ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಮುಂಬೈನ ಟಾಟಾ ಆಸ್ಪತ್ರೆಯ ಎಸಿಟಿಆರ್ ಇ ಸಿ ಯಲ್ಲಿ ನಡೆಸಿದ ಮೊದಲ ಸಿಎಆರ್-ಟಿ ಸೆಲ್ (ಕೋಶ) ಚಿಕಿತ್ಸೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ ಬೆಂಬಲಿಸಿದೆ
ಡಿಬಿಟಿ/ ಬಿರಾಕ್ (BIRAC)-ಎನ್ ಬಿಎಂ ಹಂತ I/ II ಕ್ಲಿನಿಕಲ್ ಪ್ರಯೋಗಗಳನ್ನು ಬೆಂಬಲಿಸಿದೆ
Posted On:
08 JUN 2021 11:12AM by PIB Bengaluru
ಚಿಮೆರಿಕ್ ಆಂಟಿಜೆನ್ ರಿಸೆಪ್ಟರ್ ಟಿ-ಸೆಲ್ (ಸಿಎಆರ್-ಟಿ) ಚಿಕಿತ್ಸೆಯು ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಒಂದು ಮಹತ್ವದ ಬೆಳವಣಿಗೆಯಾಗಿದೆ. ಜಾಗತಿಕವಾಗಿ ನಡೆಸಿದ ಕ್ಲಿನಿಕಲ್ ಪ್ರಯೋಗಗಳು ಅಂತಿಮ ಹಂತದ ರೋಗಿಗಳಲ್ಲಿ, ವಿಶೇಷವಾಗಿ ತೀವ್ರವಾದ ಲಿಂಫೋಸೈಟಿಕ್ ಲ್ಯುಕೇಮಿಯಾದಿಂದ ಬಳಲುತ್ತಿರುವ ರೋಗಿಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿವೆ. ಈ ತಂತ್ರಜ್ಞಾನವು ಕ್ಯಾನ್ಸರ್ ರೋಗಿಗಳಿಗೆ ಗಮನಾರ್ಹವಾದ ಚಿಕಿತ್ಸಕ ಸಾಮರ್ಥ್ಯವನ್ನು ಹೊಂದಿದ್ದರೂ, ಸಧ್ಯಕ್ಕೆ ಈ ತಂತ್ರಜ್ಞಾನವು ಭಾರತದಲ್ಲಿ ಲಭ್ಯವಿಲ್ಲ. ಪ್ರತಿ ರೋಗಿಯ ಸಿಎಆರ್-ಟಿ ಸೆಲ್ ಚಿಕಿತ್ಸೆಗೆ 3-4 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆದ್ದರಿಂದ ಈ ತಂತ್ರಜ್ಞಾನವನ್ನು ಮೌಲ್ಯಕ್ಕೆ ತಕ್ಕನಾದ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಮತ್ತು ರೋಗಿಗಳಿಗೆ ಲಭ್ಯವಾಗುವಂತೆ ಮಾಡುವುದು ಒಂದು ಸವಾಲಾಗಿದೆ.
ಚಿಕಿತ್ಸೆಯ ವೆಚ್ಚಕ್ಕೆ ಉತ್ಪಾದನಾ ಸಂಕೀರ್ಣತೆಯು ಒಂದು ಪ್ರಮುಖ ಕಾರಣವಾಗಿದೆ. ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ನಿವಾರಣೆಗೆ ಸಿಎಆರ್-ಟಿ ಕೋಶ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು, ಬಿರಾಕ್ ಮತ್ತು ಡಿಬಿಟಿ ಕಳೆದ 2 ವರ್ಷಗಳಲ್ಲಿ ಪ್ರಸ್ತಾಪಗಳನ್ನು ಆಹ್ವಾನಿಸಲು ಉಪಕ್ರಮಗಳನ್ನು ಕೈಗೊಂಡಿವೆ ಮತ್ತು ವಿಶೇಷ ಕರೆಗಳನ್ನು ಪ್ರಾರಂಭಿಸಿವೆ.
4 ಜೂನ್, 2021 ಭಾರತದಲ್ಲಿ ಟಿಎಂಹೆಚ್, ಐಐಟಿ ಬಾಂಬೆ ತಂಡ ಮತ್ತು ಕ್ಯಾನ್ಸರ್ ಆರೈಕೆ ಗೆ ಒಂದು ಐತಿಹಾಸಿಕ ದಿನವಾದೆ, ಏಕೆಂದರೆ ಮೊದಲ ಸಿಎಆರ್-ಟಿ ಸೆಲ್ ಥೆರಪಿ (ಒಂದು ರೀತಿಯ ಜೀನ್ ಥೆರಪಿ) ಅನ್ನು ಟಾಟಾ ಸ್ಮಾರಕ ಕೇಂದ್ರದ ಎಸಿಟಿ ಆರ್ ಇಸಿ ಯಲ್ಲಿರುವ ಮೂಳೆ ಮಜ್ಜೆಯ ಕಸಿ ಘಟಕದಲ್ಲಿ ಮಾಡಲಾಯಿತು. ಮುಂಬೈಯಲ್ಲಿರುವ ಐಐಟಿ ಬಾಂಬೆಯ ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ (ಬಿಎಸ್ಬಿಇ) ವಿಭಾಗದಲ್ಲಿ ಸಿಎಆರ್-ಟಿ ಕೋಶಗಳನ್ನು ವಿನ್ಯಾಸಗೊಳಿಸಿ ತಯಾರಿಸಲಾಯಿತು.
ಈ ಕೆಲಸವನ್ನು ಬಿರಾಕ್-ಪಿಎಸಿಎ ಯೋಜನೆ ಭಾಗಶಃ ಬೆಂಬಲಿಸುತ್ತದೆ. ನ್ಯಾಷನಲ್ ಬಯೋಫಾರ್ಮಾ ಮಿಷನ್ ಮೂಲಕ ಡಿಬಿಟಿ / ಬಿರಾಕ್ ತಮ್ಮ ಸಿಎಆರ್-ಟಿ ಉತ್ಪನ್ನದ ಹಂತ I / II ಪ್ರಯೋಗವನ್ನು ನಡೆಸಲು ಈ ಯೋಜನೆಯನ್ನು ವಿಸ್ತರಿಸಲು ಟಿಎಂಸಿ-ಐಐಟಿ ಬಾಂಬೆ ತಂಡವು ಮತ್ತಷ್ಟು ಬೆಂಬಲಿಸುತ್ತದೆ.
ಆರಂಭಿಕ ಹಂತದ ಪೈಲಟ್ ಕ್ಲಿನಿಕಲ್ ಪ್ರಯೋಗದಲ್ಲಿಯೇ ಇದು "ಭಾರತದಲ್ಲಿ ಪ್ರಥಮ" ಜೀನ್ ಚಿಕಿತ್ಸೆಯಾಗಿದೆ ಮತ್ತು ಮುಂಬೈನ ಐಐಟಿ ಬಾಂಬೆ ಮತ್ತು ಟಾಟಾ ಮೆಮೋರಿಯಲ್ ಆಸ್ಪತ್ರೆ ನಡುವಿನ ಸಂಪೂರ್ಣ ಪ್ರಯತ್ನಗಳ ಮತ್ತು ಅತ್ಯುತ್ತಮ ಸಹಯೋಗದ ಪರಿಣಾಮವಾಗಿದೆ. ಸಿಎಆರ್-ಟಿ ಕೋಶಗಳ ಮೊದಲ ಮಾನವ ಹಂತ -1 / 2 ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಬಯೋಫಾರ್ಮಾ ಮಿಷನ್-ಬಿರಾಕ್ 19.15 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಕ್ಲಿನಿಕಲ್ ಪ್ರಯೋಗಗಳನ್ನು ಪೀಡಿಯಾಟ್ರಿಕ್ ಆಂಕೊಲಾಜಿ ಮತ್ತು ಆರೋಗ್ಯ ವಿಜ್ಞಾನಗಳ ಪ್ರಾಧ್ಯಾಪಕರಾದ ಡಾ (ಸರ್ಜನ್ ಕಮಾಂಡರ್) ಗೌರವ್ ನರುಲಾ ಮತ್ತು ಮುಂಬೈನ ಟಿಎಂಸಿಯ ಅವರ ತಂಡ ನಡೆಸುತ್ತಿದೆ ಮತ್ತು ಬಯೋಸೈನ್ಸ್ ಮತ್ತು ಬಯೋ ಎಂಜಿನಿಯರಿಂಗ್ (ಬಿಎಸ್ಬಿಇ) ವಿಭಾಗ ಮತ್ತು ಐಐಟಿ ಬಾಂಬೆಯ ಪ್ರೊಫೆಸರ್ ರಾಹುಲ್ ಪುರ್ವಾರ್ ಮತ್ತು ಅವರ ತಂಡ ತಯಾರಿಸಿದ ಹೊಸ ಸಿಎಆರ್-ಟಿ ಕೋಶಗಳು ಔಷಧಿಗಳಾಗಿ ಕಾರ್ಯನಿರ್ವಹಿಸುವವು. ವಿನ್ಯಾಸ, ಅಭಿವೃದ್ಧಿ ವ್ಯಾಪಕವಾದ ಪೂರ್ವ - ಕ್ಲಿನಿಕಲ್ ಪರೀಕ್ಷೆಯನ್ನು ಐಐಟಿ-ಬಿ ಸಂಸ್ಥೆಯು, ಮುಂಬೈನ ಟಾಟಾ ಸ್ಮಾರಕ ಕೇಂದ್ರದೊಂದಿಗೆ ಸಹಯೋಗಿ ಯೋಜನೆಯಾಗಿ ಇಬ್ಬರು ತನಿಖಾಧಿಕಾರಿಗಳು ನಡೆಸಿದರು.
ಐಐಟಿ-ಬಿ ನಿರ್ದೇಶಕರಾದ ಸುಭಸಿಸ್ ಚೌಧುರಿ ಮಾತನಾಡಿ, ಇದು ಸಂಸ್ಥೆಗೆ ಮಾತ್ರವಲ್ಲದೆ ದೇಶಕ್ಕೂ ಮಹತ್ವದ ಸಾಧನೆಯಾಗಿದೆ. "ಐಐಟಿ-ಬಿ ಯಲ್ಲಿ ನಾವು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಜೊತೆಗೆ ನಮ್ಮ ವಿಜ್ಞಾನಿಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಯನ್ನು ಹೊರತಂದಿದ್ದೇವೆ ಎಂದು ಸಂತೋಷಪಡುತ್ತೇವೆ. ಪ್ರಯೋಗಗಳು ಯಶಸ್ವಿಯಾದರೆ, ಭಾರತದಲ್ಲಿ ಚಿಕಿತ್ಸೆಯನ್ನು ಕೈಗೆಟುಕುವ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಇದು ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಇದು ಐಐಟಿ-ಬಿ ಯ ಸಂಶೋಧನೆಯಾಗಿದ್ದು ಅದು ಎಲ್ಲರಿಗೂ ತಲುಪುವ ನಿರೀಕ್ಷೆಯಿದೆ ”ಎಂದು ಚೌಧುರಿ ಹೇಳಿದರು.
ಮಾರ್ಪಡಿಸಿದ ಟಿ ಕೋಶವನ್ನು ದೇಹದೊಳಗೆ ವರ್ಗಾಯಿಸಲು ಬಳಸುವ ಪ್ಯಾಕೇಜಿಂಗ್ ಪ್ಲಾಸ್ಮಿಡ್ಗಳಿಗಾಗಿ ಲೆಂಟಿವೈರಲ್ ವೆಕ್ಟರ್ ಉತ್ಪಾದನಾ ಸೌಲಭ್ಯ, ಟಿ-ಸೆಲ್ ಸಂವಹನಕ್ಕೆ ಸಿಜಿಎಂಪಿ ಸೌಲಭ್ಯ ಮತ್ತು ಸಿಎಆರ್ ಟಿ-ಸೆಲ್ ಉತ್ಪಾದನೆಗೆ ವಿಸ್ತರಣೆ ಇತರ ಎರಡು ಸಂಸ್ಥೆಗಳಿಗೆ ರಾಷ್ಟ್ರೀಯ ಬಯೋಫಾರ್ಮಾ ಮಿಷನ್ ಸಹಕರಿಸುತ್ತಿದೆ. ತೀವ್ರವಾದ ಲಿಂಫೋಸೈಟಿಕ್ ಲ್ಯುಕೇಮಿಯಾ, ಮಲ್ಟಿಪಲ್ ಮೈಲೋಮಾ, ಗ್ಲಿಯೊಬ್ಲಾಸ್ಟೊಮಾ, ಹೆಪಟೋಸೆಲ್ಯುಲರ್ ಕಾರ್ಸಿನೋಮ ಮತ್ತು ಟೈಪ್ -2 ಡಯಾಬಿಟಿಸ್ ಸೇರಿದಂತೆ ರೋಗಗಳಿಗೆ ಸಿಎಆರ್-ಟಿ ಕೋಶ ತಂತ್ರಜ್ಞಾನದ ಅಭಿವೃದ್ಧಿಯನ್ನು ಡಿಬಿಟಿ ಮೂಲಕ ಬೆಂಬಲಿಸಲಾಗುತ್ತದೆ.
ಡಿಬಿಟಿ ಬಗ್ಗೆ
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ)ಯು ಭಾರತದಲ್ಲಿ ಜೈವಿಕ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ವೇಗಗೊಳಿಸುತ್ತದೆ, ಇದರಲ್ಲಿ ಕೃಷಿ, ಆರೋಗ್ಯ ರಕ್ಷಣೆ, ಪ್ರಾಣಿ ವಿಜ್ಞಾನ, ಪರಿಸರ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನದ ಬೆಳವಣಿಗೆ ಮತ್ತು ಅನ್ವಯಿಕೆ ಸೇರಿದೆ.
ಬಿರಾಕ್ (ಬಿಐಆರ್ ಎಸಿ - BIRAC) ಬಗ್ಗೆ
ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (ಬಿಐಆರ್ ಎಸಿ) ಲಾಭರಹಿತ ಸೆಕ್ಷನ್ 8, ಶೆಡ್ಯೂಲ್ ಬಿ, ಸಾರ್ವಜನಿಕ ವಲಯದ ಉದ್ಯಮವಾಗಿದೆ, ಇದು ಉದಯೋನ್ಮುಖ ಬಯೋಟೆಕ್ ಉದ್ಯಮವನ್ನು ಬಲಪಡಿಸಲು ಮತ್ತು ಸಬಲೀಕರಣಗೊಳಿಸಲು ಇಂಟರ್ ಫೇಸ್ ಏಜೆನ್ಸಿ (ಕೊಂಡಿ) ಯಂತೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಸ್ಥಾಪಿಸಿದೆ. ಇದು ದೇಶಕ್ಕೆ ಸಂಬಂಧಿತ ಉತ್ಪನ್ನ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು, ಕಾರ್ಯತಂತ್ರದ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಕೈಗೊಳ್ಳುತ್ತದೆ.
***
(Release ID: 1725328)
Visitor Counter : 378