ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ವಯೋವೃದ್ಧರಿಗೆ ನೆರವಾಗಲು ಎಸ್‌ಎಜಿಇ (ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್) ಉಪಕ್ರಮ ಮತ್ತು ಎಸ್‌ಎಜಿಇ ಪೋರ್ಟಲ್ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಶ್ರೀ ಥಾವರ್‌ಚಂದ್ ಗೆಹ್ಲೋಟ್


ವಿಶ್ವಾಸಾರ್ಹ ಸ್ಟಾರ್ಟ್‌ಅಪ್‌ಗಳಿಂದ ಹಿರಿಯರ ಆರೈಕೆ ಉತ್ಪನ್ನಗಳು ಮತ್ತು ಸೇವೆಗಳಿಗೆ  ಎಸ್‌ಎಜಿಇ “ಒಂದು-ನಿಲುಗಡೆ ಲಭ್ಯತೆ”ತಾಣವಾಗಲಿದೆ

Posted On: 04 JUN 2021 4:28PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಲೆ ಮತ್ತು ಶ್ರೀ ರತನ್ ಲಾಲ್ ಕಟಾರಿಯಾ ಅವರ ಸಮ್ಮುಖದಲ್ಲಿ ಇಂದು ಹಿರಿಯ ನಾಗರಿಕರಗಾಗಿ ಎಸ್ಎಜಿಇ (ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್) ಉಪಕ್ರಮ ಮತ್ತು ಎಸ್ಎಜಿಇ ಪೋರ್ಟಲ್ ಗೆ ಚಾಲನೆ ನೀಡಿದರು. ಸಾಮಾಜಿಕ ನ್ಯಾಯ ಇಲಾಖೆ ಕಾರ್ಯದರ್ಶಿ, ಎಸ್ ಆರ್ ಸುಬ್ರಹ್ಮಣ್ಯಂ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ವಿಶ್ವಾಸಾರ್ಹ ಸ್ಟಾರ್ಟ್ಅಪ್ಗಳಿಂದ ಹಿರಿಯರ ಆರೈಕೆ ಉತ್ಪನ್ನಗಳು ಮತ್ತು ಸೇವೆಗಳಿಗೆ ಎಸ್ಎಜಿಇ ಪೋರ್ಟಲ್ಒಂದು-ನಿಲುಗಡೆ ಪ್ರವೇಶವಾಗಿರುತ್ತದೆ. 2021 ಜೂನ್ 5 ರಿಂದ ಅರ್ಜಿಗಳಿಗಾಗಿ SAGE ಪೋರ್ಟಲ್ ತೆರೆಯಲಾಗುವುದು. ಸ್ಟಾರ್ಟ್ಅಪ್ಗಳನ್ನು ಹೊಸ ಉತ್ಪನ್ನಗಳು ಮತ್ತು ಸೇವೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಇವು ಆರೋಗ್ಯ, ವಸತಿ, ಆರೈಕೆ ಕೇಂದ್ರಗಳಲ್ಲದೇ ಹಣಕಾಸು, ಆಹಾರ, ಸಂಪತ್ತು ನಿರ್ವಹಣೆ ಮತ್ತು ಕಾನೂನು ಮಾರ್ಗದರ್ಶನಕ್ಕೆ ಸಂಬಂಧಿಸಿದ ತಾಂತ್ರಿಕ ಲಭ್ಯತೆಯನ್ನು  ಒದಗಿಸಬೇಕು.  

https://static.pib.gov.in/WriteReadData/userfiles/image/image001XL5L.jpg

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶ್ರೀ ಥಾವರ್ಚಂದ್ ಗೆಹ್ಲೋಟ್, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮಾಜದ ವಿವಿಧ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಎಂದು ಹೇಳಿದರು. 'ಸಬ್ಕಾ ಸಾತ್ ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್' ಗುರಿಯೊಂದಿಗೆ ಕೇಂದ್ರ ಸರ್ಕಾರವು ಎಲ್ಲ ವಯೋಮಾನದವರಿಗೆ ಮತ್ತು ವರ್ಗದವರಿಗೆ ಕ್ರಿಯಾ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ಶ್ರೀ ಗೆಹ್ಲೋಟ್ ಹೇಳಿದರು. ಆದ್ದರಿಂದ ಹಿರಿಯರು ಸಂತೋಷದಿಂದ, ಆರೋಗ್ಯವಾಗಿ ಮತ್ತು ಆರ್ಥಿಕವಾಗಿ ಮತ್ತು ದೈಹಿಕವಾಗಿ ಸಕ್ರಿಯರಾಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು 2016 ರಲ್ಲಿ ಹಿರಿಯ ನಾಗರಿಕರ ಕಲ್ಯಾಣ ನಿಧಿಯನ್ನು ಪ್ರಾರಂಭಿಸಲಾಯಿತು. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸೇವಾ ಕಾರ್ಯಕ್ರಮಗಳನ್ನು ಮುಂದಿನ ಭಾಗವಾಗಿ ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್ (ಎಸ್ಎಜಿಇ) ಪೋರ್ಟಲ್ ಅನ್ನು ಇಂದು ಪ್ರಾರಂಭಿಸಲಾಗಿದೆ. ವೃದ್ಧರ ಆರೈಕೆಗಾಗಿ ಸೇವೆಗಳನ್ನು ಒದಗಿಸುವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಎಸ್ಎಜಿಇ ಕಾರ್ಯಕ್ರಮ ಮತ್ತು ಎಸ್ಎಜಿಇ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

https://static.pib.gov.in/WriteReadData/userfiles/image/image002SAWP.jpg

ಕುರಿತು ಹೆಚ್ಚಿನ ವಿವರಗಳನ್ನು ನೀಡಿದ ಸಚಿವರು, ಉದ್ದೇಶಕ್ಕಾಗಿ ರಚಿಸಲಾದ ಸಮಿತಿಯ ಶಿಫಾರಸಿನ ಮೇರೆಗೆ, ವೃದ್ಧರ ಆರೈಕೆಗಾಗಿ ಸ್ಟಾರ್ಟ್ಅಪ್ಗಳಿಗೆ 1 ಕೋಟಿ ರೂ.ಗಳವರಗೆ ಒದಗಿಸಲಾಗುವುದು ಎಂದು ತಿಳಿಸಿದರು. ಹಿರಿಯ ನಾಗರಿಕರು ಮುಂದೆ ಬಂದು ಸ್ಟಾರ್ಟ್ ಅಪ್ ಗಳು ಒದಗಿಸುವ ಸೇವೆಗಳ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಸಮಾಜದಲ್ಲಿ ಘನತೆಯಿಂದ ಸಕ್ರಿಯ ಜೀವನವನ್ನು ನಡೆಸಬೇಕು ಎಂದು ಅವರು ತಿಳಿಸಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಮದಾಸ್ ಅಠಾವಲೆ, ಜನರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸಲು ಸಚಿವಾಲಯ ಪ್ರಯತ್ನಿಸುತ್ತಿದೆ ಮತ್ತು ಸಂದರ್ಭದಲ್ಲಿ, ವೃದ್ಧರಿಗಾಗಿ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಹಿರಿಯ ನಾಗರಿಕರು ಮತ್ತು ವಯೋವೃದ್ಧರ ಪಾಲನೆಯ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ. ಆದ್ದರಿಂದ, ನಮ್ಮ ಸಚಿವಾಲಯವು ಹಿರಿಯ ನಾಗರಿಕರಿಗಾಗಿ ಹೊಸ ಯೋಜನೆಗಳನ್ನು ಜಾರಿ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ದಿಕ್ಕಿನಲ್ಲಿ ಎಸ್ಎಜಿಇ ಅಂತಹ ಒಂದು ವಿಶಿಷ್ಟ ಉಪಕ್ರಮವಾಗಿದೆ ಎಂದು ಶ್ರೀ ಅಠಾವಲೆ ಹೇಳಿದರು.

https://static.pib.gov.in/WriteReadData/userfiles/image/image003V5VQ.jpg

ಸಂದರ್ಭದಲ್ಲಿ ಮಾತನಾಡಿದ ಶ್ರೀ ರತನ್ ಲಾಲ್ ಕಟಾರಿಯಾ ಅವರು, ಭಾರತದಲ್ಲಿ, ವಿಶೇಷವಾಗಿ ಕೋವಿಡ್ ನಂತರದಲ್ಲಿ ಹೆಚ್ಚು ದೃಢವಾದ ಹಿರಿಯರ ಆರೈಕೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ತುರ್ತು ಅವಶ್ಯಕತೆಯಿದೆ ಎಂದು ಹೇಳಿದರು.

ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಿ ಆರ್ಥಿಕತೆಯ ಉತ್ತೇಜನಕ್ಕಾಗಿ 100 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ಎಸ್ಎಜಿಇ ಅಡಿಯಲ್ಲಿ ಆಯ್ಕೆ ಮಾಡಲಾದ ಸ್ಟಾರ್ಟ್ ಅಪ್ ಗಳು ಆರೋಗ್ಯ, ಪ್ರಯಾಣ, ಹಣಕಾಸು, ಕಾನೂನು, ವಸತಿ, ಆಹಾರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರಿಗೆ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತವೆ ಎಂದರು.

https://static.pib.gov.in/WriteReadData/userfiles/image/image004MTFC.jpg

ಪ್ರಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಶ್ರೀ ಆರ್. ಸುಬ್ರಮಣ್ಯಂ, ಸರ್ಕಾರವು ಈಗ ಹಿರಿಯ ನಾಗರಿಕರಿಗೆ ನೆರವನ್ನು ಎನ್ಜಿಒಗಳ ಮೂಲಕ ಮಾತ್ರವಲ್ಲದೆ, ನವೀನ ಮಾರ್ಗಗಳ ಮೂಲಕ ಅವರಿಗೆ ಬಹುಮುಖಿ ಮಧ್ಯಸ್ಥಿಕೆಗಳನ್ನು ಸೃಷ್ಟಿಸಿದೆ ಎಂದು ವಿವರಿಸಿದರು. ಯುವಕರ ಪಾಲ್ಗೊಳ್ಳುವಿಕೆಯೊಂದಿಗೆ ಹಿರಿಯ ನಾಗರಿಕರ ಆರೈಕೆಗಾಗಿ ಸ್ಟಾರ್ಟ್ ಅಪ್ಗಳ ಕುರಿತು ಸಶಕ್ತ ಸಮಿತಿಯ ಸಲಹೆಗಳ ಪ್ರಕಾರ ಸಚಿವಾಲಯವು ಎಸ್ಎಜಿಇ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ. ಇದು ಕೇವಲ ಸರ್ಕಾರಿ ಕಾರ್ಯಕ್ರಮವಾಗದೇ, ವೃದ್ಧರ ಆರೈಕೆ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಆಂದೋಲನವನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image005GRQ3.jpg

ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ 2021-22ರಲ್ಲಿ ಎಸ್ಎಜಿಇ ಕಾರ್ಯಕ್ರಮಕ್ಕೆ 25 ಕೋಟಿ ರೂ. ಒದಗಿಸಲಾಗಿದೆ.

ವಯೋವೃದ್ಧರಿಗೆ ಸ್ಟಾರ್ಟ್ ಅಪ್ಗಳ ಕುರಿತು ಸಬಲೀಕೃತ ತಜ್ಞರ ಸಮಿತಿ (ಇಇಸಿ) ವರದಿಯ ಶಿಫಾರಸುಗಳ ಮೇಲೆ ಎಸ್ಎಜಿಇ ಯೋಜನೆಯನ್ನು ರೂಪಿಸಲಾಗಿದೆ. ಇಂದಿನ ಚಾಲನಾ ಸಮಾರಂಭದಲ್ಲಿ ತಜ್ಞರ ಸಮಿತಿಯ ಸದಸ್ಯರಾದ  ಹೆಲ್ಪೇಜ್ ಇಂಟರ್ನ್ಯಾಷನಲ್ ಜಾಗತಿಕ ರಾಯಭಾರಿ ಮ್ಯಾಥ್ಯೂ ಚೆರಿಯನ್ಶಿಕ್ಷಣ ಸಚಿವಾಲಯದ ಮುಖ್ಯ ನಾವೀನ್ಯತೆ ಅಧಿಕಾರಿ ಡಾ. ಅಭಯ್ ಜೆರೆ; ಎಮೋಹಾ ಎಲ್ಡರ್ ಕೇರ್ ಸಹ-ಸ್ಥಾಪಕ ಮತ್ತು ಸಿಇಒ ಸೌಮ್ಯಜಿತ್ ರಾಯ್, ಶಿಕ್ಷಣದ ಸಚಿವಾಲಯದ ಸಹಾಯಕ ನಾವೀನ್ಯತೆ ನಿರ್ದೇಶಕ ಡಾ.ಕೆ. ಇಳಂಗೋವನ್ ಮತ್ತು ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ (ಹಿರಿಯ ನಾಗರಿಕ ವಿಭಾಗ) ಉಪ ನಿರ್ದೇಶಕ ಡಾ.ಹೆಚ್.ಸಿ.ಶ್ರೀಧರ ರೆಡ್ಡಿ ಮತ್ತು ನೀಟ್ ಸಿಇಒ ಶ್ರೀ ಚಂದ್ರಶೇಖರ್ ಬುದ್ಧ ಉಪಸ್ಥಿತರಿದ್ದರು.

ಎಸ್ಎಜಿಇಯ ಭಾಗವಾಗಲು ಸ್ಟಾರ್ಟ್ ಅಪ್ಗಳು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು, ಅದು ಜೂನ್ 5 ರಿಂದ ತೆರೆದಿರುತ್ತದೆ. ತಜ್ಞರ ಸ್ವತಂತ್ರ ಪರಿಶೀಲನಾ ಸಮಿತಿಯು ಸ್ಟಾರ್ಟ್ ಅಪ್ಗಳನ್ನು ಆಯ್ಕೆ ಮಾಡುತ್ತದೆ. ಆಯ್ದ ಪ್ರತಿ ಸ್ಟಾರ್ಟ್ ಅಪ್ಗೆ ಒಂದು ಬಾರಿಯ ಈಕ್ವಿಟಿಯಾಗಿ 1 ಕೋಟಿ ರೂ.ಗಳ ವರೆಗೆ ನಿಧಿಯನ್ನು ನೀಡಲಾಗುತ್ತದೆ.

ಎಸ್ಎಜಿಇ ಯೋಜನೆಯು ಉತ್ಪನ್ನಗಳು, ಪರಿಹಾರಗಳು ಮತ್ತು ಸೇವೆಗಳನ್ನು ನೇರವಾಗಿ ಪಾಲುದಾರರಿಗೆ ಗುರುತಿಸುವುದು, ಮೌಲ್ಯಮಾಪನ ಮಾಡುವುದು, ಪರಿಶೀಲಿಸುವುದು, ಒಟ್ಟುಗೂಡಿಸುವುದು ಮತ್ತು ತಲುಪಿಸುವ ಗುರಿಯನ್ನು ಹೊಂದಿದೆ. ಗುರುತಿಸಲ್ಪಟ್ಟ ಸ್ಟಾರ್ಟ್ ಅಪ್ಗಳ ಮೂಲಕ ವಯೋವೃದ್ಧರಿಗೆ ಉತ್ಪನ್ನಗಳು ಲಭ್ಯವಾಗಲು ಅನುಕೂಲವಾಗುವಂತೆ ಸಚಿವಾಲಯವು ಮಧ್ಯಸ್ಥನಾಗಿ ಆಗಿ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ವಯೋವೃದ್ಧರ ಸಂಖ್ಯೆಯು ಹೆಚ್ಚುತ್ತಿದೆ, ಮತ್ತು ಸಮೀಕ್ಷೆಗಳ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯ ಶೇಕಡಾವಾರು ಹಿರಿಯರ ಪಾಲು 2001 ರಲ್ಲಿ ಸುಮಾರು ಶೇ.7.5 ರಿಂದ 2026 ವೇಳೆಗೆ ಸುಮಾರು ಶೇ.12.5 ಕ್ಕೆ ಏರಿಕೆಯಾಗಲಿದೆ ಮತ್ತು 2050 ಹೊತ್ತಿಗೆ ಶೇ.19.5 ಅನ್ನು ಮೀರುತ್ತದೆ. ಭಾರತದಲ್ಲಿ, ವಿಶೇಷವಾಗಿ ಕೋವಿಡ್ ನಂತರದಲ್ಲಿ ಹೆಚ್ಚು ದೃಢವಾದ ಹಿರಿಯ ಆರೈಕೆ ಪರಿಸರ ವ್ಯವಸ್ಥೆಯನ್ನು ರಚಿಸುವ ತುರ್ತು ಅವಶ್ಯಕತೆಯಿದೆ.

ಸಾಮಾಜಿಕ ಉದ್ಯಮಗಳು (ಲಾಭರಹಿತ, ಅನೌಪಚಾರಿಕ ನೆಟ್ವರ್ಕ್ಗಳು), ತಂತ್ರಜ್ಞಾನ ಸ್ಟಾರ್ಟ ಅಪ್ ಗಳು (ಫಿನ್ಟೆಕ್, ಆಡ್ಟೆಕ್, ಫುಡ್ಟೆಕ್, ಹೆಲ್ತ್ಟೆಕ್, ವೆಲ್ತ್ಟೆಕ್), ಕಾನೂನು ಮತ್ತು ಹಣಕಾಸು ಸೇವೆಗಳು (ಯೋಜನಾ ಪರಿಹಾರಗಳು, ವಿಮೆ, ಔಷಧ-ಕಾನೂನು) ಮತ್ತು ಮೂಲಸೌಕರ್ಯ ಮತ್ತು ನಿರ್ವಹಣಾ-ಆರೈಕೆ ವ್ಯವಸ್ಥೆಗಳು (ಹಿರಿಯರ ವಸತಿ, ಜೀವನ ಸೌಲಭ್ಯಗಳು, ಆರೈಕೆ ಕೇಂದ್ರಗಳು). ಸಂಶೋಧನೆ ಮತ್ತು ದತ್ತಾಂಶ-ಚಾಲಿತ ಸಂಸ್ಥೆಗಳು ಮತ್ತು ಸಾಮಾಜಿಕ ಉದ್ಯಮಗಳ ಇನ್ಕ್ಯುಬೇಟರ್ಗಳು ಸಹ ಎಸ್ಎಜಿಇ ಭಾಗವಾಗಲು ಮುಂದೆ ಬರುವ ನಿರೀಕ್ಷೆಯಿದೆ ಎಂದು ಇಇಸಿ ವರದಿಯಲ್ಲಿ ಹೇಳಲಾಗಿದೆ.

***



(Release ID: 1724495) Visitor Counter : 261