಯೂ ತನ್ನ ಸಾಮರ್ಥ್ಯವನ್ನು ನಿರೂಪಿಸಬಹುದಾಗಿದೆ.

***(Release ID: 1725655) Visitor Counter : 46