ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಸುಸ್ಥಿರ ನಗರಾಭಿವೃದ್ಧಿ ವಲಯದಲ್ಲಿ ಸಹಕಾರ ಕುರಿತು ಭಾರತ – ಮಾಲ್ಡೀವ್ಸ್ ನಡುವಿನ ತಿಳಿವಳಿಕೆ ಪತ್ರಕ್ಕೆ ಸಂಪುಟ ಸಭೆ ಅನುಮೋದನೆ 

प्रविष्टि तिथि: 02 JUN 2021 12:57PM by PIB Bengaluru

ಸುಸ್ಥಿರ ನಗರಾಭಿವೃದ್ಧಿ ವಲಯದಲ್ಲಿ ಸಹಕಾರ ಕುರಿತು ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ [ಎಂ..ಎಚ್.ಯು.] ಮತ್ತು ರಾಷ್ಟ್ರೀಯ ಯೋಜನೆ, ವಸತಿ ಮತ್ತು ಮೂಲ ಸೌಕರ್ಯ ಸಚಿವಾಲಯ, ಮಾಲ್ಡೀವ್ಸ್ ಸರ್ಕಾರದ ನಡುವೆ ಸಹಿ ಮಾಡಿರುವ ತಿಳುವಳಿಕೆ ಪತ್ರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. 2021 ಫೆಬ್ರವರಿಯಲ್ಲಿ ಎಂ..ಯು ಗೆ ಅಂಕಿತ ಹಾಕಲಾಗಿತ್ತು.  

ಎಂ..ಯು ಚೌಕಟ್ಟಿನಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ಕಾರ್ಯತಂತ್ರಕ್ಕಾಗಿ ಒಂದು ಜಂಟಿ ಕಾರ್ಯತಂಡ [ಜೆ.ಡಬ್ಲ್ಯೂ.ಜಿ] ವನ್ನು ರಚಿಸಲಾಗುವುದು. ಮಾಲ್ಡೀವ್ಸ್ ಮತ್ತು ಭಾರತದಲ್ಲಿ ಜಂಟಿ ಕಾರ್ಯತಂಡ ವರ್ಷದಲ್ಲಿ ಒಂದೊಂದು ಭಾರಿ ಸಭೆ ಸೇರಲಿದೆ.

ಲಾಭಗಳು:

ಎರಡೂ ದೇಶಗಳ ನಡುವೆ ಸುಸ್ಥಿರ ನಗರಾಭಿವೃದ್ಧಿ ವಲಯದಲ್ಲಿ ಆಳವಾದ ಮತ್ತು ದೀರ್ಘಕಾಲೀನ ದ್ವಿಪಕ್ಷೀಯ ಸಹಕಾರ ಸಾಧಿಸಲು ಎಂ..ಯು ಉತ್ತೇಜನ ನೀಡಲಿದೆಸುಸ್ಥಿರ ನಗರಾಭಿವೃದ್ಧಿಯಲ್ಲಿ ನಗರ ಯೋಜನೆ, ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಕೈಗೆಟುಕುವ ದರದಲ್ಲಿ ವಸತಿ, ನಗರ ಹಸಿರು ಸಾರಿಗೆ, ನಗರ ತ್ವರಿತ ಸಮೂಹ ಸಾರಿಗೆ, ಸ್ಮಾರ್ಟ್ ಸಿಟಿಗಳ ಅಭಿವೃದ್ದಿಯಲ್ಲಿ ಎಂ..ಯು ನಿಂದ ಉದ್ಯೋಗವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.  

ವಿವರಗಳು:

ಎರಡೂ ದೇಶಗಳ ನಡುವೆ ಪಾಲುದಾರರು ಸಹಿ ಮಾಡಿದ ದಿನದಿಂದ ಅಂದರೆ 2021 ಫೆಬ್ರವರಿ 20 ರಿಂದ ಎಂ..ಯು ಅನುಷ್ಠಾನಕ್ಕೆ ಬರಲಿದೆ ಮತ್ತು ಇದು ಅನಿರ್ದಿಷ್ಟ ಅವಧಿವರೆಗೆ ಜಾರಿಯಲ್ಲಿರಲಿದೆ.

ಸುಸ್ಥಿರ ನಗರಾಭಿವೃದ್ಧಿಯಲ್ಲಿ ಸ್ಮಾರ್ಟ್ ಸಿಟಿಗಳು, ನಗರ ಹಸಿರು ಸಾರಿಗೆ, ನಗರ ಸಮೂಹ ತ್ವರಿತ ಸಾರಿಗೆ, ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ ಮತ್ತು ಪಾಲುದಾರರು ಪರಸ್ಪರ ಒಪ್ಪಿರುವ ಇತರೆ ಯಾವುದೇ ವಲಯದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ತಾಂತ್ರಿಕ ಸಹಕಾರವನ್ನು ಬಲಗೊಳಿಸುವ, ಎಂ..ಯುಗೆ ಸಹಿ ಮಾಡಿರುವ  ಉದ್ದೇಶಗಳನ್ನು ಸಾಕಾರಗೊಳಿಸಲು ತೀರ್ಮಾನಿಸಲಾಗಿದೆ.

***


(रिलीज़ आईडी: 1723709) आगंतुक पटल : 252
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati , Odia , Telugu , Malayalam