ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ 19: ಲಸಿಕೆ ಕುರಿತ ಮಿಥ್ಯೆ ದೂರ ಮಾಡುವುದು


ರಾಷ್ಟ್ರೀಯ ಕೋವಿಡ್ ಲಸಿಕಾ ಅಭಿಯಾನದಡಿ 2021ರ ಜನವರಿಯಿಂದ ಏಪ್ರಿಲ್ ವರೆಗೆ ಖಾಸಗಿ ಆಸ್ಪತ್ರೆಗಳಿಗೆ ನೇರ ಖರೀದಿಗೆ ಅವಕಾಶವಿರಲಿಲ್ಲ.

2021ರ ಮೇ 1ರ ನಂತರ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಶೇ.50ರಷ್ಟು ಡೋಸ್ ಲಸಿಕೆ ನೇರ ಖರೀದಿಗೆ ಲಭ್ಯ

2021ರ ಜನವರಿ 16ರಿಂದ ಹೊಸ ನೀತಿ ಜಾರಿಗೊಳಿಸಿದ 2021ರ ಮೇ 1ರವರೆಗಿನ ಅಂಕಿ ಅಂಶ ಹೋಲಿಕೆ ಮಾಡುವುದು ನ್ಯಾಯಯುತವಲ್ಲ ಮತ್ತು ದಾರಿತಪ್ಪಿಸುವಂತಹುದು

Posted On: 04 JUN 2021 7:28PM by PIB Bengaluru

ಭಾರತ ಸರ್ಕಾರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಕಟ ಸಹಭಾಗಿತ್ವದೊಂದಿಗೆ 2021 ಜನವರಿ 16ರಿಂದ ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕಾ ಅಭಿಯಾನವನ್ನು ನಡೆಸುತ್ತಿದೆ.

ಕೆಲವು ಮಾಧ್ಯಮ ವರದಿಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಲಸಿಕೆ ನೀಡಲಾಗಿತ್ತು. ಆದರೆ  ಪೈಕಿ ಕೇವಲ 7.5ರಷ್ಟು ಮಾತ್ರ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಮಾಹಿತಿಗಳು ಖಚಿತವಲ್ಲ ಮತ್ತು ಅವು ಲಭ್ಯವಿರುವ ಅಂಕಿ-ಅಂಶಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ದುರುದ್ದೇಶಪೂರ್ವಕವಾಗಿ ಹೋಲಿಕೆ ಮಾಡಲಾಗದಂತಹ ಎರಡು ದತ್ತಾಂಶಗಳನ್ನು ಇಟ್ಟುಕೊಂಡು ಖಾಸಗಿ ವಲಯಕ್ಕೆ ಲಸಿಕೆ ಹಂಚಿಕೆ ಮತ್ತು ನೀಡಿಕೆಯಲ್ಲಿ ವ್ಯತ್ಯಾಸವನ್ನು ಸೂಚಿಸಲಾಗುತ್ತಿದೆ.

2021 ಮೇ 1 ರಿಂದ ಅಳವಡಿಸಿಕೊಂಡಿರುವ ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯತಂತ್ರದಡಿ ಮೂರನೇ ಹಂತದ ಕೋವಿಡ್-19 ಲಸಿಕೆ ಅಭಿಯಾನವನ್ನು ನಡೆಸಲಾಗುತ್ತಿದೆ. ಕಾರ್ಯತಂತ್ರದಡಿ ಪ್ರತಿ ತಿಂಗಳು ಕೇಂದ್ರೀಯ ಔಷಧ ಪ್ರಯೋಗಾಲಯ (ಸಿಡಿಎಲ್) ಅನುಮೋದಿಸುವ ಯಾವುದೇ ಉತ್ಪಾದಕರ ಲಸಿಕೆಗಳಲ್ಲಿ  ಶೇ.50ರಷ್ಟನ್ನು ಭಾರತ ಸರ್ಕಾರ ಖರೀದಿಸುತ್ತದೆ. ಅವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲಿನಂತೆ ಉಚಿತವಾಗಿ ಲಸಿಕೆ ನೀಡುವುದಕ್ಕಾಗಿ ಹಂಚಿಕೆ ಮಾಡಲಾಗುತ್ತಿದೆ. ಉಳಿದ ಶೇ.50ರಷ್ಟು ಲಭ್ಯವಿರುವ ಡೋಸ್ ಗಳನ್ನು ರಾಜ್ಯಗಳು/ಕೇಂದ್ರಾಡಳಿತ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಖರೀದಿಸಬಹುದು ಕಾರ್ಯತಂತ್ರದ ಉದ್ದೇಶ ಲಸಿಕೆ ಉತ್ಪಾದಕರು ತಮ್ಮ ಲಸಿಕೆ ಉತ್ಪಾದನೆಯನ್ನು ವೃದ್ಧಿಗೊಳಿಸುವ ಜೊತೆಗೆ ಹೊಸ ಉತ್ಪಾದಕರನ್ನು ಆಕರ್ಷಿಸುವುದಾಗಿದೆ. ಇದರಿಂದ ಲಸಿಕೆ ಉತ್ಪಾದನೆ ವೃದ್ಧಿಯಾಗುವುದಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗುವುದರಿಂದ ಬೆಲೆಗಳಲ್ಲಿ ಸರಳೀಕರಣ ಉಂಟಾಗುತ್ತದೆ. ಖರೀದಿ ಮತ್ತು ಲಸಿಕೆ ಆಡಳಿತದಲ್ಲಿ ಸುಧಾರಣೆಯಾಗುತ್ತದೆ. ದೇಶಾದ್ಯಂತ ಸೇವೆಗಳ ಲಭ್ಯತೆಯನ್ನು ಸುಧಾರಿಸುವ ಉದ್ದೇಶದಿಂದಲೂ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋವಿಡ್-19 ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೆಗಾಗಿ ಉತ್ಪಾದಕರ ಬಳಿ ಬೇಡಿಕೆಗಳನ್ನು ಸಲ್ಲಿಸುವುದನ್ನು ಉತ್ತೇಜಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಂವಹನ ನಡೆಸಲಾಗುತ್ತಿದೆ. ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಖಾಸಗಿ ವಲಯದ ಜಾಲ ಮತ್ತು ತರಬೇತಿ ಪಡೆದ ಸಿಬ್ಬಂದಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಾಹಿತಿ ನೀಡಲಾಗಿದೆ.

2021 ಮೇ ತಿಂಗಳಲ್ಲಿ ಉದಾರೀಕೃತ ನೀತಿ ಜಾರಿಯಾದ ಬಳಿಕ ಒಟ್ಟು 7.4 ಕೋಟಿ ಡೋಸ್ ಲಸಿಕೆಗಳು ಲಭ್ಯವಾಗಿದೆ. ಪೈಕಿ 1.85 ಕೋಟಿ ಲಸಿಕೆ ಡೋಸ್ ಗಳನ್ನು ಖಾಸಗಿ ಆಸ್ಪತ್ರೆಗಳ ಖರೀದಿಗೆ ತೆಗೆದಿರಿಸಲಾಗಿದೆ. ಖಾಸಗಿ ಆಸ್ಪತ್ರೆಗಳು 2021 ಮೇ ತಿಂಗಳಲ್ಲಿ 1.29 ಕೋಟಿ ಲಸಿಕೆಯನ್ನು ಖರೀದಿ ಮಾಡಿವೆ. ಪೈಕಿ 22 ಲಕ್ಷ ಡೋಸ್ ಲಸಿಕೆಯನ್ನು ನೀಡಿವೆ. ಸಂಖ್ಯೆಗಳು ಸುಮಾರು ಶೇ.17ರಷ್ಟಾಗಲಿದ್ದು, ಉಳಿದ ಲಸಿಕೆಗಳನ್ನು ಆಸ್ಪತ್ರೆಗಳು ಇನ್ನೂ ಸ್ವೀಕರಿಸಿಲ್ಲ.   

ಖಾಸಗಿ ಆಸ್ಪತ್ರೆಗಳಿಗೆ ಬಹುತೇಕ ಲಸಿಕೆ ಪೂರೈಕೆಯಾಗಿರುವುದು ಮೇ ತಿಂಗಳ ದ್ವಿತೀಯಾರ್ಧದಲ್ಲಿ ಎಂಬುದು ಇಲ್ಲಿ ಗಮನಿಸಬೇಕಾಗಿದೆ. ಕೆಳಗಿನ ಕೋಷ್ಠಕದಲ್ಲಿ ಖಾಸಗಿ ಮೇ ಮಧ್ಯಭಾಗದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೀಕರಣ ವೃದ್ಧಿಯಾಗಿರುವ ಪ್ರವೃತ್ತಿಯನ್ನು ಕಾಣಬಹುದಾಗಿದೆ

ಉದಾರೀಕೃತ ಕಾರ್ಯತಂತ್ರ 2021 ಮೇ 1 ರಿಂದ ಜಾರಿಗೆ ಬಂದಿದ್ದು, ಖಾಸಗಿ ವಲಯ ಖರೀದಿ ಪ್ರಕ್ರಿಯೆ, ಸಾಗಣೆ ಮತ್ತು ಪೂರೈಕೆ ನಿರ್ವಹಣಾ ಪ್ರಕ್ರಿಯೆ ಮೂಲಕ ಸಾಗಬೇಕಾಗಿತ್ತು. ಹಾಗಾಗಿ ಆಸ್ಪತ್ರೆಗಳು ಉತ್ಪಾದಕರಿಂದ ಲಸಿಕೆ ಸಂಗ್ರಹವನ್ನು ವ್ಯವಸ್ಥಿತವಾಗಿ  ಚುರುಕುಗೊಳಿಸಲು ಸಮಯ ತೆಗೆದುಕೊಳ್ಳುವುದು ಸಾಮಾನ್ಯ. ಭಾರತ ಸರ್ಕಾರ ಉದಾರೀಕೃತ ನೀತಿಗೂ ಮುನ್ನವೂ ಖಾಸಗಿ ವಲಯಕ್ಕೆ ಲಸಿಕೆಗಳನ್ನು ನೀಡುತ್ತಿತ್ತು. ಅವರು ಪ್ರತಿ ದಿನ ಸುಮಾರು 2 ರಿಂದ 2.5 ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದರು.

ಇದೀಗ ಸಾಗಣೆ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲಾಗಿದೆ ಮತ್ತು ಹಲವು ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ಪಡೆಯಲಾರಂಭಿಸಿವೆ ಹಾಗೂ ಮೇ 2021 ಮೂರನೇ ವಾರದಿಂದೀಚೆಗೆ ಪೂರೈಕೆ ಹೆಚ್ಚಾಗಿರುವುದನ್ನು ಕೋಷ್ಠಕದಲ್ಲಿ ಗಮನಿಸಬಹುದು. ಪ್ರವೃತ್ತಿ ಮುಂದುವರಿದಿದೆ ಮತ್ತು 2021 ಜೂನ್ 3 ರಂದು ಖಾಸಗಿ ಆಸ್ಪತ್ರೆಗಳು 4 ಲಕ್ಷ ಡೋಸ್ ಲಸಿಕೆಯನ್ನು ನೀಡಿವೆ.

***



(Release ID: 1724690) Visitor Counter : 203