ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಲಸಿಕೆ ನೀಡುವಿಕೆ ಕುರಿತು ಹೊಸ ಮಾಹಿತಿ


ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 24 ಕೋಟಿಗಿಂತ ಹೆಚ್ಚು ಲಸಿಕೆ ಡೋಸುಗಳನ್ನು ನೀಡಲಾಗಿದೆ

ಲಸಿಕೆ ನೀಡಲು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.93 ಕೋಟಿಗಿಂತ ಹೆಚ್ಚಿನ ಡೋಸೇಜುಗಳು ಲಭ್ಯವಿವೆ

Posted On: 04 JUN 2021 10:33AM by PIB Bengaluru

ರಾಷ್ಟ್ರವ್ಯಾಪಿ  ಲಸಿಕಾ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿದೆ.  ಇದರ ಜೊತೆಗೆ, ಸರ್ಕಾರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಲಸಿಕೆಗಳನ್ನು ನೇರವಾಗಿ ಖರೀದಿಸಲು ಸಹಕರಿಸುತ್ತಿದೆ. ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ, ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ. 

ಕೋವಿಡ್ -19  ಲಸಿಕೆ ನಿಡಿಕೆಯ ಉದಾರೀಕೃತ ಮತ್ತು ವೇಗವರ್ಧಿತ ಹಂತ -3 ಲಸಿಕಾ ಕಾರ್ಯತಂತ್ರ ಮೇ 1, 2021ರಿಂದ ಪ್ರಾರಂಭಿಸಲಾಗಿದೆ,

ಈ ಕಾರ್ಯತಂತ್ರದಲ್ಲಿ, ಪ್ರತಿ ತಿಂಗಳು ಒಟ್ಟು  ಕೇಂದ್ರೀಯ ಔಷಧ ಪ್ರಯೋಗಾಲಯ (ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ -ಸಿಡಿಎಲ್) ಅನುಮತಿಸಿದ ಯಾವುದೇ ಉತ್ಪಾದಕರ ಲಸಿಕೆ ಡೋಸುಗಳನ್ನು ಭಾರತ ಸರ್ಕಾರದ ವತಿಯಿಂದ ಸಂಗ್ರಹಿಸಲಾಗುತ್ತದೆ. ಈ ಡೋಸುಗಳನ್ನು ಈ ಹಿಂದೆ ಮಾಡಿದಂತೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಭಾರತ ಸರ್ಕಾರವು ಇಲ್ಲಿಯವರೆಗೆ ಉಚಿತವಾಗಿ ಮತ್ತು ನೇರ ರಾಜ್ಯ ಖರೀದಿಯ ಮೂಲಕ ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ 23 ಕೋಟಿಗೂ ಹೆಚ್ಚು ಲಸಿಕೆ ಡೋಸುಗಳನ್ನು (24,21,29,250) ಒದಗಿಸಿದೆ.
ಇದರಲ್ಲಿ, ವ್ಯರ್ಥವಾದವುಗಳು ಸೇರಿದಂತೆ ಒಟ್ಟು ಬಳಕೆ 22,27,33,963 ಪ್ರಮಾಣಗಳು (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ).

ನೀಡಲು ಇನ್ನೂ 1.93 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸುಗಳು (1,93,95,287) ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ. 

***



(Release ID: 1724347) Visitor Counter : 176