ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ – 19 ಲಸಿಕೆ ತಾಜಾ ಮಾಹಿತಿ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 24.65 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 1.19 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಲಭ್ಯ
Posted On:
08 JUN 2021 9:57AM by PIB Bengaluru
ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕಾ ಅಭಿಯಾನದ ಅಂಗವಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ಒದಗಿಸಿ ಬೆಂಬಲ ನೀಡುತ್ತಿದೆ. ಇದರ ಜತೆಗೆ ಹೆಚ್ಚುವರಿಯಾಗಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ಲಸಿಕೆ ಖರೀದಿಸಲು ಭಾರತ ಸರ್ಕಾರ ಸೌಲಭ್ಯ ಒದಗಿಸಿದೆ.
ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಯಲ್ಲದೇ ಪರೀಕ್ಷೆ, ಜಾಡುಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆ ಜತೆಗೆ ಲಸಿಕೆ ಕೂಡ ಸಮಗ್ರ ಕಾರ್ಯತಂತ್ರದಲ್ಲಿ ಅವಿಭಾಜ್ಯ ಸ್ಥಂಭವಾಗಿದೆ.
3 ನೇ ಹಂತದ ಉದಾರೀಕೃತ ಮತ್ತು ತ್ವರಿತ ಕೋವಿಡ್ – 19 ಲಸಿಕಾಕರಣದ ಕಾರ್ಯತಂತ್ರ 2021 ರ ಮೇ 1 ರಿಂದ ಪ್ರಾರಂಭಗೊಂಡಿದೆ.
ಲಸಿಕಾ ಕಾರ್ಯತಂತ್ರದಡಿ ಉತ್ಪಾದಕರಿಂದ ಪ್ರತಿ ತಿಂಗಳು ಕೇಂದ್ರ ಸರ್ಕಾರ ಖರೀದಿಸುವ ಲಸಿಕೆಯ ಡೋಸ್ ಗಳನ್ನು ಕೇಂದ್ರೀಯ ಔಷಧ ಪ್ರಯೋಗಾಲಯ [ಸಿ.ಡಿ.ಎಲ್] ಶೇ 50 ರಷ್ಟು ಡೋಸ್ ಗಳಿಗೆ ಅನುಮತಿ ನೀಡುತ್ತದೆ. ಈ ಹಿಂದೆ ನಿಗದಿ ಮಾಡಿರುವ ಪ್ರಮಾಣದಷ್ಟು ಡೋಸ್ ಗಳನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 24 ಕೋಟಿ ಗೂ ಹೆಚ್ಚು (24,65,44,060) ಡೋಸ್ ಗಳನ್ನು ಭಾರತ ಸರ್ಕಾರ [ಉಚಿತವಾಗಿ] ಮತ್ತು ರಾಜ್ಯಗಳ ನೇರ ಖರೀದಿ ಕಾರ್ಯತಂತ್ರದಡಿ ಒದಗಿಸಲಾಗಿದೆ.
ಇದರಿಂದ ವ್ಯರ್ಥವಾದದ್ದು ಸೇರಿ ಒಟ್ಟು 23,47,43,489 ಡೋಸ್ ಗಳ ಲಸಿಕೆ ಬಳಕೆಯಾಗಿದೆ [ಇಂದು ಬೆಳಿಗ್ಗೆ 8 ಗಂಟೆವರೆಗೆ ದೊರೆತ ದತ್ತಾಂಶದಂತೆ].
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 1.19 ಕೋಟಿ ಗೂ (1,19,46,925) ಹೆಚ್ಚು ಡೋಸ್ ಗಳ ಲಸಿಕೆ ಲಭ್ಯವಿದೆ.
***
(Release ID: 1725290)
Visitor Counter : 249
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam